ಕರ್ನಾಟಕ ಏಕೀಕರಣಕ್ಕೆ 70 ವರ್ಷ: ಕನ್ನಡ ಅನ್ನದ ಭಾಷೆಯಾಗುವುದೆಂದು?

Date:

ಕರ್ನಾಟಕ ಏಕೀಕರಣಗೊಂಡು ಈ ವರ್ಷಕ್ಕೆ 70 ವರ್ಷ. ಆದರೆ, ಎಪ್ಪತ್ತು ವರ್ಷಗಳ ಕನ್ನಡ ನಾಡಿನ ನಡೆಯತ್ತ ಒಂದು ನೋಟ ಹರಿಸಿದರೆ ಕಾಣಿಸುವ ಚಿತ್ರವೇ ಬೇರೆಯಾಗಿದೆ. “ಇಷ್ಟು ವರ್ಷವಾದರೂ, ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ. ಕನ್ನಡವು ಅಭಿಮಾನದ ಭಾಷೆಯ ಜೊತೆಗೆ ಅನ್ನದ ಭಾಷೆಯೂ ಆಗಬೇಕೆಂಬ ಮಾತು ಪ್ರತಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೂ ಕೇಳಿಸುತ್ತದೆ. ಆದರೆ ಈ ಆಶಯ ಇದುವರೆಗೆ ಈಡೇರಿಸಲು ಕನ್ನಡಿಗರಿಂದ ಸಾಧ್ಯವಾಗಿಲ್ಲ.

- Advertisement -

ಕರ್ನಾಟಕ ಏಕೀಕರಣಗೊಂಡು ಈ ವರ್ಷಕ್ಕೆ 70 ವರ್ಷ. ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ ತಾನು ʼಕನ್ನಡʼ ಸರ್ಕಾರ, ಎಂದು ಕರೆಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಕನ್ನಡದ ಧ್ವಜ, ಕನ್ನಡ ನಾಡ ಗೀತೆ ಇತ್ಯಾದಿಗಳಿಗೆ  ಮರುಜೀವ ಬಂದಿದೆ. ವಿಶ್ವ ಕನ್ನಡ ಸಮ್ಮೇಳನ ನಡೆಸುವ ಪ್ರಯತ್ನವೂ ನಡೆಯುತ್ತಿದೆ. ಒಟ್ಟಿನಲ್ಲಿ ಕನ್ನಡದ ಕನ್ನಡಮ್ಮನ ಭವ್ಯ ಮೆರವಣಿಗೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

ಆದರೆ, ಎಪ್ಪತ್ತು ವರ್ಷಗಳ ಕನ್ನಡ ನಾಡಿನ ನಡೆಯತ್ತ ಒಂದು ನೋಟ ಹರಿಸಿದರೆ ಕಾಣಿಸುವ ಚಿತ್ರವೇ ಬೇರೆಯಾಗಿದೆ.  “ಇಷ್ಟು ವರ್ಷವಾದರೂ, ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ. ಕನ್ನಡವು ಅಭಿಮಾನದ ಭಾಷೆಯ ಜೊತೆಗೆ ಅನ್ನದ ಭಾಷೆಯೂ ಆಗಬೇಕೆಂಬ ಮಾತು ಪ್ರತಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೂ ಕೇಳಿಸುತ್ತದೆ. “ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಿಂ ರಾಟಿ ನಡೆದುದಲ್ಲದೇ, ದೇಶದಾಟವೇ ಕೆಡಗು ಸರ್ವಜ್ಞ” ಎಂದು ಹನ್ನೆರಡನೇ ಶತಮಾನದಲ್ಲಿ ಸರ್ವಜ್ಞ ಹೇಳಿದ್ದಾನೆ. ಭಾಷೆ ಮತ್ತು ವಿದ್ಯೆಯು ಬದುಕು ಕಟ್ಟಿಕೊಳ್ಳಲು ಸಹಾಯಕವಾಗಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕನ್ನಡದಲ್ಲಿ ಕಲಿತರೆ ಅನ್ನ ದುಡಿದುಕೊಳ್ಳಬಹುದು ಎಂಬ ಭರವಸೆ ಮೂಡಬೇಕಿದೆ. ಕನ್ನಡ ಇನ್ನೂ ಅನ್ನದ ಭಾಷೆಯಾದಂತೆ ಕಾಣುತ್ತಿಲ್ಲ. ಇತ್ತೀಚೆಗಂತೂ, ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಹೆಸರಿನಲ್ಲಿ ಭಾರತದ ಇತರ ಭಾಷೆಗಳ ಮೇಲೆ ಹಿಂದಿ ಹೇರಿಕೆ ಹೆಚ್ಚಿದೆ. ಇದರ ಬಗ್ಗೆ ಮಾತನಾಡುವ ಧೈರ್ಯ ಕೂಡ ಯಾರಲ್ಲಿಯೂ ಇಲ್ಲ.  ಪ್ರಾಥಮಿಕ ಹಂತದಲ್ಲಿಯೇ ಕನ್ನಡದ ಕರಳುಬಳ್ಳಿಯನ್ನು ಕತ್ತರಿಸಲಾಗುತ್ತಿದೆ” ಎನ್ನುತ್ತಾರೆ. ಕನ್ನಡವನ್ನೇ ಉಸಿರಾಡುವ ರಾ. ನಂ. ಚಂದ್ರಶೇಖರ್.‌

