ಪರೀಕ್ಷಾ ಅಕ್ರಮ | ಪುಣೆಯ FTII ನಲ್ಲಿ ಏರುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಕಾವು

Date:

ಪುಣೆಯ FTII ವಿದ್ಯಾರ್ಥಿಗಳು ಜೂನ್‌ 11ರಿಂದ ಚಳವಳಿ ಆರಂಭಿಸಿದ್ದಾರೆ. FTII ನಲ್ಲಿ 2024-25 ರಿಂದ ಅಸಮಾಧಾನ ಮಡುಗಟ್ಟಿದೆ. ಪ್ರವೇಶ ಪರೀಕ್ಷೆ ಮೆರಿಟ್‌ ಪಟ್ಟಿಯಲ್ಲಿ ನಡೆದಿರುವ ಅಕ್ರಮದಿಂದಾಗಿ ಈ ಅಸಮಾಧಾನ ಆರಂಭವಾಯಿತು. 2025-2026 ರಲ್ಲಿ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದದ್ದು, ಇದರಿಂದಾಗಿ ಮತ್ತೊಮ್ಮೆ ಪರೀಕ್ಷೆ ನಡೆಯುವಂತಾಗಿದೆ. ಯಾರೂ ಹೊಣೆಗಾರಿಕೆ ಹೊತ್ತುಕೊಂಡಿಲ್ಲ.

