ಜನನುಡಿ 2026 ಚಾಲನೆ | ಸಂವಾದ ಸೋತ ಭಾರತದ ಜೊತೆ ಹೆಣಗಾಡಬೇಕಿದೆ: ರಹಮತ್ ತರೀಕೆರೆ

Date:

“ಸಂವಾದ ಸೋತ ಭಾರತದ ಜೊತೆಗೆ ಹೆಣಗಾಡಬೇಕಾಗಿದೆ. ಸಂಪರ್ಕ ಸಾಧನಗಳು ವೇಗವಾಗಿರುವಾಗ ಸಂವಾದ ಸೋತಿರುವುದು ವಿಷಾದದ ಸಂಗತಿ. ಸಂವಾದ ಸೋತ ಭಾರತದಲ್ಲಿ
ಮತ್ತೆ ಮಾತುಕತೆಯ ಹೊಸ ದಾರಿಗಳನ್ನು ಹುಡುಕಬೇಕಿದೆ” ಎಂದು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಹೇಳಿದರು ಹೇಳಿದರು.

- Advertisement -

ಯುವಜನ ರಾಜಕಾರಣ: ದಿಕ್ಕು – ಭವಿಷ್ಯ – ಸವಾಲು ಎಂಬ ಆಶಯದೊಂದಿಗೆ ಮಂಗಳೂರಿನ ಬಿಷಪ್ ಜತ್ತಣ್ಣ ಸಭಾಂಗಣದಲ್ಲಿ ಆರಂಭವಾದ ಜನನುಡಿ 2026 ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು, ಗುಮಾಸ್ತರನ್ನು ಸೃಷ್ಟಿಸಿದ ಮೆಕಾಲೆ- ಇದು...

ಇತಿಹಾಸದ ಹೆಸರಿನಲ್ಲಿ ಆಯ್ದ ನಿರೂಪಣೆ; ಜಾತಿ ಪ್ರಾಬಲ್ಯ, ಶಿಕ್ಷಣದ ಹಕ್ಕು ಮತ್ತು ಆಧುನಿಕ ಅಭಿವೃದ್ಧಿಯ ವಾಸ್ತವಗಳು ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸದ ಹೆಸರಿನಲ್ಲಿ ಮುಂದಿಟ್ಟಿರುವ ಹೆಬ್ಬೆರಳು ಕತ್ತರಿಸಿದ ಆಕ್ರಮಣಕಾರರು ಮತ್ತು ಗುಮಾಸ್ತರನ್ನು ಸೃಷ್ಟಿಸಿದ...

ಸಂಸತ್ತಿನ ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ; ಕ್ಷೇತ್ರ...

ಮಹಿಳಾ ಮೀಸಲಾತಿಯನ್ನು ಯಾರೂ ವಿರೋಧಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಯನ್ನು ಮಹಿಳಾ ಮೀಸಲಾತಿಯ ಸೆರಗಿಗೆ ಗಂಟುಹಾಕುವ ಪ್ರಯತ್ನ ನಡೆದಿದೆ. ಭಾರತದ ಚುನಾವಣಾ ನಕ್ಷೆಯನ್ನೇ ಮರುರೂಪಿಸಬಲ್ಲ ಮಸೂದೆಯೊಂದನ್ನು ಬಹಳ...

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು. ಭಾಷೆಯೊಂದು...

