ಪ್ರೀಮಿಯಂ ಲೇಖನ | ಅಮೆರಿಕೆಯ ಭಾರತೀಯರ ತ್ರಿಶಂಕು ಸ್ಥಿತಿ: ʼಮೌನಂ ಸರ್ವತ್ರ ಸಾಧನಂʼ- ಉಳಿವಿನ ತಂತ್ರ

Date:

ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ವಿದೇಶಾಂಗ ನೀತಿ, ಇರಾನ್‌ ಮತ್ತು ಇಸ್ರೇಲ್-ಪ್ಯಾಲೆಸ್ಟೀನ್‌ ಕುರಿತಾದ ಬೆಳವಣಿಗೆಗಳ ಬಗ್ಗೆ ಅಮೆರಿಕೆಯಲ್ಲಿ ನೆಲೆಸಿರುವ ಭಾರತೀಯರಿಗೆ ಒಂದು ನಿರ್ದಿಷ್ಟವಾದ ನಿಲುವಿಲ್ಲ ಎನ್ನಿಸುತ್ತದೆ. ವಿಭಿನ್ನ ಅಭಿಪ್ರಾಯಗಳಿವೆ. ಇಲ್ಲಿನ ಭಾರತೀಯರು ಹೆಚ್ಚಾಗಿ ಮಾತನಾಡುವುದು ತಮ್ಮ ವೃತ್ತಿ ಸಂಬಂಧಿಸಿದಂಥ ವಿಷಯಗಳು ಮಾತ್ರ. ತಮ್ಮ ತಲೆಮಾರಿನ ತಳಮಳಗಳು, ವಲಸೆಗಾರರಾಗಿ (immigrants) ಬಂದಿರುವವರು ತಮ್ಮ ಸಮಸ್ಯೆಗಳ ಬಗ್ಗೆ, ಎದುರಾಗಬಹುದಾದ ತೊಂದರೆಗಳ ಬಗ್ಗೆ, ಅವರ ಸಂಬಳ, ಸವಲತ್ತು, ಮತ್ತೊಂದು ಉದ್ಯೋಗ ಹುಡುಕುವ ತವಕದ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

- Advertisement -

ಈ ದೇಶಕ್ಕೆ ಬಂದಾಗಿನಿಂದ ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿದೇಶಾಂಗ ನೀತಿ, ಇರಾನ್‌ ಮತ್ತು ಇಸ್ರೇಲ್-ಪ್ಯಾಲೆಸ್ಟೀನ್‌ ಕುರಿತಾದ ಬೆಳವಣಿಗೆಗಳ ಬಗ್ಗೆ ಭಾರತೀಯರೊಂದಿಗೆ ಮಾತನಾಡಲು ಬಯಸಿದರೆ, ಅವರು ನನ್ನನ್ನು ಅನುಮಾನದಿಂದ ನೋಡುತ್ತಾರೆ. ನಾನು ವಾಸಿಸುತ್ತಿರುವ ನ್ಯೂಜೆರ್ಸಿಯಲ್ಲಂತೂ ತೆಲುಗು ಭಾಷಿಗರೇ ಹೆಚ್ಚಿರುವುದರಿಂದ ಅವರೊಂದಿಗೆ ನನ್ನ ಹರಕು-ಮುರುಕು ತೆಲುಗಿನ ಮಾತನಾಡಲು ಯತ್ನಿಸಿದರೆ, ಅವರು ಮುಖ ತಿರುಗಿಸಿಕೊಂಡು ಹೊರಟುಹೋಗುತ್ತಾರೆ. ಇದು ಇಲ್ಲಿನ ಪರಿಸ್ಥಿತಿ. ಆದರೂ ಮಾತನಾಡಿದ ಹಲವರ ಮಾತುಗಳನ್ನು ಕ್ರೂಢೀಕರಿಸಿ ಯೋಚಿಸಿದರೆ, ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿದೇಶಾಂಗ ನೀತಿ, ಇರಾನ್‌ ಮತ್ತು ಇಸ್ರೇಲ್-ಪ್ಯಾಲೆಸ್ಟೀನ್‌ ಕುರಿತಾದ ಬೆಳವಣಿಗೆಗಳ ಬಗ್ಗೆ ಒಂದು ನಿರ್ದಿಷ್ಟವಾದ ನಿಲುವಿಲ್ಲ. ಆದರೆ ವಿಭಿನ್ನ ಅಭಿಪ್ರಾಯಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅಸುರಕ್ಷಿತ ಭಾವನೆ

ಇಲ್ಲಿನ ಭಾರತೀಯರು ಹೆಚ್ಚಾಗಿ ಮಾತನಾಡುವುದು ತಮ್ಮ ವೃತ್ತಿ ಸಂಬಂಧಿಸಿದಂಥ ವಿಷಯಗಳು ಮಾತ್ರ. ತಮ್ಮ ತಲೆಮಾರಿನ ತಳಮಳಗಳು, ವಲಸೆಗಾರರಾಗಿ (immigrants) ಆಗಿ ಬಂದಿರುವ ತಮ್ಮ ಸಮಸ್ಯೆಗಳ ಬಗ್ಗೆ, ಎದುರಾಗಬಹುದಾದ ತೊಂದರೆಗಳ ಬಗ್ಗೆ, ಅವರ ಸಂಬಳ, ಸವಲತ್ತು, ಮತ್ತೊಂದು ಉದ್ಯೋಗ ಹುಡುಕುವ ತವಕ, ತಮ್ಮ (ಹಿಂದೂ ಧರ್ಮಕ್ಕೋದಗುತ್ತಿದೆ ಎಂದು ಭಾವಿಸಲಾದ ಸಂಕಷ್ಟಗಳು) ಧರ್ಮ, ಹಾಗೂ ಈ ಎಲ್ಲದರ ಕುರಿತು ಭಾರತದ ನಿಲುವಿನ ಬಗ್ಗೆ ಚಿಂತಿಸುತ್ತಾರೆ. ಅವರಿಗೆ ಅಮೆರಿಕೆಯಲ್ಲಿ ನಡೆಯುತ್ತಿರುವ ಯಾವುದೇ ರಾಜಕೀಯ, ರಾಜತಾಂತ್ರಿಕ ಬೆಳವಣಿಗೆಗಳ ಬಗ್ಗೆ ಕಿಂಚಿತ್ತೂ ಚಿಂತೆ ಇದ್ದಂತೆ ಕಾಣುವುದಿಲ್ಲ. ಇಲ್ಲಿನ ಭಾರತೀಯರು ಹೆಚ್ಚು ಮಂದಿ ವ್ಯವಹಾರ, ತಂತ್ರಜ್ಞಾನ, ಹಣಕಾಸಿನ ಸಂಗ್ರಹದ ಬಗ್ಗೆ, ವಿಶೇಷವಾಗಿ Artificial Intelligence ಮಾಡಬಹುದಾದ ಪರಿಣಾಮಗಳ ಬಗ್ಗೆ ಚಿಂತಿತರಾಗಿರುವಂತೆ ಕಾಣಿಸುತ್ತದೆ.

