ಮೋದಿ ದೇಶದ ಚಿನ್ನ ಮಾರುವುದಕ್ಕೂ ಮಹಾಭಾರತದ ʼಅಶ್ವತ್ಥಾಮ ಹತಃ ಕುಂಜರಃʼ ಸೂತ್ರಕ್ಕೂ ಏನು ಸಂಬಂಧ?

Date:

ಬ್ಲೂಮ್‌ಬರ್ಗ್ ವರದಿ ಮಾಡಿದ್ದು ಮೇ ತಿಂಗಳ ತೀವ್ರ ಆರ್ಥಿಕ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ವಹಿವಾಟಿನ ಬಗ್ಗೆಯಾದರೆ, ಆರ್‌ಬಿಐ ಮತ್ತು ಸರ್ಕಾರ ತಮ್ಮ ಸಮರ್ಥನೆಗೆ ಬಳಸಿಕೊಂಡಿದ್ದು ಏಪ್ರಿಲ್ 26 ರವರೆಗಿನ ಹಳೆಯ ಲೆಕ್ಕಾಚಾರವನ್ನು! ಇದೇ ಕಾರಣಕ್ಕೆ ಆರ್‌ಬಿಐನ ಅರ್ಧ ಸತ್ಯ ಮುಚ್ಚಿಡುವ ಪ್ರಯತ್ನ ಬಯಲಾಗಿದೆ. ಇದೇ ʼಅಶ್ವತ್ಥಾಮ ಹತಃ ಕುಂಜರಃʼ!