- Advertisement -

ರಾಜಕೀಯವಾಗಿ, ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಯಾವುದೇ ಕಾರಣಕ್ಕೆ ಸೃಜನಶೀಲ ಕ್ರಿಯೆಗೆ ಧಕ್ಕೆ ಬಂದಾಗಲೂ, ಪುಣೆಯ Film and Television Institute of India ‍(FTII) ಚಳವಳಿಗೆ ಮುಂದಾಗುವುದು ಋತ್ವಿಕ್‌ ಘಟಕ್‌ FTII ನ ಉಪ ಪ್ರಾಂಶುಪಾಲರಾದ ಕಾಲದಿಂದಲೂ ನಡೆದು ಬಂದಿದೆ. ಘಟಕ್‌ ಈಗಲೂ‍ FTII ವಿದ್ಯಾರ್ಥಿಗಳಿಗೆ ಮಾದರಿ. ನಾನು FTII ಗೆ ಭೇಟಿ ನೀಡಿದಾಗ, ಹುಡುಕಿಕೊಂಡು ಹೋಗಿದ್ದು ಅಲ್ಲಿನ Wisdom Tree̤̤  ಈ Wisdom Tree ಎಲ್ಲ ಸಿನಿಮಾ ಚರ್ಚೆಗಳಿಗೆ ವೇದಿಕೆಯಷ್ಟೇ ಅಲ್ಲದೆ ಯಾವುದೇ ರಾಜಕೀಯ ಪಕ್ಷ ತನ್ನ ಹಿತಾಸಕ್ತಿಗಾಗಿ‍  FTII ನ ಮೌಲ್ಯಗಳಿಗೆ ಆಶಯಗಳಿಗೆ ಧಕ್ಕೆ ತರಲು ಪ್ರಯತ್ನಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ಆ Wisdom Tree ಪ್ರತಿಭಟನೆಯ ಕೇಂದ್ರ ಬಿಂದುವಾಗಿರುತ್ತಿತ್ತು. ಈಗಲೂ ಆ ಮರ ತನ್ನ ಇತಿಹಾಸವನ್ನು ಮರೆತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಈಗ ಲಂಡನ್‌ ನಲ್ಲಿ ಋತ್ವಿಕ್‌ ಘಟಕ್‌ ಜನ್ಮಶತಾಬ್ದಿ ಪ್ರಯುಕ್ತ ಈ ತಿಂಗಳಿಡೀ ಅವರ ಚಿತ್ರಗಳ ಪುನರಾವಲೋಕನ (Retrospective) ನಡೆಯುತ್ತಿರುವ ಹೊತ್ತಿನಲ್ಲಿ FTII ನ ವಿದ್ಯಾರ್ಥಿಗಳು ಜೂನ್‌ 11 ರಿಂದ ಚಳವಳಿಯನ್ನು ಆರಂಭಿಸಿದ್ದಾರೆ.  ಈ ಸಾರಿ ವಿದ್ಯಾರ್ಥಿಗಳು ಚಳವಳಿಗೆ ಇಳಿದಿರುವುದು, ಪದೇ ಪದೇ ಕಾಡುತ್ತಿರುವ ಪರೀಕ್ಷೆಯ ಕುರಿತಾದ ವಿವಾದಗಳಿಂದ ಹಾಗೂ ಪ್ರಸಕ್ತ ಸರ್ಕಾರದ ಜನ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೆ. ಈ ಚಳವಳಿ ನಡೆಯುತ್ತಿರುವ ಸಂದರ್ಭ ಕೂಡ ಗಮನಾರ್ಹ.  Cockroach Janta Party (CJP) NEET  UG ಪ್ರಶ್ನೆ ಪತ್ರಿಕೆಯ ಸೋರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್‌-ಮಂತರ್‌ ನಲ್ಲಿ ಚಳವಳಿ ನಡೆಸುತ್ತಿರುವಾಗ, ಈ Gen Z ತಲೆಮಾರಿನವರು ವಿಡಂಬನೆಗಾಗಿ ಆರಂಭಿಸಿದ ಸಾಮಾಜಿಕ ಜಾಲತಾಣದ ಗುಂಪು ಇಂದು ಬೃಹದಾಕಾರವಾಗಿ ಬೆಳೆದು ಒಂದು ಯುವ ಚಳವಳಿಯಾಗಿ ರೂಪುಗೊಂಡಿರುವ ಸಂದರ್ಭದಲ್ಲಿ.  ಪ್ರತಿಭಟಿಸುವ ಯುವ ಜನಾಂಗವನ್ನು ಜಿರಳೆಗಳೆಂದು ಒಬ್ಬ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೇಳಿದ ಮಾತುಗಳಿಂದ ಇಂದಿನ ಯುವ ಜನಾಂಗ ಮಲೆತು ನಿಂತಿದೆ. ನಮ್ಮ ನಿರುದ್ಯೋಗಿ ಮಕ್ಕಳು ನಿರುದ್ಯೋಗಸ್ಥರಾದರೆ, ಅವರ ಪೋಷಕರಾದ ನಾವು ಹಿರಿಯತನದ ಜಿರಳೆಗಳು, ನಾವು ನಮ್ಮ ಮಕ್ಕಳಾದ ಜಿರಳೆಗಳೊಂದಿಗೆ ನಿಲ್ಲುತ್ತೇವೆ ಎಂದು ದೇಶಾದ್ಯಂತ ಹಿರಿಯ ನಾಗರಿಕರು ಜೊತೆಗೂಡಿದ್ದಾರೆ. ಈ ಚಳವಳಿ ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ ಮತ್ತು ಇತರ ರಾಜಕೀಯ ಪಕ್ಷಗಳ ಚಳವಳಿಗಳಿಗಿಂತ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಜೆನ್ ಜೆಡ್‌ ಚಳವಳಿಯ ಪರಿಣಾಮ

