ಬರ ಪರಿಹಾರ: ಅರ್ಹ ರೈತರಿಗೆ ಕನಿಷ್ಠ 5,000 ರೂ. ಇನ್‌ಪುಟ್ ಸಬ್ಸಿಡಿ ಖಾತರಿ; ವಿಪತ್ತು ನಿರ್ವಹಣೆ ಆಯುಕ್ತೆ ಸ್ಪಷ್ಟನೆ

Date:

2026ರ ಮುಂಗಾರು ಋತುವಿನ ಬರಗಾಲದಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರಿಗೆ ವಿತರಿಸಲಾಗುತ್ತಿರುವ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿ ಮೊತ್ತದ ಕುರಿತು ಉಂಟಾಗಿದ್ದ ಗೊಂದಲಗಳಿಗೆ ವಿಪತ್ತು ಪರಿಹಾರ ಇಲಾಖೆಯ ಆಯುಕ್ತೆ ಹೊನ್ನಾಂಬ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಆದೇಶದನ್ವಯ ಪ್ರತಿ ರೈತರ ಅರ್ಹತೆಗೆ ಅನುಗುಣವಾಗಿ ಮೊದಲ ಕಂತಾಗಿ 2,500 ರೂ.ಗಳವರೆಗೆ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿತ್ತು. ಇದರ ಭಾಗವಾಗಿ ನವೆಂಬರ್ 5ರಂದು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ಒಟ್ಟು 1,743.53 ಲಕ್ಷ ರೂಪಾಯಿ ಬಿಡುಗಡೆಗೆ ಚಾಲನೆ ನೀಡಿದ್ದರು.
ಇದೀಗ ಬೆಳೆ ನಷ್ಟಕ್ಕೊಳಗಾದ ಮಳೆಯಾಶ್ರಿತ, ನೀರಾವರಿ ಮತ್ತು ಬಹುವಾರ್ಷಿಕ ಬೆಳೆಗಾರರಾದ ಅರ್ಹ ರೈತರಿಗೆ ನೀಡಲಾಗುವ ಕನಿಷ್ಠ ಇನ್‌ಪುಟ್ ಸಬ್ಸಿಡಿ ನೆರವನ್ನು 5,000 ರೂಪಾಯಿಗಳಿಗೆ ಹೆಚ್ಚಿಸಿ, ಅದನ್ನು ಎರಡು ಕಂತುಗಳಲ್ಲಿ ವಿತರಿಸುವುದಾಗಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು‌ ತಿಳಿಸಿದ್ದಾರೆ.

- Advertisement -

“ಮೊದಲ ಕಂತಿನಲ್ಲಿ 2,000 ರೂಪಾಯಿ ಪಡೆದಿರುವ ರೈತರಿಗೆ ಎರಡನೇ ಕಂತಿನಲ್ಲಿ ಬಾಕಿ 3,000 ರೂಪಾಯಿ ತಲುಪಲಿದೆ. ಹಾಗೆಯೇ, ಮೊದಲ ಕಂತಿನಲ್ಲಿ 2,500 ರೂಪಾಯಿ ಪಡೆದ ರೈತರಿಗೆ ಎರಡನೇ ಕಂತಿನಲ್ಲಿ 2,500 ರೂಪಾಯಿ ಜಮೆಯಾಗಲಿದೆ.‌ ಇದರಿಂದ ಪ್ರತಿಯೊಬ್ಬ ಅರ್ಹ ರೈತರಿಗೂ ಒಟ್ಟಾರೆಯಾಗಿ ಕನಿಷ್ಠ 5,000 ರೂಪಾಯಿ ನೆರವು ಸಿಗುವುದು ಖಚಿತವಾಗಲಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

