ಬಿಸ್ಲೇರಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ; ಅಂಬಾನಿಯ ‘ಕ್ಯಾಂಪಾ ಶ್ಯೂರ್‌’ ನೀರಿನ ಕತೆ ಏನು?

Date:

ನಾವು ಕುಡಿಯುವ ನೀರು ಎಷ್ಟು ಸುರಕ್ಷಿತ? ದಾಹ ತಣಿಸಿಕೊಳ್ಳಲು ನಾವು ನಂಬಿ ಖರೀದಿಸುವ ಬಾಟಲಿ ನೀರು ನಿಜವಾಗಿಯೂ ಶುದ್ಧವಾಗಿದೆಯೇ? ದೇಶದ ಅತಿದೊಡ್ಡ ಪ್ಯಾಕ್ಡ್‌ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೇರಿ ಇಂಟರ್‌ನ್ಯಾಶನಲ್ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಮುಂದಾಗಿರುವುದು ಈಗ ಇಡೀ ದೇಶದ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

- Advertisement -

ಇದೇ ಹೊತ್ತಿನಲ್ಲಿ, ಮಾರುಕಟ್ಟೆಗೆ ಲಗ್ಗೆ ಇಟ್ಟು ಸಂಚಲನ ಮೂಡಿಸಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ಸಂಸ್ಥೆಯ ‘ಕ್ಯಾಂಪಾ ಶ್ಯೂರ್’ ಕುಡಿಯುವ ನೀರಿನ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. ಮಾತ್ರವಲ್ಲದೆ, ಅಂಬಾನಿ ಕಂಪನಿಯ ನೀರು ಮಾರುಕಟ್ಟಗೆ ಬರುತ್ತಿದ್ದಂತೆಯೇ ‘ಬಿಸ್ಲೆರಿ’ ಮೇಲಿನ ಕಾನೂನು ಕ್ರಮವು, ಮಾರುಕಟ್ಟೆಯಲ್ಲಿ ಅಂಬಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ಬಿಸ್ಲೇರಿ ಪ್ರಕರಣವೇನು?

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇತ್ತೀಚೆಗೆ ನಡೆಸಿದ ತಪಾಸಣೆಯಲ್ಲಿ ಬಿಸ್ಲೇರಿ ಸಂಸ್ಥೆಯ ಆವರಣದಿಂದ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಪ್ರಾಥಮಿಕ ವಿಶ್ಲೇಷಣೆಯಲ್ಲಿ ಈ ನೀರಿನಲ್ಲಿ ಬ್ರೋಮೇಟ್ ಅಂಶವು ನಿಗದಿತ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಯಿತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಇದನ್ನು ‘ಅಸುರಕ್ಷಿತ’ ಎಂದು ಘೋಷಿಸಲಾಯಿತು. ಈ ವರದಿಯನ್ನು ಪ್ರಶ್ನಿಸಿ ಬಿಸ್ಲೇರಿ ಸಂಸ್ಥೆ ಮೇಲ್ಮನವಿ ಸಲ್ಲಿಸಿತು. ನಿಯಮದಂತೆ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಆದರೆ ಅಲ್ಲಿಯೂ ನೀರು ಅಸುರಕ್ಷಿತ ಎಂದೇ ವರದಿ ಬಂದಿದ್ದು, ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಇರುವುದು ದೃಢಪಟ್ಟಿದೆ.

ಬ್ರೋಮೇಟ್ ಮತ್ತು PAHs ಈ ಎರಡೂ ರಾಸಾಯನಿಕಗಳನ್ನು ಕಾರ್ಸಿನೋಜೆನ್‌ಗಳು ಅಂದರೆ ಕ್ಯಾನ್ಸರ್ ಕಾರಕ ಅಂಶಗಳು ಎಂದು ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ನೀರನ್ನು ಓಝೋನೇಶನ್ ಪ್ರಕ್ರಿಯೆಯ ಮೂಲಕ ಶುದ್ಧೀಕರಿಸುವಾಗ ಬ್ರೋಮೇಟ್ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ, ಹಾಗೂ ಕೈಗಾರಿಕಾ ಮಾಲಿನ್ಯ ಅಥವಾ ಪ್ಲಾಸ್ಟಿಕ್ ಪ್ಯಾಕೇಜಿಂಗ್ ದೋಷಗಳಿಂದ PAHs ಸೇರ್ಪಡೆಯಾಗಬಹುದು. ಈ ಗಂಭೀರ ಉಲ್ಲಂಘನೆಯ ಹಿನ್ನೆಲೆಯಲ್ಲಿ FSSAI ಬಿಸ್ಲೇರಿ ವಿರುದ್ಧ ಕಾನೂನು ವಿಚಾರಣೆ ಆರಂಭಿಸಲು ಅನುಮತಿ ನೀಡಿದೆ.