ಅಲ್ಪಸ್ವಲ್ಪ ರಾಜಕೀಯ ತಿಳಿವಳಿಕೆ ಇರುವ ಮಂದಿ ತಾವು ಅಮೆರಿಕದ ಆರ್ಥಿಕ ನೀತಿ, ವಿದೇಶಾಂಗ ನೀತಿಯನ್ನು ಬೆಂಬಲಿಸುವಂತೆ ತೋರ್ಪಡಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರು ಭಾವಿಸುವ ʼತಂಟೆಕೋರʼ ಇರಾನ್‌ ಬಗ್ಗೆ ಅಮೆರಿಕ ತೆಗೆದುಕೊಳ್ಳುತ್ತಿರುವ ನಿಲುವು ಸರಿ ಎಂಬುದೇ ಅವರ ಭಾವನೆ. ಇದರಿಂದಾಗಿ ಅಮೆರಿಕದ strategic interests ಹಾಗೂ, ತನ್ನ ಇತ್ತೀಚಿನ ಮಿತ್ರ ರಾಷ್ಟ್ರಗಳಾದ  ಭಾರತ, ಪಾಕಿಸ್ತಾನ, Uninted Arab Emirates ಮುಂತಾದ ದೇಶಗಳೊಂದಿಗೆ ಸಾಮರಸ್ಯ ಸಾಧಿಸುವುದು ಸರಿ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. “ನಮಗೆ ಅತಿ ಮುಖ್ಯ ಎನ್ನಿಸುವುದು ಇಂಧನ ತಲುಪುವ ಹಾದಿಗಳ ಸುರಕ್ಷತೆ (ಅರ್ಥಾತ್‌ strait Hermuz ಪ್ರಶ್ನೆ) ಹಾಗೂ ಜಾಗತಿಕ ರಾಜಕಾರಣದಲ್ಲಿ ನಡೆದಿರುವ ಪೈಪೋಟಿ ಮುಂತಾದವು ಅಮೆರಿಕೆಯ ನೀತಿ ನಿಯಮಾವಳಿಗಳನ್ನು ರೂಪಿಸುತ್ತವೆ” ಎನ್ನುತ್ತಾರೆ, ನ್ಯೂಯಾರ್ಕನ ಪ್ರತಿಷ್ಠಿತ software ಕಂಪನಿಯೊಂದರಲ್ಲಿ ದುಡಿಯುತ್ತಿರುವ ಒಬ್ಬ ಅನಾಮಧೇಯ ವ್ಯಕ್ತಿ. ( ಇಲ್ಲಿ ಯಾರೂ ತಮ್ಮ ಗುರುತನ್ನು ವೃತ್ತಿಯನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅದರಿಂದ ತಮಗೆ ಸ್ವಲ್ಪವಾದರೂ ಲಾಭವಾಗಬಹುದೆಂಬ ನಂಬಿಕೆ ಅವರು.

 H 1 B ವೀಸಾ ಹಾಗೂ ಹಸಿರು ಕಾರ್ಡ್‌ (Green Card) ಪ್ರಶ್ನೆಗಳು

“ಭಾರತೀಯರು ವಿಶೇಷವಾಗಿ ವಿದ್ಯಾರ್ಥಿಗಳ ಅದರಲ್ಲೂ H 1 B ಕೆಲಸಗಾರರು ಹಾಗೂ ಹಸಿರು ಕಾರ್ಡ್‌ (Green Card) ಗಾಗಿ ಕಾಯುತ್ತಿರುವ ಮಂದಿ ಅಮೆರಿಕೆಯ ಸತತವಾಗಿ ಬದಲಾಗುತ್ತಿರುವ ವಲಸೆಗಾರರ ನೀತಿ ನಿಯಮಾವಳಿಗಳ ಬಗ್ಗೆ ಚಿಂತಿತರಾಗಿರುವಂತೆ ಕಾಣುತ್ತಿದೆ. ಅವರು ಕೇವಲ ತಮ್ಮ ವೀಸಾ ಬಗ್ಗೆ ಅಷ್ಟೆ ತಲೆಕೆಡೆಸಿಕೊಂಡಿಲ್ಲ. ಬದಲಿಗೆ ತಮ್ಮ ದೀರ್ಘಕಾಲದ ವೃತ್ತಿ ಬದುಕಿನ ಭವಿಷ್ಯ, ಹಾಗೂ ಕುಟುಂಬದ ರಕ್ಷಣೆ ಬಗ್ಗೆ ಚಿಂತಿತರಾಗಿದ್ದಾರೆ” ಎನ್ನುತ್ತಾರವರು. ಇವರುಗಳನ್ನೆಲ್ಲ ಹೆಚ್ಚಾಗಿ ಕಾಡುತ್ತಿರುವುದು H 1 B ವೀಸಾ ಸಮಸ್ಯೆಯ ಅನಿಶ್ಚಿತತೆ. ಅದಕ್ಕಾಗಿ ಸಲ್ಲಿಸಬೇಕಾಗಿರುವ ಶುಲ್ಕ ಸಂಬಳದ ಅಗತ್ಯಗಳು ಹಾಗು ಆಯ್ಕೆಯ ನೀತಿ… ಇವೆಲ್ಲವೂ ಅವರನ್ನು ಸತತವಾಗಿ ಕಾಡುತ್ತದೆ. ಇತ್ತೀಚೆಗೆ ಒಂದಷ್ಟು ಭಾರತೀಯರನ್ನು ಭೇಟಿ ಮಾಡಿದಾಗ ಅವರ ಒಟ್ಟಾಗಿ ತೊಡಿಕೊಂಡಿದ್ದು ಇದೇ ಸಮಸ್ಯೆಗಳನ್ನು. ಬೇಕೆಂದಾಗ ಭಾರತಕ್ಕೆ ಬರಲಾಗದ ಅವರ ಸಮಸ್ಯೆ. ಬಂದರೆ ಮತ್ತೆ ಅಮೆರಿಕೆಗೆ ಹಿಂದಿರುಗುವ ಸಾಧ್ಯತೆ ತೀರಾ ಕಡಿಮೆ ಎಂಬ ಭಯ. ಇಲ್ಲಿ ಬಹಳಷ್ಟು ಕಾಲದಿಂದ ವಾಸಮಾಡುತ್ತಿರುವ ಅಮೆರಿನ್ನರು ತಮ್ಮ ಹಸಿರು ಕಾರ್ಡ್ ಗಾಗಿ ಎದುರು ನೋಡುತ್ತಲೇ ಇದ್ದಾರೆ. ಭಾರತೀಯ ವಿದ್ಯಾರ್ಥಿಗಳು F 1 ̧  OPT H 1 B ವೀಸಾಗಳ ಬಗ್ಗೆ OPT (Optional Practical Training ) ಒಂದು ರೀತಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ F 1 ವೀಸಾ ಪಡೆದು ಅಮೆರಿಕೆಯಲ್ಲಿ 12 ತಿಂಗಳಿಂದ 36 ತಿಂಗಳವೆರೆಗೆ ಕೆಲಸ ಮಾಡಲು ಅವಕಾಶ ನೀಡುತ್ತದೆ. ಅದರಲ್ಲೂ, STEM Majors (a college degree programme focused on Science ̧  Technology ̧  Engineering ̧  and Mathematics̤ ̧  These majors emphasize research ̧  innovation ̧  and technical problem solving) ಗಳಿಗೆ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಆದರೆ, ವೀಸಾಗಾಗಿ ದೀರ್ಘಕಾಲ ಕಾಯಬೇಕಿರುವುದು, ವೀಸಾ ಸ್ಟ್ಯಾಂಪಿಂಗ್‌ ತಡವಾಗುತ್ತಿರುವುದು, ಅಂತಾರಾಷ್ಟ್ರೀಯ ಪ್ರವಾಸದ ಮೇಲೆ ಹೊಸಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದು. ಮೊದಲೇ ಹೇಳಿದಂತೆ ಸ್ಟ್ಯಾಂಪಿಗ್‌ ಗಾಗಿ ತಮ್ಮ ದೇಶಕ್ಕೆ ಹಿಂದಿರುಗಿದರೆ ಹೊಸದಾದ ಹಲವು ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ. “ಏಕೆಂದರೆ ದಿನಕ್ಕೊಂದು ನಿಯಮಾವಳಿಗಳು ಇಲ್ಲಿ ಪ್ರಕಟವಾಗುತ್ತಿದೆ. ಹಾಗಾಗಿ ಈ ಆತಂಕ. ತಂದೆ ಅಥವಾ ತಾಯಿ ನಿಧನರಾದರೂ, ಅಲ್ಲಿಗೆ ಬಂದು ಅಂತ್ಯಕ್ರಿಯೆ ಕೂಡ ನಡೆಸಲಾಗದ ಅಸಹಾಯ ಸ್ಥಿತಿಯಲ್ಲಿದ್ದೇವೆ”, ಎಂದು ಹೆಸರು ಬಹಿರಂಗಪಡಿಸಲು ಬಯಸದ ದೊಡ್ಡ ಕಂಪನಿಯ, ಹಿರಿಯ ಉದ್ಯೋಗಿಯೊಬ್ಬರು ಹೇಳಿದ್ದು ಮನಕರಗುವಂತಿತ್ತು.

