ಐಶ್ವರ್ಯಾ ರಜನಿಕಾಂತ್‌ ಮನೆಯಲ್ಲಿ ಚಿನ್ನಾಭರಣ ಕಳವು : ಕೆಲಸದವರ ಮೇಲೆ ಶಂಕೆ

Date:

ತಮಿಳಿನ ಹಿರಿಯ ನಟ ರಜನಿಕಾಂತ್‌ ಅವರ ಹಿರಿಯ ಪುತ್ರಿ, ಚಿತ್ರ ನಿರ್ಮಾಪಕಿ ಐಶ್ವರ್ಯಾ ಅವರ ಮನೆಯಲ್ಲಿ 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಳುವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಐಶ್ವರ್ಯಾ ಅವರು ಚೆನ್ನೈನ ತೈನಂಪೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐಶ್ವರ್ಯಾ, 2019ರಲ್ಲಿ ತಮ್ಮ ಸಹೋದರಿ ಸೌಂದರ್ಯ ಅವರ ಮದುವೆ ಸಂದರ್ಭದಲ್ಲಿ ಒಡವೆಗಳನ್ನು ಬಳಸಿ ಪೋಯಿಸ್‌ ಗಾರ್ಡನ್‌ನಲ್ಲಿರುವ ತಂದೆಯ ಮನೆಯಲ್ಲಿದ್ದ ಲಾಕರ್‌ನಲ್ಲಿಟ್ಟಿದ್ದರು ಎನ್ನಲಾಗಿದೆ. 2019ರಿಂದ ಕಳೆದ ಫೆಬ್ರವರಿಯ ನಡುವೆ ಆಭರಣಗಳಿದ್ದ ಲಾಕರ್‌ ಮೂರು ಕಡೆ ಸ್ಥಳಾಂತರಗೊಂಡಿದೆ. 2021ರ ಆಗಸ್ಟ್‌ನಲ್ಲಿ ಪೋಯಿಸ್‌ ಗಾರ್ಡನ್‌ ಮನೆಯಿಂದ ತಮ್ಮ ಪತಿ ಧನುಷ್‌ ವಾಸವಿದ್ದ ಸಿಐಟಿ ನಗರದ ಮನೆಗೆ ಐಶ್ವರ್ಯಾ, ಲಾಕರ್‌ ಕೊಂಡೊಯ್ದಿದ್ದಾರೆ. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಪತಿಯ ಮನೆಯಿಂದ ತಾವು ವಾಸವಿರುವ ಸೆಂಟ್‌ ಮೇರೀಸ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಲಾಕರ್‌ ಅನ್ನು ಸ್ಥಳಾಂತರಿಸಿದ್ದಾರೆ. ಕೊನೆಯದಾಗಿ 2022ರ ಏಪ್ರಿಲ್‌ನಲ್ಲಿ ಮತ್ತೆ ಅದೇ ಲಾಕರ್‌ ಅನ್ನು ಪೋಯಿಸ್‌ ಗಾರ್ಡನ್‌ನಲ್ಲಿರುವ ಮನೆಗೆ ವಾಪಸ್‌ ಕೊಂಡೊಯ್ಯಲಾಗಿದೆ.

ಈ ನಾಲ್ಕು ವರ್ಷದ ಅವಧಿಯಲ್ಲಿ ಐಶ್ವರ್ಯಾ ಲಾಕರ್‌ನಲ್ಲಿನ ಒಡವೆಗಳನ್ನು ಬಳಸಿದ್ದಾರಾದರೂ ಕೆಲವು ಒಡವೆಗಳು ಕಾಣೆಯಾಗಿರುವ ಬಗ್ಗೆ ಅವರ ಅರಿವಿಗೆ ಬಂದಿಲ್ಲ. ಕಳೆದ ಫೆಬ್ರವರಿ 10ರಂದು ಲಾಕರ್‌ ತೆರೆದು ಪರಿಶೀಲಿಸಿದಾಗ 3 ಲಕ್ಷ 60 ಸಾವಿರ ಮಾಲ್ಯದ ಚಿನ್ನದ ಬಳೆಗಳು, ವಜ್ರದ ಹಾರ, ಹವಳದ ಸರಗಳು ಕಾಣೆಯಾಗಿರುವುದು ಕಂಡು ಬಂದಿದೆ.

ಘಟನೆಗೆ ಸಂಬಂಧಿಸಿ ಐಶ್ವರ್ಯಾ ಅವರು ತೈನಂಪೇಟ್‌ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಆರೋಪದಡಿ ದೂರು ದಾಖಲಿಸಿದ್ದು, ತಮ್ಮ ಮನೆಯಲ್ಲಿ ಸಹಾಯಕಿಯರಾಗಿ ಕೆಲಸ ಮಾಡುತ್ತಿರುವ ಈಶ್ವರಿ, ಲಕ್ಷ್ಮೀ ಮತ್ತು ಕಾರು ಚಾಲಕ ವೆಂಕಟ್‌ ಎಂಬುವವರ ಮೇಲೆ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲುಗಿನ ಹಿರಿಯ ನಿರ್ದೇಶಕ ಕೆ. ವಾಸು ಇನ್ನಿಲ್ಲ

ಮೆಗಾಸ್ಟಾರ್‌ ಚಿರಂಜೀವಿ ಚೊಚ್ಚಲ ಚಿತ್ರ ನಿರ್ದೇಶಿಸಿದ್ದ ವಾಸು ಜಗ್ಗೇಶ್‌ ನಟನೆಯ ʼಸರ್ವರ್‌ ಸೋಮಣ್ಣʼ...

ಮಂತ್ರಿಯಾದ ಮಧು ಬಂಗಾರಪ್ಪ : ಶ್ರಮದ ಪ್ರತಿಫಲ ಎಂದ ಶಿವಣ್ಣ

ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಧು ಬಂಗಾರಪ್ಪ ಚುನಾವಣೆಯಲ್ಲಿ ಕಾಂಗ್ರೆಸ್‌...

ಯಶ್‌ ಜೊತೆಗೆ ನರ್ತನ್‌ ಸಿನಿಮಾ ಸದ್ಯಕ್ಕಿಲ್ಲ

ಶಿವರಾಜ್‌ ಕುಮಾರ್‌ ನಟನೆಯ ʼಭೈರತಿ ರಣಗಲ್‌ʼ ಸಿನಿಮಾದಲ್ಲಿ ನರ್ತನ್‌ ಬ್ಯುಸಿ ಕೆಜಿಎಫ್‌-2 ಬಿಡುಗಡೆಯಾಗಿ...

ʼದಿ ಡೈರಿ ಆಫ್‌ ವೆಸ್ಟ್‌ ಬೆಂಗಾಲ್‌ʼ ಚಿತ್ರದ ನಿರ್ದೇಶಕನಿಗೆ ಕೋಲ್ಕತ್ತಾ ಪೊಲೀಸರಿಂದ ನೋಟಿಸ್‌

ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರಿಯಾಗಿಸಿ ಸಿನಿಮಾ ಮಾಡಿದ ಸನೋಜ್‌ ಟ್ರೈಲರ್‌ ಬಿಡುಗಡೆಯಾದ...