ವಾದವನ್ನು ಮಂಡನೆ ಮಾಡುವಾಗ ಅನೇಕ ಸಲ ನಾವೇ ಶ್ರೇಷ್ಠ, ನಮ್ಮದೇ ಸರಿ ಎಂಬ ಒಂದು ಗೆಲ್ಲುವಿಕೆಯ ಹುರುಪು ಇರುತ್ತದೆ. ವಾಗ್ವಾದ ಅಂತ ಹೇಳುವುದಾದರೆ ಎರಡು ಭಿನ್ನ ದೃಷ್ಟಿಕೋನಗಳನ್ನು ಮುಖಾಮುಖಿಯಾಗಿ ಮಾಡಿ, ಡಿಕ್ಕಿ ಹೊಡೆಸುವ ಒಂದು ಆಶಯ ಇರುತ್ತದೆ. ಆದರೆ ಸಂವಾದ ಎಂದರೆ ನಮ್ಮ ಅಹಂಕಾರವನ್ನು ಸ್ವಲ್ಪ ಪಕ್ಕಕ್ಕಿಟ್ಟು, ನಮ್ಮ ಅನುಭವವನ್ನು, ತಿಳುವಳಿಕೆಯನ್ನು ಹಂಚಿಕೊಳ್ಳುವ, ಭಿನ್ನಮತಗಳ ಜೊತೆಗೆ ಕಲಿಯುವ ಒಂದು ದೊಡ್ಡ ಅವಕಾಶಕ್ಕಾಗಿ ನಾವೆಲ್ಲ ಒಟ್ಟುಗೂಡುವ ಮಾನವ ಸಂಬಂಧದ ಕ್ರಿಯೆ ಸಂವಾದ. ಈ ಸಂವಾದ ಸಂಸ್ಕೃತಿ ಭಾರತದಲ್ಲಿ, ಕರ್ನಾಟಕದಲ್ಲಿ ಕಾಣೆಯಾಗುತ್ತಿರುವ ಬಗ್ಗೆ ಬಹಳ ಆತಂಕವಾಗುತ್ತದೆ. ಸಂವಾದ ಒಂದು ಡೆಮಾಕ್ರಟಿಕ್ ಆಕ್ಟ್. ಅದು ಮುಖಾಮುಖಿ, ಭಿನ್ನಮತಗಳ ಮುಖಾಮುಖಿ ಮತ್ತು ಚರ್ಚೆ ಮಾಡುವುದು. ಈ ಕಲಿಯುವ ಮತ್ತು ಪಡೆಯುವ ಪ್ರಕ್ರಿಯೆ. ಅದು ಬೇರೆ ಬೇರೆ ಕಾರಣಗಳಿಗಾಗಿ ನಿಂತುಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತಿಹಾಸವನ್ನು ಕೇವಲ ರಾಜಕೀಯ ಯುದ್ಧಗಳ ಮೂಲಕ ನೋಡಲಾಗಿದೆ. ಕೆಡುವಿಕೆ, ಧ್ವಂಸದಂತಹ ಗಾಯಗಳ ಮೂಲಕ ವರ್ತಮಾನವನ್ನು ಬರೆಯಲಾಗುತ್ತಿದೆ. ಅನಾದಿ ಕಾಲದಿಂದಲೂ ಭಾರತದಲ್ಲಿ ವಿವಿಧ ಧರ್ಮಗಳು ಮತ್ತು ತತ್ವಶಾಸ್ತ್ರಗಳ ನಡುವೆ ನಡೆದ ಸಂವಾದದ ಜೊತೆಗೆ ಸಾಂಸ್ಕೃತಿಕ ಸಮ್ಮಿಲನದ ಇತಿಹಾಸವನ್ನು ಮರೆಮಾಚಲಾಗುತ್ತಿದೆ ಎಂದರು.

ಕನ್ನಡ ಸಂಸ್ಕೃತಿಯ ಜೀವಾಳ ಸಂವಾದ. ಅಂಬೇಡ್ಕರ್, ಕುವೆಂಪು, ನಾಲ್ವಡಿ ಎಲ್ಲರೂ ಸಂವಾದದಿಂದ ಅತ್ಯುತ್ತಮ ಚಿಂತನೆಗಳನ್ನ, ಸಂವಿಧಾನ ಪ್ರಜ್ಞೆಯನ್ನು ಮೂಡಿಸಿದ ನೇತಾರರು. ಹೊಸ ತಲೆಮಾರು ಅವರ ಹಾದಿಯಲ್ಲಿ ಚೈತನ್ಯದಿಂದ ಒಟ್ಟುಗೂಡಲಿ ಎಂದರು.

