ಮಾಸ್‌ ಸಿನಿಮಾಗಳ ನಡುವೆ ʼಭೂತ್‌ಬಂಗ್ಲಾʼ ಆಗಲಿದೆಯಾ ಹಾರರ್‌ ಹಿಟ್‌?

Date:

ಮಾಸ್‌ ಕಲ್ಚರ್‌ ಸಿನಿಮಾಗಳ ಹಾವಳಿಯ ನಡುವೆ ಬಾಲಿವುಡ್‌ ನಿರ್ದೇಶಕ ಪ್ರಿಯದರ್ಶನ್‌ ಹಾಗೂ ನಟ ಅಕ್ಷಯ್‌ ಕುಮಾರ್‌ ಭೂತ್ ಬಂಗ್ಲಾ ಸಿನಿಮಾದ ಜೊತೆ  ತೆರೆ ಮೇಲೆ ಬರಲಿದ್ದಾರೆ. ಧುರಂದರ್‌ ಸಿನಿಮಾದ ಸದ್ದು ಗದ್ದಲದ ನಡುವೆ ಈ ಹಾಸ್ಯ ಪ್ರಧಾನ ಹಾರರ್‌ ಸಿನಿಮಾ ಸಿನಿ ಮಂದಿಯಲ್ಲಿ ಕುತೂಹಲ ಹುಟ್ಟಿಸಿದೆ.

- Advertisement -

ಧುರಂದರ್‌ 2 ಸಿನಿಮಾದ ಗೆಲುವಿನ ನಡುವೆ ಈ ಸಿನಿಮಾ ತೆರೆಕಾಣುತ್ತಿರುವ ಕುರಿತು ಯಾವ ಬಗೆಯ ಕಾಳಜಿ ಅಥವಾ ಅಸಮಧಾನಗಳಿಲ್ಲ ಎಂದು ಚಿತ್ರದ ನಿರ್ದೇಶಕ ಪ್ರಿಯದರ್ಶನ್‌ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಈ ಸಿನಿಮಾ ಬಾಕ್ಸ್‌ ಆಫಿಸ್‌ ಸೂರೆಗೊಳ್ಳುತ್ತದೋ ಇಲ್ಲವೋ ಎಂಬುದರ ಕುರಿತು ನನಗೆ ಯಾವ ಚಿಂತೆಯು ಇಲ್ಲ. ಹಾರರ್‌ ಕಾಮಿಡಿ ಸಿನಿಮಾದ ಪ್ರೇಕ್ಷಕ ವರ್ಗ ದೊಡ್ಡದಿದೆ ಎಂದು ಹೇಳಿದ್ದಾರೆ. ಬಾರ್ಡರ್‌ ಅಥವಾ ದುರಂದರ್‌ ಸಿನಿಮಾದ ಕಂಟೆಂಟ್‌ ಈ ಚಿತ್ರದಲ್ಲಿ ಇಲ್ಲದಿರಬಹುದು ಆದರೆ ಜನರನ್ನು ಮನರಂಜಿಸುವ ಅವರಲ್ಲಿ ಕುತೂಹಲ ಉಳಿಸುವ ಸನ್ನಿವೇಶಗಳು ಇರುವ  ಚಿತ್ರಗಳು ಜನರನ್ನು ತಲುಪುತ್ತವೆ ಎಂದಿದ್ದಾರೆ.

Akshay Kumar and Priyadarshan

ಇತ್ತೀಚಿನ ಬಾಲಿವುಡ್‌ ಬಾಕ್ಸ್‌ ಆಫಿಸ್‌ ಹಿಟ್‌ ಚಿತ್ರಗಳಾದ ಬಾರ್ಡರ್‌ ಹಾಗೂ ಧುರಂದರ್‌ 2 ಕೋಟಿ ಕೋಟಿ ಗಳಿಸಿ ಭಾರತೀಯ ಸಿನಿಮಾದ ಬಿಗ್ ಹಿಟ್‌ ಚಿತ್ರಗಳ ಸರಣಿ ಸೇರಿದವು. ಬಾರ್ಡರ್‌ ‌ 464 ಕೋಟಿ ಗಳಿಸಿದರೆ, ಧುರಂದರ್‌ ಬಿಡುಗಡೆಯಾದ ದಿನಗಳಲ್ಲೇ 850 ಕೋಟಿ ಬಾಚಿಕೊಂಡಿದೆ.