karnataka 10

ಈ ಸಂದರ್ಭದಲ್ಲಿ ಒಂದು ಸಂಗತಿ ನೆನಪಾಗುತ್ತಿದೆ. ಅದು 1967ನೇ ಇಸವಿ. ಸಿನಿಮಾ ನಿರ್ದೇಶಕ ಮತ್ತು ಪತ್ರಕರ್ತ ಎಸ್‌ ಎನ್‌ ಎಸ್‌ ಶಾಸ್ತ್ರಿ ಇಪ್ಪತ್ತರ ಹರೆಯದ ಒಂದಷ್ಟು ಯುವಕರನ್ನು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರ ತಲೆಮಾರಿನವರ ನಿಜವಾದ ಆಸೆ, ಆಕಾಂಕ್ಷೆ, ಅಭಿಪ್ಸೆ, ನಿರೀಕ್ಷೆಗಳೇನು? ಎಂಬ ಪ್ರಶ್ನೆಯನ್ನ ಕೇಳಿದ್ದರು. ಈ ಪೈಕಿ ಒಬ್ಬ ಹುಡುಗ Beatles ಹಾಡಿ ತಾನು ಸಿನಿಮಾವನ್ನು ತನ್ನ ಬದುಕಿನ ದಾರಿಯಾಗಿ ನೋಡಲು ಬಯಸುತ್ತೇನೆ ಎಂದಿದ್ದ. ಆದರೆ ಇನ್ನೊಬ್ಬ ದಿನಗೂಲಿ ನೌಕರನಿಗೆ ಭಾರತದ ಪ್ರಧಾನಿಯ ಹೆಸರೂ ಗೊತ್ತಿರಲಿಲ್ಲ. ಇನ್ನು ಕೆಲವು ಹುಡುಗರು, “ನಾವು ಪೋಷಕರಿಗಿಂತ ಹೆಚ್ಚು ಗೌರಯುತವಾಗಿ ಬದುಕಲು ಇಷ್ಟಪಡುತ್ತೇವೆ” ಎಂದಿದ್ದರು. ಇನ್ನು ಕೆಲವರು ಇಂಥ ದೇಶದಲ್ಲಿ ನಮಗೆ ಭವಿಷ್ಟವೆಲ್ಲಿದೆ? ಎಂದು ಪ್ರಶ್ನಿಸಿದ್ದರು. “ಸ್ವಾತಂತ್ರ್ಯ ಬಂದು ಇಪ್ಪತ್ತು ವರ್ಷಗಳ ತರುವಾಯ “ನಾವು ಸಾಧಿಸಿರುವುದೇನೆಂದರೆ ಬರಲಿರುವ ನಾಳೆಯ ಬಗ್ಗೆ ಭರವಸೆಗಳನ್ನು ಇಟ್ಟುಕೊಳ್ಳುವುದು, ಏಕೆಂದರೆ ನಮ್ಮ ಇಂದಿನ ಸ್ಥಿತಿ ಗಂಭೀರವಾಗಿದೆ” ಎಂದು ಉತ್ತರಿಸಿದ್ದರು.

ಆಗಲೇ ಹಾಗಿದ್ದಾಗ  ಈಗ ಇಂದಿನ Gen Z ಪೀಳಿಗೆಯವರನ್ನು ಕೇಳಿದರೆ, “ಹಿಂದೆಂದೂ ಕಾಣದ ನಿರಂತರ ಬದಲಾವಣೆ. ಇಲ್ಲಿ ನಾಳೆ ಏನಾಗುತ್ತದೆ? ಎಂದು ನಿರೀಕ್ಷಿಸಲೂ ಸಾಧ್ಯವಿಲ್ಲ ಅದು ನೌಕರಿ ಇರಬಹುದು, ತಂತ್ರಜ್ಞಾನವಿರಬಹುದು, ಹವಾಮಾನವಾದರೂ ಇರಬಹುದು”  ಎನ್ನುತ್ತಾರೇನೋ. ಅವರುಗಳಿಗೆ ಹಸ್ತಾಂತರಿಸಲು ನಮ್ಮಂಥವರ ಬಳಿ ಇರುವ ತಿಳಿವಳಿಕೆಯ ಆಸ್ತಿಯಾದರೂ ಏನು? ನಮ್ಮ ಕಾಲದ ಹೊರೆ, ನೋವು, ಸಂಕಟ, ಅವರು ಸಂತೋಷದ , ಕುತೂಹಲಕರ ಬದುಕನ್ನು ನಿರೀಕ್ಷಿಸುತ್ತಾರೆ. ನಮ್ಮ ಕಾಲದ ಅಸುರಕ್ಷಾ ಭಾವನೆ ಅವರನ್ನು ಕಾಡುತ್ತಿಲ್ಲ. ಜೀವನ ದಿನ ನಿತ್ಯ ತಮ್ಮನ್ನು ಚಕಿತಗೊಳಿಸಿ, ಹುಡುಕುವಂತೆ ಪ್ರೇರೇಪಿಸಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಅಂತಃಕರಣ, ಪ್ರೀತಿ, ದ್ವೇಶವಿಲ್ಲದ, ಜಾತಿ-ಮತದ ಹಿಂಸೆಯಿಲ್ಲದ ಮುಂದುವರಿದ ಜಗತ್ತನ್ನು ಅವರು ನಿರೀಕ್ಷಿಸುತ್ತಾರೆ. ತಮಗೆ ಅನ್ಯಾಯವಾಗಿದೆ ಎಂದು ಅವರಿಗೆ ಖಚಿತವಾದರೆ, ಇಂದಿನ ಸರ್ಕಾರಗಳು ಅದನ್ನು ಪರಿಹರಿಸಲು ಸಮಸ್ಯೆಯನ್ನೇ ರಾಜಕೀಕರಣಗೊಳಿಸುತ್ತೆ.  ನಮ್ಮ ಮಕ್ಕಳು ಅದನ್ನು ಪ್ರಶ್ನಿಸಿದರೆ ಅದಕ್ಕೆ ಸಿದ್ಧಾಂತಗಳ ಹಣೆಪಟ್ಟಿ ಕಟ್ಟಿ  ನ್ಯಾಯ ಕೇಳಲು ಹೋದವರನ್ನೇ ಅಪರಾಧಿಗಳೆಂದು ಪರಿಗಣಿಸುತ್ತಾರೆ. ಈಗಿನ ಮತ್ತು ಮುಂದೆ ಬರಲಿರುವ ಜನಾಂಗಕ್ಕೆ ಕಾಯುವಷ್ಟು ವ್ಯವಧಾನವಿಲ್ಲ.  ಪರಿಸ್ಥಿತಿ ಹೀಗಿರುವಾಗ, ನನಗಿಂತ ಯುವ ಜನಾಂಗದ  ಆತ್ಮದ ಕರೆಯನ್ನು ಕೇಳಿರುವ, ಕೇಳಿಸಿಕೊಳ್ಳಬಲ್ಲ ಯಾರನ್ನಾದರೂ, ಮುಂದಿನ ಕನ್ನಡ ನೆಲದ ಯುವ ಜನಾಂಗವನ್ನು “ನೀವು ಕನ್ನಡವನ್ನು ಏಕೆ ಕಲಿಯಬೇಕು” ಎಂದು ಕೇಳಿದರೆ ಉತ್ತರ ಸಿಗುವುದು ಕಷ್ಟ ಎಂಬುದು ಬಹು ಕನ್ನಡಿಗರ ಅನಿಸಿಕೆ.  ಆದರೆ ಇಂದಿನ ಜನಾಂಗ ಕನ್ನಡವನ್ನು

