ಜಾತಿಯ ಗೋಡೆಗಳಾಚೆ ಪ್ರೀತಿಯ ಪಯಣ: ಸಂವಿಧಾನದ ಬೆಳಕಿನಲ್ಲಿ ಹೊಸ ಬದುಕಿಗೆ ಮುನ್ನುಡಿ!

Date:

ಜಾತಿ, ಧರ್ಮ, ಕುಲ, ಗೋತ್ರಗಳ ಕಟ್ಟುಪಾಡುಗಳನ್ನು ಮೀರಿ ಪ್ರೀತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆಯುತ್ತಿರುವ ಕೊಪ್ಪಳ ವಿಶ್ವವಿದ್ಯಾಲಯದ ಉಪನ್ಯಾಸಕರ ವಿವಾಹ ಈಗ ಗಮನ ಸೆಳೆಯುತ್ತಿದೆ.

- Advertisement -

ಡಾ.ಪಾರ್ವತಿ ಕನಕಗಿರಿ ಮತ್ತು ಡಾ. ಪ್ರವೀಣ ಪೊಲೀಸ್ ಪಾಟೀಲ ಅವರು ನವೆಂಬರ್ 26ರ ಸಂವಿಧಾನ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ವಿವಾಹದ ವಿಶೇಷತೆ ಮದುವೆಯ ದಿನಾಂಕದಲ್ಲಷ್ಟೇ ಇಲ್ಲ; ತಮ್ಮ ಬದುಕಿನ ಮಹತ್ವದ ಘಟ್ಟವೊಂದನ್ನು ಸಾಮಾಜಿಕ ಮತ್ತು ವೈಚಾರಿಕ ಸಂದೇಶದ ಅಭಿವ್ಯಕ್ತಿಯನ್ನಾಗಿ ರೂಪಿಸಿರುವುದರಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಆಮಂತ್ರಣ ಪತ್ರಿಕೆಯೂ ವಿಶೇಷ

ಸಾಮಾನ್ಯವಾಗಿ ವಿವಾಹ ಆಮಂತ್ರಣ ಪತ್ರಿಕೆಗಳು ಕುಟುಂಬದ ಪರಿಚಯ, ಸಂಪ್ರದಾಯ ಮತ್ತು ಶುಭಾಶಯಗಳಿಗೆ ಸೀಮಿತವಾಗಿರುತ್ತವೆ. ಆದರೆ, ಈ ಜೋಡಿಯ ಆಮಂತ್ರಣ ಪತ್ರಿಕೆ ಅದಕ್ಕಿಂತ ಭಿನ್ನವಾಗಿ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಪ್ರತಿಪಾದಿಸುತ್ತದೆ. ಶಾಂತಿಯ ಪ್ರತೀಕ ಗೌತಮ ಬುದ್ಧ, ಕಾಯಕ ಮತ್ತು ಸಮಾನತೆಯ ಪ್ರತಿಪಾದಕ ಬಸವಣ್ಣ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ತಮ್ಮ ಬದುಕಿನ ಮಾರ್ಗದರ್ಶಕ ತತ್ವಗಳಾಗಿ ಸ್ವೀಕರಿಸಿರುವುದು ಗಮನಾರ್ಹ.

ರಾಷ್ಟ್ರಕವಿ ಕುವೆಂಪು ಅವರ ‘ಮನುಜಮತ, ವಿಶ್ವಪಥ’, ಸಿದ್ದಯ್ಯ ಪುರಾಣಿಕರ ‘ಏನಾದರೂ ಆಗು, ಮೊದಲು ಮಾನವನಾಗು’ ಎಂಬ ಸಂದೇಶಗಳ ಜತೆಗೆ ಕನಕದಾಸರ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಮತ್ತು ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಆಶಯಗಳನ್ನೂ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಜಾತಿಯ ಗುರುತಿಗಿಂತ ಮನುಷ್ಯತ್ವವೇ ಶ್ರೇಷ್ಠ ಎಂಬ ನಿಲುವನ್ನು ಜೋಡಿ ಸ್ಪಷ್ಟಪಡಿಸಿದೆ.