h1b visa fees surge

ಕಡಿಮೆಯಾಗದ ಆತಂಕ

ಒಂದು ಸಂಗತಿಯಂತೂ ಸತ್ಯ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಅಮೆರಿಕದ ವಲಸೆ ಸಂಬಂಧಿತ ನಿಯಮಗಳು ಹಾಗೂ ಪ್ರಸ್ತಾವನೆಗಳು (US immigration policy changes and proposals) ಅವರಲ್ಲಿನ ಆತಂಕವನ್ನು ಕಡಿಮೆ ಮಾಡಿದಂತೆ ಕಾಣುತ್ತಿಲ್ಲ. ಹಲವು ದಶಕಗಳಿಂದ ಭಾರತೀಯರಲ್ಲಿ ಅಮೆರಿಕೆಯ ಬಗ್ಗೆ ಒಂದು ನಂಬಿಕೆ ಇದೆ. ವಿದ್ಯಾರ್ಥಿ ವೀಸಾ, ಕೆಲಸ ವಿಸಾ ಹಾಗೂ, ಶಾಶ್ವತವಾಗಿ ಅಮೆರಿಕೆಯಲ್ಲಿ ನೆಲೆಸುವ ಬಗ್ಗೆ ಅಮೆರಿಕೆ ಉದಾರ ನೀತಿ ಅನುಸರಿಸುತ್ತದೆ ಎಂಬ ನಂಬಿಕೆ ಭಾರತೀಯರದ್ದು. ಆದರೆ ಇತ್ತೀಚೆಗೆ ದಿನದಿಂದ ದಿನಕ್ಕೆ ಬದಲಾಗುತ್ತಿರುವ ವೀಸಾ ನಿಯಮಗಳು ಅವರನ್ನು ಗೊಂದಲಕ್ಕೆ ಕೆಡವಿದೆ. ಭಾರತೀಯ H 1 B ವೀಸಾ ನೌಕರರಿಗೆ ಹೆಚ್ಚಿನ ಸಂಬಳ ಇರುವವರಿಗೆ ಮಾತ್ರ ಅವಕಾಶ, ಜೊತೆಯಲ್ಲಿ ಹೆಚ್ಚಿದ ವೀಸಾ ಶುಲ್ಕ ನೌಕರರ ದಾಖಲೆಗಳನ್ನು ನಖಶಿಖಾಂತ ಪರಿಶೀಲನೆ. ಇದರಿಂದಾಗಿ ಯುವ ವೃತ್ತಿಪರರು ಮತ್ತು ಹೊಸದಾಗಿ ಪದವೀಧರರಾಗುತ್ತಿರುವವರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಅಲ್ಲದೆ ಭಾರತೀಯ ವಿದ್ಯಾರ್ಥಿಗಳು Optional Practical Training (OPT) ಮತ್ತು ಅರ್ಹತೆಗೆ ಸಂಬಂಧಿಸಿದಂತೆ ರೂಪಿಸುತ್ತಿರುವ ಹೊಸ ನಿಯಮಗಳು ಭಾರತದ ತಂತ್ರಜ್ಞಾನ ಜಗತ್ತನ್ನು ಕಂಗೆಡಿಸಿದೆ. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಭಾರತದಿಂದ ಬರುತ್ತಿರುವವರು ಅನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಹಾಗಾಗಿ ಈ ಎಲ್ಲ ಬದಲಾವಣೆಗಳು ಭಾರತದ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದರ ಬಗ್ಗೆ ಭಾರತದ  ವಿವಿಧ ಭಾಗಗಳಲ್ಲಿ ಅದರಲ್ಲಿಯೂ ಆಂಧ್ರ ಮತ್ತು ತೆಲಂಗಣದಲ್ಲಿ ಭಾರೀ ಆತಂಕ ಉಂಟಾಗಿದೆ. ಇದರ ಜೊತೆಗೆ ಹಸಿರು ಕಾರ್ಡ್ ಗಾಗಿ ಕಾಯುತ್ತಿರುವವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸದ್ಯಕ್ಕೆ H 1 B ವೀಸಾದಲ್ಲಿರುವ ಮಂದಿ ಹಸಿರು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಕಾತುರರಾಗಿದ್ದಾರೆ. ಆದರೆ ಅಮೆರಿಕ ಭಾರತೀಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವೀಸಾ ನಿಯಮವನ್ನು ಸಡಿಲಗೊಳಿಸಿದೆ. ತಮಗೆ ಅಗತ್ಯವಿದ್ದ ಹುದ್ದೆಗಳನ್ನು ತುಂಬಿಕೊಳ್ಳಲು ಅಮೆರಿಕ ದೇಶ ಕೆಲವು ಸಂದರ್ಭಗಳಲ್ಲಿ ನಿಯಮಗಳನ್ನು ಸಡಲಿಸಿ, ಕಾನೂನು ಸಮರವನ್ನು ಎದುರಿಸುತ್ತಿದೆ.