ಬಿಸ್ಲೇರಿ ಮಾತ್ರವಲ್ಲದೆ, ಇತರ ಆಹಾರ ತಯಾರಿಕಾ ಸಂಸ್ಥೆಗಳ ಮೇಲೂ FSSAI ಕಠಿಣ ಕ್ರಮ ಕೈಗೊಂಡಿದೆ. ಆಶಾ ಕನ್ಫೆಕ್ಷನರಿ ಸಂಸ್ಥೆಯ ಚಾಕೊಲೇಟ್-ಫಿಲ್ಡ್ ಕುಕೀಸ್ ಮಾದರಿಯಲ್ಲಿ ಲೇಬಲ್‌ನಲ್ಲಿ ಉಲ್ಲೇಖಿಸದ ‘ಕಾರ್ಮೋಸಿನ್’, ನಿಗದಿತ ಮಿತಿಗಿಂತ ಹೆಚ್ಚಿನ ‘ಟಾರ್ಟ್ರಾಜಿನ್’ ಹಾಗೂ ನಿಷೇಧಿತ ‘ಸನ್‌ಸೆಟ್ ಯೆಲ್ಲೋ FCF’ ಕೃತಕ ಬಣ್ಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕಳಪೆ ಮತ್ತು ಅಸುರಕ್ಷಿತ ಎಂದು ಘೋಷಿಸಿ, ಇಡೀ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶಿಸಲಾಗಿದೆ. ಹಲವು ಸಂಸ್ಥೆಗಳ ಪರವಾನಗಿಯನ್ನೂ ಅಮಾನತುಗೊಳಿಸಲಾಗಿದೆ.

ಅಂಬಾನಿಯ ‘ಕ್ಯಾಂಪಾ ಶ್ಯೂರ್’ ನೀರಿನ ಕತೆ ಏನು?

ಬಿಸ್ಲೇರಿಯಂತಹ ದೈತ್ಯ ಬ್ರ್ಯಾಂಡ್‌ನಲ್ಲೇ ಇಂತಹ ಲೋಪ ಕಂಡುಬಂದಿರುವಾಗ, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪ್ರವೇಶಿಸಿರುವ ರಿಲಯನ್ಸ್ ಸಂಸ್ಥೆಯ ‘ಕ್ಯಾಂಪಾ ಶ್ಯೂರ್’ ನೀರಿನ ಸ್ಥಿತಿ ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ತಂಪು ಪಾನೀಯ ಮಾರುಕಟ್ಟೆಯಲ್ಲಿ ‘ಕ್ಯಾಂಪಾ ಕೋಲಾ’ ಮೂಲಕ ಸಂಚಲನ ಮೂಡಿಸಿದ ಮುಕೇಶ್ ಅಂಬಾನಿ, ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಬಿಸ್ಲೇರಿ, ಕಿನ್ಲೆ ಮತ್ತು ಅಕ್ವಾಫಿನಾ ಬ್ರ್ಯಾಂಡ್‌ಗಳಿಗೆ ನೇರ ಪೈಪೋಟಿ ನೀಡಲು ‘ಕ್ಯಾಂಪಾ ಶ್ಯೂರ್’ ಬಿಡುಗಡೆ ಮಾಡಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ (ಉದಾಹರಣೆಗೆ 1 ಲೀಟರ್ ಬಾಟಲಿಗೆ ₹10-₹15ರ ಆಸುಪಾಸಿನಲ್ಲಿ) ನೀರು ನೀಡುವ ಮೂಲಕ ರಿಲಯನ್ಸ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ.

ಕ್ಯಾಂಪಾ ಶ್ಯೂರ್ ನೀರು ಸಹ ಭಾರತೀಯ ಮಾನಕ ಬ್ಯೂರೋ (BIS – IS 14543) ಮತ್ತು FSSAI ನಿಗದಿಪಡಿಸಿದ ಕಟ್ಟುನಿಟ್ಟಿನ ಮಾನದಂಡಗಳಿಗೆ ಒಳಪಟ್ಟೇ ಮಾರಾಟವಾಗಬೇಕು. ಇದುವರೆಗೂ ಕ್ಯಾಂಪಾ ಶ್ಯೂರ್ ನೀರಿನ ಮಾದರಿಗಳಲ್ಲಿ ಬ್ರೋಮೇಟ್ ಅಥವಾ PAHs ನಂತಹ ಯಾವುದೇ ಹಾನಿಕಾರಕ ಅಂಶಗಳು ಪತ್ತೆಯಾದ ಬಗ್ಗೆ ಅಥವಾ FSSAI ನಿಂದ ಯಾವುದೇ ನೋಟಿಸ್ ಜಾರಿಯಾದ ಬಗ್ಗೆ ಅಧಿಕೃತ ವರದಿಗಳಿಲ್ಲ.