- Advertisement -

ಮಹಾಭಾರತದ ಯುದ್ಧಭೂಮಿಯಲ್ಲಿ ದ್ರೋಣಾಚಾರ್ಯರ ರೌದ್ರಾವತಾರವನ್ನು ಕಟ್ಟಿಹಾಕಲು ಶ್ರೀಕೃಷ್ಣ ಹೂಡಿದ ಅತ್ಯಂತ ಚಾಣಾಕ್ಷ ತಂತ್ರ ‘ಅಶ್ವತ್ಥಾಮ ಹತಃ ಕುಂಜರಃ’. ಅಶ್ವತ್ಥಾಮ ಸತ್ತಿದ್ದಾನೆ ಎಂದು ಧರ್ಮರಾಜ ಘೋಷಿಸುತ್ತಾನೆ. ಅದೇ ವೇಳೆ ʼಅವನು ಮನುಷ್ಯನಲ್ಲ, ಆನೆʼ ಎಂಬ ನಿಜವನ್ನೂ ಮೆಲ್ಲಗೆ ಉಸುರುವಾಗಲೇ ಕೃಷ್ಣ ತನ್ನ ಪಾಂಚಜನ್ಯ ಊದಿ ಇಡೀ ಸತ್ಯವನ್ನು ಮರೆಮಾಚಿಬಿಟ್ಟಿದ್ದ. ಪರಿಣಾಮವಾಗಿ, ದ್ರೋಣರು ಆ ಅರ್ಧಸತ್ಯವನ್ನೇ ಸಂಪೂರ್ಣ ಸತ್ಯವೆಂದು ನಂಬಿ ಶಸ್ತ್ರತ್ಯಾಗ ಮಾಡಿದರು. ಕುರುಕ್ಷೇತ್ರದ ದಿಕ್ಕೇ ಬದಲಾಯಿತು. ಇಂದು ಭಾರತದ ಆರ್ಥಿಕ ವಲಯದಲ್ಲೂ ಅಂತಹದ್ದೇ ಒಂದು ಅರ್ಧಸತ್ಯದಾಟ ಶುರುವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಜಾಗತಿಕ ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ಭಾರತದ ಆರ್ಥಿಕತೆಯ ಮೇಲೆ ದೊಡ್ಡದೊಂದು ಬಾಂಬ್ ಷೆಲ್ ಸಿಡಿಸಿ, ʼಮೋದಿ ಸರ್ಕಾರವು ಡಾಲರ್ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಲಕ್ಷ ಕೋಟಿ ರೂಪಾಯಿ ಮೌಲ್ಯದ ಸುಮಾರು 80 ಟನ್ ಚಿನ್ನವನ್ನು ಮಾರಾಟ ಮಾಡಿದೆʼ ಎಂದು ವರದಿ ಮಾಡಿದೆ. ಈ ವರದಿ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರದ ಮಾಹಿತಿ ಸಂಸ್ಥೆಗಳು ಓಡೋಡಿ ಬಂದು ಈ ಸುದ್ದಿಯನ್ನು ಅಲ್ಲಗಳೆದಿವೆ. ಆದರೆ, ಆರ್‌ಬಿಐ ನೀಡಿದ ಈ ಸ್ಪಷ್ಟನೆ ಕೇವಲ ಒಂದು ಆಯ್ದ ಸತ್ಯವೇ, ಅಸಲಿಯತ್ತನ್ನ ಮುಚ್ಚಿಟ್ಟು ಹಳೆಯ ಲೆಕ್ಕವನ್ನೇ ಜನರ ಮುಂದೆ ಒಪ್ಪಿಸಿ ಆರ್‌ಬಿಐ ಶಂಖ ಊದುತ್ತಿದೆಯೇ ಮತ್ತು ಸ್ವಾತಂತ್ರ್ಯದ ನಂತರ ದೇಶದ ಚಿನ್ನದ ಮೇಲೆ ಕಣ್ಣಿಡುವ ಇಂತಹ ದುಸ್ಥಿತಿ ಭಾರತಕ್ಕೆ ಏಕೆ ಒದಗಿತು ಎಂಬ ಪ್ರಶ್ನೆಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಈ ಇಡೀ ಆರ್ಥಿಕ ಬಿಕ್ಕಟ್ಟಿನ ಮೂಲ ಇರುವುದು ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಇರಾನ್ ಯುದ್ಧ ಮತ್ತು ತೈಲ ಸಾಗಣೆಯ ರಾಜಮಾರ್ಗ ʼಸ್ಟ್ರೈಟ್ ಆಫ್ ಹಾರ್ಮುಜ್ʼ ಬಂದ್ ಆಗಿರುವುದರಲ್ಲಿ. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದು ದೇಶವಾಗಿರುವ ಭಾರತಕ್ಕೆ ಯುದ್ಧದ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿ ಭಾರಿ ಪ್ರಮಾಣದ ಡಾಲರ್ ಕೊರತೆ ಎದುರಾಯಿತು. ಇದರ ನೇರ ಪರಿಣಾಮವಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೂಪಾಯಿ ಮೌಲ್ಯವು 1 ಡಾಲರ್ ಎದುರು 95.17 ರ ಸಾರ್ವಕಾಲಿಕ ಪ್ರಪಾತಕ್ಕೆ ಕುಸಿಯಿತು. ಜಾಗತಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ತಮ್ಮ ಬಂಡವಾಳವನ್ನು ತರಾತುರಿಯಲ್ಲಿ ಹಿಂಪಡೆದು ಪಲಾಯನ ಮಾಡಲಾರಂಭಿಸಿದರು. ಇದೇ ಕಾರಣಕ್ಕೆ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಲಿಕ್ವಿಡ್ ಡಾಲರ್ ಸಂಗ್ರಹಕ್ಕೆ ಮೊದಲ ಆದ್ಯತೆ ನೀಡಬೇಕಾಯಿತು. ಇದೇ ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಿದ ಬ್ಲೂಮ್‌ಬರ್ಗ್‌ನ ಹಿರಿಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಭಾರಿ ಲೆಕ್ಕಾಚಾರವೊಂದನ್ನು ಮಂಡಿಸಿದರು. ಮೇ 22ಕ್ಕೆ ಕೊನೆಗೊಂಡ ಕೇವಲ ಎರಡು ವಾರಗಳ ಅವಧಿಯಲ್ಲಿ ಆರ್‌ಬಿಐ ತನ್ನ ಬತ್ತಳಿಕೆಯಿಂದ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಹೊರಹಾಕಿದೆ ಮತ್ತು ಪ್ರತಿಯಾಗಿ 7.5 ಬಿಲಿಯನ್ ಡಾಲರ್ ನಗದು ಕರೆನ್ಸಿಯನ್ನು ಖರೀದಿಸಿದೆ ಎಂದು ಅವರು ವರದಿ ಮಾಡಿದರು. ಕೇಂದ್ರ ಸರ್ಕಾರ ದೇಶದ ಒಳಗಡೆ ಚಿನ್ನದ ಮೇಲಿನ ಆಮದು ಸುಂಕವನ್ನು ದುಪ್ಪಟ್ಟು ಮಾಡಿದ್ದರೂ ಆರ್‌ಬಿಐನ ಆಸ್ತಿ ಮೌಲ್ಯದಲ್ಲಿ ಚಿನ್ನದ ಪಾಲು ಭಾರಿ ಪ್ರಮಾಣದಲ್ಲಿ ಕುಸಿದಿರುವುದು ಈ ಅನುಮಾನಕ್ಕೆ ಬಲವಾದ ಪುರಾವೆಯಾಯಿತು.