ಕರ್ನಾಟಕದ ವಿಭಿನ್ನ ಪ್ರಾದೇಶಿಕ, ಸಾಮಾಜಿಕ ಸಂಸ್ಕೃತಿಗಳ ಆಳವಾದ ತಿಳಿವಳಿಕೆಗಾಗಿ ಕನ್ನಡ ಕಲಿಯಬೇಕು. ಕರ್ನಾಟಕದ ವಿಭಿನ್ನ ಪ್ರಾದೇಶಿಕ, ಸಾಮಾಜಿಕ ಸಂಸ್ಕೃತಿಗಳ ಆಳವಾದ ತಿಳಿವಳಿಕೆಗಾಗಿ ಕನ್ನಡ ಕಲಿಯಬೇಕು.  ಆರ್ಥಿಕತೆಯ ದೃಷ್ಟಿಯಿಂದ ಮೇಲಿನವು  ಮೊದಲ ಆದ್ಯತೆಗಳಾಗಿವೆ. ಭಾವನಾತ್ಮಕ ವಹಿವಾಟಿಗೆ ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರು ಈಗಲೂ ಕನ್ನಡವನ್ನು ಬಳಸುತ್ತಾರೆ. ಕನ್ನಡ ಅನ್ನದ ಭಾಷೆಯಾಗಬೇಕು. ಆದಾಗ ಬೇಕೆಂದರೆ ಅದು ಜ್ಞಾನ ವಿಜ್ಞಾನದ ಭಾಷೆಯಾಗಬೇಕು. ಇದನ್ನಾಗಿಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಕನ್ನಡದಲ್ಲಿ ಆಧುನಿಕ  ಜ್ಞಾನ ವಿಜ್ಞಾನ  ಸೃಷ್ಟಿಸಬಲ್ಲ ಹಾಗೂ ಅದನ್ನು ಗಣಕೀಕರಿಸಬಲ್ಲ (into text, audio, video form) ಒಂದು ತಂಡವನ್ನು ರಚಿಸಿ ಅದಕ್ಕೆ ನೈತಿಕ ಮತ್ತು ಆರ್ಥಿಕ ಬೆಂಬಲ ಕೊಡಬೇಕು. ಈ ಅಡಿಪಾಯ ಆದ ನಂತರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮತ್ತು ತರಬೇತಿಯ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುವುದು. ಅಡಿಪಾಯವಿಲ್ಲದೇ ಕಟ್ಟಡ ಎದ್ದು ನಿಲ್ಲಲಾರದು. 

ಕನ್ನಡ ಅಂದು, ಇಂದು, ಮುಂದು

ಕನ್ನಡವು ಸಾವಿರಾರು ವರ್ಷಗಳ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದುದು. ಕರ್ನಾಟಕದ ಜನಜೀವನ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಂಪರೆಯೊಂದಿಗೆ ಕನ್ನಡ ಅವಿನಾಭಾವ ಸಂಬಂಧ ಹೊಂದಿದೆ. ಕಾಲ ಬದಲಾದಂತೆ ಕನ್ನಡವೂ ಅನೇಕ ರೂಪಾಂತರಗಳನ್ನು ಕಂಡಿದ್ದರೂ, ತನ್ನ ಮೂಲ ಸೊಗಡನ್ನು ಜೀವಂತವಾಗಿ ಉಳಿಸಿಕೊಂಡಿರುವುದಕ್ಕೆ ಅದರ ಅಂತಃಶಕ್ತಿ, ಅದರ ಪ್ರಬುದ್ಧ ವಿಸ್ತಾರ ಕಾರಣ ಎನ್ನಿಸುತ್ತದೆ.

ಕನ್ನಡ ಅಂದು

ನವೆಂಬರ್‌ 1, 1973ರಲ್ಲಿ ಮೈಸೂರು ರಾಜ್ಯವನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್‌ ಅವರು ಕರ್ನಾಟಕ ಎಂದು ನಾಮಕರಣ  ಮಾಡಿದರು. ಆದರೆ, ಈ ಪ್ರದೇಶವನ್ನು ಕರ್ನಾಟಕ ಎಂದು ಆರನೇ ಶತಮಾನದಲ್ಲಿಯೇ ಕರೆಯಲಾಗುತ್ತಿತ್ತು. ಚರಿತ್ರಕಾರರ ಪ್ರಕಾರ ದಕ್ಷಿಣ ಭಾರತದ ಎಲ್ಲ ಪ್ರದೇಶಗಳೂ , ಒಂದು ಛತ್ರದಡಿ ಬಂದು ಆ ಕಾಲದಲ್ಲಿ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ವಿಜಯನಗರ ಸಾಮ್ರಾಜ್ಯವೆಂದು ಕರೆಯಲಾದ ಪ್ರದೇಶ 1336 ರಲ್ಲಿ ಕರ್ನಾಟಕ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು. ವಸಾಹತು ಪೂರ್ವ ಚರಿತ್ರೆಯನ್ನು ಗಮನಿಸಿದರೆ, ಕರ್ನಾಟಕ ಸಾಮ್ರಾಜ್ಯವಾಗಿತ್ತು, ವಿಜಯನಗರ ರಾಜಧಾನಿಯಾಗಿತ್ತೆಂದು ಗೊತ್ತಾಗುತ್ತದೆ.  ಚರಿತ್ರೆಕಾರ್ತಿ, ಶಾಸನತಜ್ಞೆ ಪ್ರತಿಮಾ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದಿದ್ದ ವಸುಂಧರ ಫಿಲ್ಲಿಯೋಜಾತ್‌ ಕೂಡ ಈ ಚಾರಿತ್ರಿಕ ತಿಳಿವಳಿಕೆಯನ್ನು ಅನುಮೋದಿಸುತ್ತಾರೆ.

devaraj urs600 1

 ಹಿಂದಿನ ಕಾಲದಲ್ಲಿ ಕನ್ನಡವು ರಾಜರ ಆಸ್ಥಾನದಿಂದ ಹಿಡಿದು ಜನಸಾಮಾನ್ಯರ ದೈನಂದಿನ ಬದುಕಿನವರೆಗೆ ವ್ಯಾಪಕವಾಗಿ ಬಳಕೆಯಲ್ಲಿತ್ತು. ಪಂಪ, ರನ್ನ, ಪೊನ್ನರಂತಹ ಕವಿಗಳು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದರು. ನಂತರ ವಚನಕಾರರು, ದಾಸರು ಮತ್ತು ಅನೇಕ ಸಾಹಿತಿಗಳು ಕನ್ನಡವನ್ನು ಜನಸಾಮಾನ್ಯರ ಭಾಷೆಯಾಗಿ ಮತ್ತಷ್ಟು ಶ್ರೀಮಂತಗೊಳಿಸಿದರು. ಕನ್ನಡದಲ್ಲಿ ಕಾವ್ಯ, ಶಾಸನ, ವಚನ, ಪುರಾಣ, ನಾಟಕ ಮತ್ತು ವಿವಿಧ ಸಾಹಿತ್ಯ ಪ್ರಕಾರಗಳು ಬೆಳೆದು ಬಂದವು. ಈ ದೀರ್ಘ ಸಾಹಿತ್ಯ ಪರಂಪರೆಯೇ ಕನ್ನಡಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದೆ.