ಸದ್ಯಕ್ಕೆ ನಿಟ್ಟುಸಿರು

ಆದರೆ ಏಪ್ರಿಲ್‌ 26 ರಿಂದ ಅಮೆರಿಕ ಮತ್ತು ಇರಾನ್‌ ನಡುವಿನ ಕದನ ವಿರಾಮ ಜಾರಿಗೆ ಬಂದಿರುವುದರಿಂದ ಭಾರತೀಯರು ಒಂದು ರೀತಿಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ಹೇಳಬಹುದು. ಸದ್ಯಕ್ಕೆ ಅಮೆರಿಕ ಮತ್ತು ಇಸ್ರೇಲ್‌ಗಳ ಇರಾನ್‌ ವಿರುದ್ಧದ ಜಂಟಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಅಮೆರಿಕೆಯಲ್ಲಿ ಇನ್ನೂ ಇರಾನ್‌ ಪರ ಮತ್ತು ವಿರೋಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅಂಥದ್ದೊಂದು ಪ್ರತಿಭಟನೆಗೆ ಈ ಲೇಖಕ ಸಾಕ್ಷಿಯಾಗಿ ಪ್ರಶ್ನಿಸಿದಾಗ. ಅಲ್ಲಿದ್ದವರು ಹೇಳಿದ್ದು,” ಇದು ಅಮೆರಿಕ ನಡೆಸುತ್ತಿರುವ ಇರಾನ್‌ ವಿರುದ್ಧದ ಅಂದರೆ ಖೊಮೇನಿ ಜನವಿರೋಧಿ ನೀತಿಗಳ ಪ್ರತಿಭಟನೆ” ಎಂದು. ಆ ಪ್ರತಿಭಟನೆಯಲ್ಲಿ ಬೆರಳೆಣಿಕೆಯಷ್ಟು ಜನರಿದ್ದದ್ದು ಮತ್ತು, ಅಮೆರಿಕಾದ ಪೊಲೀಸ್‌ ಪಡೆ ಅದನ್ನು ನಿರ್ಲಕ್ಷಿಸಿ ತಮ್ಮ ಪಾಲಿಗೆ ತಾವಿದ್ದದ್ದು ಅದಕ್ಕೆ ಸಾಕ್ಷಿ.

TRump USA

ಶ್ವೇತ ಭವನಕ್ಕೆ ಭದ್ರತೆಯ ಬೇಲಿ

ಈ ಲೇಖಕ ಶ್ವೇತ ಭವನಕ್ಕೆ ಪ್ರವೇಶ ಬೇಡಿದಾಗ, ಸಾವಿರ ಮೀಟರ್‌ ದೂರದಲ್ಲಿ ಹಾಕಿದ್ದ ಕಬ್ಭಿಣದ ಬೇಲಿಯ ಮೂಲಕ “ಅದೇ ಶ್ವೇತ ಭವನʼ. ಇತ್ತೀಚೆಗೆ ಶ್ವೇತಭವನದ ವರದಿಗಾರರಿಗಾಗಿ ಟ್ರಂಪ್‌ ಏರ್ಪಡಿಸಿದ್ದ ಔತಣ ಕೂಟಕ್ಕೆ ಒಬ್ಬ ಅನಾಮಧೇಯ ನುಸುಳಿದ್ದು, (ಈತನ ಹೆಸರು ಕೋಲೆ ಥಾಮಸ್‌ ಆಲನ್.‌ ಈತ ಬಂದೂಕು ಮತ್ತು ಹರಿತ ಆಯುಧ ಹಿಡಿದು ಔತಣ ಕೂಟದ ಪರಿಧಿಯೊಳಗೆ ನುಗ್ಗಿದ್ದ ಎನ್ನುವುದು ಆರೋಪ. ಈತನನ್ನು ಬಂಧಿಸಲಾಯಿತು. ಆದರೆ ಕೋಲೆ ತಾನು ಯಾವುದೇ ತಪ್ಪು ಮಾಡಿಲ್ಲವೆಂದೇ ಇದುವರೆಗೂ ಹೇಳಿಕೊಂಡು ಬಂದಿದ್ದಾನೆ. ಈತನನ್ನ ಫೆಡರಲ್‌ ಕೋರ್ಟ್‌ ವಿಚಾರಣೆ ನಡೆಸುತ್ತಿದೆ) ಅಂದಿನಿಂದ ಶ್ವೇತ ಭವನದ ರಕ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಈ ಲೇಖಕನಿಗೆ ತಿಳಿಸಿದರು.

