ಈಗಿರುವ ಶಾಖ ಏನೇನೂ ಅಲ್ಲ, ವಿನಾಶಕಾರಿ ತಾಪಮಾನದ ವಾರ್ನಿಂಗ್‌ ಕೊಟ್ಟಿದೆ ವಿಶ್ವಸಂಸ್ಥೆ!

Date:

ಜಾಗತಿಕ ತಾಪಮಾನ ಏರಿಕೆಯ ಕುರಿತು ವಿಶ್ವಸಂಸ್ಥೆಯು (UN) ಅತ್ಯಂತ ಆತಂಕಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಜಾಗತಿಕ ತಾಪಮಾನವು ಈಗಿರುವ ಸುರಕ್ಷತಾ ಮಿತಿಯನ್ನ ಪದೇ ಪದೇ ಮೀರುವ ಸಾಧ್ಯತೆ ದಟ್ಟವಾಗಿದೆ ಎಂದಿವೆ ಇತ್ತೀಚಿನ ಹೊಸ ಮುನ್ಸೂಚನೆಗಳು. ಜಗತ್ತು ಈಗ ತನ್ನದೇ ಆದ ಹಿಂದಿನ ಎಲ್ಲಾ ತಾಪಮಾನದ ದಾಖಲೆಗಳನ್ನು ಮುರಿಯುವ ಹಾದಿಯಲ್ಲಿದ್ದು, ಹವಾಮಾನ ತುರ್ತು ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

- Advertisement -

ವಿಶ್ವ ಹವಾಮಾನ ಸಂಸ್ಥೆ (WMO) ವರದಿಯ ಪ್ರಕಾರ, ಆರ್ಕ್ಟಿಕ್ (Arctic) ಪ್ರದೇಶವು ಅತ್ಯಂತ ಆತಂಕಕಾರಿ ವೇಗದಲ್ಲಿ ಬಿಸಿಯಾಗುತ್ತಿದ್ದು, 2030ರ ವೇಳೆಗೆ ಅಲ್ಲಿನ ತಾಪಮಾನ ಸುಮಾರು 3 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಹೆಚ್ಚಾಗಬಹುದು. ಇದೇ ವೇಳೆ, ಅಮೆಜಾನ್ ಮಳೆಕಾಡುಗಳು ತೀವ್ರ ತಾಪಮಾನ ಮತ್ತು ಭೀಕರ ಬರಗಾಲವನ್ನು ಎದುರಿಸಲಿದ್ದು, ವಿನಾಶಕಾರಿ ಕಾಳ್ಗಿಚ್ಚುಗಳು ಸಂಭವಿಸುವ ಭೀತಿ ಎದುರಾಗಿದೆ. ಕಲ್ಲಿದ್ದಲು, ತೈಲ ಮತ್ತು ಗ್ಯಾಸ್‌ಗಳಂತಹ ಇಂಧನಗಳ ನಿರಂತರ ಬಳಕೆಯೇ ಈ ಜಾಗತಿಕ ಪ್ರವಾಹಗಳು, ತೀವ್ರ ಉಷ್ಣಗಾಳಿ ಮತ್ತು ದೀರ್ಘಕಾಲದ ಬರಗಾಲಕ್ಕೆ ಕಾರಣ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಹವಾಮಾನ ಕಚೇರಿ ಜಂಟಿಯಾಗಿ ಸಿದ್ಧಪಡಿಸಿರುವ ವರದಿಯ ಪ್ರಕಾರ, 2026 ರಿಂದ 2030ರ ನಡುವಿನ ಸರಾಸರಿ ಜಾಗತಿಕ ತಾಪಮಾನವು ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ನಿಗದಿಪಡಿಸಲಾದ 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರಲು ಶೇ.75 ರಷ್ಟು ಸಾಧ್ಯತೆಗಳಿವೆ. ಈ ಉಷ್ಣತೆಯ ಹೆಚ್ಚಳವು ತಾತ್ಕಾಲಿಕವಾಗಿದ್ದರೂ ಸಹ, ಹವಳದ ಹರಹುಗಳು ಮತ್ತು ಹಿಮನದಿಗಳಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಗಳ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಪ್ರತಿಯೊಂದು 0.1 ಡಿಗ್ರಿ ಸೆಲ್ಸಿಯಸ್ ತಾಪಮಾನದ ಹೆಚ್ಚಳವೂ ಸಹ ಭೀಕರ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಯುಕೆ ಮೆಟ್ ಆಫೀಸ್‌ನ ಸಹ-ಲೇಖಕಿ ಮೆಲಿಸ್ಸಾ ಸೀಬ್ರೂಕ್ ತಿಳಿಸಿದ್ದಾರೆ.

ಇಂಪೀರಿಯಲ್ ಕಾಲೇಜ್ ಲಂಡನ್‌ನ ಫ್ರೀಡೆರಿಕೆ ಒಟ್ಟೊ ಅವರ ಪ್ರಕಾರ, ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವುದರಿಂದ ಜಗತ್ತಿನಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳಬೇಕಾಗಬಹುದು. ಅಲ್ಲದೆ, ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಲಿವೆ ಮತ್ತು ಕಾಳ್ಗಿಚ್ಚಿನ ತೀವ್ರತೆ ಹೆಚ್ಚಾಗಲಿದೆ. ಬಲಗೊಳ್ಳುತ್ತಿರುವ ‘ಎಲ್ ನಿನೊ’ ಪ್ರಭಾವದಿಂದಾಗಿ 2027ರ ವರ್ಷವು 2024ರ ತಾಪಮಾನದ ದಾಖಲೆ ಮುರಿದು, ಭೂಮಿಯನ್ನು ಹಿಂದೆಂದೂ ಕಾಣದ ಭೀಕರ ಉಷ್ಣತೆಯ ಪ್ರಪಾತಕ್ಕೆ ತಳ್ಳಬಹುದು ಎಂದು ಅಂದಾಜಿಸಲಾಗಿದೆ.

ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ ಆರ್ಕ್ಟಿಕ್ ಪ್ರದೇಶವು ಮೂರೂವರೆ ಪಟ್ಟು ವೇಗವಾಗಿ ಕಾಯುತ್ತಿದೆ. ಹಿಮದ ಹೊದಿಕೆ ಕಡಿಮೆಯಾಗುತ್ತಿರುವುದರಿಂದ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಶಕ್ತಿ ಭೂಮಿಗೆ ಕಡಿಮೆಯಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಇಲ್ಲಿನ ಚಳಿಗಾಲದ ತಾಪಮಾನವು ಸುಮಾರು 2.8 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಜಗತ್ತಿಗೆ ಆಮ್ಲಜನಕ ನೀಡುವ ಅಮೆಜಾನ್ ಬೇಸಿನ್ ತೀವ್ರ ಬರಗಾಲಕ್ಕೆ ತುತ್ತಾಗಲಿದ್ದು, ಇದು ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮತ್ತೊಂದೆಡೆ, ಆಫ್ರಿಕಾದ ಸಾಹೇಲ್ ಪ್ರದೇಶವು ಅತಿಯಾದ ಮಳೆಗೆ ಸಾಕ್ಷಿಯಾಗಲಿದ್ದು, ಭೀಕರ ಪ್ರವಾಹದ ಅಪಾಯವನ್ನು ಎದುರಿಸಲಿದೆ.

ಹವಾಮಾನ ವೈಪರೀತ್ಯದ ವಿರುದ್ಧ ಜಾಗತಿಕವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಕಾರಣ ಇಡೀ ಜಗತ್ತು ಈಗಾಗಲೇ ದೊಡ್ಡ ಬೆಲೆ ತೆರುತ್ತಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಮುಖ್ಯಸ್ಥ ಸೈಮನ್ ಸ್ಟಿಲ್ ಕಳವಳ ವ್ಯಕ್ತಪಡಿಸಿದ್ದಾರೆ. ಯುರೋಪ್ ಹಾಗೂ ಭಾರತದಲ್ಲಿ ಕಂಡುಬರುತ್ತಿರುವ ತೀವ್ರ ಉಷ್ಣಗಾಳಿ, ವಿನಾಶಕಾರಿ ಬಿರುಗಾಳಿಗಳು ಮತ್ತು ಕಾಳ್ಗಿಚ್ಚುಗಳು ಕೇವಲ ಪರಿಸರದ ಮೇಲಷ್ಟೇ ಅಲ್ಲದೆ, ಮಾನವನ ಆರ್ಥಿಕತೆಯ ಮೇಲೂ ತೀವ್ರ ಹೊಡೆತ ನೀಡುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕಾಕ್ರೋಚ್‌ ಪಾರ್ಟಿ ʼXʼ ಖಾತೆ ನಿರ್ಬಂಧ; ತಕ್ಷಣದ ಮರುಸ್ಥಾಪನೆಗೆ ಡೆಲ್ಲಿ ಹೈಕೋರ್ಟ್ ನಕಾರ‌

ಸದ್ಯ ಈಗಿರುವ ಶಾಖವೇ ಬೆಂಕಿ ಹಬೆಯಲ್ಲಿ ಕುದಿಯುತ್ತಿರುವ ಅನುಭವ ನೀಡುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿದ ತಾಪಮಾನವನ್ನು ಅನುಭವಿಸಲೇಬೇಕಾಗಿದೆ. ತಾಪಮಾನ ಏರಿಕೆಯ ನಿಯಂತ್ರಣ ಕ್ರಮಗಳೆಲ್ಲ ಜಾಗೃತಿ ಕಾರ್ಯಕ್ರಮಗಳಿಗೆ, ಮಕ್ಕಳ ಪಾಠಕ್ಕೆ ಮಾತ್ರ ಸೀಮಿತವಾಗಿದ್ದೇ ಈ ದುರಂತಕ್ಕೆ ಮುಖ್ಯ ಕಾರಣ. ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲಿ ಜನ ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದ ದೃಶ್ಯಗಳು ಭೀಕರ ಎನಿಸುತ್ತಿದ್ದವು. ಈಗ ವಿಶ್ವಸಂಸ್ಥೆ ಕೊಟ್ಟಿರುವ ತಾಪಮಾನದ ಎಚ್ಚರಿಕೆ ಎದೆ ನಡುಗಿಸುತ್ತದೆ. ಮಾನವನೇನೋ ಮಾಡಿದ್ದನ್ನೇ ಉಣ್ಣಬೇಕಾಗಿದೆ. ಆದರೆ, ಪ್ರಾಣಿ-ಪಕ್ಷಿ, ಕೀಟ, ಜಲಚರಗಳ ಪರಿಸ್ಥಿತಿ ಏನಾಗಲಿದೆಯೋ ಎನ್ನುವುದನ್ನು ಊಹಿಸುವುದೂ ಕಷ್ಟ. ಮನುಷ್ಯ ಪ್ರಾಣಿ ಈಗಲಾದರೂ ಕಳ್ಳ ನಿದ್ದೆಯಿಂದ ಏಳಲಿದೆಯೇ ಕಾದು ನೋಡಬೇಕು!

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...