ನೀರಿನ ಗುಣಮಟ್ಟ ವಿವಾದ: ಲ್ಯಾಬ್ ವರದಿ ವ್ಯತ್ಯಾಸದ ತನಿಖೆಗೆ ಬಿಸ್ಲೆರಿ ಆಗ್ರಹ!

Date:

ಪಶ್ಚಿಮ ಬಂಗಾಳದ ಘಟಕದಿಂದ ಸಂಗ್ರಹಿಸಲಾದ ತನ್ನ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗಳು ಎರಡು ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಎಲ್ಲಾ ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ ಎಂದು  ಪಾನೀಯ ಸಂಸ್ಥೆ ‘ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಶನಿವಾರ ಸ್ಪಷ್ಟಪಡಿಸಿದೆ. ಸರ್ಕಾರಿ ಪ್ರಯೋಗಾಲಯ ಮತ್ತು ಸ್ವತಂತ್ರ ಪ್ರಯೋಗಾಲಯಗಳ ವರದಿಗಳ ನಡುವೆ ಕಂಡುಬಂದಿರುವ ಈ ಗಂಭೀರ ವ್ಯತ್ಯಾಸದ ಕುರಿತು ಸಮಗ್ರ ತನಿಖೆ ನಡೆಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಕಂಪನಿ ಮನವಿ ಮಾಡಿದೆ.

- Advertisement -

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ತೆಲಿಪಾರದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾಗಿದ್ದ ನೀರಿನ ಮಾದರಿಯಲ್ಲಿ ‘ಕೋಲಿಫಾರ್ಮ್ ಬ್ಯಾಕ್ಟೀರಿಯಾ’ ಇರುವುದು ಪತ್ತೆಯಾಗಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿದ್ದವು. ಪ್ರಾಥಮಿಕ ಮತ್ತು ಮೇಲ್ಮನವಿ ಎರಡೂ ಪ್ರಯೋಗಾಲಯಗಳಲ್ಲಿ ಈ ಬ್ಯಾಕ್ಟೀರಿಯಾ ಇರುವಿಕೆ ದೃಢಪಟ್ಟ ಹಿನ್ನೆಲೆಯಲ್ಲಿ, ಎಫ್‌ಎಸ್‌ಎಸ್‌ಎಐ ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಇದಕ್ಕೂ ಮುನ್ನ, ಆಗಸ್ಟ್ 12 ರಂದು ನಿರ್ದಿಷ್ಟ ಬ್ಯಾಚ್‌ನ (PB201) ಮಾರಾಟವನ್ನು ನಿಷೇಧಿಸಿ ಪ್ರಾಧಿಕಾರ ಆದೇಶ ಹೊರಡಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸತ್ತಿನ ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ; ಕ್ಷೇತ್ರ...

ಮಹಿಳಾ ಮೀಸಲಾತಿಯನ್ನು ಯಾರೂ ವಿರೋಧಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಯನ್ನು ಮಹಿಳಾ ಮೀಸಲಾತಿಯ ಸೆರಗಿಗೆ ಗಂಟುಹಾಕುವ ಪ್ರಯತ್ನ ನಡೆದಿದೆ. ಭಾರತದ ಚುನಾವಣಾ ನಕ್ಷೆಯನ್ನೇ ಮರುರೂಪಿಸಬಲ್ಲ ಮಸೂದೆಯೊಂದನ್ನು ಬಹಳ...

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು. ಭಾಷೆಯೊಂದು...

ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ...

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗುಲಾಬಿ ಸೀರೆಧಾರಿ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟವನ್ನು ನೋಡಿದಾಗ...