ಆದರೆ ಈ ಸುದ್ದಿಯಿಂದ ವಿಚಲಿತಗೊಂಡ ಆರ್‌ಬಿಐ ಅತ್ಯಂತ ವೇಗವಾಗಿ ರಂಗಪ್ರವೇಶ ಮಾಡಿತು. ತನ್ನ ಅಧಿಕೃತ ಪ್ರಕಟಣೆಯಲ್ಲಿ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಸುಳ್ಳು ಮತ್ತು ಆಧಾರ ರಹಿತ, ಆರ್‌ಬಿಐನ ಮಾಸಿಕ ಬುಲೆಟಿನ್‌ನಲ್ಲಿ ಪ್ರಕಟವಾಗಿರುವಂತೆ ದೇಶದ ಭೌತಿಕ ಚಿನ್ನದ ದಾಸ್ತಾನು ಯಾವುದೇ ಬದಲಾವಣೆಯಿಲ್ಲದೆ 880.52 ಮೆಟ್ರಿಕ್ ಟನ್ ಹಾಗೇ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿತು. ಮೇಲ್ನೋಟಕ್ಕೆ ಆರ್‌ಬಿಐ ಹೇಳುತ್ತಿರುವುದು ನೂರಕ್ಕೆ ನೂರು ಸತ್ಯವೆಂಬಂತೆ ಕಂಡರೂ, ಆರ್ಥಿಕ ತಜ್ಞರು ಇಲ್ಲಿಯೇ ಮಹಾಭಾರತದ ಆ ಅರ್ಧಸತ್ಯದ ತಂತ್ರವನ್ನು ಗುರುತಿಸಿದರು.

ಬ್ಲೂಮ್‌ಬರ್ಗ್ ವರದಿ ಮಾಡಿದ್ದು ಮೇ ತಿಂಗಳ ತೀವ್ರ ಆರ್ಥಿಕ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ವಹಿವಾಟಿನ ಬಗ್ಗೆಯಾದರೆ, ಆರ್‌ಬಿಐ ಮತ್ತು ಸರ್ಕಾರ ತಮ್ಮ ಸಮರ್ಥನೆಗೆ ಬಳಸಿಕೊಂಡಿದ್ದು ಏಪ್ರಿಲ್ 26 ರವರೆಗಿನ ಹಳೆಯ ಲೆಕ್ಕಾಚಾರವನ್ನು! ಅಂತಾರಾಷ್ಟ್ರೀಯ ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ‘ಗೋಲ್ಡ್ ಸ್ವ್ಯಾಪ್’ ಅಥವಾ ಅಲ್ಪಾವಧಿ ಚಿನ್ನದ ಸಾಲದ ಒಪ್ಪಂದಗಳೆಂಬ ತಾಂತ್ರಿಕ ಲೂಪ್‌ಹೋಲ್‌ಗಳಿವೆ. ಇದರ ಅಡಿಯಲ್ಲಿ ಆರ್‌ಬಿಐ ತನ್ನ ಭೌತಿಕ ಚಿನ್ನದ ಮಾಲೀಕತ್ವವನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡು (ಹಾಗಾಗಿ ಭೌತಿಕ ದಾಸ್ತಾನು ಬದಲಾಗುವುದಿಲ್ಲ), ಆ ಚಿನ್ನದ ಮೇಲಿನ ಹಣಕಾಸು ಹಕ್ಕುಗಳನ್ನು ಅಂತಾರಾಷ್ಟ್ರೀಯ ಬ್ಯಾಂಕುಗಳಿಗೆ ಒಪ್ಪಿಸಿ ತುರ್ತು ಡಾಲರ್ ಸಾಲ ಪಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆರ್‌ಬಿಐ, ನಾವು ಖಾಯಂ ಆಗಿ ಚಿನ್ನ ಮಾರಿಲ್ಲ ಎಂದು ಜೋರಾಗಿ ಹೇಳುತ್ತಿದೆಯಾದರೂ, ರೂಪಾಯಿಯನ್ನು ಬದುಕಿಸಲು ಚಿನ್ನದ ಮೌಲ್ಯವನ್ನು ತಾತ್ಕಾಲಿಕವಾಗಿ ಅಡವಿಡಲಾಗಿದೆಯೇ ಮತ್ತು ಬ್ಯಾಲೆನ್ಸ್ ಶೀಟ್‌ನಲ್ಲಿ 12 ಬಿಲಿಯನ್ ಡಾಲರ್ ಕುಸಿತವಾಗಿದ್ದಕ್ಕೆ ಅಸಲಿ ಕಾರಣವೇನು ಎಂಬ ವಾಸ್ತವವನ್ನು ಮರೆಮಾಚಲು ಶಂಖ ಊದಿದೆಯೇ ಎನ್ನುವುದು ತರ್ಕಿಸಬೇಕಾದ ವಿಷಯ.