ಈ ಯುವ ಜನಾಂಗದ ಹೋರಾಟ ಶಕ್ತಿಯುತವಾದ ಜನಪರ ಹೋರಾಟವಾಗಿ ಪರಿವರ್ತನೆಗೊಂಡು ವಿಶ್ವಾದ್ಯಂತ ಹಲವು ಅಧಿಕಾರರೂಢ ಸರ್ಕಾರಗಳಿಗೆ ಅವುಗಳ ಭ್ರಷ್ಟಾಚಾರ, ಯುವ ವಿರೋಧಿ ನೀತಿ, ಸಾಮಾಜಿಕ ಜಾಲತಾಣಗಳ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಿಂದ ಸಂಚಕಾರ ತಂದಿರುವುದರಿಂದ ಮೋದಿ ಸರ್ಕಾರ ಈ CJP ಚಳವಳಿಯಿಂದ ದಿಕ್ಕುತೋಚದ ಸ್ಥಿತಿಯಲ್ಲಿವೆ. ಆದರೆ ಭಾರತದ ಈ ಯುವ ಜನ ಹೋರಾಟ ಕೇಂದ್ರೀಕೃತವಾಗಿಲ್ಲ. ಹರಿದು ಹಂಚಿಹೋಗಿದೆ. ಏಷ್ಯಾದ ಬಾಂಗ್ಲಾ ದೇಶ, ನೇಪಾಳ, ಆಫ್ರಿಕಾದ ಕೆನ್ಯಾ, ಮಡ್ಗಾಸ್ಕರ್‌, ಲ್ಯಾಟೀನ್‌ ಅಮೆರಿಕದ ಪೆರು, ಮಧ್ಯ ಪ್ರಾಚ್ಯದ ಇಂಡೋನೇಷ್ಯಾ, ಮೊರೊಕ್ಕೋಗಳಲ್ಲಿ ಈ ಚಳವಳಿ ಮಾಡಿರುವ ಪರಿಣಾಮದಿಂದ ಬಿಜೆಪಿ ಸರ್ಕಾರ ತಲ್ಲಣಗೊಂಡಿದೆ. ಈ CJP ಚಳವಳಿಯನ್ನು ತೀವ್ರವಾಗಿ ತೆಗೆದುಕೊಳ್ಳಬೇಕೋ? ಬೇಡವೋ ಎಂಬ ಗೊಂದಲದಲ್ಲಿದೆ.

ಇಂಥ ಸಂದರ್ಭದಲ್ಲಿ FTII ವಿದ್ಯಾರ್ಥಿಗಳು ಚಳವಳಿ ಆರಂಭಿಸಿದ್ದಾರೆ. ಮತ್ತು ದೇಶದಲ್ಲಿ ನಡೆಯುತ್ತಿರುವ ಎಲ್ಲ ಯುವ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿ, ಹೋರಾಟಕ್ಕಿಳಿದಿವೆ.  FTII ನ ವಿದ್ಯಾರ್ಥಿ ಸಂಘಟನೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಎಲ್ಲ ವಿಷಯಗಳನ್ನು ವಿಶದವಾಗಿ ವಿವರಿಸಿದ್ದಾರೆ.

FTII ನಲ್ಲಿ 2024-25 ರಿಂದ ಅಸಮಾಧಾನ ಮಡುಗಟ್ಟಿದೆ. ಕಾರಣ ಪ್ರವೇಶ ಪರೀಕ್ಷೆ. ಮೆರಿಟ್‌ ಪಟ್ಟಿಯಲ್ಲಿ ನಡೆದಿರುವ ಅಕ್ರಮದಿಂದಾಗಿ ಅವರ ಈ ಅಸಮಾಧಾನ ಆರಂಭವಾಯಿತು. 2025-2026 ರಲ್ಲಿ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದದ್ದು, ಇದರಿಂದಾಗಿ ಮತ್ತೊಮ್ಮೆ ಪರೀಕ್ಷೆ ನಡೆಯುವಂಥಾದದ್ದು, ಇವುಗಳು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಆರ್ಥಿಕವಾಗಿ ಭಾರವನ್ನು ಹೇರಿದವು. ಅಲ್ಲದೆ, ಇದಕ್ಕೆ ಕಾರಣ, ಪರಿಕ್ಷಾ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆ. ಯಾರೂ ಹೊತ್ತುಕೊಳ್ಳದ ಹೋಣೆಗಾರಿಕೆ. ಇದು ಕೇವಲ FTII ಗೆ ಮಾತ್ರ ಸೀಮಿತವಾಗಲಿಲ್ಲ, ಬದಲಿಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ನಿತ್ಯ ನಡೆಯುತ್ತಿರುವ ವಿದ್ಯಮಾನಗಳು. ಇದರಿಂದಾಗಿ ವಿದ್ಯಾರ್ಥಿಗಳು ದೇಶಾದ್ಯಂತ ಮುನಿದಿರುವುದು ಸುಳ್ಳಲ್ಲ.