ಕದನ ವಿರಾಮ ಎತ್ತಿರುವ ಪ್ರಶ್ನೆಗಳು

ಒಂದು ಸಂಗತಿಯಂತೂ ಸ್ಪಷ್ಟವಾಗಿ ಗೋಚರವಾಗುತ್ತಿದೆ. ವಾಷಿಂಗ್ಟನ್‌ ಮತ್ತು ನ್ಯೂಯಾರ್ಕ್‌ ಎರಡೂ ತಮ್ಮ ಎಂದಿನ ಗತಿಯಲ್ಲಿ ಸಾಗುತ್ತಿದೆ. ಯಾವ ಭಯ, ಯಾವುದೇ ರಕ್ಷಣಾತ್ಮಕ ವ್ಯವಸ್ಥೆ ಕಂಡು ಬರುವುದಿಲ್ಲ. ಫೆಬ್ರುವರಿ 2026 ರಂದು ಆರಂಭವಾದ ಅಮೆರಿಕಾ-ಇಸ್ರೆಲ್‌ ಹಾಗೂ ಇರಾನ್‌ ನಡುವಿನ ಯುದ್ಧಕ್ಕೆ ಏಪ್ರಿಲ್‌ 26 ರಂದು ಸದ್ಯಕ್ಕೆ ಕದನ ವಿರಾಮದ ಲಾಭ ದಕ್ಕಿದೆ ಎನ್ನಬಹುದು. ಆದರೆ ರಿಪಬ್ಲಿಕನ್‌ ಪಕ್ಷದ ಮೂಲಗಳ ಪ್ರಕಾರ, ಉದ್ರಿಕ್ತ ಸ್ಥಿತಿ ಇಲ್ಲದಿದ್ದರೂ, ಆ ವಾತಾವರಣವಂತೂ ಇದ್ದೇ ಇದೆ. ಪರಿಸ್ಥಿತಿ ಅತಂತ್ರವಾಗಿದೆ ಎಂದೇ ಸುದ್ದಿಮೂಲಗಳು ಹೇಳುತ್ತಿವೆ. ಅಮೆರಿಕಾ ಮತ್ತು ಇರಾನ್‌ ನಡುವೆ ರಾಜತಾಂತ್ರಿಕ ಮಾತುಕತೆ ಆರಂಭವಾಗಿದೆ. ಪೂರ್ಣ ಪ್ರಮಾಣದ ಯುದ್ಧವಾಗಕೂಡದು ಎಂದು ಎರಡೂ ದೇಶಗಳು ಎಲ್ಲ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ಈ ಎರಡೂ ದೇಶಗಳ ರಾಜತಾಂತ್ರಿಕ ನಿರ್ಧಾರಕ್ಕೆ ಹಲವು ಕಾರಣಗಳಿವೆಯಾದರೂ, ಯಾವುದನ್ನೂ ಸ್ಪಷ್ಟವಾಗಿ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ ಎನ್ನಬಹುದು. ಡೆಮೋಕ್ರೆಟಿಕ್‌ ಪಕ್ಷದ ಮೂಲಗಳ ಪ್ರಕಾರ ಪ್ರತಿ ನಡೆಯ ಹಿಂದೆಯೂ ಒಂದು ಚದುರಂಗದ ಆಟ ನಡೆಯುತ್ತಿರುವುದು ಸುಳ್ಳೇನಲ್ಲ. ಆದರೆ, ಅಮೆರಿಕ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಮಾತುಕತೆಯಲ್ಲಿ ಇರಾನ್‌ ಹೊಂದಿರು ಆಣ್ವಸ್ತ್ರ ಶಕ್ತಿಯನ್ನು ನಿಷ್ಕ್ರೀಯಗೊಳಿಸುವ ಗಟ್ಟಿ ನಿಲುವಂತೂ ಅಮೆರಿಕದ್ದು ಎಂದು ಹೇಳಬಹುದು. ಆದರೆ ಈ ಕುರಿತು ಯಾವುದೇ ಅಂತಿಮ ತೀರ್ಮಾನಕ್ಕೆ ಎರಡೂ ರಾಷ್ಟ್ರಗಳೂ ಬಂದಂತೆ ಕಾಣುತ್ತಿಲ್ಲ. ಈ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತೊಂದು ಸಂಗತಿ ಎಂದರೆ Strait of Hormuz̤ ಜಾಗತಿಕ ತೈಲ ಸಾಗಣೆಯ ಪ್ರಮುಖ ರಹದಾರಿ ಇದಾಗಿದೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರದ ಕಾರಣ, ಅಂತಾರಾಷ್ಟ್ರೀಯ ತೈಲ ಸಾಗಣೆ ಇನ್ನು ಆತಂಕದ ಸ್ಥಿತಿಯಲ್ಲಿಯೇ ಇದೆ. ಇದೆಲ್ಲದರ ನಡುವೆ, ಇರಾನ್‌ ಬೆಂಬಲಿತ ಗುಂಪುಗಳ ಮತ್ತು ಇಸ್ರೇಲ್‌ ಸೇನೆಯ ಜೊತೆ ಆಗಾಗ ಸಂಘರ್ಷ ನಡೆಯುತ್ತಿದೆ. ಇದು ಇಡೀ ಜಾಗತಿಕ ಲೋಕದ ಸ್ಥಿತಿ-ಗತಿ ಎನ್ನಬಹುದು.  ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತೀಯರು ಸ್ವಲ್ಪ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎನ್ನಿಸುತ್ತದೆ.

ಡೆಮೋಕ್ರಾಟ್ಸ್‌- ರಿಪಬ್ಲಿಕ್‌ ನಡುವಿನ ಭಿನ್ನಾಭಿಪ್ರಾಯಗಳು

ಈ ನಡುವೆ ಅಮೆರಿಕದ ವಿರೋಧ ಪಕ್ಷವಾದ ಡೆಮಾಕ್ರೆಟಿಕ್‌ ಪಕ್ಷ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆರ್ಥಿಕ, ಅರೋಗ್ಯ, ವಲಸೆ, ಹವಾಮಾನ ವಿದೇಶಾಂಗ ಹಾಗೂ ಸರ್ಕಾರಿ ಸಂಸ್ಥೆಗಳ ನಿಯಮಗಳೂ ಸೇರಿದಂತೆ ಹಲವು ರಾಜಕೀಯ ನೀತಿಗಳ ಬಗ್ಗೆ ಸ್ಪಷ್ಟವಾದ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಆದರೆ ಕೆಲವು ನಿಯಮಗಳ ಬಗ್ಗೆ ಡೆಮಾಕ್ರೆಟಿಕ್‌ ಪಕ್ಷದಲ್ಲೇ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಟ್ರಂಪ್‌ ಅವರ ರಾಜಕೀಯ ಮತ್ತು ಯುದ್ಧ ನೀತಿಯ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯ ಕಾಣುತ್ತಿಲ್ಲ.  ಅವರು ಟ್ರಂಪ್‌ ಅವರ ತೆರಿಗೆ ನೀತಿಯನ್ನು ವಿರೋಧಿಸುತ್ತಿದ್ದಾರೆ. ಏಕೆಂದರೆ ಅವರ ಪ್ರಕಾರ ಟ್ರಂಪ್‌ ತೆರಿಗೆ ನೀತಿ ಉಳ್ಳವರಿಗೆ ಮತ್ತು ಕಾರ್ಪೋರೇಟ್‌ ಸಂಸ್ಥೆಗಳಿಗೆ ನೆರವಾಗುವಂತಿದೆ ಎಂಬುದು ಅವರ ಆರೋಪ. ಅಮೆರಿಕಾ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಉಳ್ಳವರ ಮೇಲೆ ಮತ್ತು ಕಾರ್ಪೋರೇಟ್‌ ಸಂಸ್ಥೆಗಳ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕೆಂದು ಡೆಮೊಕ್ರಾಟ್‌ ಪಕ್ಷ ಒತ್ತಾಯಿಸುತ್ತಿದೆ.