ಕನ್ನಡದ ಪುರಾತನತೆ

ನಮ್ಮ ದ್ರಾವಿಡ ಭಾಷೆಗಳ ಇತಿಹಾಸದ ಒಳಹೊಕ್ಕು ನೋಡಿದರೆ, ಎಲ್ಲರೂ, ಕನ್ನಡ ಎಷ್ಟು ಪುರಾತನವಾದದುದು ಎಂಬುದರ ಬಗ್ಗೆ ಯೋಚಿಸುತ್ತಾರೆ. ಸದ್ಯಕ್ಕೆ ಹಲ್ಮಿಡಿ ಶಾಸನದಿಂದ ಲೆಕ್ಕ ಹಿಡಿದು ಕ್ರಿಸ್ತಶಕ 450 ಕ್ಕಿಂತ ಹಿಂದಿನದು ಎಂದು ಲೆಕ್ಕ ಹಾಕುತ್ತಿತ್ತು. ತೀರಾ ಇತ್ತೀಚೆಗೆ ಶಿವಮೊಗ್ಗದ ಬಳಿಯ ತಾಳಗುಂದ ಬಳಿಯಲ್ಲೊಂದು ಶಾಸನವೊಂದನ್ನು ಪತ್ತೆ ಹಚ್ಚಿರುವ ಪುರಾತತ್ವ ಇಲಾಖೆ ಅದು ಕ್ರಿಸ್ತಶಕ 370 ರಷ್ಟು ಹಿಂದಕ್ಕೆ ಕನ್ನಡ ಭಾಷೆಯನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಖ್ಯಾತರಾದ ಹಿರಿಯ ಇತಿಹಾಸಕಾರ ಷ. ಶೆಟ್ಟರ್‌ ಅವರು ತಮ್ಮ ಜಗದ್ವಲಯ-ಪ್ರಾಕೃತ ಕನ್ನಡ ಸಂಸ್ಕೃತ ಅನುಸಂಧಾನ ಕೃತಿಯಲ್ಲಿ  ʼಇಸಿಲʼ ಎಂಬ ಕನ್ನಡದ ಪದ ಅತ್ಯಂತ ಪುರಾತನ ಕನ್ನಡ ಪದ ಎಂದು ಗುರುತಿಸಿದ್ದರು. ಕ್ರಿಸ್ತಪೂರ್ವ 252 ರಲ್ಲಿ ಅಶೋಕ ಚಕ್ರವರ್ತಿ ಕಾಲದ ಕಲ್ಲಿನ ಶಾಸನವೊಂದು ದೊರಕಿದ್ದು, ಅದರಲ್ಲಿ ಈ ಪದ ದಾಖಲಾಗಿದ್ದಾರೆ.  ಇದರಿಂದ ಕನ್ನಡ ಪುರಾತನತೆ ಬಗ್ಗೆ ಮತ್ತಷ್ಟು ಚರ್ಚೆ ಆರಂಭವಾಗಿದೆ. 

ಆದರೆ, ಪುರಾತನತೆಯನ್ನು ಕುರಿತು ಇನ್ನೊಂದು ಭಾಷೆಗಿಂತ ಪುರಾತನವಾದುದು ಎಂದು ಚರ್ಚಿಸುವುದು ಸರಿಯಲ್ಲ. ಏಕೆಂದರೆ ಯಾವುದಕ್ಕೂ ನಿಖರವಾದ ತೀರ್ಪನ್ನು ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ ಶೆಟ್ಟರ್.‌  ಕಳೆದ ಒಂದು ಶತಮಾನದಿಂದ ಕನ್ನಡದ ಪುರಾತನತೆ ಒಂದು ಚರ್ಚೆಯ ವಿಷಯವಾಗುತ್ತಿದೆ. ಭಾಷಾ ತಜ್ಞರ ಪ್ರಕಾರ ಕನ್ನಡಕ್ಕೆ ಸುಮಾರ 2500 ವರ್ಷಗಳ ಕಳ್ಳು-ಬಳ್ಳಿ ಸಂಬಂಧವಿದೆ. ಹಾಗೆ ನೋಡಿದರೆ, ಸಂಸ್ಕೃತ ಮತ್ತು ತಮಿಳಿನ ನಂತರ ಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡ ಮೂರನೇಯ ಸ್ಥಾನದಲ್ಲಿದೆ ಎಂಬುದು ಪ್ರಶ್ನಾತೀತ. 2008ರಲ್ಲಿ ಭಾರತ ಸರ್ಕಾರ ಗುರುತಿಸಿದ ಆರು ಶಾಸ್ತ್ರೀಯ ಭಾಷೆಗಳ ಪೈಕಿ ಕನ್ನಡಕ್ಕೆ ಮೂರನೇ ಸ್ಥಾನ.  ಆದರೆ ಶಾಸ್ತ್ರೀಯ ಸ್ಥಾನಮಾನ ಪಡೆದದ್ದಾಗಲಿ, ಅದರ ಪುರಾತನತೆಯಾಗಲಿ ಅಲ್ಲ. ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಕನ್ನಡವನ್ನು ಪ್ರೀತಿಸುವುದು, ಬೆಳೆಸುವುದು,  ಪೋಷಿಸುವುದು ಎಂಬುದು ಮುಖ್ಯ ಎಂಬ ಮನನೀಯ ಮಾತುಗಳನ್ನು ಹೇಳಿದವರು ನಮ್ಮ ಶೆಟ್ಟರ್.‌  ಮೂಲಭೂತವಾಗಿ classic ̧  classical ಎಂಬ ಪದದ ವಿಸ್ತರಣೆಯೇ ಅದು. “ತಾನು ಹೇಳಿ ಮುಗಿಸಬೇಕಿರುವುದನ್ನು ಎಂದೂ ಮುಗಿಸದ ಭಾಷೆ (A classic is a book that has never finishȩd saying it has to say) ಹಾಗಾಗಿ ಕನ್ನಡ ಭಾಷೆ ಇನ್ನೂ ಅನೇಕ ರೂಪದಲ್ಲಿ ಬೆಳೆಯಬೇಕಿದೆ. ಅದು ಆಗ ಬೇಕಾದ ಕೆಲಸ. ಕನ್ನಡದ ಪುರಾತನತೆಯ ಬಗ್ಗೆ ತಲೆಕೆಡಿಸಿಕೊಂಡಂತೆ, ಕನ್ನಡವನ್ನು ಮತ್ತಷ್ಟು ನಮ್ಮದಾಗಿಸಿಕೊಂಡು ಕಸುವು ತುಂಬುವುದು ಇಂದಿನ ಅಗತ್ಯ.