ಅಂದಿನಿಂದ-ಇಂದಿನವರೆಗೂ, ಸಿನಿಮಾದ ಗುಣಮಟ್ಟಕ್ಕಾಗಿ ಹೋರಾಟಕ್ಕಿಳಿದ FTII

FTII ಪ್ರಜಾಸತ್ತಾತ್ಮಕ ಪ್ರತಿಭಟನೆಗೆ, ಯುವಕರ ಸಿಟ್ಟಿಗೆ ಧ್ವನಿಯಾಗಿದೆ. ಈಗ ಸದ್ಯಕ್ಕೆ ನಡೆಯುತ್ತಿರುವ ಜೆನ್‌ ಜೆಡ್‌ ಹೋರಾಟಕ್ಕೆ ಕೇಂದ್ರ ಬಿಂದುವೇ ಇಲ್ಲದಿರುವುದರಿಂದ ಪುಣೆ ಕೇಂದ್ರಬಿಂದುವಾಗುವ ಎಲ್ಲ ಸಾಧ್ಯತೆಗಳಿವೆ.  ಈ ಪ್ರತಿಭಟನೆ ನಡೆಸುತ್ತಿರುವ FTII ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

FTII ಗೆ ಪ್ರತಿಭಟನೆ ಏನೂ ಹೊಸದಲ್ಲ. 2015 ರಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರ  ʼಮಹಾಭಾರತʼ ಟೆಲಿವಿಷನ್‌ ಸೀರಿಯಲ್‌ ನಲ್ಲಿ ಧರ್ಮರಾಯನ ಪಾತ್ರವಹಿಸಿದ ಗಜೇಂದ್ರ ಸಿಂಗ್‌ ಚೌಹಾಣ್‌ ಅವರನ್ನು FTII ನ ನಿರ್ದೇಶಕರನ್ನಾಗಿ ನೇಮಿಸಿದಾಗ, ವಿದ್ಯಾರ್ಥಿಗಳು ಅದನ್ನು ರಾಜಕೀಯ ಪ್ರೇರಿತ ನೇಮಕಾತಿ ಎಂದು ಪ್ರತಿಭಟನೆಗೆ ಇಳಿದರು.  ಸುಮಾರು 140 ದಿನ ನಡೆದ ಈ ಚಳವಳಿ FTII ಕಂಡಿರುವ ಅತಿ ದೀರ್ಘ ಚಳವಳಿ. FTII ನ ನಿರ್ದೇಶಕರಾಗುವವರಿಗೆ ಕನಿಷ್ಠ ಅರ್ಹತೆ ಇರಬೇಕೆಂದು ವಿದ್ಯಾರ್ಥಿಗಳು ವಾದಿಸಿದರು. ಈ ಚಳವಳಿಗೆ, ಭಾರತದ ಪ್ರಮುಖ ನಿರ್ದೇಶಕರು, ಕಲಾವಿದರು, ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು. ಆದರೆ ಬಲಿಷ್ಠವಾದ ಸರ್ಕಾರದ ಮೇಲೆ ಆ ಚಳವಳಿ ಯಾವುದೇ ಪರಿಣಾಮ ಮಾಡಲಿಲ್ಲ ಎನ್ನಬಹುದು.