ಒಂದು ಮರೆಯಬಾರದ ಸಂಗತಿ ಏನೆಂದರೆ, ಜಗತ್ತಿನಲ್ಲಿ ಬಹಳ ದೊಡ್ಡ ದೊಡ್ಡ ವಿದ್ಯಮಾನಗಳು ಸಣ್ಣ ಸಣ್ಣ ಸಂಗತಿಗಳ ಜಗಳಗಳಿಂದ ಶುರುವಾಗಿರುತ್ತವೆ. ಅವು ದೊಡ್ಡ ಪ್ರವಾಹವಾಗಿ ಆಮೇಲೆ ಹರಿಯುತ್ತವೆ. ಹೀಗೆ ಒಂದು ಪ್ರವಾಹವಾಗಿ ಹೊಮ್ಮಿರುವ ಈ ಹೊಸ ತಲೆಮಾರಿನ ರಾಜಕೀಯ ಪ್ರಜ್ಞೆಯನ್ನು, ಭಾರತೀಯ ಕಲ್ಪನೆಯನ್ನು ಹೇಗೆ ಚಾನಲೈಸ್ ಮಾಡುವುದು? ರೈತಾಪಿ ಪರಿಭಾಷೆಯಲ್ಲಿ ಹೇಳುವುದಾದರೆ, ಹೇಗೆ ಗದ್ದೆಗಳಿಗೆ ಹರಿಸಿ ಹೊಸ ಬೆಳೆಯನ್ನು ಬೆಳೆಯುವುದು? ಸಂಭ್ರಮ ಮತ್ತು ಸಿನಿಕತೆ ಇಲ್ಲದೆ ಹೇಗೆ ಎಚ್ಚರಿಕೆಯಿಂದ ಇವರ ಜೊತೆಗೆ ಕೈಜೋಡಿಸುವುದು? ಇದು ನಮ್ಮ ಎದುರುಗಡೆ ಇರುವ ಬಹಳ ಮುಖ್ಯವಾದ ಸವಾಲು. ಇದಕ್ಕಾಗಿ, ಈ ಸಂವಾದಕ್ಕಾಗಿ, ಭಾರತ ಹೊಸ ಭಾಷೆಯನ್ನು, ಹೊಸ ನುಡಿಗಟ್ಟನ್ನು, ಹೊಸ ಇಡಿಯಂ ಅನ್ನು, ಹೊಸ ಹೊಸ ಸಿದ್ಧಾಂತಗಳನ್ನು, ಹೊಸ ತಾತ್ವಿಕ ವಿವೇಕವನ್ನು ಕಂಡುಕೊಳ್ಳಬೇಕಾಗಿದೆ. ಅಂತಹದನ್ನು ಕಂಡುಕೊಳ್ಳುವ ಒಂದು ವೇದಿಕೆಯಾಗಿ ಜನನುಡಿ ಕಾರ್ಯಕ್ರಮ ಎರಡು ದಿನ ನಡೆಯಲಿ ಎಂದರು.

ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಗ್ರಾಮೀಣ ಪ್ರದೇಶದ ಹೆಣ್ಣುಮಗುವಿನ ಶಿಕ್ಷಣವನ್ನು ಸರ್ಕಾರಗಳು ಕಿತ್ತುಕೊಳ್ಳುತ್ತಿವೆ.
ಎಲ್ಲರಿಗೂ ಸಮಾನವಾದ, ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಅದ್ಯತೆಯಾಗಬೇಕು. ಅದಕ್ಕಾಗಿ ನಮ್ಮ ಹೋರಾಟ ಎಂದರು.

ನಮ್ಮ ಹೋರಾಟ ಕೇವಲ ಜೆನ್ ಜಿ ಪೀಳಿಗೆಯ ಹೋರಾಟವಾಗಿತ್ತು ಎಂದು ನಾನು ಒಪ್ಪುವುದಿಲ್ಲ. ಯಾವುದೇ ಒಂದು ಪೀಳಿಗೆಯಲ್ಲಿ ಹುಟ್ಟುತ್ತಲೇ ಕ್ರಾಂತಿಕಾರಿ ಗುಣ ಇರುವುದಿಲ್ಲ. ಒಂದು ಜನಸಮೂಹವನ್ನು ಅಥವಾ ಒಂದು ಪೀಳಿಗೆಯನ್ನು ಕ್ರಾಂತಿಕಾರಿಯನ್ನಾಗಿ ಮಾಡುವುದು ಅವರಲ್ಲಿರುವ ರಾಜಕೀಯ ಪ್ರಜ್ಞೆ. ನಾವು ಬದುಕುತ್ತಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ, ನಾವು ಅನುಭವಿಸುತ್ತಿರುವ ದಬ್ಬಾಳಿಕೆಯನ್ನು ಗ್ರಹಿಸುವ ಮತ್ತು ಆ ದಬ್ಬಾಳಿಕೆಯ ವಿರುದ್ಧ ಹೋರಾಡುವ ರಾಜಕೀಯ ಪ್ರಜ್ಞೆಯೇ ನಮ್ಮನ್ನು ಕ್ರಾಂತಿಕಾರಿಗಳನ್ನಾಗಿ ಮಾಡುತ್ತದೆಯೇ ಹೊರತು, ಕೇವಲ ಯಾವುದೋ ಒಂದು ನಿರ್ದಿಷ್ಟ ಪೀಳಿಗೆಯಲ್ಲಿ ಹುಟ್ಟಿದ ಮಾತ್ರಕ್ಕೆ ಅಲ್ಲ ಎಂದರು.