ಶಾಸ್ತ್ರೀಯ ಸ್ಥಾನ ಮಾನ ದೊರೆತರೂ, ಫಲ ಶೂನ್ಯ

ಕನ್ನಡಕ್ಕಿಂತ ನಾಲ್ಕು ವರ್ಷ ಮುನ್ನ ತಮಿಳಿಗೆ 2004 ನೇ ಇಸವಿಯಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆಯಿತು. ಹಾಗೆ ನೋಡಿದರೆ ಭಾರದಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಮೊದಲ ಭಾಷೆ ತಮಿಳು. ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ನಾಲ್ಕೇ ವರ್ಷಕ್ಕೆ, ಅಂದರೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕುವವೇಳೆಗೆ ಪೆರುಂಬಾಕ್ಕಮ್‌ ನಲ್ಲಿ, ʼಸೆಮ್ಮೊಳಿʼ ತಮಿಳು ಭಾಷೆಯ ಶಾಸ್ತ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಯಾಯಿತು. ಪ್ರಾಚೀನ ತಮಿಳು ಸಾಹಿತ್ಯದ ಸಂಶೋಧನೆ, ಪ್ರಕಟಣೆ ಮತ್ತು ತಮಿಳು ಭಾಷೆಯ ಶಾಸ್ತ್ರೀಯ ಸ್ವರೂಪವನ್ನು ಉಳಿಸಿ ಬೆಳೆಸುವುದು, ಸಂಗಮ್ ಸಾಹಿತ್ಯದ ಅಧ್ಯಯನ, ಡಿಜಿಟಲ್ ನಾವೀನ್ಯತೆ, ಗ್ರಂಥಾಲಯ ಸೇವೆಗಳು ಹಾಗೂ ಭಾಷಾ ಇಂಟರ್ನ್‌ಶಿಪ್ ಕಾರ್ಯಕ್ರಮಗಳು ಆರಂಭವಾದವು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು 18 ವರ್ಷವಾದರೂ, ಇನ್ನೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇನ್ನೂ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದೆ. ಸ್ವಂತ ಕಟ್ಟಡ, ಪೂರ್ಣ ಪ್ರಮಾಣದ ನೆಲೆ ಇಲ್ಲದೆ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದೆ. ಜಯಲಕ್ಷ್ಮಿ ವಿಲಾಸ ಅರಮನೆಯಲ್ಲಿ ಇದನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯಿತಾದರೂ, ಅನುಷ್ಠಾನ ಮತ್ತು ಸ್ಥಳದ ಕೊರತೆಯಿಂದಾಗಿ ಕೇಂದ್ರದ ನಿಜವಾದ ಕಾರ್ಯನಿರ್ವಹಣೆಗೆ ತೀವ್ರ ತೊಂದರೆಯಾಗಿದೆ. ಹಾಗಾಗಿ. ಕನ್ನಡದ ಸ್ಥಿತಿ ಹರ ಕೊಲ್ಲಲ್‌ ಪರ ಕಾಯ್ವನೇ ಹರಹರ ಶ್ರೀ ಚೆನ್ನಸೋಮೇಶ್ವರ ಎಂಬ ಸ್ಥಿತಿಯಾಗಿದೆ.

ಕನ್ನಡ ಇಂದು

ಇಂದು ಕನ್ನಡವು ಶಿಕ್ಷಣ, ಆಡಳಿತ, ಮಾಧ್ಯಮ, ಚಲನಚಿತ್ರ, ಸಾಹಿತ್ಯ, ಪತ್ರಿಕೋದ್ಯಮ ಮತ್ತು ದೈನಂದಿನ ಸಂವಹನದಲ್ಲಿ ಬಳಕೆಯಾಗುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ದೊರೆತಿದೆ. ಆಧುನಿಕ ಸಾಹಿತ್ಯ, ಸಿನಿಮಾ, ಸಂಗೀತ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಕನ್ನಡ ಹೊಸ ಪೀಳಿಗೆಯೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದೆ. ಆದರೆ ಜಾಗತೀಕರಣ, ನಗರೀಕರಣ, ಆಂಗ್ಲ ಭಾಷೆಯ ಪ್ರಭಾವ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ಕನ್ನಡದ ಬಳಕೆಗೆ ಕೆಲವು ಸವಾಲುಗಳೂ ಎದುರಾಗಿವೆ. ವಿಶೇಷವಾಗಿ ಯುವಜನರು ಮತ್ತು ನಗರ ಪ್ರದೇಶಗಳಲ್ಲಿ ಕನ್ನಡದ ಬದಲು ಆಂಗ್ಲ ಭಾಷೆಯ ಬಳಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಈ ಸಂದರ್ಭದಲ್ಲಿ ಕನ್ನಡವನ್ನು ಕೇವಲ ಭಾವನೆಯ ಭಾಷೆಯಾಗಿ ಉಳಿಸದೆ, ಜ್ಞಾನ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿಯೂ ಬೆಳೆಸುವುದು ಅಗತ್ಯವಾಗಿದೆ.

