ಪ್ರಣವ್ ಮುಖರ್ಜಿಯ ಪ್ರಧಾನಿ ಆಸೆ ನನಗೆ ಆಘಾತ ತಂದಿತ್ತು: ಸೋನಿಯಾ ಗಾಂಧಿ!

Date:

ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ಹಾಗೂ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ ದಿವಂಗತ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪ್ರಧಾನಿಯಾಗುವ ಆಸೆಯಿತ್ತು. 2010ರಲ್ಲಿ ನಡೆದ ಮಾತುಕತೆಯೊಂದರಲ್ಲಿ ಅವರು “ಮೇಲ್ಮಟ್ಟದಲ್ಲಿ ಬದಲಾವಣೆಯಾಗುವ ಅಗತ್ಯವಿದೆ” ಎಂದು ಸೂಕ್ಷ್ಮವಾಗಿ ಇಂಗಿತ ವ್ಯಕ್ತಪಡಿಸಿ ನನಗೆ ಆಘಾತ ನೀಡಿದ್ದರು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಹಾರ್ಪರ್ ಕಾಲಿನ್ಸ್ ಪ್ರಕಟಿಸಿರುವ ಈ ಪುಸ್ತಕವು ನವೆಂಬರ್ 10ರಂದು ಮಾರುಕಟ್ಟೆಗೆ ಬಂದಿದ್ದು, ನವೆಂಬರ್ 16ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

ಮನಮೋಹನ್ ಸಿಂಗ್ ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವರಾಗಿದ್ದ ಪ್ರಣವ್ ಮುಖರ್ಜಿ ಹಾಗೂ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಸಂಸತ್ತಿನ ಕಲಾಪಗಳ ಬಗ್ಗೆ ಚರ್ಚಿಸಲು ರಚಿಸಲಾಗಿದ್ದ ಕಾಂಗ್ರೆಸ್ ಕಾರ್ಯತಂತ್ರ ಗುಂಪಿನ ಸಭೆಗಳ ನಂತರ ಪ್ರಣವ್ ದಾ ತಮ್ಮೊಂದಿಗೆ ಮಾತನಾಡಲು ತಂಗುತ್ತಿದ್ದರು ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.

“2010ರ ಸಂದರ್ಭದಲ್ಲಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ ನಂತರ ಪ್ರಣವ್ ದಾ ಮೇಲ್ಮಟ್ಟದಲ್ಲಿ ಬದಲಾವಣೆಯ ಸಮಯ ಬಂದಿದೆ ಎಂದು ಸೂಚಿಸಿದರು. ಇದು ಅವರ ಸುದೀರ್ಘ ಕಾಲದ ಪ್ರಧಾನಿ ಹುದ್ದೆಯ ಆಕಾಂಕ್ಷೆಯಾಗಿತ್ತು ಎಂಬುದು ನನಗೆ ಅರ್ಥವಾಯಿತು. ಅವರ ಆ ಮಾತು ನನಗೆ ತೀವ್ರ ಆಘಾತ ತಂದಿತ್ತು. ನಾನು ತಕ್ಷಣವೇ ಉಪಾಯವಾಗಿ ವಿಷಯವನ್ನು ಬದಲಾಯಿಸಿದೆ. ಇದರಿಂದ ಅವರಿಗೆ ನಿರಾಶೆಯಾಗಿದ್ದರೂ, ಎಂದಿಗೂ ಅದನ್ನು ನನ್ನ ಮೇಲೆ ತೋರಿಸಿಕೊಳ್ಳಲಿಲ್ಲ,” ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.

2012ರಲ್ಲಿ ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾದ ಮೇಲೆಯೂ ತಾವು ಅವರನ್ನು ಆಗಾಗ ಭೇಟಿಯಾಗುತ್ತಿದ್ದೆ ಎಂದು ಸೋನಿಯಾ ಸ್ಮರಿಸಿದ್ದಾರೆ. ಸೋನಿಯಾ ಗಾಂಧಿ ಅವರ ಈ ಹೇಳಿಕೆಗೆ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ‘X’ (ಟ್ವಿಟರ್)ನಲ್ಲಿ  ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

What’s there to get ‘shocked’ about? https://t.co/MPYyVx2eg1 pic.twitter.com/G176imSSfy— Sharmistha Mukherjee (@Sharmistha_GK) November 10, 2026

“ಇದರಲ್ಲಿ ಆಘಾತಪಡುವಂಥದ್ದು ಏನಿದೆ? ರಾಜಕೀಯ ಮತ್ತು ಆಡಳಿತದಲ್ಲಿ ದಶಕಗಳ ಅನುಭವ, ಕಠಿಣ ಪರಿಶ್ರಮ ಮತ್ತು ಅಪಾರ ಬುದ್ಧಿಮತ್ತೆ ಹೊಂದಿದ್ದ ಒಬ್ಬ ನಾಯಕ ಪ್ರಧಾನಿಯಾಗುವ ಆಸೆ ಹೊಂದುವುದು ಅಪರಾಧವೇ? ಒಮ್ಮೆ ನಾನು ಅವರಲ್ಲಿ ಪ್ರಧಾನಿಯಾಗುವ ಇಚ್ಛೆಯಿದೆಯೇ ಎಂದು ಕೇಳಿದಾಗ, ‘ಆತ್ಮಗೌರವವಿರುವ ಯಾವುದೇ ರಾಜಕಾರಣಿಗೂ ಈ ಆಸೆ ಇದ್ದೇ ಇರುತ್ತದೆ’ ಎಂದು ಅವರು ನೇರವಾಗಿ ಹೇಳಿದ್ದರು,” ಎಂದು ಶರ್ಮಿಷ್ಠಾ ಬರೆದುಕೊಂಡಿದ್ದಾರೆ.

ತಮ್ಮ ರಾಜಕೀಯ ಮತ್ತು ವೈಯಕ್ತಿಕ ಜೀವನದ ಹಲವು ಕುತೂಹಲಕಾರಿ ಸಂಗತಿಗಳನ್ನು ಈ ಪುಸ್ತಕದಲ್ಲಿ ಸೋನಿಯಾ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಗೆ ಯಾವುದೇ ನಿಕಟ ಸಂಬಂಧವಿಲ್ಲ. ಅಧಿಕೃತ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ಸಾಮಾನ್ಯವಾಗಿ ನಮಸ್ಕರಿಸುತ್ತೇವೆಯಾದರೂ, ಮೋದಿ ಅವರು ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುವುದನ್ನು ತಪ್ಪಿಸಿ ಬೇರೆಡೆ ನೋಡುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ಸಂಜಯ್ ಗಾಂಧಿ ಅವರೊಂದಿಗಿನ ಮದುವೆಯ ನಂತರ ಮೇನಕಾ ಗಾಂಧಿ ಅವರೊಂದಿಗೆ ಉಂಟಾದ ವೈಯಕ್ತಿಕ ಭಿನ್ನಾಭಿಪ್ರಾಯಗಳು ರಾಜಕೀಯಕ್ಕೂ ಹೇಗೆ ಹರಡಿದವು ಎಂಬುದನ್ನು ವಿವರಿಸಿದ್ದಾರೆ. ತುರ್ತುಸ್ಥಿತಿಯ ನಂತರ ಮೇನಕಾ ಅವರ ರಾಜಕೀಯ ಚಟುವಟಿಕೆಗಳ ಬಗ್ಗೆ ಇಂದಿರಾ ಗಾಂಧಿಯವರಿಗಿದ್ದ ಅಸಮಾಧಾನ ಮತ್ತು ಕೊನೆಗೆ ಮೇನಕಾ ಗಾಂಧಿ ಮನೆ ತೊರೆದು ಹೋದ ಘಟನೆಯನ್ನು ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋನಿಯಾ ಪುಸ್ತಕ: ಸಿಖ್ಖರ ಗಾಯಗಳ ಮೇಲೆ ಉಪ್ಪು ಎರಚಿದ್ದಾರೆಂದ ಅಕಾಲಿಗಳು

‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ಕಗ್ಗೊಲೆ ನಡೆಸುವಂತೆ...

1984ರ ಸಿಖ್‌ ವಿರೋಧಿ ಹಿಂಸೆ ಐತಿಹಾಸಿಕ ದುರಂತ, ನಾಚಿಕೆಗೇಡಿನ ಅಧ್ಯಾಯ: ಸೋನಿಯಾ ಗಾಂಧಿ

ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಸರ್ಕಾರಗಳ ಅವಧಿಯಲ್ಲಿ ಹಲವು ವಿಚಾರಣಾ ಆಯೋಗಗಳನ್ನು ರಚಿಸಲಾಯಿತು....

ಬರ ಪರಿಹಾರ: ಅರ್ಹ ರೈತರಿಗೆ ಕನಿಷ್ಠ 5,000 ರೂ. ಇನ್‌ಪುಟ್ ಸಬ್ಸಿಡಿ ಖಾತರಿ; ವಿಪತ್ತು ನಿರ್ವಹಣೆ ಆಯುಕ್ತೆ ಸ್ಪಷ್ಟನೆ

2026ರ ಮುಂಗಾರು ಋತುವಿನ ಬರಗಾಲದಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರಿಗೆ ವಿತರಿಸಲಾಗುತ್ತಿರುವ...

ಕಲಬುರಗಿ | ವಿದ್ಯುತ್ ತಂತಿ ತಗುಲಿ ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಸಾವು

ಶಹಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನಿಗೆ ವಿದ್ಯುತ್...