ಎಫ್‌ಎಸ್‌ಎಸ್‌ಎಐನ ಇತ್ತೀಚಿನ ಆದೇಶಕ್ಕೆ ಪ್ರತಿಕ್ರಿಯಿಸಿರುವ ಚೌಹಾಣ್ ಕುಟುಂಬದ ನೇತೃತ್ವದ ಬಿಸ್ಲೆರಿ ಸಂಸ್ಥೆ, ಪ್ರಾಧಿಕಾರದ ನಿರ್ದೇಶನದ ಮೇರೆಗೆ ಆಗಸ್ಟ್ 12 ರಂದೇ ನಿಷೇಧಿತ ಬ್ಯಾಚ್‌ನ ನೀರಿನ ಬಾಟಲಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಆದರೆ, ಅದೇ ಬ್ಯಾಚ್‌ನ ಮಾದರಿಗಳನ್ನು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಎರಡು ಪ್ರತ್ಯೇಕ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಕೋಲಿಫಾರ್ಮ್ ಬ್ಯಾಕ್ಟೀರಿಯಾ ಸೇರಿದಂತೆ ಎಲ್ಲಾ ಆಹಾರ ಸುರಕ್ಷತಾ ಮಾನದಂಡಗಳಿಗೆ ನೀರು ಅನುಗುಣವಾಗಿರುವುದು ದೃಢಪಟ್ಟಿದೆ ಎಂದು ಕಂಪನಿ ಹೇಳಿದೆ.

“ನಿಯಂತ್ರಕ ಸಂಸ್ಥೆಯ ವರದಿ ಮತ್ತು ಸ್ವತಂತ್ರ ಪ್ರಯೋಗಾಲಯಗಳ ಫಲಿತಾಂಶಗಳ ನಡುವಿನ ಈ ವ್ಯತ್ಯಾಸವು ಕೂಲಂಕಷ ಪರಿಶೀಲನೆಗೆ ಅರ್ಹವಾಗಿದೆ. ಮಾದರಿ ಸಂಗ್ರಹಣೆ ಪ್ರಕ್ರಿಯೆ, ಪರೀಕ್ಷಾ ವಿಧಾನ ಮತ್ತು ಫಲಿತಾಂಶಗಳಲ್ಲಿನ ಏರುಪೇರಿಗೆ ಕಾರಣವಾಗಿರಬಹುದಾದ ಅಂಶಗಳನ್ನು ಎಫ್‌ಎಸ್‌ಎಸ್‌ಎಐ ಪರಿಶೀಲಿಸಬೇಕು. ಉದ್ಯಮದ ಇತರ ಸಂಸ್ಥೆಗಳಿಗೆ ಅನ್ವಯಿಸುವ ಅದೇ ಮಾನದಂಡಗಳ ಅಡಿಯಲ್ಲಿ ಈ ಪ್ರಕರಣವನ್ನೂ ಮೌಲ್ಯಮಾಪನ ಮಾಡಬೇಕು. ಸತ್ಯಾಂಶವನ್ನು ಹೊರತರಲು ಪ್ರಾಧಿಕಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ಬಿಸ್ಲೆರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಶ್ಚಿಮ ಬಂಗಾಳದ ಪ್ರಕರಣಕ್ಕೂ ಮುನ್ನ, ಗೋವಾದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾದ ನೀರಿನ ಮಾದರಿಯೂ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿತ್ತು. ಆ ಮಾದರಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ‘ಬ್ರೋಮೇಟ್’ ಅಂಶ ಕಂಡುಬಂದಿದ್ದರಿಂದ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಅದನ್ನು ‘ಅಸುರಕ್ಷಿತ’ ಎಂದು ಎಫ್‌ಎಸ್‌ಎಸ್‌ಎಐ ಘೋಷಿಸಿತ್ತು. ಬಳಿಕ ಕಂಪನಿಯ ಮೇಲ್ಮನವಿಯ ಮೇರೆಗೆ ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಲಾದ ಮಾದರಿಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಾದ ‘ಪಾಲಿನ್ಯೂಕ್ಲಿಯರ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು’ (PAHs) ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲೂ ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿತ್ತು.