ಕಾಲದ ದುರಂತ

ಯಾರು ಈ ಭಾಷೆಯನ್ನು ಕಾಪಾಡಬೇಕೋ, ಅವರ ಅವಜ್ಞೆಗೇ ಕನ್ನಡ ಒಳಗಾಗಿರುವುದು ನಮ್ಮ ಕಾಲದ ದುರಂತ. ಏಕೀಕರಣವಾಗಿ ಎಪ್ಪತ್ತು ವರ್ಷ ಕಳೆದರೂ, ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೊಳಗಾಗಿದೆ. ಹಾಗಾಗಿ ಆಗಾಗ್ಗೆ ಈ ಅವಜ್ಞೆಯಿಂದಾಗಿ, ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಪ್ರಸಿದ್ಧ ಆರ್ಥಿಕ ತಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ರಚಿಸಲಾದ ಉನ್ನತಾಧಿಕಾರ ಸಮಿತಿಯು 2002ರಲ್ಲಿ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯು ರಾಜ್ಯದ ವಿವಿಧ ತಾಲೂಕುಗಳ ಹಿಂದುಳಿದಿಕೆಯನ್ನು ಅಧ್ಯಯನ ಮಾಡಿ, ಅಸಮಾನತೆ ಹೋಗಲಾಡಿಸಲು ಪ್ರಮುಖ ನೀಲನಕ್ಷೆಯನ್ನು ನೀಡಿದೆ. . ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಂಪೂರ್ಣ ಅನುದಾನ ಬಿಡುಗಡೆಯಾಗದಿರುವುದು ಮತ್ತು ಪ್ರಾದೇಶಿಕ ಅಸಮತೋಲನ ಸಂಪೂರ್ಣವಾಗಿ ನಿವಾರಣೆಯಾಗದಿರುವುದರಿಂದ ವರದಿ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂಬ ಚರ್ಚೆಗಳು ಮುಂದುವರಿದಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ನ್ಯಾಯಯುತ ಪ್ರಾಶಸ್ತ್ಯ ಹಾಗೂ ಮೀಸಲಾತಿ ನೀಡಲು 1984ರಲ್ಲಿ ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ಪ್ರಮುಖ ವರದಿಯಾಗಿದೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು 1984ರಲ್ಲಿ ನೀಡಿದ ಮೂಲ ಸರೋಜಿನಿ ಮಹಿಷಿ ವರದಿಯನ್ನು ಇಂದಿನ ಬದಲಾದ ಕಾಲಘಟ್ಟ ಹಾಗೂ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಪರಿಷ್ಕರಿಸಲು ಮತ್ತು ಮರುಪರಿಶೀಲಿಸಲು ಹಲವು ಬಾರಿ ಸಮಿತಿಗಳನ್ನು ರಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಕನ್ನಡಪರ ಹೋರಾಟಗಾರರು ನಿರಂತರವಾಗಿ ಆಗ್ರಹಿಸುತ್ತಿದ್ದಾರೆ.

ಕರ್ನಾಟಕದ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರವು ಕನ್ನಡ ಭಾಷಾ ಕಲಿಕಾ ಕಾಯ್ದೆಯಡಿ ಎಲ್ಲ ಶಾಲೆಗಳಲ್ಲೂ (ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ) ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸಿದೆ. ಮಾತೃಭಾಷೆ ಅಥವಾ ಕನ್ನಡದ ಉಳಿವಿಗೆ ಇದು ಅಗತ್ಯ ಎಂಬ ವಾದವಿದ್ದರೂ, ಕೆಲವು ಕಾನೂನು ಹಾಗೂ ಅನ್ವಯಿಕ ಚರ್ಚೆಗಳು ನಡೆಯುತ್ತಿವೆ. ಕರ್ನಾಟಕದ 1 ರಿಂದ 10ನೇ ತರಗತಿವರೆಗೆ ಎಲ್ಲ ಪ್ರಕಾರದ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ. ಸಿಬಿಎಸ್‌ಇ (CBSE) ಮತ್ತು ಐಸಿಎಸ್‌ಇ (ICSE) ಮಂಡಳಿಗೆ ಸೇರಿದ ಶಾಲೆಗಳಲ್ಲೂ ಕನ್ನಡ ಬೋಧನೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಕನ್ನಡ ಕಲಿಸದ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಹಾಗೂ ದಂಡದ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ. ಕಡ್ಡಾಯಗೊಳಿಸುವ ಪ್ರಕ್ರಿಯೆ ಹಾಗೂ ಉನ್ನತ ಶಿಕ್ಷಣದಲ್ಲಿ ಕನ್ನಡ ಹೇರಿಕೆಯ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗಳು ನಡೆದಿವೆ. ನಾಡಿನ ಭಾಷೆ, ಸಂಸ್ಕೃತಿ ಉಳಿಯಲು ಹಾಗೂ ಸ್ಥಳೀಯವಾಗಿ ಬದುಕಲು ಕನ್ನಡ ಕಡ್ಡಾಯವಾಗಿರಬೇಕು. ಆದರೆ ಇದಕ್ಕೆ ಪ್ರತಿರೋಧವೂ ಇದೆ.  ಇತರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಕೇಂದ್ರೀಯ ಪಠ್ಯಕ್ರಮ ಓದುವವರಿಗೆ ಇದು ಕಷ್ಟವಾಗಬಹುದು ಎಂಬ ವಾದ ಪೋಷಕರಿಂದ ಕೇಳಿಬರುತ್ತದೆ.

KPS Schools

ಇನ್ನು ಮುಖ್ಯವಾದ ಸಂಗತಿಯೆಂದರೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಮುಚ್ಚಲಾಗುತ್ತಿದೆ. ಖಾಸಗಿ ಶಾಲೆಗಳ ಮಾಲೀಕರು ಹೆಚ್ಚು ಮಂದಿ ರಾಜಕಾರಣಿಗಳೇ ಆಗಿರುವುದರಿಂದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದುವರೆಗೆ ರಾಜ್ಯದಲ್ಲಿ ಮುಚ್ಚಿರುವ ಕನ್ನಡ ಶಾಲೆಗಳ ಸಂಖ್ಯೆ 40 000 ಎಂದರೆ ನೀವು ನಂಬುತ್ತೀರಾ? ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರವು ಸ್ಪಷ್ಟನೆ ನೀಡುತ್ತಿದೆ. ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು, ‘ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ’ ಎಂಬ ಮಾತನ್ನೇ ಪುನರುಚ್ಛರಿಸುತ್ತಿದ್ದಾರೆ. ಅವರ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಅವರದ್ದೇ ಸರ್ಕಾರದ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ ವಾಸ್ತವಾಂಶವನ್ನು ರಾಜ್ಯದ ಜನರ ಮುಂದಿಡಲು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿಯ ಪ್ರಕಾರ ಈ ನಲವತ್ತು ಸಾವಿರ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ ಅನ್ಯಾಯವನ್ನು ಮುಚ್ಚಿಕೊಳ್ಳಲು ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ 800 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದೆ. (ಗಣಿಬಾಧಿತ ಜಿಲ್ಲೆಗಳಲ್ಲಿ 100, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 200 ಹಾಗೂ ಇತರೆ ಭಾಗದಲ್ಲಿ 500) ದಿ. 15/10/2025ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಆದೇಶಿಸಲಾಗಿದೆ. ವಿಪರ್ಯಾಸ ವೆಂದರೆ, ಈ ನೆಪದಲ್ಲಿ  ಮುಚ್ಚುವ ಶಾಲಾ ಕಟ್ಟಡಗಳನ್ನು ಇತರ ಕೆಲಸಗಳಿಗೆ ವಿನಿಯೋಗಿಸಲು ಸರ್ಕಾರವು ಮುಂದಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದೆ. ಪ್ರತಿಷ್ಠಿತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸರ್ಕಾರಿ ಶಾಲಾ ಕಟ್ಟಡಗಳನ್ನು ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಒಂದೇ ಒಂದು ಶಾಲೆಯನ್ನು ಮುಚ್ಚದಿದ್ದ ಮೇಲೆ ಸರ್ಕಾರಿ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ?