ಶಿಕ್ಷಣ ವ್ಯಾಪಾರವಲ್ಲ, ಅದು ಹಕ್ಕು. ಜಾತಿ, ಧರ್ಮ, ಲಿಂಗ ಹಾಗೂ ಆರ್ಥಿಕ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದರು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ವ್ಯವಸ್ಥೆಯ ವಿರುದ್ಧ ಉತ್ತರದಾಯಿತ್ವ ಬೇಕೇ ಬೇಕು. ಖಾಸಗೀಕರಣದ ವಿರುದ್ಧ ಧ್ವನಿ ಎತ್ತಲೇಬೇಕು. ಸ್ವಾತಂತ್ರ್ಯದ ಆಶಯಗಳನ್ನು ಜೀವಂತವಾಗಿಡಲು ವಿದ್ಯಾರ್ಥಿ ಸಂಘಟನೆಗಳ ಹೋರಾಟ ಅನಿವಾರ್ಯ. ಶಿಕ್ಷಣ ಉಳಿಯಲಿ, ಸಮಾನತೆ ಗೆಲ್ಲಲಿ ಎಂದರು.

ಹೊಸ ಪೀಳಿಗೆಯ ಉತ್ಸಾಹಕ್ಕೆ ಹಳೆಯ ಹೋರಾಟಗಾರರ ತ್ಯಾಗವೇ ಸ್ಫೂರ್ತಿ. ವರ್ಷಗಳಿಂದ ನೆಲಮಟ್ಟದಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ SFI ನಂತಹ ಪ್ರಗತಿಪರ ಸಂಘಟನೆಗಳೇ ಈ ಚಳುವಳಿಯ ನಿಜವಾದ ಶಕ್ತಿ ಎಂದರು.

ನಮ್ಮನ್ನು ಯಾರು ಆಳಬೇಕೆಂಬ ಮೂಲಭೂತ ಹಕ್ಕನ್ನೇ ಈ ದೇಶದ 13 ಕೋಟಿ ನಾಗರಿಕರಿಂದ ಕಿತ್ತುಕೊಳ್ಳಲಾಗಿದೆ; ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಆದರೆ, ಪ್ರತಿರೋಧವನ್ನು ಹತ್ತಿಕ್ಕಿದ ಮಾತ್ರಕ್ಕೆ ಅದು ನಾಶವಾಗುವುದಿಲ್ಲ; ಅದು ಹೊಸ ರೂಪ, ಹೊಸ ಧ್ವನಿ ಮತ್ತು ಹೊಸ ಪೀಳಿಗೆಯ ಮೂಲಕ ಮತ್ತೆ ಪುಟಿದೇಳುತ್ತದೆ ಎಂಬುದೇ ಈ ದೇಶದ ಇತಿಹಾಸ ಎಂದು ಶರಣ್ಯ ವರ್ಮ ಹೇಳಿದರು.

ಜಂತರ್ ಮಂತರ್ ಚಳವಳಿಯ ನಿಜವಾದ ಸೌಂದರ್ಯವಿರುವುದೇ ಒಗ್ಗಟ್ಟಿನಲ್ಲಿ. ವಿಭಿನ್ನ ಜಾತಿ, ಧರ್ಮ, ಪ್ರದೇಶ, ಹಿನ್ನೆಲೆ ಮತ್ತು ಸಿದ್ಧಾಂತಗಳ ಜನರೆಲ್ಲರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಅನ್ಯಾಯವನ್ನು ಪ್ರಶ್ನಿಸಲು ಒಂದೇ ವೇದಿಕೆಯಲ್ಲಿ ಒಗ್ಗೂಡಿದರು ಎಂದು ನೆನಪು ಮಾಡಿಕೊಂಡರು.

