ದೇಶ ಬಿಡುವಂತೆ ನೀಡಿದ್ದ ನೋಟಿಸ್‌ಗೆ ತಡೆ: ನಟ ಇಮ್ರಾನ್ ಖಾನ್‌ಗೆ ಬಾಂಬೆ ಹೈಕೋರ್ಟ್ ರಿಲೀಫ್

Date:

​ಅಕ್ಟೋಬರ್ 28ರೊಳಗೆ (ನಾಳೆ) ಭಾರತ ತೊರೆಯುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ್ದ ನೋಟಿಸ್‌ ಅನ್ನು ಪ್ರಶ್ನಿಸಿ ಬಾಲಿವುಡ್ ನಟ ಇಮ್ರಾನ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಎಫ್‌ಆರ್‌ಆರ್‌ಒ ಆದೇಶಕ್ಕೆ ನವೆಂಬರ್ 2ರವರೆಗೆ ತಡೆಯಾಜ್ಞೆ ನೀಡಿ ನ್ಯಾಯಾಲಯ ಆದೇಶಿಸಿದೆ.

- Advertisement -

​ಮಂಗಳವಾರ ಈ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಹಾಗೂ ನ್ಯಾಯಮೂರ್ತಿ ಅದ್ವೈತ್ ಸೇಠ್ನಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೈಗೆತ್ತಿಕೊಂಡಿತು. ಈ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG), ನವೆಂಬರ್ 2ರ ಸೋಮವಾರದವರೆಗೆ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಅಲ್ಲದೆ, ಅಲ್ಲಿಯವರೆಗೆ ನಟನ ವಿರುದ್ಧ ಯಾವುದೇ ಬಲವಂತದ ಅಥವಾ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

​ಈ ವೇಳೆ ಇಮ್ರಾನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಧೋಂಡ್, ಎಫ್‌ಆರ್‌ಆರ್‌ಒ ನಿರ್ದೇಶನದ ಪ್ರಕಾರ ತಮ್ಮ ಕಕ್ಷಿದಾರರು ಅಕ್ಟೋಬರ್ 28ರಂದೇ ದೇಶ ಬಿಡಬೇಕಿದೆ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ, ‘ಸೋಮವಾರದವರೆಗೆ ಏನೂ ಆಗುವುದಿಲ್ಲ, ಇದೊಂದು ಮೌಖಿಕ ಭರವಸೆ’ ಎಂದರು. ಇದನ್ನು ಪರಿಗಣಿಸಿದ ನ್ಯಾಯಾಲಯವು, ಪ್ರಕರಣದ ವಿಚಾರಣೆಯನ್ನು ನವೆಂಬರ್ 2ರ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದು, ಅಲ್ಲಿಯವರೆಗೆ ಎಫ್‌ಆರ್‌ಆರ್‌ಒ ಆದೇಶವನ್ನು ಅಮಾನತಿನಲ್ಲಿಡಲು ಅಧಿಕೃತವಾಗಿ ಸೂಚಿಸಿದೆ.
​
ಅಕ್ಟೋಬರ್ 14ರಂದು ಎಫ್‌ಆರ್‌ಆರ್‌ಒ ಜಾರಿ ಮಾಡಿದ್ದ ‘ಭಾರತ ತೊರೆಯಿರಿ’ (Leave India Notice) ನೋಟಿಸ್ ಅನ್ನು ರದ್ದುಗೊಳಿಸುವಂತೆ ಕೋರಿ ಇಮ್ರಾನ್ ಖಾನ್ ಅಕ್ಟೋಬರ್ 17ರಂದು ನ್ಯಾಯಾಲಯದ ಮೊರೆ ಹೋಗಿದ್ದರು. ಗಡೀಪಾರು, ಲುಕ್ ಔಟ್ ನೋಟಿಸ್ ಹಾಗೂ ತಮ್ಮ ಸಾಗರೋತ್ತರ ಭಾರತೀಯ ನಾಗರಿಕ (OCI) ಸ್ಥಾನಮಾನಕ್ಕೆ ಧಕ್ಕೆ ತರುವುದರ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡುವಂತೆಯೂ ಅವರು ಈ ಅರ್ಜಿಯಲ್ಲಿ ಮನವಿ ಮಾಡಿದ್ದರು.

​ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಅಲ್ಪಕಾಲ ವಶಕ್ಕೆ ಪಡೆದಿದ್ದರು. ಜತೆಗೆ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದ ಆರೋಪದಡಿ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರು ನಟನ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಈ ನೋಟಿಸ್ ಜಾರಿಯಾಗಿತ್ತು. ಕೇವಲ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದ್ದಕ್ಕಾಗಿಯೇ ತಮಗೆ ಈ ನೋಟಿಸ್ ನೀಡಲಾಗಿದೆ ಎಂದು ಖಾನ್ ವಾದಿಸಿದ್ದಾರೆ.