ಇದನ್ನೂ ಓದಿ: ʼಆರ್ಥಿಕ ಸುನಾಮಿʼ ಅಪ್ಪಳಿಸಲಿದೆ ಎಂದ ರಾಹುಲ್‌ ಎಚ್ಚರಿಕೆಯನ್ನ ಜರೆದ ಬಿಜೆಪಿ; ಇತಿಹಾಸ ನೆನಪಿಸಿದ ವಿಪಕ್ಷಗಳು!

ಭಾರತದ ಇತಿಹಾಸದಲ್ಲಿ 1991ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಚಿನ್ನವನ್ನು ಲಂಡನ್ ಬ್ಯಾಂಕ್‌ನಲ್ಲಿ ಅಡವಿಟ್ಟು ದೇಶವನ್ನು ರಕ್ಷಿಸಿದ ಕರಾಳ ದಿನಗಳು ಇನ್ನೂ ಮಾಸಿಲ್ಲ. ಅದಾದ ನಂತರ ಇಂದಿನ 2026ರ ಕಾಲಘಟ್ಟದಲ್ಲಿ ಮತ್ತೊಮ್ಮೆ ಚಿನ್ನದ ಆಸ್ತಿಗೆ ಕೈಹಾಕುವ ಅನಿವಾರ್ಯತೆ ಸೃಷ್ಟಿಯಾಗಿದ್ದು ದೇಶದ ಜನರಲ್ಲಿ ಆತಂಕ ಮೂಡಿಸಿದೆ. ಆದರೆ ಈ ವಿವಾದಕ್ಕೆ ಮತ್ತೊಂದು ಆಳವಾದ ಆಯಾಮ ಕೊಟ್ಟುದ್ದು ವಿದೇಶಿ ಆಸ್ತಿಗಳ ಮುಟ್ಟುಗೋಲು. ಉಕ್ರೇನ್ ಯುದ್ಧದ ಸಮಯದಲ್ಲಿ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿದೇಶಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಕಂಡು ಎಚ್ಚೆತ್ತಿದ್ದ ಆರ್‌ಬಿಐ, ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್‌ನಲ್ಲಿದ್ದ ತನ್ನ ಚಿನ್ನವನ್ನು ಸದ್ದಿಲ್ಲದೆ ಭಾರತದಕ್ಕೆ ಮರಳಿ ತರುತ್ತಿದೆ. ಮಾರ್ಚ್ ಅಂತ್ಯದ ವೇಳೆಯವರೆಗೂ ತನ್ನ ಒಟ್ಟು ಚಿನ್ನದ ಶೇಕಡಾ 77 ರಷ್ಟನ್ನು ದೇಶದ ಒಳಗಿನ ವಾಲ್ಟ್‌ಗಳಲ್ಲೇ ಸುರಕ್ಷಿತವಾಗಿ ಇಟ್ಟುಕೊಂಡಿದೆ. ಜಾಗತಿಕ ಯುದ್ಧದ ಭೀತಿಯ ನಡುವೆ ತನ್ನ ಆಸ್ತಿಯನ್ನು ತನ್ನದೇ ನೆಲದಲ್ಲಿ ಭದ್ರಪಡಿಸಿಕೊಳ್ಳುತ್ತಿರುವ ಸರ್ಕಾರ, ಅದೇ ಸಮಯದಲ್ಲಿ ಅದನ್ನು ಸಂಪೂರ್ಣವಾಗಿ ಮಾರಿ ಕೈತೊಳೆದುಕೊಳ್ಳುತ್ತದೆ ಎಂಬ ವಾದ ತಾರ್ಕಿಕವಾಗಿ ತಪ್ಪಾಗುತ್ತದೆ. ಸರ್ಕಾರ ಈಗಾಗಲೇ ಇಂಧನ ಬೆಲೆಗಳನ್ನು ಏರಿಸಿ, ಅಮೂಲ್ಯ ಲೋಹಗಳ ಆಮದು ಸುಂಕವನ್ನು ಹೆಚ್ಚಿಸಿ ಆರ್ಥಿಕತೆಯನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆರ್‌ಬಿಐನ ಈ ಆಕ್ರಮಣಕಾರಿ ಮಾರುಕಟ್ಟೆ ಹಸ್ತಕ್ಷೇಪದ ಕಾರಣದಿಂದಾಗಿಯೇ ಭಾರತೀಯ ರೂಪಾಯಿ ಏಷ್ಯಾದ ಇತರ ದೇಶಗಳ ಕರೆನ್ಸಿಗಳಿಗಿಂತ ಉತ್ತಮವಾಗಿ ರಕ್ಷಿಸಲ್ಪಟ್ಟಿದೆ ಎನ್ನುತ್ತವೆ ಇನ್ನೂ ಕೆಲ ವರದಿಗಳು.