ವಲಸೆ ಎಂಬ ಪ್ರಮುಖ ಪ್ರಶ್ನೆ

ಟ್ರಂಪ್‌ ವಲಸೆಗಾರರ (immigration) ಬಗ್ಗೆ ತೆಗೆದುಕೊಂಡ ತೀರ್ಮಾನಗಳು ಡೆಮೋಕ್ರಾಟ್‌ ರನ್ನು ಕೆರಳಿಸಿತು. ರಿಪಬ್ಲಿಕನ್ಸ್‌ ಮತ್ತು ಡೆಮೋಕ್ರಾಟ್ಸ್‌ ನಡುವಿನ ಭಿನ್ನಾಭಿಪ್ರಾಯಕ್ಕೆ ಇದೇ ಮೊದಲ ಮೆಟ್ಟಿಲು ಎನ್ನಬಹುದು. ಡೆಮೋಕ್ರಾಟ್ಸ್‌ ಗಟ್ಟಿಯಾದ ಗಡಿ ನಿರ್ವಹಣೆ ಹಾಗೂ ಕಾನೂನು ಪ್ರಕಾರದ ವಲಸೆಯನ್ನು ಬೆಂಬಲಿಸಿದರು. ನಿರಾಶ್ರಿತರ ರಕ್ಷಣೆಗೆ ನಿಂತರು. ಯಾರೂ ಆಶ್ರಯ ಕೇಳಿ ಬರುತ್ತಾರೋ ಅವರನ್ನು ಬೆಂಬಲಿಸಿದರು. ಹಾಗೆ ಬಂದವರಿಗೆ ಹೇಗಾದರೂ ಮಾಡಿ ಉದ್ಯೋಗ ಅವಕಾಶ ಕಲ್ಪಿಸಬೇಕೆಂದು ಕೇಳಿದರು. ಹಾಗೆಯೇ ಅಮೆರಿಕ ಹೆಚ್ಚಿನ ಜನರನ್ನು ಗಡಿಪಾರು ಅಥವಾ ದೇಶಭ್ರಷ್ಠರನ್ನಾಗಿಸುವುದರ ವಿರುದ್ಧ ಧ್ವನಿ ಎತ್ತಿದರು. ಇವೆಲ್ಲವೂ ರಿಪಬ್ಲಿಕನ್ನರ ಅತಿಯಾದ ಕ್ರಮ ಎಂದು ಟೀಕಿಸಿದರು. ವಿದೇಶಾಂಗ ನೀತಿಯ ಬಗ್ಗೆ ಕೂಡ ಡೆಮೋಕ್ರಾಟ್ಸ್‌ ಮುನಿದೆದ್ದರು. ಅವರು ಕೇಳಿದ್ದು, ಅಮೆರಿಕದ ಪಾರಂಪರಿಕ ಮಿತ್ರ ರಾಷ್ಟ್ರಗಳ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿತು. ತಮ್ಮ ನಿರೀಕ್ಷಿಸಲಾಗದ ತೀರ್ಮಾನಗಳಿಂದ ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧ ಶಿಥಿಲಗೊಳ್ಳುತ್ತಿರುವುದರ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದರು ಆದರೆ ಉಭಯ ಪಕ್ಷಗಳು ಚೀನಾದ ಬಗ್ಗೆ ಅತಿ ಎಚ್ಚರದಿಂದ ಇರಬೇಕೆಂಬ ನಿಲುವಿಗೆ ಅಂಟಿಕೊಂಡಿದ್ದು ಇಲ್ಲಿ ಅತಿ ಮುಖ್ಯ ಎನ್ನಿಸುತ್ತದೆ. ತಾವು ಸ್ಪರ್ಧಿಸಬೇಕಿರುವುದು ಚೀನಾದ ಆರ್ಥಿಕ ಮತ್ತು ರಕ್ಷಣಾತ್ಮಕ ಆಶಯಗಳ ಬಗ್ಗೆ ಎಂಬುದರ ಬಗ್ಗೆ ಒಮ್ಮತವಿತ್ತು ಎನ್ನುವುದನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಇದರ ಜೊತೆಯಲ್ಲಿಯೇ ನ್ಯಾಯಾಲಯಗಳು, ಚುನಾವಣಾ ವ್ಯವಸ್ಥೆ, ಸರ್ಕಾರಿ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಪಾಡಬೇಕೆಂದು ಬಯಸಿದರು. ಆಯ್ಕೆಯಾದ ಜನ ಪ್ರತಿನಿಧಿಗಳು ಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ಭಾರತ ಕಲಿಯಬೇಕಿರುವ ಪಾಠ

ಇವೆಲ್ಲ, ಭಾರತದ ವಿರೋಧ ಪಕ್ಷಗಳು ಎತ್ತಬೇಕಿರುವ ಪ್ರಶ್ನೆಗಳು ಎಂಬುದನ್ನು ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಬೇಕಿಲ್ಲ. ಇದು ಸದ್ಯದ ಅಗತ್ಯ. ಏಕೆಂದರೆ, ನಮ್ಮಲ್ಲಿ ಚುನಾವಣಾ ವ್ಯವಸ್ಥೆ, ಸರ್ಕಾರಿ ಸಂಸ್ಥೆಗಳು, ನ್ಯಾಯಾಲಯಗಳ ಬಗ್ಗೆ ನಂಬಿಕೆಯ ಕೊರತೆ ( Trust deficit) ಕಾಡುತ್ತಿದೆ. ಇತ್ತ, ಅಮೆರಿಕಾದ ಜೊತೆಗೆ ಸ್ನೇಹ, ಅತ್ತ ಚೀನಾದ ವ್ಯಾಮೋಹ, ಇಸ್ರೆಲ್‌ ಬಗ್ಗೆಅಲಿಪ್ತ ನೀತಿ, ಇರಾನ್‌ ಬಗ್ಗೆ ಅಮೆರಿಕದ ಅನುಕರಣೆ, ಒಟ್ಟಾರೆಯಾಗಿ ಕುಂಟುತ್ತಿರುವ ವಿದೇಶಾಂಗ ನೀತಿ, ನಂಬಿಕೆ ಕಳೆದುಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳು ಅಂದರೆ, ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಧ್ವನಿ ಎತ್ತಲಾರದ ಕಾರ್ಯಾಂಗ, ಹಾಗೂ ವಿರೋಧ ಪಕ್ಷಗಳ ವಿರುದ್ಧ, ED CBI ಮುಂತಾದ ಸಂಸ್ಥೆಗಳನ್ನು ಛೂ ಬಿಡುವುದು, ಇದೆಲ್ಲದರ ವಿರುದ್ಧ ಭಾರತದ ಯುವ ಜನತೆ ಧ್ವನಿ ಎತ್ತಬೇಕು ಎಂದು ಇಲ್ಲಿನ ಭಾರತೀಯ ಸಮುದಾಯ ಪಿಸುದನಿಯಲ್ಲಿ ಮಾತನಾಡುತ್ತದೆ. ಏಕೆಂದರೆ, ಇಲ್ಲಿಯೂ ಭಾರತದಲ್ಲಿ ಸರ್ವವ್ಯಾಪಿಯಾಗಿರುವ  ಹುಸಿ ಹಿಂದುತ್ವದ Narrative ಅನ್ನು ಬಿತ್ತುವುದರಲ್ಲಿ ಕೆಲವು ಮಂದಿ ಯಶಸ್ವಿಯಾಗಿದ್ದಾರೆ.