 ಬಾಟಲಿ ನೀರಿನ ಗುಣಮಟ್ಟದ ಕುರಿತು ಗ್ರಾಹಕರಲ್ಲಿ ಆತಂಕ ಮೂಡದಂತೆ ಎಚ್ಚರವಹಿಸುತ್ತಲೇ, ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಫ್‌ಎಸ್‌ಎಸ್‌ಎಐ ಸಿಇಒ ರಜಿತ್ ಪುನ್ಹಾನಿ ಇತ್ತೀಚೆಗೆ ತಿಳಿಸಿದ್ದಾರೆ. ದೇಶಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಒಂದೆರಡು ತಿಂಗಳಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ಪೂರ್ಣಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷ ಆಹಾರ ಉದ್ಯಮ ಸಂಸ್ಥೆಗಳು ಮತ್ತು ಇ-ಕಾಮರ್ಸ್ ಕಂಪನಿಗಳ ಮೇಲಿನ ನಿಗಾವನ್ನು ಎಫ್‌ಎಸ್‌ಎಸ್‌ಎಐ ತೀವ್ರಗೊಳಿಸಿದೆ. ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಮಿನರಲ್ ವಾಟರ್ ಘಟಕಗಳ ತಪಾಸಣೆ ಹಾಗೂ ಮಾದರಿ ಸಂಗ್ರಹಣೆಯನ್ನು ಚುರುಕುಗೊಳಿಸುವಂತೆ ಮತ್ತು ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳ ಆಹಾರ ಆಯುಕ್ತರು ಹಾಗೂ ಪ್ರಾದೇಶಿಕ ನಿರ್ದೇಶಕರಿಗೆ ಕೇಂದ್ರ ಆಹಾರ ಪ್ರಾಧಿಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ: 4,900ಕ್ಕೂ ಹೆಚ್ಚು ವಿದ್ಯಾರ್ಥಿಗಳ ನಕಲಿ ಐಸಿಎಸ್‌ಇ ಪ್ರಮಾಣಪತ್ರ ಹಗರಣ ಬಯಲಿಗೆ; ಮೂವರ ಬಂಧನ

ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಮಂಡಳಿ (ಸಿಐಎಸ್‌ಸಿಇ) ಹೆಸರಿನಲ್ಲಿ 10ನೇ ತರಗತಿಯ...

ಹೆಸರಿಲ್ಲದ ಅಸ್ತಿತ್ವ: ಆಸ್ಪತ್ರೆ, ಕಚೇರಿ ದಾಖಲೆಗಳಲ್ಲೂ ಮಹಿಳೆಯರ ಹೆಸರನ್ನು ಅಳಿಸಿದ ತಾಲಿಬಾನ್

ಅಫ್ಘಾನಿಸ್ತಾನದ ಮಹಿಳೆಯರ ಹಕ್ಕುಗಳು, ಶಿಕ್ಷಣ ಮತ್ತು ಸಾರ್ವಜನಿಕ ಬದುಕನ್ನು ಕಸಿದುಕೊಂಡಿದ್ದ ತಾಲಿಬಾನ್...

ಬಿಸ್ಲೆರಿ ಬಂಗಾಳ ಘಟಕದ ನೀರಿನ ಮಾದರಿಯಲ್ಲಿ ‘ಕೋಲಿಫಾರ್ಮ್’ ಪತ್ತೆ; ಕಾನೂನು ಕ್ರಮಕ್ಕೆ FSSAI ಅನುಮತಿ

ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯ ಪ್ರತಿಷ್ಠಿತ ಕಂಪನಿ ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್...

ನ್ಯೂಜಿಲೆಂಡ್-ಭಾರತ ಟೆಸ್ಟ್‌ ಸರಣಿ – ಸಿರಾಜ್‌ ಕೈಬಿಟ್ಟು ತಪ್ಪು ಮಾಡಿದರೇ ಗೌತಮ್‌ ಗಂಭೀರ್?

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್...