ಕೊರೋನಾ ವೇಳೆ ನನ್ನ ಮತ್ತು ತಾಯಿಯ ಜೀವ ಉಳಿಸಿದವರು ಆಶಾ ಕಾರ್ಯಕರ್ತೆಯರು: ಹೋರಾಟಗಾರರ ಬೆನ್ನಿಗೆ ನಿಂತ ವಿನೋದ್ ರಾಜ್

Date:

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಿರಿಯ ನಟ ವಿನೋದ್ ರಾಜ್ ಅವರು ಬೆಂಬಲ ಸೂಚಿಸಿದ್ದಾರೆ. ಕೊರೋನಾ ವೇಳೆ ನನ್ನ ಮತ್ತು ತಾಯಿಯ ಜೀವ ಉಳಿಸಿದವರು ಆಶಾ ಕಾರ್ಯಕರ್ತೆಯರು ಎಂದು ವಿನೋದ್ ರಾಜ್ ಹೇಳಿದ್ದಾರೆ.

- Advertisement -

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಾಥ್ ನೀಡಲು ನಟ ವಿನೋದ್ ರಾಜ್ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರತಿಭಟನಾ ನಿರತರೊಂದಿಗೆ ಕೆಲಕಾಲ ಕುಳಿತು ಅವರ ಕಷ್ಟಗಳನ್ನು ಆಲಿಸಿದರು. ಕೇವಲ ಮಾತಿನ ಬೆಂಬಲವಲ್ಲದೆ, ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಅನುಕೂಲಕ್ಕಾಗಿ 10 ಮೂಟೆ ಅಕ್ಕಿ, ತರಕಾರಿ ಹಾಗೂ ಇತರ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ...

ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕನಿಷ್ಠ ಅಗತ್ಯಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ...

ರಾಜರ ಆಳ್ವಿಕೆಯ ವಿರೋಧ ಕೇವಲ ಟ್ರಂಪ್‌ಗೆ ಮಾತ್ರ ಸೀಮಿತವಲ್ಲ

2026ರ ಪರಿಸ್ಥಿತಿ ಭಿನ್ನವಾಗಿದೆ. ಈಗ ಪರಮಾಣು ಅಸ್ತ್ರಗಳು ನಮ್ಮಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಕೈಯಲ್ಲಿಲ್ಲ. ಬದಲಾಗಿ ಅವು ಲಾಕ್‌ಹೀಡ್, ಬೋಯಿಂಗ್, ಜನರಲ್ ಡೈನಾಮಿಕ್ಸ್‌ನಂತಹ ಖಾಸಗಿ ಕಂಪನಿಗಳ ಸಿಇಒಗಳ ಸಂಪೂರ್ಣ ನಿಯಂತ್ರಣದಲ್ಲಿವೆ... ನಾನು ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡವನು;...

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಬೇಡಿಕೆಯ ಮೊತ್ತ ‘ಬಹಳ ದೊಡ್ಡದು’ ಎನ್ನುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಕೊರೋನಾ ಸಂಕಷ್ಟದ ಸಮಯದಲ್ಲಿ ಮತ್ತು ತಮ್ಮ ತಾಯಿ (ನಟಿ ಲೀಲಾವತಿ) ಅವರಿಗೆ ಅನಾರೋಗ್ಯವಿದ್ದಾಗ ಆಶಾ ಕಾರ್ಯಕರ್ತೆಯರು ಮಾಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ ಅವರು, “ಆಶಾ ಕಾರ್ಯಕರ್ತೆಯರು ದೇವರಿಗೆ ಸಮಾನ” ಎಂದು ಭಾವುಕರಾಗಿ ನುಡಿದರು.

vinod1

​”ಕೊರೋನಾ ಕಾಲದಲ್ಲಿ ನನ್ನ ತಾಯಿ ಮತ್ತು ನನ್ನನ್ನು ಕಾಪಾಡಿದವರು ಆಶಾ ಕಾರ್ಯಕರ್ತೆಯರು. ಈಗ ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಆದರೆ, ಈಗ ನೀವೆಲ್ಲ ಸಾವಿರಾರು ಜನ ನನ್ನ ತಾಯಿಯಂದಿರು. ನೀವು ಕಷ್ಟದಲ್ಲಿದ್ದೀರಿ ಎಂದು ತಿಳಿದು ಬಂದಿದ್ದೇನೆ. ನಿಮ್ಮ ಬೇಡಿಕೆಗಳು ಈಡೇರುವ ಮೂಲಕ ನಿಮ್ಮ ಕಷ್ಟಗಳು ಪರಿಹಾರವಾಗಲಿ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.

ನವೆಂಬರ್ 17ರಿಂದ (ಕಳೆದ 9 ದಿನಗಳಿಂದ) ರಾಜ್ಯದ ಆಶಾ ಕಾರ್ಯಕರ್ತೆಯರು ಮಾಸಿಕ ₹15,000 ನಿಶ್ಚಿತ ಗೌರವಧನ, ಬಾಕಿ ಹಣ ಬಿಡುಗಡೆ, ಮತ್ತು ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಟಿಯರಾದ ರಮ್ಯಾ, ಸುಮಲತಾ ಅಂಬರೀಶ್, ಕಾರುಣ್ಯ ರಾಮ್, ಪಂಕಜಾ, ಗೌತಮಿ ಜಾಧವ್ ಸೇರಿದಂತೆ ಚಿತ್ರರಂಗದ ಹಲವರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು ಮಂಗಳೂರಿನಲ್ಲಿ ‘ಜನನುಡಿ’: ಪೋಸ್ಟರ್ ಬಿಡುಗಡೆ

ಯುವಜನರ ರಾಜಕಾರಣದ ದಿಕ್ಕು, ಭವಿಷ್ಯ ಮತ್ತು ಸವಾಲುಗಳನ್ನು ಪ್ರಧಾನ ಆಶಯವಾಗಿಟ್ಟುಕೊಂಡು ನ.28...

ಧಾರವಾಡ | ಜಾಮೀನು ರದ್ದತಿ ನ್ಯಾಯದ ಹೋರಾಟಕ್ಕೆ ಸಿಕ್ಕ ಜಯ: ಬಸವರಾಜ ಕೊರವರ

ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು...

ಹುಬ್ಬಳ್ಳಿ |ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ದೋಷಿ ಗಿರೀಶ್‌ಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿಯಲ್ಲಿ ನಡೆದಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ದೋಷಿ ಗಿರೀಶ್‌ಗೆ ಜೀವಾವಧಿ...

ದೆಹಲಿ ಪ್ರತಿಭಟನೆ ವೇಳೆ ಹಲವರ ಬಂಧನ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್; 10 ದಿನಗಳಲ್ಲಿ ಸಮಗ್ರ ಉತ್ತರಕ್ಕೆ ಸೂಚನೆ

ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...