ರಿಲಯನ್ಸ್ ಸಂಸ್ಥೆಯು ತನ್ನ ಬೃಹತ್ ವಿತರಣಾ ಜಾಲ ಮತ್ತು ಆಕ್ರಮಣಕಾರಿ ಬೆಲೆ ನೀತಿಯ ಮೂಲಕ ಪ್ರಾದೇಶಿಕ ಬ್ರ್ಯಾಂಡ್‌ಗಳು ಹಾಗೂ ಬಿಸ್ಲೇರಿಯಂತಹ ದೈತ್ಯ ಸಂಸ್ಥೆಗಳಿಗೆ ಸವಾಲೊಡ್ಡಿದೆ. ಆದರೆ, ಕಡಿಮೆ ಬೆಲೆಗೆ ನೀರು ಒದಗಿಸುವ ಭರದಲ್ಲಿ ಹಾಗೂ ತ್ವರಿತ ವಿಸ್ತರಣೆಗಾಗಿ ಸ್ಥಳೀಯ ಬಾಟ್ಲಿಂಗ್ ಪ್ಲಾಂಟ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಗುಣಮಟ್ಟದ ನಿಯಂತ್ರಣ ಕಾಯ್ದುಕೊಳ್ಳುವುದು ರಿಲಯನ್ಸ್ ಮುಂದಿರುವ ದೊಡ್ಡ ಸವಾಲಾಗಿದೆ.

ಪ್ಯಾಕೇಜ್ಡ್ ನೀರಿನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ಪೈಪೋಟಿಯ ನಡುವೆ ಗ್ರಾಹಕರ ಆರೋಗ್ಯ ಬಲಿಯಾಗಬಾರದು. ಬ್ರ್ಯಾಂಡ್ ಎಷ್ಟೇ ದೊಡ್ಡದಿರಲಿ, ಶುದ್ಧೀಕರಣ ಪ್ರಕ್ರಿಯೆಯಲ್ಲಿ  ವಿಶೇಷವಾಗಿ ಓಝೋನೇಶನ್ ಮತ್ತು ಪ್ಲಾಸ್ಟಿಕ್ ಬಾಟಲಿಂಗ್ ಸಣ್ಣ ನಿರ್ಲಕ್ಷ್ಯ ವಹಿಸಿದರೂ ಅದು ವಿಷವಾಗಬಹುದು ಎಂಬುದಕ್ಕೆ ಬಿಸ್ಲೇರಿ ಪ್ರಕರಣ ಒಂದು ಎಚ್ಚರಿಕೆಯ ಗಂಟೆ.

ಗ್ರಾಹಕರು ನೀರಿನ ಬಾಟಲಿ ಖರೀದಿಸುವಾಗ ISI ಮಾರ್ಕ್, FSSAI ಪರವಾನಗಿ ಸಂಖ್ಯೆ, ತಯಾರಿಕಾ ದಿನಾಂಕ ಮತ್ತು ಬಾಟಲಿಯ ಸೀಲ್ ಸರಿಯಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಅಲ್ಲದೆ, FSSAI ಕೇವಲ ದೊಡ್ಡ ಬ್ರ್ಯಾಂಡ್‌ಗಳಷ್ಟೇ ಅಲ್ಲದೆ, ಮಾರುಕಟ್ಟೆಯಲ್ಲಿರುವ ಕ್ಯಾಂಪಾ ಶ್ಯೂರ್ ಸೇರಿದಂತೆ ಎಲ್ಲಾ ಹೊಸ ಮತ್ತು ಸ್ಥಳೀಯ ಬ್ರ್ಯಾಂಡ್‌ಗಳ ನೀರಿನ ಮಾದರಿಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸಿ ಸಾರ್ವಜನಿಕರ ಆರೋಗ್ಯ ರಕ್ಷಿಸಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ‘ಗೊಂದಲದ ಬಸವ ಮಂಟಪ’ ಪುಸ್ತಕ ವಿವಾದ: ತನಿಖೆ, ಕಾನೂನು ಕ್ರಮಕ್ಕೆ ಒತ್ತಾಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶಗಳು, ವಚನ ಸಾಹಿತ್ಯ ಹಾಗೂ ಸಾಮಾಜಿಕ ಸುಧಾರಣಾ...

ಅಮೆರಿಕದಲ್ಲಿ ಮೈಸೂರು ಮೂಲದ ಪಿಟೀಲು ವಾದಕ ಭಾಸ್ಕರ್ ಅರೆಸ್ಟ್; ಅಪ್ರಾಪ್ತರ ಮೇಲೆ ದೌರ್ಜನ್ಯ ಆರೋಪ

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಪಿಟೀಲು ವಾದಕ, ಮೈಸೂರು ಮೂಲದ...

₹13 ಲಕ್ಷದ ಬ್ರೆಜಾ ಕಾರು ನೀಡದ್ದಕ್ಕೆ ಮದುವೆ ರದ್ದು: ದೆಹಲಿ ಪೊಲೀಸ್ ಅಮಾನತು

ತಾನು ಬೇಡಿಕೆಯಿಟ್ಟ ₹13 ಲಕ್ಷ ಮೌಲ್ಯದ ಮಾರುತಿ ಬ್ರೆಜಾ ಕಾರಿನ ಬದಲು...