ವಿಶ್ವಗುರುವಿನ ಈ ದೇಶದಲ್ಲಿ ನಾವು 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಿದ್ದೇವೆ. ನಮ್ಮನ್ನು ಆಳುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಭೂತ ಹಕ್ಕನ್ನು ಈ ದೇಶದ 13 ಕೋಟಿ ಮತದಾರರಿಂದ ಕಸಿದುಕೊಳ್ಳಲಾಗಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.

ಪ್ರಭುತ್ವ ಎಲ್ಲಾ ಹೂವುಗಳನ್ನು ಕತ್ತರಿಸಲು ಪ್ರಯತ್ನಿಸಬಹುದು, ಆದರೆ, ವಸಂತ ಕಾಲ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೂವುಗಳು ಈ ಹಿಂದೆಯೂ ಅರಳಿವೆ, ಇಂದೂ ಅರಳುತ್ತಿವೆ, ಮತ್ತು ಮುಂದೆಯೂ ಅರಳುತ್ತಲೇ ಇರುತ್ತವೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ, ರಾಜಕಾರಣ ಇಂದು ಬ್ಯುಸಿನೆಸ್ ದಿಕ್ಕಿನತ್ತ ಸಾಗುತ್ತಿದೆ. ಸಾಮಾಜಿಕ ಮಾದ್ಯಮಗಳಲ್ಲಿ ಜನರ ಕಷ್ಟಗಳು ಕಾಣುತ್ತಿಲ್ಲ. ಕಾರ್ಪೊರೇಟ್ ಸಂಸ್ಥೆಗಳು ಮಾದ್ಯಮಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ಅವರಿಗೆ ಸಂಬಂಧಿಸಿದ ಸುದ್ದಿಗಳ ಜನರಿಗೆ ಸಿಗಲಿವೆ ಎಂದರು.

ಕಾರ್ಪೊರೇಟ್ ಶಕ್ತಿಗಳ ದೀರ್ಘಕಾಲೀನ ಗುರಿಯ ಹಾದಿ ಸ್ಪಷ್ಟವಾಗಿದೆ. ಮೊದಲು ಕೈಗಾರಿಕೆಗಳನ್ನು ವಶಪಡಿಸಿಕೊಳ್ಳುವುದು, ನಂತರ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ನಿಯಂತ್ರಿಸುವುದು, ಮತ್ತು ಅಂತಿಮವಾಗಿ ರಾಜಕಾರಣವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಎಂದರು.

ಡೊನಾಲ್ಡ್ ಟ್ರಂಪ್ ಮೂಲತಃ ರಾಜಕಾರಣಿಯಾಗಿರಲಿಲ್ಲ, ಒಬ್ಬ ದೊಡ್ಡ ಉದ್ಯಮಿ. ಇದೇ ಮಾದರಿಯಲ್ಲಿ ಇಂದು ಯಾವುದೇ ಪಕ್ಷದ ಮೂಲಕವಾದರೂ ಸರಿ, ದೇಶದ ರಾಜಕೀಯ ವ್ಯವಸ್ಥೆಯನ್ನೇ ಸಂಪೂರ್ಣ ‘ಟೇಕ್ ಓವರ್’ ಮಾಡುವ ಅಪಾಯಕಾರಿ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ ಎಂದರು.