ಈ ಆರ್ಥಿಕ ಕುರುಕ್ಷೇತ್ರದಲ್ಲಿ ಯಾರೊಬ್ಬರೂ ಸಂಪೂರ್ಣ ಸುಳ್ಳು ಹೇಳುತ್ತಿಲ್ಲ, ಆದರೆ ಇಬ್ಬರೂ ತಮಗೆ ಬೇಕಾದ ಅರ್ಧಸತ್ಯವನ್ನು ಮಾತ್ರ ಜಗತ್ತಿನ ಮುಂದಿಡುತ್ತಿದ್ದಾರೆ ಎನ್ನುವುದಂತೂ ಸತ್ಯ. ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ಚಿನ್ನದ ಮೌಲ್ಯ ಕುಸಿತದ ಅರ್ಧಸತ್ಯವನ್ನು ಮಾತ್ರ ಮುನ್ನೆಲೆಗೆ ತಂದು ದೇಶದ ಚಿನ್ನ ಮಾರಾಟವಾಗಿದೆ ಎಂಬ ಆತಂಕದ ವಾತಾವರಣ ಸೃಷ್ಟಿಸಿದರೆ, ಇತ್ತ ಆರ್‌ಬಿಐ ಭೌತಿಕ ಚಿನ್ನದ ತೂಕ ಭದ್ರವಾಗಿದೆ ಎಂಬ ಇನ್ನೊಂದು ಅರ್ಧಸತ್ಯವನ್ನು ಮಂಡಿಸಿ ದೇಶದ ವಿಶ್ವಾಸ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಸದ್ಯ ಜೂನ್ ತಿಂಗಳಲ್ಲಿ ಆರ್‌ಬಿಐನ ಪೂರ್ಣ ಪ್ರಮಾಣದ ಆಸ್ತಿ ನಿರ್ವಹಣಾ ವರದಿ ಅಧಿಕೃತವಾಗಿ ಹೊರಬಂದಾಗ ಮಾತ್ರ ಈ ‘ನರೋ ವಾ ಕುಂಜರೋ ವಾ’ (ನರನೋ ಆನೆಯೋ) ಗೊಂದಲದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಪ್ಯಾರಾ ಗೇಮ್ಸ್: 5ನೇ ಸ್ಥಾನಕ್ಕೇರಿದ ಭಾರತ, 62 ಪದಕಗಳ ಸಾಧನೆಯೊಂದಿಗೆ ಅಥ್ಲೆಟಿಕ್ಸ್ ಕ್ರೀಡಾಪಟುಗಳ ಪರಾಕ್ರಮ

ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026 ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು...

​ಜೆಫ್ರಿ ಎಪ್‌ಸ್ಟೀನ್-ಹರ್ದೀಪ್ ಪುರಿ ಭೇಟಿ: ಸಚಿವರ ಮೇಲಿನ ಆರೋಪಕ್ಕೆ ಪ್ರಧಾನಿ ಮೌನವೇಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಅಮೆರಿಕದ ಕುಖ್ಯಾತ ಅಪರಾಧಿ ಜೆಫ್ರಿ ಎಪ್‌ಸ್ಟೀನ್...

ಕಲಬುರಗಿ | ಕ್ಷೇತ್ರಗಳ ಮರುವಿಂಗಡಣೆ ಇಲ್ಲದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಚಾರದಲ್ಲಿ...

​7 ದಿನಗಳ ಜೈಲುವಾಸ ಅಂತ್ಯ: ಕೊನೆಗೂ ಬಿಡುಗಡೆಯಾದ ಕಾಕ್ರೋಚ್ ಜನತಾ ಪಾರ್ಟಿ ನಾಯಕರು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕಾಕ್ರೋಚ್...