ಇದೇ ರೀತಿ 2019ರಲ್ಲಿ ಪ್ರವೇಶ ಶುಲ್ಕದ ಏರಿಕೆ ಮತ್ತು FTIIನ ಪ್ರವೇಶದ ನಿಯಮಗಳಿಗೆ ತಿದ್ದುಪಡಿ ತಂದಾಗ ವಿದ್ಯಾರ್ಥಿಗಳು ಹೋರಾಟಕ್ಕಿಳಿದರು. ಇದರಿಂದ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾತ್ರ FTII ಗೆ ಪ್ರವೇಶ ದೊರಕಲು ಸಾಧ್ಯ. ಬಡತನದಲ್ಲಿರುವ ಹಾಗೂ ಪ್ರತಿಭಾವಂತ ಕಲಾವಿದರಿಗೆ ಪ್ರವೇಶವೇ ಇಲದಂತಾಗುತ್ತದೆ ಎಂದು ಅವರು ಪ್ರತಿಭಟನೆ ನಡೆಸಿದರು.  ಅವರ ಉದ್ದೇಶ ತುಂಬಾ ಸ್ಪಷ್ಟವಾಗಿತ್ತು. ಸಾರ್ವಜನಿಕ ಸಿನಿಮಾ ಶಿಕ್ಷಣ ಕೈಗೆಟಕುವ ದರದಲ್ಲಿ ಎಲ್ಲರಿಗೂ ದೊರೆಯುವಂತಾಗಬೇಕು ಎನ್ನುವುದು. ಆದರೆ ಖಾಸಗಿ ಸಿನಿಮಾ ಶಿಕ್ಷಣ ಸಂಸ್ಥೆಗಳನ್ನು ತೆರೆದ ಬಂಡವಾಳಿಶಾಹಿ ವ್ಯವಸ್ಥೆಯ ಗಟ್ಟಿ ನಿಲುವಿನಿಂದಾಗಿ ಅವರ ಚಳವಳಿಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಇದೇ ರೀತಿ ನವೆಂಬರ್‌ 2025ಲ್ಲಿ ಪಹ್ಲಾಜ್‌ ನಿಹಾಲಾನಿ ಅವರನ್ನು ಸೆನ್ಸಾರ್‌ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗ, ಈತ ಬಿಜೆಪಿಯ ಪ್ರಚಾರದ ಯಂತ್ರ ಎಂದು ಟೀಕಿಸಿದ FTII ವಿದ್ಯಾರ್ಥಿಗಳು ಪ್ರತಿಭಟಿಸಿದರು. ಪಹ್ಲಾಜ್‌ ನಿಹಾಲಾನಿ ಅವರ ರಾಜಿನಾಮೆ ಪಡೆಯಬೇಕೆಂದು ಆಗಿನ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಮಂತ್ರಿ ರಾಜವರ್ಧನ್‌ ಸಿಂಗ್‌ ಅವರನ್ನು ಒತ್ತಾಯಿಸಿದರು. ಆಗ FTII ವಿದ್ಯಾರ್ಥಿಗಳಿಗೆ ʼರಾಷ್ಟ್ರದ್ರೋಹಿʼ ಪಟ್ಟ ಕಟ್ಟಿ ಕೊಡಬಾರದ ತೊಂದರೆ ನೀಡಿ, ಚಳವಳಿ ಮುರಿಯಲಾಯಿತು.

ಈಗ ಮತ್ತೆ ಹೋರಾಟ ಆರಂಭವಾಗಿರುವುದು ಈ ದೇಶದ ಎಲ್ಲ ವಿದ್ಯಾರ್ಥಿ ಸಮುದಾಯದ ಪರವಾಗಿ. ಅವರಿಗಾಗುತ್ತಿರುವ ಅನ್ಯಾಯಕ್ಕಾಗಿ, ಅವರ  ಭವಿಷ್ಯಕ್ಕಾಗಿ ಅವರು ನಿರುದ್ಯೋಗಿಗಳಾಗಿ ನ್ಯಾಯಾಂಗಕ್ಕೆ ಜಿರಲೆಯಂತೆ ಕಾಣದಿರಲಿ ಎಂಬ ಕಾರಣಕ್ಕೆ. ಈ ಚಳವಳಿ ಎಷ್ಟು ದಿನ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

ಬೀದರ್‌ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ

ಬೀದರ್ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...