ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಸಂಸತ್ತಿನ ವಿಶೇಷ ಅಧಿವೇಶನ: ತೇಜಸ್ವಿ ಯಾದವ್ ಆರೋಪ

Date:

ಮುಂಬರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿರಬಹುದು ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್ ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -

ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗೆ ಸಂಬಂಧಿಸಿದಂತೆ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ ತೇಜಸ್ವಿ ಯಾದವ್, ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸತ್ತಿನ ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ; ಕ್ಷೇತ್ರ...

ಮಹಿಳಾ ಮೀಸಲಾತಿಯನ್ನು ಯಾರೂ ವಿರೋಧಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಯನ್ನು ಮಹಿಳಾ ಮೀಸಲಾತಿಯ ಸೆರಗಿಗೆ ಗಂಟುಹಾಕುವ ಪ್ರಯತ್ನ ನಡೆದಿದೆ. ಭಾರತದ ಚುನಾವಣಾ ನಕ್ಷೆಯನ್ನೇ ಮರುರೂಪಿಸಬಲ್ಲ ಮಸೂದೆಯೊಂದನ್ನು ಬಹಳ...

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು. ಭಾಷೆಯೊಂದು...

ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ...

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗುಲಾಬಿ ಸೀರೆಧಾರಿ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟವನ್ನು ನೋಡಿದಾಗ...

ಇದೇ ವೇಳೆ, ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರೆಯನ್ನು ಬಗ್ಗೆ ಪ್ರತಿಕ್ರಿಯಿಸಿರುವ ಯಾದವ್, “ಯಾರು ಬೇಕಾದರೂ ಏನು ಬೇಕಾದರೂ ಹೇಳಬಹುದು, ಆದರೆ ಕಾರ್ಯರೂಪಕ್ಕೆ ತರುವುದು ಬೇರೆ ವಿಷಯ; ಏನಾದರೂ ಪ್ರಮುಖ ಬೆಳವಣಿಗೆಯಾದರೆ ನಾವು ಪ್ರತಿಕ್ರಿಯಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳಿಗೆ ಡಿಎಂಕೆ ಬೆಂಬಲ; ಕಾಂಗ್ರೆಸ್‌ ವಿರುದ್ಧ ಕಿಡಿ

ತೇಜಸ್ವಿ ಯಾದವ್ ಅವರ ಈ ಆರೋಪಗಳಿಗೆ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಸದಾ ಚುನಾವಣೆಯ ಬಗ್ಗೆಯೇ ಯೋಚಿಸುವವರು ತೇಜಸ್ವಿ ಯಾದವ್ ಅವರೇ ಹೊರತು ನಾವಲ್ಲ. ಮಹಿಳಾ ಮೀಸಲಾತಿಯು ದೇಶದ ಬದ್ಧತೆಯಾಗಿದೆ. ಅದನ್ನು ವಿರೋಧಿಸುವಂತೆ ನಾನು ತೇಜಸ್ವಿ ಯಾದವ್ ಅವರಿಗೆ ಸವಾಲು ಹಾಕುತ್ತೇನೆ, ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಬೇಗುಸರಾಯ್ ಸಂಸದ ಗಿರಿರಾಜ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರವು ನಾಲ್ಕು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು, ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಲೋಕಸಭೆ ಹಾಗೂ ಡಿಸೆಂಬರ್ 2 ಮತ್ತು ಡಿಸೆಂಬರ್ 3 ರಂದು ರಾಜ್ಯಸಭೆಯ ಕಲಾಪಗಳು ನಡೆಯಲಿವೆ. ಆಗಸ್ಟ್ 13 ರಂದು ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತಾದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸಿರಲಿಲ್ಲ; ಹೀಗಾಗಿ ಈ ವಿಶೇಷ ಅಧಿವೇಶನವು ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿ ನಡೆಯಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯೂಜಿಲೆಂಡ್-ಭಾರತ ಟೆಸ್ಟ್‌ ಸರಣಿ – ಸಿರಾಜ್‌ ಕೈಬಿಟ್ಟು ತಪ್ಪು ಮಾಡಿದರೇ ಗೌತಮ್‌ ಗಂಭೀರ್?

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್...

ಜಾಗತಿಕವಾಗಿ 2.4 ಕೋಟಿ ಉದ್ಯೋಗಗಳಿಗೆ ಕುತ್ತು? ಭಾರತ – ಅಮೆರಿಕ ಮೇಲೆ ಪರಿಣಾಮ?

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ವೇಗದ ಬೆಳವಣಿಗೆಯು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಬೆಂಬಲಿಸಿದ ಎನ್‌ಸಿಪಿ (ಎಸ್‌ಪಿ) ವಿರುದ್ಧ ಕಾಂಗ್ರೆಸ್ ಆಕ್ರೋಶ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾವಿಸಿರುವ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಎನ್‌ಸಿಪಿ...

ವಿಜಯಪುರ |ಕಳ್ಳರ ಕಾಟ ;ಎರಡು ದಿನಗಳಲ್ಲಿ ಏಳು ಮನೆಗಳಿಗೆ ಕನ್ನ

ವಿಜಯಪುರ ಜಿಲ್ಲೆಯ ಆಲಮಟ್ಟಿ ಪಟ್ಟಣದಲ್ಲಿ ಕಳ್ಳರ ಕಾಟ ದಿನದಿಂದ ದಿನಕ್ಕೆ...