ಕಿವಿಯೋಲೆಯಾಗಿ ‘ಟೊಮ್ಯಾಟೋ’ ಧರಿಸಿದ ನಟಿ ಉರ್ಫಿ ಜಾವೇದ್ : ನೆಟ್ಟಿಗರಿಂದ ಟ್ರೋಲ್

Date:

  • ‘ಟೊಮ್ಯಾಟೋ’ ಗೌರವ ಹಾಳಾಯ್ತು ಎಂದ ನೆಟ್ಟಿಗರು
  • ಬೆಲೆ ಏರಿಕೆಯ ನಡುವೆ ಟೊಮ್ಯಾಟೋ ಕಿವಿಯೋಲೆ ಫೋಟೋ ಪ್ರಕಟಿಸಿದ್ದ ನಟಿ

ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ನಾನಾ ಹೋಟೆಲ್‌ಗಳು ಟೊಮ್ಯಾಟೊ ಬಳಸಿ ಮಾಡುವ ಪದಾರ್ಥಗಳನ್ನು ಕಡಿಮೆ ಮಾಡಿವೆ. ಕೆಲವು ರೈತರು ಟೊಮ್ಯಾಟೊ ಬೆಳೆ ಬೆಳೆದು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಹಲವು ಕಡೆ ಕಳ್ಳತನ ಪ್ರಕರಣ ಕೂಡ ನಡೆಯುತ್ತಿದೆ. ಈ ಎಲ್ಲ ‘ಟೊಮ್ಯಾಟೋ’ ಬೆಳವಣಿಗೆಗಳ ನಡುವೆ ನಟಿ ಉರ್ಫಿ ಜಾವೇದ್ ಕೂಡ ‘ಟೊಮ್ಯಾಟೋ’ಗಾಗಿ ಸುದ್ದಿಯಾಗಿದ್ದಾರೆ.

- Advertisement -

ತನ್ನ ವಿಚಿತ್ರ ವೇಷಭೂ‍‍ಷಣಗಳಿಂದ ಸದಾ ಸುದ್ದಿಯಲ್ಲಿರುವ ನಟಿ, ಮಾಡೆಲ್ ಉರ್ಫಿ ಜಾವೇದ್, ಟೊಮ್ಯಾಟೋವನ್ನೇ ಕಿವಿಯೋಲೆಯಾಗಿ ಧರಿಸಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ನೆಟ್ಟಿಗರಿಂದ ಟ್ರೋಲ್‌ಗೊಳಗಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಯಾವುದೇ ವಸ್ತುವಿನ ಬೆಲೆ ದುಬಾರಿ ಆದಾಗ ಅದನ್ನು ಚಿನ್ನಕ್ಕೆ ಹೋಲಿಸಿ ಮಾತನಾಡುವುದು ಸಾಮಾನ್ಯ ಸಂಗತಿ. ಈಗ ಟೊಮ್ಯಾಟೋ ಕೂಡ ಅದೇ ರೀತಿ ಆಗಿದೆ. ಹಾಗಾಗಿ, ‘ಟ್ಯೊಮ್ಯಾಟೋನೇ ಈಗಿನ ಹೊಸ ಬಂಗಾರ’ ಎಂಬ ಕ್ಯಾಪ್ಷನ್​ ಬರೆದು ಉರ್ಫಿ ಜಾವೇದ್​ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದರು.

ಕೈಯಲ್ಲೊಂದು ಟೊಮ್ಯಾಟೊ ಹಿಡಿದುಕೊಂಡು, ಕಿವಿಯೋಲೆಯಾಗಿ ಧರಿಸಿ ಪೋಸ್ ಕೊಟ್ಟಿರುವ ನಟಿಯ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಜೊತೆಗೆ ಎಂದಿನಂತೆ ಟ್ರೋಲ್‌ಗೂ ಒಳಗಾಗಿದೆ.

ಫೋಟೋಗೆ ಕಮೆಂಟ್ ಮಾಡಿರುವ ಹಲವರು, ‘ಬೆಲೆ ಏರಿಕೆಯಾದಾಗ ಟೊಮ್ಯಾಟೋಗೂ ಒಂದು ಗೌರವ ಬಂದಿತ್ತು. ನೀವು ಈ ರೀತಿ ಧರಿಸಿದ ಮೇಲೆ ಅದು ಕೂಡ ಹಾಳಾಯ್ತು’ ಎಂದು ಟ್ರೋಲ್ ಮಾಡಿದ್ದರೆ, ‘ನಿಮ್ಮ ಐಡಿಯಾ ಮೆಚ್ಚಬೇಕು. ಆದರೆ, ನಿಮ್ಮ ಕಿವಿಯೋಲೆ ನಿಮಗೆ ಭಾರವಾಗ್ತಿಲ್ವಾ’ ಎಂದು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...