ರಾಯಚೂರು | ಕೊತ್ತಪೇಟೆಯಲ್ಲಿ 450 ಕೆ.ಜಿ. ಅಕ್ರಮ ಪಡಿತರ ಅಕ್ಕಿ ಜಪ್ತಿ

Date:

ನಗರದ ಕೊತ್ತಪೇಟೆ ಪ್ರದೇಶದ ಕೊರವರ ಓಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 450 ಕೆ.ಜಿ. ಸರ್ಕಾರಿ ಪಡಿತರ ಅಕ್ಕಿಯನ್ನು ನೇತಾಜಿ ನಗರ ಠಾಣೆಯ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

- Advertisement -

ದೊರೆತ ಖಚಿತ ಮಾಹಿತಿಯನ್ವಯ ನ.23ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಗರ ನಿರೀಕ್ಷಕ ಶ್ರೀಹರಿ ಅವರು ನೇತಾಜಿ ನಗರ ಪೊಲೀಸ್‌ ಠಾಣೆಯ ಪಿಎಸ್ಸೆ ಬಸವರಾಜ್‌ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು. ಈ ವೇಳೆ ಕೊತ್ತಪೇಟೆಯ ಕೊರವರ ಓಣಿಯ ನಿವಾಸಿ ಮಹೇಂದ್ರ (27) ಎಂಬಾತನು ಸರಕಾರಿ ಯೋಜನೆಗಳಡಿ ವಿತರಣೆಗಾಗಿ ಬಿಡುಗಡೆ ಮಾಡಲಾದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ...

ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕನಿಷ್ಠ ಅಗತ್ಯಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ...

ರಾಜರ ಆಳ್ವಿಕೆಯ ವಿರೋಧ ಕೇವಲ ಟ್ರಂಪ್‌ಗೆ ಮಾತ್ರ ಸೀಮಿತವಲ್ಲ

2026ರ ಪರಿಸ್ಥಿತಿ ಭಿನ್ನವಾಗಿದೆ. ಈಗ ಪರಮಾಣು ಅಸ್ತ್ರಗಳು ನಮ್ಮಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಕೈಯಲ್ಲಿಲ್ಲ. ಬದಲಾಗಿ ಅವು ಲಾಕ್‌ಹೀಡ್, ಬೋಯಿಂಗ್, ಜನರಲ್ ಡೈನಾಮಿಕ್ಸ್‌ನಂತಹ ಖಾಸಗಿ ಕಂಪನಿಗಳ ಸಿಇಒಗಳ ಸಂಪೂರ್ಣ ನಿಯಂತ್ರಣದಲ್ಲಿವೆ... ನಾನು ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡವನು;...

ಆರೋಪಿತನ ಮನೆಯ ಮುಂದೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ ತಲಾ 30 ಕೆ.ಜಿ. ತೂಕದ 15 ಚೀಲಗಳಲ್ಲಿದ್ದ ಒಟ್ಟು 450 ಕೆ.ಜಿ. ಅಕ್ಕಿಯನ್ನು ಅಧಿಕಾರಿಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದಾರೆ. ಜಪ್ತಿ ಮಾಡಿದ ಅಕ್ಕಿಯ ಅಂದಾಜು ಮೌಲ್ಯ 12,600 ರೂ. ಎಂದು ತಿಳಿದುಬಂದಿದೆ. ಪರಿಶೀಲನೆಗಾಗಿ ಸುಮಾರು 5 ಕೆ.ಜಿ. ಅಕ್ಕಿಯನ್ನು ಮಾದರಿಯಾಗಿ ಸಂಗ್ರಹಿಸಿ ಸೀಲ್ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ ಭಯದಲ್ಲಿ ವಿದ್ಯಾರ್ಥಿಗಳು!

ಈ ಸಂಬಂಧ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಸಿಬ್ಬಂದಿಯಾದ, ಮಲ್ಲಪ್ಪ ಚಂದ್ರಕಾಂತ್, ರಾಮಣ್ಣ ದಾಳಿಯಲ್ಲಿ ಪಾಲ್ಗೊಂಡಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನಗನಹಳ್ಳಿ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆ!

ವಿಜಯಪುರ ಜಿಲ್ಲೆಯ ಹುಬ್ಬಳ್ಳಿ ರಸ್ತೆಯ ಹೊನಗನಹಳ್ಳಿ ಗ್ರಾಮದ ಸಮೀಪದ ಜಮೀನಿನಲ್ಲಿ ಅಪರಿಚಿತ...

ಬಾಗಲಕೋಟೆ |ಎಣ್ಣೆಕಾಳು, ದ್ವಿದಳ ಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಶೇ.೩೩ರಷ್ಟು ಸಹಾಯಧನ

ರೈತರು ಹಾಗೂ ಕೃಷಿ ಆಧಾರಿತ ಸಂಸ್ಥೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ೨೦೨೬-೨೭ನೇ...

ಧಾರವಾಡ | ಜಾಮೀನು ರದ್ದತಿ ನ್ಯಾಯದ ಹೋರಾಟಕ್ಕೆ ಸಿಕ್ಕ ಜಯ: ಬಸವರಾಜ ಕೊರವರ

ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು...

ಹುಬ್ಬಳ್ಳಿ |ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ದೋಷಿ ಗಿರೀಶ್‌ಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿಯಲ್ಲಿ ನಡೆದಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ದೋಷಿ ಗಿರೀಶ್‌ಗೆ ಜೀವಾವಧಿ...