ಕವಿತೆ ಮೂಲಕ ಪ್ರೀತಿಯ ಅಭಿವ್ಯಕ್ತಿ

ಈ ಜೋಡಿಗಳ ವಿವಾಹದ ಮತ್ತೊಂದು ವಿಶೇಷವೆಂದರೆ ತಮ್ಮ ಭಾವನೆ ಮತ್ತು ವೈಚಾರಿಕ ನಿಲುವುಗಳನ್ನು ಸ್ವರಚಿತ ಕವಿತೆಗಳ ಮೂಲಕ ಅಭಿವ್ಯಕ್ತಿಸಿರುವುದು. ಇಬ್ಬರೂ ಸಾಹಿತ್ಯಾಸಕ್ತರಾಗಿರುವುದರಿಂದ ಆಮಂತ್ರಣ ಪತ್ರಿಕೆ ಕಾವ್ಯ ಮತ್ತು ಸಾಮಾಜಿಕ ಚಿಂತನೆಯ ಸಂಗಮವಾಗಿ ರೂಪುಗೊಂಡಿದೆ.

ಡಾ. ಪ್ರವೀಣ ಪೋಲಿಸ ಪಾಟೀಲ ಅವರ ಕವಿತೆ

‘ಜಾತಿ ಇಲ್ಲದ ಪ್ರೀತಿ ನಮ್ಮದು, ಮತ್ತೇಕೆ ಭೀತಿ’

‘ಮನಸು ಮನಸುಗಳ ಮಧ್ಯೆ ಪ್ರೇಮದ ಸೇತುವೆ ಕಟ್ಟಿ,
ಜಾತಿ ವಿರೋಧದ ಜಾತ್ರೆ ಮಾಡೋಣ’

ಡಾ. ಪಾರ್ವತಿ ಕನಕಗಿರಿ ಅವರ ಕವಿತೆ

‘ಎಡಬಲಗಳ ಮಧ್ಯೆ ಕಟ್ಟಿ ಕೆಡಹುವುದರೊಳಗೆ
ಕಟ್ಟಿಕೊಂಡೆವು ನಾವು ಯುದ್ಧವಿಲ್ಲದ ಬುದ್ಧನನ್ನು,
ಸೇರಿಕೊಂಡೆವು ನಾವು ಸಮಾನತೆಯ ಬಸವನನ್ನು,
ಒಪ್ಪಿ ಅಪ್ಪಿಕೊಂಡೆವು ದೂರವಿಟ್ಟ ಭೀಮನನ್ನು’

ಈ ಸಾಲುಗಳಲ್ಲಿ ಬುದ್ಧನ ಶಾಂತಿ, ಬಸವಣ್ಣನ ಸಮಾನತೆ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳು ಮೇಳೈಸಿವೆ. ಸೈದ್ಧಾಂತಿಕ ಭಿನ್ನತೆಗಳ ಸಂಘರ್ಷಕ್ಕಿಂತ ಮಾನವೀಯ ಮೌಲ್ಯಗಳ ಮೂಲಕ ಬದುಕು ಕಟ್ಟಿಕೊಳ್ಳುವ ಸಂಕಲ್ಪವನ್ನು ಕವಿತೆ ಅಭಿವ್ಯಕ್ತಿಸುತ್ತದೆ.

ಸಂವಿಧಾನ ದಿನದ ಆಯ್ಕೆ ಏಕೆ?