ಈಗ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಮಳನ್ನು ಕಳುಹಿಸಲು ಅರ್ಥಿಕವಾಗಿ ದುರ್ಬಲರಾಗಿರುವವರೂ ಸಿದ್ಧರಿಲ್ಲ. ಅವರಿಗೆ ನಾವು ಹಿಂದೆ ಹೇಳುತ್ತಿದ್ದ ಕಾನ್ವೆಂಟ್ಗಳೇ ಬೇಕು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಆಟೋ ಚಾಲಕರು, ಹೂ ಮಾರುವವರು, ರಸ್ತೆ ಬದಿಯ ವ್ಯಾಪಾರಿಗಳು ಸಹ ದುಬಾರಿ ಡೊನೇಷನ್‌, ಫೀಸು ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕೆಂದು ಬಯಸುತ್ತಾರೆ. ಬಹಳಷ್ಟು ಪೋಷಕರು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳತ್ತ ಒಲವು ತೋರಿಸುತ್ತಿದ್ದಾರೆ. ಅವರ ನಿಲುವಿನಲ್ಲಿ ತಪ್ಪಿಲ್ಲ. ತಮ್ಮ ಮಕ್ಕಳು ಎಂಜಿನಿಯರ್‌, ಡಾಕ್ಟರ್‌ ಆಗಬೇಕೆಂದು ಅವರು ಬಯಸುವುದರಲ್ಲಿ ತಪ್ಪೇನಿದೆ.

ಈ ನಡುವೆ ದಿನದಿನಕ್ಕೂ ಹೆಚ್ಚುತ್ತಿರುವ ದೇಶದ, ವಿದೇಶದ ಬೇರೆಬೇರೆ ಭಾಗಗಳಿಂದ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಭವಿಷ್ಯ ಅರಸಿ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಕನ್ನಡೇತರರ ಮತ್ತು ಕನ್ನಡಿಗರ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗುತ್ತಿದೆ. ಈ ಎರಡೂ ಭಾಷಿಕರ ನಡುವೆ ಕಂದರವೇರ್ಪಟ್ಟು, ಕೇಂದ್ರ ಸರ್ಕಾರದ ನೌಕರಿಗಳಲ್ಲಿ ನಡೆಯುವ, ವಿಶೇಷವಾಗಿ ಬ್ಯಾಂಕುಗಳು, ರೈಲ್ವೆ ಇಲಾಖೆಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೆ ಪ್ರತಿಬಾರಿಯೂ ಹೋರಾಟ ನಡೆಸಬೇಕಾಗುತ್ತದೆ. ಇದನ್ನೆಲ್ಲ ಪ್ರಶ್ನಿಸಬೇಕಾದವರು, ಕನ್ನಡದ ಮೇಲೆ ಹಿಂದಿ ಹೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇಷ್ಟನ್ನು ಹೇಳಿದ ಮೇಲೆ  ಅರವತ್ತರ ಗಡಿದಾಟಿರುವ ನನ್ನಂಥವರನ್ನು ಕೇಳಿದರೆ, ಸ್ಥೂಲವಾಗಿ ಇಷ್ಟನ್ನು ಹೇಳಬಹುದು. ಮುಂದಿನ ಕನ್ನಡ ಯುವಜನಾಂಗದ ನಿಜವಾದ ಆಸೆ, ಆಕಾಂಕ್ಷೆ ಮತ್ತು ನಿರೀಕ್ಷೆಗಳನ್ನು ಕೇವಲ ಉತ್ತಮ ಉದ್ಯೋಗ, ಹೆಚ್ಚಿನ ಸಂಬಳ ಅಥವಾ ವಿದೇಶಕ್ಕೆ ಹೋಗುವ ಅವಕಾಶಗಳಿಗೆ ಸೀಮಿತಗೊಳಿಸಲಾಗದು. ಇಂದಿನ ಯುವಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ನೆಮ್ಮದಿಯ ಜೀವನ, ವೈಯಕ್ತಿಕ ಸ್ವಾತಂತ್ರ್ಯ, ಉತ್ತಮ ಪರಿಸರ, ಕುಟುಂಬಕ್ಕೆ ಸಮಯ ಮತ್ತು ತಮ್ಮದೇ ಆದ ಜೀವನಶೈಲಿಯನ್ನು ಬಯಸುತ್ತಿದ್ದಾರೆ. ಜಗತ್ತಿನ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಮತ್ತು ಅವಕಾಶಗಳು ಅವರಿಗೆ ಬೇಕಾಗಿವೆ; ಆದರೆ ಅದಕ್ಕಾಗಿ ತಮ್ಮ ನೆಲ, ಭಾಷೆ, ಕುಟುಂಬ ಮತ್ತು ಸಂಸ್ಕೃತಿಯಿಂದ ದೂರವಾಗಬೇಕಾದ ಅನಿವಾರ್ಯತೆ ಇರಬಾರದು ಎಂಬ ಆಶಯವೂ ಅವರಲ್ಲಿ ಬೆಳೆಯುತ್ತಿದೆಯೇನೋ ಎಂದು ಎಲ್ಲೂ ಒಂದು ಮೂಲೆಯಲ್ಲಿ ಆಶಾಕಿರಣವಾಗಿ ಕಾಡುತ್ತಿದೆ.. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಅವಕಾಶವನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದರೂ, ಕರ್ನಾಟಕದಲ್ಲೇ ಇದ್ದು ಜಾಗತಿಕ ಮಟ್ಟದ ಕೆಲಸ, ಉದ್ಯಮ ಮತ್ತು ಸೃಜನಶೀಲತೆಯನ್ನು ಸಾಧಿಸುವ ಪರಿಸರ ನಿರ್ಮಾಣವಾಗಬೇಕು ಎಂಬುದು ಅವರ ಪ್ರಮುಖ ನಿರೀಕ್ಷೆಯಾಗಬಹುದು.