ಕೈಗಾರಿಕೆ, ಮಾಧ್ಯಮ, ಮತ್ತು ಈಗ ರಾಜಕಾರಣ… ಕಾರ್ಪೊರೇಟ್ ವಲಯದ ಈ ವ್ಯವಸ್ಥಿತ ಹೆಜ್ಜೆಗಳ ನಡುವೆ, ಪ್ರಜಾಪ್ರಭುತ್ವದ ಮುಂದಿನ ದಿಕ್ಕನ್ನು ನಾವು ಅತ್ಯಂತ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಅದಕ್ಕೆ ಜನನುಡಿ 2026 ಮುನ್ನುಡಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ ಅವರು ಮಾತನಾಡಿ, ಪ್ರಜಾಪ್ರಭುತ್ವ ಕೋಮಾ ಸ್ಥಿತಿಗೆ ಹೋಗುವ ಮುಂಚೆ ಜೆನ್ ಜಿ ಆಗಮನವಾಗಿದ್ದು ನನಗೆ ನಿರಾಳವಾಯಿತು ಎಂದರು. ಈಗಿರುವುದು ಪ್ರೊಸೀಡರಲ್‌ ಡೆಮಾಕ್ರಸಿ ಮಾತ್ರ ಸಬ್ ಸ್ಟಾಂಟೀವ್ ಡೆಮಾಕ್ರಸಿ ಅಲ್ಲ. ಓಟು ಹಾಕುವುದಕ್ಕೆ ಸೀಮಿತರಾಗುತ್ತಿದ್ದೇವೆ. ಯಾರು ಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದರೋ, ಸಂವಿಧನವನ್ನು ವಿರೋಧಿಸುತ್ತಿದ್ದರೋ ಅಂತವರ ಕೈಯಲ್ಲಿ ಸಂವಿಧಾನ ಸಿಕ್ಕಿ ನಲುಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಮಾಡಿರುವ ಮುಖ್ಯ ಕೆಲಸ ಎಂದರೆ ಚುನಾವಣ ಆಯೋಗವನ್ನು ವಶಕ್ಕೆ ಪಡೆದಿರುವುದು. ಸ್ವಾಯತ್ತ ಸಂಸ್ಥೆಗಳದಾ ಸಿಬಿಐ, ಇಡಿಗಳನ್ನು ವಶಕ್ಕೆ ಪಡೆದಿದೆ. ಇದು ಫ್ಯಾಸಿಸಂ. ನ್ಯಾಯಾಂಗವೂ ಇದನ್ನು ಪ್ರಶ್ನೆ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕ್ರಿಯಾ ಮಾದ್ಯಮ ಪ್ರಕಾಶನದ ಪಿಚ್ಚಳ್ಳಿ ಶ್ರೀನಿವಾಸ್ ಅವರು ಸಂಪಾದನೆ ಮಾಡಿರುವ “ಹೋರಾಟದ ಹಾಡುಗಳು” ಸಂಕಲನ ಹಾಗೂ ಕೆ.ಎಸ್. ರಂಜಿತ್, ಗಿರೀಶ್ ಎ.ವಿ. ಅವರ, ತಡಗಳಲೆ ಸುರೇಂದ್ರ ರಾವ್ ಅನುವಾದಿಸಿರುವ “ಕ್ಯೂಬಾ – ಆಕ್ರಮಣ ಮತ್ತು ಪ್ರತಿರೋಧ” ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಅಭಿಮತ ಮಂಗಳೂರು ಮತ್ತು ಭಗತ್ ಸಿಂಗ್ ಮೆಮೋರಿಯಲ್ ಕಲ್ಚರಲ್ ಟ್ರಸ್ಟ್ ಆಯೋಜಿಸಿದೆ.

ಪ್ರೊ. ನರೇಂದ್ರ ನಾಯಕ್, ಡಾ. ರಮೇಶ್ ಬೆಳ್ಳಂಕೊಂಡ, ವಾಸುದೇವ ಉಚ್ಚಿಲ, ಡಾ. ಅಮರ್ ಕುಮಾರ್ ಉಪಸ್ಥಿತರಿದ್ದರು. ಡಿವೈಎಫ್ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮನೋಜ್ ವಾಮಂಜೂರು ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಡಿ.1 ರಂದು ಜಿಲ್ಲೆಗೆ ಸಿಎಂ : ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ

ಬೀಳಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳಿಗೆ ಡಿಎಂಕೆ ಬೆಂಬಲ; ಕಾಂಗ್ರೆಸ್‌ ವಿರುದ್ಧ ಕಿಡಿ

ಸೋಮವಾರದಿಂದ(ನ.30) ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನವೇ, ಕೇಂದ್ರ ಸರ್ಕಾರದ ಕ್ಷೇತ್ರ...

ರಾಜ್ಯದ 16 ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ದಕ್ಷಿಣ...

ಅಸ್ಸಾಂ: 4,900ಕ್ಕೂ ಹೆಚ್ಚು ವಿದ್ಯಾರ್ಥಿಗಳ ನಕಲಿ ಐಸಿಎಸ್‌ಇ ಪ್ರಮಾಣಪತ್ರ ಹಗರಣ ಬಯಲಿಗೆ; ಮೂವರ ಬಂಧನ

ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಮಂಡಳಿ (ಸಿಐಎಸ್‌ಸಿಇ) ಹೆಸರಿನಲ್ಲಿ 10ನೇ ತರಗತಿಯ...