ಇಂತಹ ಮಾಸ್‌  ಹಿಟ್‌ಗಳ ನಡುವೆ ತಾವು ನಿರ್ದೇಶಸಿರುವ ಭೂತ್‌ಬಂಗ್ಲಾ ಚಿತ್ರವು ಪ್ರೇಕ್ಷಕರಿಗೆ ಹಿಡಿಸುತ್ತದೆ. ಸ್ವಕುಟುಂಬ ಸಮೇತರಾಗಿ ಬಂದು  ಸಿನಿಮಾ ನೋಡಲು ಯಾವ ಮುಜುಗರವೂ ಆಗದು ,ಪೋಷಕರು ಈ ಸಿನಿಮಾಗೆ ತಮ್ಮ ಮಕ್ಕಳನ್ನು ಕರೆದು ಕೊಂಡು ಬರುವುದು ಹೇಗೆ ಎಂಬ ಯೋಚನೆಯೆ ಬೇಡ ಎಂದಿದ್ದಾರೆ.

ನನ್ನ ಸಿನಿಮಾದಲ್ಲಿ ಡಬಲ್‌, ಮೀನಿಂಗ್‌ ಎನಿಸುವ ಯಾವ  ಸಂಭಾಷಣೆಗಳು ದೃಷ್ಯಗಳು ಇಲ್ಲ. ಅಸಭ್ಯ ಎನಿಸುವ ಸೀನ್‌ಗಳು ಇಲ್ಲವೇ ಇಲ್ಲ. ಪೋಷಕರಿಗೆ ಚಿತ್ರಮಂದಿರದ ಒಳಗೆ ಮಕ್ಕಳ ಜೊತೆಗೆ ಕುಳಿತಾಗ ಮುಜುಗರ ಉಂಟಾಗುವ ಹಾಗೆ ಮಾಡಲಾರೆ. ನನ್ನ ಮೊದಲನೆಯ ಸಿನಿಮಾದಿಂದ ಇಲ್ಲಿಯವರೆಗೂ ಈ ಮಾತಿಗೆ ಬದ್ಧನಿದ್ದೇನೆ ಎಂದಿದ್ದಾರೆ.

Bhooth Bangla Teaser 2

ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಅಕ್ಷಯ್‌ ಕುಮಾರ್‌ ಮಾತನಾಡಿ ಸಿನಿಮಾ ವಿಭಿನ್ನ ಪ್ರೇಕ್ಷಕ ವರ್ಗವನ್ನು ಒಳಗೊಂಡಿದೆ. ಧುರಂದರ್‌ ಸಿನಿಮಾ ವಯಸ್ಕ ಪ್ರೇಕ್ಷಕರನ್ನು ಗಮನದಲ್ಲಿರಿಸಿ ಮೂಡಿ ಬಂದರೆ ಭೂತ್‌ಬಂಗ್ಲಾ ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರವಾಗಿದೆ. ನಾನು ಸಿನಿಮಾ ಆಯ್ಕೆ ಮಾಡುವಾಗ ಅದು ಯಾವ ವರ್ಗದ ಸಿನಿಮಾ ಎಂದು ನೋಡುವುದಿಲ್ಲ ಬದಲಿಗೆ ಕತೆಗೆ ನನ್ನ ಮೊದಲ ಆದ್ಯತೆ ಎಂದಿದ್ದಾರೆ.

ಉಳಿದಂತೆ ಸಿನಿಮಾವು ಏಪ್ರಿಲ್‌ 10 ರಂದು ತೆರೆ ಕಾಣಲಿದ್ದು ದಿವಂಗತ  ನಟ,ನಿರ್ದೇಶಕ ಅಸರಾನಿ, ಹಿರಿಯ ಕಲಾವಿದರಾದ ನಟಿ ತಬು, ನಟ ಮಿಥುನ್‌ ಚಕ್ರವರ್ತಿ, ಹಾಗೂ ಉದಯೋನ್ಮುಖ ಕಲಾವಿದೆಯರಾದ ವಾಮಿಖ ಗಬ್ಬಿ, ಮಿಥಿಲಾ ಪಾಲಕರ್‌ ಇನ್ನಿತರ ಕಲಾವಿದರನ್ನು ಚಿತ್ರ ತಂಡ ಒಳಗೊಂಡಿದೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...