1949ರ ನವೆಂಬರ್ 26ರಂದು ಭಾರತದ ಸಂವಿಧಾನ ಅಂಗೀಕಾರಗೊಂಡಿತು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಸಾರುವ ಈ ಐತಿಹಾಸಿಕ ದಿನವನ್ನೇ ತಮ್ಮ ವಿವಾಹಕ್ಕೆ ಆಯ್ಕೆ ಮಾಡಿಕೊಂಡಿರುವುದು ಜೋಡಿಯ ವೈಚಾರಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯ ಮಾರ್ಗದರ್ಶಿಯಲ್ಲ; ಪ್ರತಿಯೊಬ್ಬ ವ್ಯಕ್ತಿಯ ಘನತೆ, ಹಕ್ಕು ಮತ್ತು ಸಮಾನತೆ ಎತ್ತಿಹಿಡಿಯುವ ಜೀವನದರ್ಶನವೂ ಹೌದು. ಅಂತಹ ಮೌಲ್ಯಗಳನ್ನು ಗೌರವಿಸುವ ದಿನದಂದು ಹೊಸ ಬದುಕು ಆರಂಭಿಸುವ ಮೂಲಕ ತಮ್ಮ ದಾಂಪತ್ಯಕ್ಕೆ ಒಂದು ಅರ್ಥಪೂರ್ಣ ಆಶಯವನ್ನು ಜೋಡಿ ನೀಡಿದೆ.

ವೈಚಾರಿಕ ಬದುಕಿಗೆ ದಾಂಪತ್ಯದ ಬೆಸುಗೆ

ವಿವಾಹವೆಂದರೆ ಪರಸ್ಪರರ ವ್ಯಕ್ತಿತ್ವ, ಸ್ವಾತಂತ್ರ್ಯ, ಕನಸು ಮತ್ತು ಅಭಿಪ್ರಾಯಗಳನ್ನು ಗೌರವಿಸುತ್ತಾ ಜೊತೆಯಾಗಿ ಸಾಗುವ ಜೀವನಯಾನ. ಆ ಯಾನಕ್ಕೆ ಸಮಾನತೆ ಮತ್ತು ಮಾನವೀಯತೆಯನ್ನು ಅಡಿಪಾಯವಾಗಿಸಿಕೊಳ್ಳುವ ಆಶಯ ಈ ಜೋಡಿಯ ನಿರ್ಧಾರದಲ್ಲಿದೆ.

ಜಾತಿ ಮತ್ತು ಧರ್ಮದ ಗುರುತುಗಳು ಮನುಷ್ಯರ ನಡುವೆ ಅಂತರ ಸೃಷ್ಟಿಸಬಾರದು; ಪ್ರೀತಿ, ಗೌರವ ಮತ್ತು ಸಹಬಾಳ್ವೆಯೇ ಸಂಬಂಧಗಳ ಮೂಲವಾಗಬೇಕು ಎಂಬ ಸಂದೇಶವನ್ನು ಇವರ ವಿವಾಹ ಸಾರುತ್ತಿದೆ. ವೈಯಕ್ತಿಕ ಬದುಕಿನ ಆಯ್ಕೆಯೊಂದನ್ನು ಸಾಮಾಜಿಕ ಪ್ರಜ್ಞೆಯ ಅಭಿವ್ಯಕ್ತಿಯನ್ನಾಗಿ ರೂಪಿಸಿರುವುದು ಈ ವಿವಾಹದ ಗಮನಾರ್ಹ ಅಂಶ.

ಡಾ.ಪಾರ್ವತಿ ಕನಕಗಿರಿ ಮತ್ತು ಡಾ. ಪ್ರವೀಣ ಪೋಲಿಸ ಪಾಟೀಲ ಅವರ ವಿವಾಹವು 2026ರ ನವೆಂಬರ್ 26ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಭಾಗ್ಯನಗರದ ಓಜನಹಳ್ಳಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ಪ್ಯಾಲೇಸ್‌ನಲ್ಲಿ ನಡೆಯಲಿದೆ.