ಮುಂದಿನ ಪೀಳಿಗೆಯ ಯುವಕರು ಕೇವಲ ಉದ್ಯೋಗ ಹುಡುಕುವವರಾಗಿರದೆ ಉದ್ಯೋಗ ಸೃಷ್ಟಿಸುವವರಾಗಬೇಕು ಎಂಬ ಮನೋಭಾವವೂ ಬಲಗೊಳ್ಳುತ್ತಿದೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸ್ಟಾರ್ಟ್‌ಅಪ್‌ಗಳು, ಸಂಶೋಧನೆ, ಕೃಷಿ-ಉದ್ಯಮ, ಕಲೆ, ಮಾಧ್ಯಮ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೊಸ ಅವಕಾಶಗಳನ್ನು ನಿರ್ಮಿಸುವ ಆಸೆ ಅವರಲ್ಲಿದೆ. ಅದೇ ಸಂದರ್ಭದಲ್ಲಿ, ಯಶಸ್ಸಿನ ಅರ್ಥವನ್ನು ಹಿಂದಿನ ಪೀಳಿಗೆ ನಿರ್ಧರಿಸಿದ ರೀತಿಯಲ್ಲೇ ಸ್ವೀಕರಿಸುವ ಬದಲು, ತಮ್ಮ ಜೀವನಕ್ಕೆ ತಾವೇ ಅರ್ಥ ಮತ್ತು ಗುರಿಯನ್ನು ನೀಡುವ ಸ್ವಾತಂತ್ರ್ಯವನ್ನು ಅವರು ಬಯಸುತ್ತಾರೆ. ಯಾರಿಗಾದರೂ ಉದ್ಯಮ ಕಟ್ಟುವುದು ಯಶಸ್ಸಾಗಬಹುದು; ಮತ್ತೊಬ್ಬರಿಗೆ ಸಂಶೋಧನೆ, ಕಲೆ, ಕ್ರೀಡೆ ಅಥವಾ ಸಮಾಜಸೇವೆ; ಇನ್ನೊಬ್ಬರಿಗೆ ಕುಟುಂಬದೊಂದಿಗೆ ನೆಮ್ಮದಿಯ ಬದುಕು. ಹೀಗಾಗಿ ಮುಂದಿನ ಪೀಳಿಗೆಯಲ್ಲಿ “ಸಮಾಜ ಏನು ಹೇಳುತ್ತದೆ?” ಎನ್ನುವುದಕ್ಕಿಂತ “ನನಗೆ ನಿಜವಾಗಿ ಯಾವ ರೀತಿಯ ಜೀವನ ಬೇಕು?” ಎಂಬ ಪ್ರಶ್ನೆ ಹೆಚ್ಚು ಮಹತ್ವ ಪಡೆಯಬಹುದು.

ಇದನ್ನೂ ಓದಿ ಬೆಂಗಳೂರಿಗರ ಸುರಕ್ಷತೆ: ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲು ಪೊಲೀಸ್ ಇಲಾಖೆಗೆ ಸಿಎಂ ಸೂಚನೆ

ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕುರಿತ ಅವರ ನಿರೀಕ್ಷೆಯೂ ಬದಲಾಗಬೇಕಿದೆ. ಕನ್ನಡವನ್ನು ಕೇವಲ ಉಳಿಸಿಕೊಳ್ಳಬೇಕಾದ ಭಾಷೆಯಾಗಿ ನೋಡುವುದಕ್ಕಿಂತ, ಕನ್ನಡದಲ್ಲೇ ಹೊಸ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಸಾಹಿತ್ಯ, ಸಂಗೀತ, ಸಿನಿಮಾ, ಡಿಜಿಟಲ್ ಮಾಧ್ಯಮ, ಗೇಮಿಂಗ್ ಮತ್ತು ಜಾಗತಿಕ ಮಟ್ಟದ ಸೃಜನಶೀಲತೆಯನ್ನು ನಿರ್ಮಿಸಬೇಕು ಎಂಬ ಮನೋಭಾವ ಬೆಳೆಬೇಕು. ಕನ್ನಡಿಗನಾಗಿರುವ ಹೆಮ್ಮೆ ಮತ್ತು ಜಾಗತಿಕ ನಾಗರಿಕನಾಗಿರುವ ಮುಕ್ತ ಮನೋಭಾವ ಎರಡೂ ಒಂದೇ ವ್ಯಕ್ತಿಯಲ್ಲಿ ಸಹಬಾಳ್ವೆ ನಡೆಸಬಹುದು. “ನಾನು ಕನ್ನಡಿಗ, ಆದರೆ ನನ್ನ ಜಗತ್ತು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ” ಎಂಬ ಆತ್ಮವಿಶ್ವಾಸವೇ ಮುಂದಿನ ಪೀಳಿಗೆಯ ಆರೋಗ್ಯಕರ ಕನ್ನಡಿಗತನದ ರೂಪವಾಗಬಹುದು.

ಅದೇ ರೀತಿ, ಯುವಜನರು ತಮ್ಮ ವೈಯಕ್ತಿಕ ಬೆಳವಣಿಗೆಯ ಜೊತೆಗೆ ತಮ್ಮ ಊರು, ನಗರ ಮತ್ತು ರಾಜ್ಯದ ಬೆಳವಣಿಗೆಯನ್ನೂ ಬಯಸುತ್ತಾರೆ. ಉತ್ತಮ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ, ಉದ್ಯೋಗಾವಕಾಶಗಳು, ಸಾರ್ವಜನಿಕ ಸಾರಿಗೆ, ಸ್ವಚ್ಛ ಮತ್ತು ಸುಂದರ ನಗರಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಸೌಲಭ್ಯಗಳು.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ದೇಶದ ರೈತರು ಒಗ್ಗಟ್ಟಾಗಿ ಹೋರಾಡಬೇಕು; ಬೃಂದಾ ಕಾರಟ್‌

ಜನವಿರೋಧಿ, ರೈತವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ದೇಶದ ರೈತರು ಒಗ್ಗಟ್ಟಾಗಿ ಹೋರಾಟ...

ಶಿವಸೇನೆ ಪಕ್ಷಾಂತರದ ವದಂತಿಗಳ ನಡುವೆ ಪುಣೆಯಲ್ಲಿ ಅಮಿತ್ ಶಾ-ಏಕನಾಥ್ ಶಿಂದೆ ಭೇಟಿ

ಶಿವಸೇನೆಯಲ್ಲಿನ (ಉದ್ಧವ್ ಬಣ) ಪಕ್ಷಾಂತರದ ವದಂತಿಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮಹಾರಾಷ್ಟ್ರ ಉಪಮುಖ್ಯಮಂತ್ರಿ...

ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ವಿಳಂಬ: ಪ್ರಭಾವಿಗಳ ನಂಟು, ₹2,000 ಕೋಟಿ ಅಧಿಕ ಹೊರೆ!

 ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ನಿರೀಕ್ಷೆಯೊಂದಿಗೆ ಆರಂಭವಾದ 592...

ಲೋಕಸಭೆಯ ಚಳಿಗಾಲದ ಅಧಿವೇಶನ; ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಗೆ ಬಿಜೆಪಿ ತಯಾರಿ

ಕೇಂದ್ರ ಬಿಜೆಪಿ ಸರ್ಕಾರವು ಮುಂಬರುವ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಸಂಸತ್ತಿನ ವಿಶೇಷ...