donald trump narendra modi 03052

ಪತ್ರಿಕೋದ್ಯಮದ ಪಾತ್ರ  

ಈ ನಡುವೆ, ಅಮೆರಿಕದ ಪತ್ರಿಕೋದ್ಯಮ ಕೂಡ, ಒಂದರ್ಥದಲ್ಲಿ ಬಗ್ಗಿ ಎಂದರೂ, ತೆವಳುವ ಸ್ಥಿತಿ ತಲುಪಿರುವಾಗ, ಸೇಮೋರ್‌ ಹರ್ಷ್‌ ರಂಥ ಕೆಲವು ಧೀಮಂತ ಪತ್ರಕರ್ತರು ಅಮೆರಿಕದ ನೀತಿ ನಿಯಮಗಳನ್ನು ದೈರ್ಯದಿಂದ ಪ್ರಶ್ನಿಸುತ್ತಿದ್ದಾರೆ. ಆ ಪೈಕಿ ನಾನು ಬದುಕಿನಲ್ಲಿ ಕಂಡಿರುವ ಅತ್ಯಂತ ಧೀಮಂತ ಪತ್ರಕರ್ತರಾದ ಬ್ರಹ್ಮ್‌ ಚೆಲನಿ ಮತ್ತು ಸೆಮೋರ್‌ ಹರ್ಷ್.‌  ಬ್ರಹ್ಮ್‌ ಚೆಲನಿ 1984 ರಲ್ಲಿ ಭೂಪಾಲ್‌ ದುರಂತವನ್ನು ದಿಟ್ಟವಾಗಿ ವರದಿ ಮಾಡಿ, ಆಂಡರ್ಸನ್‌ ಅವರನ್ನು ಕಟ್ಟಿ ಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈತ ಮೂಲತಃ ಭಾರತೀಯ geostrategist ಹಾಗೂ ಅಂಕಣಕಾರ. ಈತ Centre for Policy Research ನಲ್ಲಿ ಜಾಗತಿಕ ಸಂಗತಿಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಹಂಚಿದವರು. ಇವರು ಆಗ Associated Press (AP) ಗೆ ವರದಿ ಮಾಡುತ್ತಿದ್ದರು. ಡಿಸೆಂಬರ್‌ 3, 1984 ರಲ್ಲಿ ನಡೆದ ಭೂಪಾಲ್‌ ದುರಂತದಲ್ಲಿ Union Carbide India Limited ಎಂಬ ಕೀಟರಕ್ಷಕ ಔಷಧಿ ತಯಾರಿಸುವ ಸಂಸ್ಥೆ ತನ್ನ ಬೇಜವಾಬ್ದಾರಿ ತನದಿಂದ ಮೀಥೈಲ್‌ ಐಸೋಸೈನೈಟ್‌ (Methyl isocyanate) ಹೊರಸೂಸಿ ಒಟ್ಟು 8000 ಮಂದಿ ಸಾವನ್ನಪ್ಪಿದರು. ಲಕ್ಷಾಂತರ ಮಂದಿ ಅನುಭವಿಸಿದ ಸಂಕಟ, ಸಂಕಷ್ಟವನ್ನು ವೈಭವೀಕರಿಸದೆ ವರದಿ ಮಾಡಿದ್ದು, ಒಂದು ಇತಿಹಾಸ. ಅವರಿಂದ ವರದಿ ಮಾಡುವುದನ್ನು ಆ ಕಾಲದಲ್ಲಿ ಕಲಿತ ನನ್ನಂಥವರು ಕಲಿತ ಪಾಠ ಮರೆಯಲು ಸಾಧ್ಯವೇ ಇಲ್ಲ. ಇವರ ಮೇಲೆ ಭಾರತದ ನ್ಯಾಯಾಲಯದಲ್ಲಿ ಯೂನಿಯನ್‌ ಕಾರ್ಬೈಡ್‌ ಹೂಡಿದ ದಾವೆಗೆ ಅವರ ಬೆಂಬಲಕ್ಕೆ AP ನಿಂತಿದ್ದನ್ನು ನಾನು ಇಂದಿಗೂ ಮರೆತಿಲ್ಲ. ಈಗ ಕಾಲ ಬದಲಾಗಿದೆ. ಅಂಥ ವರದಿಗಾರಿಕೆಯೂ ಇಲ್ಲ. ಹಾಗೆ ಬೆನ್ನೆಲುಬಾಗಿ ನಿಲ್ಲುವ ಪತ್ರಿಕಾ ಸಂಸ್ಥೆಗಳೂ ಉಳಿದಿಲ್ಲ ಎನ್ನುವುದು ಕಾಲದ ದುರಂತ. ಈ ಬ್ರಹ್ಮ ಚೆಲನಿ ಅಮೆರಿಕಾ ಮತ್ತು ಇಸ್ರೇಲ್‌ ಯುದ್ಧದ ಸಂದರ್ಭದಲ್ಲಿ ಅಮೆರಿಕಾದ ದೌರ್ಬಲ್ಯಗಳನ್ನು ವರದಿ ಮಾಡಿದರು. ಹೇಗೆ ಇರಾನ್‌ ನಂಥ ಪುಟ್ಟ ದೇಶ, ಅಮೆರಿಕಾದ ಮಣ್ಣು ಮುಕ್ಕಿಸಿತು ಎನ್ನುವುದನ್ನು ವಿವರವಾಗಿ ವರದಿ ಮಾಡಿದ್ದೇ ಅಲ್ಲದೆ, ವಾಷಿಂಗ್ಟನ್‌ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದರು ಎನ್ನುವುದು ಇಲ್ಲಿ ಮುಖ್ಯ. ಎಲ್ಲಕ್ಕಿಂತ ಇವರು ಭಾರತದ ಹೆಮ್ಮೆಯ ಪತ್ರಕರ್ತ ಎಂಬುದು ನಮ್ಮ ಹೆಮ್ಮೆಯ ಸಂಗತಿ.