ವಧುವಿನ ತಾಯಿ ಸತ್ಯಮ್ಮ ಮತ್ತು ತಂದೆ ದಿ.ಕಂಟೆಪ್ಪ ಚಲುವಾದಿ (ಕನಕಗಿರಿ), ವರನ ತಾಯಿ ಬಸಮ್ಮ ಮತ್ತು ತಂದೆ ಬಸನಗೌಡ ಪೊಲೀಸ್ ಪಾಟೀಲ (ತರಲಕಟ್ಟಿ, ಯಲಬುರ್ಗಾ) ಸೇರಿದಂತೆ ಎರಡೂ ಕುಟುಂಬಗಳ ಬಂಧುಗಳು ಭಾಗವಹಿಸಲಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಸಾಹಿತಿಗಳು, ಸಂಶೋಧಕರು, ಸಾಂಸ್ಕೃತಿಕ ಚಿಂತಕರು, ಸ್ನೇಹಿತರು, ಹಿತೈಷಿಗಳು ಮತ್ತು ವಿದ್ಯಾರ್ಥಿ ಬಳಗವೂ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಜಾತಿಯ ಗೋಡೆಗಳಾಚೆ ಪ್ರೀತಿಯ ಹಾದಿಯಲ್ಲಿ ಒಂದಾಗುತ್ತಿರುವ ಎರಡು ಮನಸ್ಸುಗಳ ಈ ನಿರ್ಧಾರ, ಸಂವಿಧಾನದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಆಶಯಕ್ಕೆ ಸಾಕ್ಷಿಯಾಗಿದೆ. ಇವರ ದಾಂಪತ್ಯ ಜೀವನ ಪ್ರೀತಿ, ಪರಸ್ಪರ ಗೌರವ ಮತ್ತು ಸಮಾನತೆಯ ನೆಲೆಯಲ್ಲಿ ಸಾರ್ಥಕವಾಗಿ ಸಾಗಲಿ ಎಂಬುದೇ ಈ ವಿವಾಹಕ್ಕೆ ಸಲ್ಲುವ ಹಾರೈಕೆ.

“ಜಾತಿಯ ಗೋಡೆಗಳ ಮೀರಿ ಪ್ರೀತಿಯ ಹಾದಿಯಲ್ಲಿ ಒಂದಾದ ಎರಡು ಮನಸುಗಳು, ಸಂವಿಧಾನದ ಆಶಯಗಳಿಗೆ ಸಾಕ್ಷಿಯಾಗಿ ಬೆಸೆದವು ಹೊಸ ಕನಸುಗಳು. ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಭೀಮನ ನ್ಯಾಯದ ಬೆಳಕಿನಲ್ಲಿ, ಜಾತಿ ಮೀರಿದ ಈ ದಾಂಪತ್ಯ ಸಮಾಜಕ್ಕೆ ಮಾದರಿಯಾಗಲಿ ಬದುಕಿನ ಪಯಣದಲ್ಲಿ.“

ಇದನ್ನೂ ಓದಿ : ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ ಕಲಿಯುವುದು ಯಾವಾಗ?

ಸಂತೋಷಕುಮಾರ ಹೆಚ್‌ ಕೆ
ಸಂತೋಷಕುಮಾರ ಹೆಚ್ ಕೆ
+ posts

ಉಪನ್ಯಾಸಕ, ಸಂಶೋಧಕ,

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಸಂತೋಷಕುಮಾರ ಹೆಚ್ ಕೆ
ಸಂತೋಷಕುಮಾರ ಹೆಚ್ ಕೆ
ಉಪನ್ಯಾಸಕ, ಸಂಶೋಧಕ,

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...

ರಬಕವಿ | ಪಾರ್ಕಿಂಗ್ ನಿಯಮದ ಉಲ್ಲಂಘನೆ; ಸ್ಥಳೀಯರಿಂದ ಶೀಘ್ರ ಕ್ರಮಕ್ಕೆ ಒತ್ತಾಯ

ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ನಮ್ಮ ಸರ್ಕಾರ ಅಷ್ಟು ಪ್ರಚಾರ ಮತ್ತು...