“ಪ್ರಸ್ತುತ ಜಾರಿಯಲ್ಲಿರುವ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಕನಿಷ್ಠ ಇನ್‌ಪುಟ್ ಸಬ್ಸಿಡಿ ನೆರವು ಮಳೆಯಾಶ್ರಿತ ಬೆಳೆಗಳಿಗೆ 1,500 ರೂ., ನೀರಾವರಿ ಬೆಳೆಗಳಿಗೆ 2,600 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ರೂಪಾಯಿ ಆಗಿದೆ. ಆದರೆ, ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ಈ ಮೂರೂ ವರ್ಗದ ಬೆಳೆಗಳಿಗೆ ನೀಡುವ ಕನಿಷ್ಠ ನೆರವನ್ನು 5,000 ರೂಪಾಯಿಗೆ ಹೆಚ್ಚಿಸಿದ್ದು, ನಿಯಮಗಳಿಗಿಂತ ಹೆಚ್ಚುವರಿಯಾಗುವ ಈ ಮೊತ್ತವನ್ನು ರಾಜ್ಯ ಸರ್ಕಾರದ ಸ್ವಂತ ನಿಧಿಯಿಂದಲೇ ಭರಿಸಲಾಗುತ್ತಿದೆ” ಎಂದು ವಿವರಿಸಿದ್ದಾರೆ.

“ಸರ್ಕಾರ ನೀಡಿರುವ 5,000 ರೂಪಾಯಿ ಭರವಸೆಯು ಕೇವಲ ಕನಿಷ್ಠ ನೆರವು ಮಾತ್ರವಾಗಿದ್ದು, ಇದು ಗರಿಷ್ಠ ಮಿತಿಯಲ್ಲ. ಬೆಳೆ ನಷ್ಟದ ಪ್ರಮಾಣ ಮತ್ತು ವರ್ಗಕ್ಕೆ ಅನುಗುಣವಾಗಿ ಪರಿಷ್ಕೃತ ನಿಯಮಗಳ ಅಡಿಯಲ್ಲಿ ಅರ್ಹ ರೈತರು ಮುಂದಿನ ಹಂತಗಳಲ್ಲಿ 5,000 ರೂಪಾಯಿಯಿಂದ ಹಿಡಿದು 60,000 ರೂಪಾಯಿಯವರೆಗೆ ಇನ್‌ಪುಟ್ ಸಬ್ಸಿಡಿ ಪಡೆಯಲಿದ್ದಾರೆ. ಈಗಾಗಲೇ ವಿತರಿಸಲಾಗಿರುವ ಮೊತ್ತವು ಕೇವಲ ಮೊದಲ ಕಂತಷ್ಟೇ ಆಗಿದ್ದು, ಬರದಿಂದ ಸಂಕಷ್ಟಕ್ಕೊಳಗಾದ ಎಲ್ಲ ಅರ್ಹ ರೈತರಿಗೆ ಸಂಪೂರ್ಣ ನೆರವನ್ನು ಸಕಾಲದಲ್ಲಿ ತಲುಪಿಸಲು ಸರ್ಕಾರ ಬದ್ಧವಾಗಿದೆ” ಎಂದಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಬಕವಿ | ಪಾರ್ಕಿಂಗ್ ನಿಯಮದ ಉಲ್ಲಂಘನೆ; ಸ್ಥಳೀಯರಿಂದ ಶೀಘ್ರ ಕ್ರಮಕ್ಕೆ ಒತ್ತಾಯ

ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ನಮ್ಮ ಸರ್ಕಾರ ಅಷ್ಟು ಪ್ರಚಾರ ಮತ್ತು...

ಕಾಂಗ್ರೆಸ್ ಭರವಸೆ ಈಡೇರಿಕೆಗೆ ಆಗ್ರಹ: ನ. 12ರಂದು ಬೆಂಗಳೂರಿನಲ್ಲಿ ‘ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ಸಮಾವೇಶ

ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ್ದ ಪ್ರಮುಖ ಭರವಸೆಗಳನ್ನು...

ವಿಜಯಪುರ | ಹಜರತ್ ಟಿಪ್ಪು ಸುಲ್ತಾನರ 276ನೇ ಜಯಂತಿ ಆಚರಣೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 276ನೇ...