ಸೆಮೋರ್‌ ಹೆರ್ಷ್‌ ಎಂಬ ದಂತ ಕಥೆ

ಇದೇ ರೀತಿ ವ್ಯವಸ್ಥೆಯನ್ನು ಎದುರು ಹಾಕಿಕೊಂಡವರು ಅಮೆರಿಕದ ಖ್ಯಾತ ಪತ್ರಕರ್ತ ಸೇಮೋರ್‌ ಹೆರ್ಷ್.‌ ಇವರು ಪುಲಿಟ್ಜರ್‌ ಪ್ರಶಸ್ತಿ ವಿಜೇತರು. ಇವರು ರಿಪಬ್ಲಿಕ್‌ ಪಕ್ಷದ ಮಿಲಿಟರಿ ಕಾರ್ಯಾಚರಣೆ ಹಾಗೂ, ಭೂ ಸಂಘರ್ಷದ ತೀರ್ಮಾನಗಳನ್ನು ಪ್ರಶ್ನಿಸಿದರು. ಆದರೆ ಇದರ ವಿಸ್ತೃತ ಪರಿಣಾಮದ ಬಗ್ಗೆ ವಿವರವಾದ ಚರ್ಚೆಗಳಲ್ಲಿ ಅವರು ಭಾಗವಹಿಸಿ ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಟ್ರಂಪ್‌ ಅವರು ಕುರ್ದ್ ಗಳನ್ನು ಇರಾನ್‌ ಯುದ್ಧಕ್ಕೆ ಬಳಸಿಕೊಂಡ ತಂತ್ರಗಾರಿಕೆಯ ನಡೆಯನ್ನು ಪ್ರಶ್ನಿಸಿದರು. ಇದರಿಂದ ಜನಾಂಗೀಯ ಕದನಕ್ಕೆ ಕಾರಣವಾಗುತ್ತದೆ ಎಂದು Intelligence Department ಸೂಚಿಸಿದರೂ, ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಟ್ರಂಪ್‌ ಸಂಪುಟದಲ್ಲಿರುವ ಸದಸ್ಯರು ಮತ್ತು ಅವರ ಸುತ್ತಲಿನ ಬುದ್ದಿಜೀವಿಗಳು ಅಲ್ಪ ಬುದ್ದಿಮತ್ತೆಯವರೆಂದು ಟೀಕಿಸಿದರು. ಅವರ ಸಲಹೆಗಳಿಂದಾದ ಪರಿಣಾಮಗಳ ಬಗ್ಗೆ ವಿವರವಾಗಿ ವರದಿ ಮಾಡಿದರು. ಈ ಯುದ್ಧಕ್ಕಾಗಿ ಅವರ ಮಾಡುತ್ತಿರುವ ಅನಗತ್ಯ ವೆಚ್ಚಗಳನ್ನು ಟೀಕಿಸಿದರು. ಎಲಾನ್‌ ಮಸ್ಕ ಅವರು ದೇಶವನ್ನು ತಮ್ಮ ಕೈಗೇ ತೆಗೆದುಕೊಂಡ ರೀತಿ ಸ್ಟೀಫನ್‌ ಮಿಲ್ಲರ್‌ ಅವರ ವಲಸೆಗಾರರನ್ನು ದೇಶದಿಂದ ಹೊರಗಟ್ಟುವ ನಿಲುವುಗಳನ್ನು ತೀವ್ರವಾಗಿ ಖಂಡಿಸಿದರು. ದೇಶದೊಳಗಿನ ಆಡಳಿತಾತ್ಮಕ ನಡೆಯನ್ನು ಪ್ರಶ್ನಿಸಿದರು. ಕಾರ್ಯಾಂಗವನ್ನು ತ್ಮ ಕೈಗೊಂಬೆಯಂತೆ ನಡೆಸಿಕೊಳ್ಳುವ ಟ್ರಂಪ್‌ ನೀತಿಯನ್ನು ಕಟುವಾಗಿ ಟೀಕಿಸಿದರು. ಸಂವಿಧಾನದ ಗೌರವಕ್ಕೆ ಧಕ್ಕೆ ತಂದದ್ದನ್ನು ಪ್ರಶ್ನಿಸಿದರು. ಇದರಿಂದಾಗಿ ದೇಶದ ಸುರಕ್ಷತೆ ಎದುರಿಸಬೇಕಾಗಿ ಬರುವ ಸಾಧ್ಯತೆಗಳನ್ನು ಕುರಿತು ದೇಶವನ್ನು ಎಚ್ಚರಿಸಿದರು. ಟ್ರಂಪ್‌ ಅವರ ಕಾಲ ಅಮೆರಿಕದ ಅಸ್ತಿತ್ವದ ಸಂಕ್ರಮಣದ ಕಾಲವೆಂದು ಬಣ್ಣಿಸಲು ಅವರು ಹಿಂಜರಿಯಲಿಲ್ಲ, ಅಷ್ಟೇ ಅಲ್ಲ,  ಟ್ರಂಪ್‌ ಅವರು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಮಹಾತ್ವನ್ಮಾದಕ (Megalomania) ಎಂದು ಕಟುವಾಗಿ ಕೆಣಕಿದರು. ಟ್ರಂಪ್‌ ಆಡಳಿತದ ಮುಂದೆ ಮಂಡಿಯೂರಿದ ಮಾಧ್ಯಮಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಟ್ರಂಪ್‌ ಅವರ ಟ್ವೀಟ್‌ ಗಳನ್ನು ದೊಡ್ಡದಾಗಿ ಮಾಡಿ ಅವರ ದಡ್ಡತನದ ಮತ್ತು ಮನೋರಂಜಕ ಮಾತುಗಳನ್ನು ವೈಭವೀಕರಿಸಿದ್ದನ್ನು ತರಾಟೆಗೆ ತೆಗೆದುಕೊಂಡರು. ಈಗಲೂ ವಾಷಿಂಗ್‌ ಟನ್‌ ನಲ್ಲಿ ವಾಸಿಸುವ ಸೆಮೋರ್‌ ಹೆರ್ಷ್‌ ಅವರು ಸರ್ಕಾರ, ಅಧಿಕಾರ ಯಂತ್ರ ಹಾಗೂ, ಭೂಗತ ಜಗತ್ತು ಎಲ್ಲರನ್ನೂ ಎದುರು ಹಾಕಿಕೊಂಡು ಇನ್ನೂ ತಮ್ಮ ಇಳಿವಯಸ್ಸಿನಲ್ಲಿಯೂ, ಬರೆಯುತ್ತಾ, ಓದುತ್ತಾ, ಜನವಿರೋಧಿ, ಪ್ರಜಾಸತ್ತಾತ್ಮಕತೆ ಯ ವಿರೋಧ ನಿಲುವುಗಳನ್ನು ಟೀಕಿಸಿ ಬರೆಯುತ್ತಾ ಜೀವಿಸುತ್ತಿದ್ದಾರೆ. ಆರೋಗ್ಯಪೂರ್ಣ ಮನಸ್ಸು ದೇಹ ಅವರದು ಅವರು ಇದುವರೆಗೆ ಪತ್ರಿಕೋದ್ಯಮದಲ್ಲಿ ತಾವು ಜೀವ ಒತ್ತೆ ಇಟ್ಟು ಮಾಡಿದ ವರದಿಗಳನ್ನು ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. 2018ರಲ್ಲಿ ಬಂದ ಅವರ ನೆನಪುಗಳ ಪುಸ್ತಕ ʼರಿಪೋರ್ಟರ್‌ʼ ಇಲ್ಲಿನ Edison Library ಯಲ್ಲಿ ದಕ್ಕಿತು. ನಾನು ಅದನ್ನು ಈತ ಪಠ್ಯದಂತೆ ಓದುತ್ತಿದ್ದೇನೆ. ಭಾರತದಲ್ಲಿ ಪತ್ರಿಕೋದ್ಯಮ ಒಂದು ಧರ್ಮ ಎಂದು ಭಾವಿಸುವ ಮಂದಿ ಇದನ್ನು ಓದಿದರೆ, ಅವರ ಬದುಕು ಹೊಸ ತಿರುವು ಕಾಣಬಹುದು. “This book is essential reading for every journalist and aspiring jouornalist the world over” ಎಂದು ಈ ಪುಸ್ತಕದ ಬಗ್ಗೆ ಬರೆದಿರುವ ಅಮೆರಿಕಾದ ಖ್ಯಾತ ಬರಹಗಾರ ಜಾನ್‌ ಲೆ ಕೆರೆ ಹೇಳಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ: ಸಿಎಂ ಡಿ ಕೆ ಶಿವಕುಮಾರ್

"ಮುಂದಿನ ಬಜೆಟ್‌ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ...

ಔರಾದ್‌ | ಖೋಖೋ : ಕೌಡಗಾಂವ ಶಾಲೆಯ ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

ಬೀದರ್‌ ಹೊರವಲಯದ ನಂದಿನಗರದಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 16ರಂದು ನಡೆದ...

ಕಲಬುರಗಿ | ಸಿಇಸಿ ಜ್ಞಾನೇಶಕುಮಾರ ವಜಾಗೆ ಆಗ್ರಹಿಸಿ ಪ್ರತಿಭಟನೆ

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸಿ, ಮುಖ್ಯ...

₹3 ಲಕ್ಷ ಲಂಚ: ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಚಾಲಕ ಬಂಧನ

ಕೃಷಿಯೇತರ (ಎನ್‌ಎ) ನಿವೇಶನಗಳನ್ನು ವಾಣಿಜ್ಯ ನಿವೇಶನಗಳಾಗಿ ಪರಿವರ್ತಿಸಿಕೊಡಲು ₹3 ಲಕ್ಷ ಲಂಚ...