ಉತ್ತರ ಪ್ರದೇಶದಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ: ರಾಷ್ಟ್ರಪತಿ ಭವನದ ಭದ್ರತಾ ಸಿಬ್ಬಂದಿಗೆ ಗುಂಡೇಟು

Date:

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ನೆರೆಹೊರೆಯವರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ರಾಷ್ಟ್ರಪತಿ ಭವನದ ಭದ್ರತಾ ಸಿಬ್ಬಂದಿಯೊಬ್ಬರ ತಲೆಗೆ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ನಡೆದಿದೆ. ದೀಪಾವಳಿ ಹಬ್ಬದ ರಜೆಗೆಂದು ತಮ್ಮ ಊರಿಗೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

- Advertisement -

​ಗಾಯಗೊಂಡ ಯೋಧನನ್ನು ಸೌರಭ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಭದ್ರತೆಗೆ ನಿಯೋಜನೆಗೊಂಡಿರುವ ವಿಶೇಷ ಪಡೆಯ (President’s Bodyguard) ಸಿಬ್ಬಂದಿಯಾಗಿದ್ದಾರೆ. ಗುಂಡು ಮೊದಲು ಗೋಡೆಗೆ ತಾಗಿ, ಬಳಿಕ ಸೌರಭ್ ಅವರ ತಲೆಗೆ ಹೊಕ್ಕಿದ್ದರಿಂದ ಅದರ ತೀವ್ರತೆ ಕಡಿಮೆಯಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರತೆಗೆದಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

​ನವೆಂಬರ್ 8ರಂದು ರಾತ್ರಿ 9 ಗಂಟೆ ಸುಮಾರಿಗೆ ಗೋಪಾಲ್‌ಪುರ ಖದಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೌರಭ್ ಅವರು ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟು ಅವರೊಂದಿಗೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಸುಮಾರು 100 ಮೀಟರ್ ದೂರದಲ್ಲಿ ವಾಸಿಸುವ ಧೀರಜ್ ಎಂಬಾತ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರುಮಾಡಿದ್ದಾನೆ. ಪಟಾಕಿ ಸಿಡಿಸುವುದಕ್ಕೆ ಆತ ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಗುಂಪಿನ ನಡುವೆ ವಾಗ್ವಾದ ಶುರುವಾಗಿದೆ.

​ಗ್ರಾಮಸ್ಥರು ಮಧ್ಯಪ್ರವೇಶಿಸಿ ಆರಂಭದಲ್ಲಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಆದರೆ, ಸೌರಭ್ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಗಲಾಟೆ ಮತ್ತೆ ಮಿತಿಮೀರಿದೆ. ಆಗ ಕೋಪಗೊಂಡ ಧೀರಜ್ ತನ್ನ ಬಳಿಯಿದ್ದ ನಾಡಪಿಸ್ತೂಲಿನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ. ಇದೇ ವೇಳೆ, ಆರೋಪಿಯ ಸಹೋದರ ಮೋನು (ಪ್ರವೀಣ್) ಎಂಬಾತ ಸೌರಭ್ ಅವರ ಸಹೋದರ ವಿನೀತ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯ ಬಳಿಕ ಆರೋಪಿಗಳು ಕುಟುಂಬಕ್ಕೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಯೋಧನ ತಂದೆ ಜನಕ್ ರಾಜ್ ದೂರಿನಲ್ಲಿ ವಿವರಿಸಿದ್ದಾರೆ.

​ಸಂತ್ರಸ್ತ ಯೋಧನ ತಂದೆ ಜನಕ್ ರಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ರಮಾಲಾ ಪೊಲೀಸ್ ಠಾಣೆಯಲ್ಲಿ ಧೀರಜ್ ಮತ್ತು ಮೋನು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಟಾಕಿ ವಿಚಾರದ ಜೊತೆಗೆ, ಆರೋಪಿಗಳು ತಮ್ಮ ಕುಟುಂಬದೊಂದಿಗೆ ಹಳೆಯ ದ್ವೇಷವನ್ನು ಹೊಂದಿದ್ದರು ಎಂಬುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ ಎಂದು ಬಾಗ್‌ಪತ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪೂರ್ಣೇಂದು ಸಿಂಗ್ ಮಾಹಿತಿ ನೀಡಿದ್ದಾರೆ.

​ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಎಸ್ಪಿ ಪೂರ್ಣೇಂದು ಸಿಂಗ್ ಅವರ ಸೂಚನೆಯ ಮೇರೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತ್ವರಿತವಾಗಿ ಆರೋಪಿಗಳನ್ನು ಸೆರೆಹಿಡಿಯುವಂತೆ ಸೂಚನೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎರಡು ದಶಕಗಳ ಪರಿಸರ ಪ್ರೇಮ: ವಲಸೆ ಹಕ್ಕಿಗಳಿಗಾಗಿ ತಮಿಳುನಾಡಿನಲ್ಲಿ ಪಟಾಕಿ ಮುಕ್ತ ದೀಪಾವಳಿ

ದೀಪಾವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರೆ, ವನ್ಯಜೀವಿಗಳು ಮತ್ತು...

ಪ್ರಧಾನಿ ಮೋದಿ ಚಹಾ ಸವಿದಿದ್ದ ಅಯೋಧ್ಯೆಯ ಮೀರಾ ಮಾಂಝಿ ಕುಟುಂಬವೀಗ ಸಾಲದ ಸುಳಿಯಲ್ಲಿ; ಬ್ಯಾಂಕ್‌ನಿಂದ ನೋಟಿಸ್‌

2023ರ ಡಿಸೆಂಬರ್ 30ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 'ಉಜ್ವಲ ಯೋಜನೆ'ಯ...

ಯುಎಪಿಎ ಅಡಿ 6 ವರ್ಷ ಜೈಲುವಾಸ; ಇಬ್ಬರು ಯುವಕರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದ ಜೆ-ಕೆ ಕೋರ್ಟ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ...

‘ದಾಂಪತ್ಯವು ಮೌಲ್ಯ, ಭಾವನೆ, ವೈಫಲ್ಯಗಳ ಸಮ್ಮಿಶ್ರಣ’: ಪತಿಯ ವಿಚ್ಛೇದನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ದಾಂಪತ್ಯ ಸಂಬಂಧಗಳು ಮಾನವೀಯ ಮೌಲ್ಯಗಳು, ಭಾವನೆಗಳು ಹಾಗೂ ವ್ಯಕ್ತಿಗತ ವೈಫಲ್ಯಗಳ ಸಂಕೀರ್ಣ...