​ಅಧಿಕಾರಿಗಳು ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಹಾಗೂ ರಾಜಕೀಯ ಪ್ರೇರಿತ ಸಾಮಾಜಿಕ ಜಾಲತಾಣಗಳ ಅಭಿಯಾನದ ಒತ್ತಡಕ್ಕೆ ಮಣಿದು, ಮುಂಚಿತವಾಗಿ ವಿಚಾರಣೆಗೆ ಅವಕಾಶ ನೀಡದೆ ತಮ್ಮ ಶಾಸನಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಇಮ್ರಾನ್ ಖಾನ್ ದೂರಿದ್ದಾರೆ. ಒಸಿಐ (OCI) ಸ್ಥಾನಮಾನವನ್ನು ರದ್ದುಗೊಳಿಸುವ ಮುನ್ನ ‘ಕಾರಣ ಕೇಳಿ ನೋಟಿಸ್’ ನೀಡುವುದು ಹಾಗೂ ವಿಚಾರಣೆಗೆ ಅವಕಾಶ ಒದಗಿಸುವುದನ್ನು ಕಡ್ಡಾಯಗೊಳಿಸುವ ಪೌರತ್ವ ಕಾಯ್ದೆಯ ಸೆಕ್ಷನ್ 7D ನಿಯಮವನ್ನು ಎಫ್‌ಆರ್‌ಆರ್‌ಒ ಉಲ್ಲಂಘಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

​ಏತನ್ಮಧ್ಯೆ, ಎಫ್‌ಆರ್‌ಆರ್‌ಒ ಅಕ್ಟೋಬರ್ 17ರಂದು ಸೆಕ್ಷನ್ 7D ಅಡಿಯಲ್ಲಿ ಒಸಿಐ ರದ್ದತಿಗೆ ಸಂಬಂಧಿಸಿದಂತೆಯೂ ಪ್ರತ್ಯೇಕವಾಗಿ ‘ಕಾರಣ ಕೇಳಿ ನೋಟಿಸ್’ ಜಾರಿ ಮಾಡಿದೆ. ಆದರೆ, ಪ್ರಸ್ತುತ ಖಾನ್ ಸಲ್ಲಿಸಿರುವ ಅರ್ಜಿಯಲ್ಲಿ ಈ ನಿರ್ದಿಷ್ಟ ನೋಟಿಸ್ ಅನ್ನು ಪ್ರಶ್ನಿಸಿಲ್ಲ. ಈ ಪ್ರಕರಣದ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲಾ ಆಂತರಿಕ ದಾಖಲೆಗಳನ್ನು ಹಾಜರುಪಡಿಸುವಂತೆಯೂ ಖಾನ್ ಕೋರಿದ್ದಾರೆ. ಎಂಜೆಡ್ಎಂ ಲೀಗಲ್‌ನ ವಕೀಲರಾದ ಜುಲ್ಫಿಕರ್ ಮೆಮನ್, ಪರ್ವೇಜ್ ಮೆಮನ್ ಮತ್ತು ಚಿರಾಗ್ ನಾಯ್ಕ್ ಅವರು ನಟನ ಪರ ಹಾಜರಾಗಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ವ್ಯಾಪಾರದ ಮೇಲೆ ರ‍್ಯಾಲಿ ಬಿಸಿ; ರಾಹುಲ್ ಗಾಂಧಿಗೆ ಮತ್ತೊಮ್ಮೆ ಪತ್ರ ಬರೆದ ದೆಹಲಿ ವ್ಯಾಪಾರಿಗಳ ಸಂಘ

ದೆಹಲಿಯಲ್ಲಿ ನವೆಂಬರ್ 1ರಂದು ನಡೆಯಲಿರುವ ಇಂಡಿಯಾ (INDIA) ಮೈತ್ರಿಕೂಟದ ಬೃಹತ್ ಪ್ರತಿಭಟನಾ...

ತಮಿಳುನಾಡಿನ ಥೇಣಿ ಕಾರಾಗೃಹದಿಂದ 17 ಖೈದಿಗಳ ಪರಾರಿ: ನಾಟಕವಾಡಿ ಸಿಬ್ಬಂದಿ ಮೇಲೆ ಹಲ್ಲೆ

ತಮಿಳುನಾಡಿನ ಥೇಣಿ ಉಪ ಕಾರಾಗೃಹದಲ್ಲಿ ಸೋಮವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ 17...

‌ಅ.28ರಂದು ಅಪ್ಪಳಿಸಲಿರುವ ʼಅರ್ನಬ್ʼ ಚಂಡಮಾರುತ | 89 ಸಾವಿರ ಜನರ ಸ್ಥಳಾಂತರ; ಆಂಧ್ರದಲ್ಲಿ ಹೈ ಅಲರ್ಟ್

ಆಂಧ್ರಪ್ರದೇಶದ ಕರಾವಳಿಗೆ ‘ಅರ್ನಬ್’ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ...