ನಾಡಧ್ವಜ ಅಧಿಕೃತಗೊಳಿಸುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ತೀರ್ಮಾನ: ಸಿಎಂ ಡಿಕೆಶಿ ಘೋಷಣೆ

Date:

ಕನ್ನಡಿಗರ ಭಾವನೆಯ ಹೆಗ್ಗುರುತಾಗಿರುವ ಹಳದಿ-ಕೆಂಪು ಬಾವುಟ. ಈ ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಿ ನಾಡಧ್ವಜವನ್ನಾಗಿ ಘೋಷಿಸುವ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 71ನೇ ‘ಕನ್ನಡ ರಾಜ್ಯೋತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡದ ಅಸ್ಮಿತೆ, ಸಂಸ್ಕೃತಿ ಮತ್ತು ನಾಡಿನ ಸಮಗ್ರ ಅಭಿವೃದ್ಧಿಯ ಮಹತ್ವಾಕಾಂಕ್ಷೆಯ ರೂಪುರೇಷೆಗಳನ್ನು ಮುಂದಿಟ್ಟರು. ಮಾತೃಭಾಷೆಯ ಪ್ರಾಮುಖ್ಯತೆಯನ್ನು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ, ಸಾರ್ವಜನಿಕ ಬದುಕು ಹಾಗೂ ಜನಪರ ಚಟುವಟಿಕೆಗಳ ಮೂಲಕ ವಿಶೇಷ ಛಾಪು ಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೆಸ್...

ತಮ್ಮ ಭಾಷಣದಲ್ಲಿ ಕವಿ ದ.ರಾ. ಬೇಂದ್ರೆ ಮತ್ತು ಕುವೆಂಪು ಅವರ ಸಾಲುಗಳನ್ನು ಸ್ಮರಿಸಿದ ಡಿ.ಕೆ ಶಿವಕುಮಾರ್, “ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳೊಂದಿಗೆ ವಿಶ್ವಮಟ್ಟದಲ್ಲಿ ತನ್ನದೇ ಆದ ಸಾಂಸ್ಕೃತಿಕ ಗರಿಮೆಯನ್ನು ಹೊಂದಿದೆ” ಎಂದರು.

“ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಸರ್ಕಾರ ನಾನಾ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಲಾಗಿದೆ. ಆರನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತರಬೇತಿ ಆರಂಭಿಸಿ, ಹನ್ನೆರಡನೇ ತರಗತಿವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ 15,000 ಶಾಲಾ ಶಿಕ್ಷಕರ ನೇಮಕಾತಿ, 25,498 ದ್ವಿಭಾಷಾ ಶಾಲೆಗಳ ಆರಂಭ, 250 ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ಜಾರಿಗೊಳಿಸಲಾಗಿದೆ” ಎಂದು ತಿಳಿಸಿದರು.

“ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಓದಿದ ಅರ್ಹ ವಿದ್ಯಾರ್ಥಿಗಳಿಗೆ ವೃತ್ತಿಪರ ಉನ್ನತ ಶಿಕ್ಷಣದ ಸರ್ಕಾರಿ ಸೀಟುಗಳಲ್ಲಿ 7.5%ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಅಲ್ಲದೆ, ಬೆಂಗಳೂರು ಸೇರಿದಂತೆ ಮಹಾನಗರಗಳ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು, ಕೃಷಿ ಮತ್ತು ಸಂಸ್ಕೃತಿಯ ನೈಜ ಪರಿಚಯ ಮಾಡಿಕೊಡುವ ಸಲುವಾಗಿ ‘ಗ್ರಾಮಾನುಭವ’ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರೂಪಿಸಲಾಗಿದೆ” ಎಂದರು.

ಯುವಜನತೆ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಮಹತ್ವದ ನೀತಿಗಳನ್ನು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, “ಇಡೀ ರಾಜ್ಯದ ಸಮಗ್ರ ಪ್ರಾದೇಶಿಕ ಬೆಳವಣಿಗೆಗಾಗಿ ‘ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047’ ಅನ್ನು ಪರಿಚಯಿಸಲಾಗಿದೆ. ಮುಂದಿನ ಎರಡು ದಶಕಗಳಲ್ಲಿ ಅಂದಾಜು 5 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ” ಎಂದು ವಿವರಿಇದರು.

“ರಾಜ್ಯದಲ್ಲಿ ಈಗಾಗಲೇ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ. ಸುಮಾರು 66,000 ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲ 29,679 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಕೌಶಲ್ಯಾಭಿವೃದ್ಧಿಗಾಗಿ ‘ಯುವಾ ಉದ್ಯೋಗ ಸೇತು’ ಮೊಬೈಲ್ ಆ್ಯಪ್ ಬಿಡುಗಡೆ ಹಾಗೂ 100 ಐಟಿಐ ಸಂಸ್ಥೆಗಳನ್ನು ಕೈಗಾರಿಕೆಗಳೊಂದಿಗೆ ಜೋಡಿಸಿ ಎರಡು ವರ್ಷಗಳಲ್ಲಿ 10,000 ಉದ್ಯೋಗ ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಮುಂದುರೆದು, “ಇತ್ತೀಚಿನ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕನ್ನಡಿಗ ಕ್ರೀಡಾಪಟುಗಳಿಗೆ ಭರ್ಜರಿ ನಗದು ಬಹುಮಾನ ನೀಡಿ ಗೌರವಿಸಲಾಗಿದೆ. ಸರ್ಕಾರಿ ನೌಕರಿಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ‘ಗೋಲ್ ಒಲಿಂಪಿಕ್ಸ್’ ಕನಸಿಗೆ ಸಾಕಾರ ನೀಡಲಾಗುತ್ತಿದೆ” ಎಂದರು.

ಈ ಲೇಖನ ಓದಿದ್ದೀರಾ?: ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

“ಅನ್ನದಾತರ ಅನುಕೂಲಕ್ಕಾಗಿ ರಾಜ್ಯದಲ್ಲಿ ರೈತರ ವಿದ್ಯುತ್ ಬಳಕೆಗೆ ಬರೋಬ್ಬರಿ 30,000 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಪ್ರತಿಯೊಬ್ಬ ಆಸ್ತಿ ಮಾಲೀಕರಿಗೆ ಕಾನೂನುಬದ್ಧ ಭದ್ರತೆ ಒದಗಿಸಲು ‘ಭೂ ಗ್ಯಾರಂಟಿ’ ಯೋಜನೆಯನ್ನು ರೂಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 9.50 ಲಕ್ಷ ಹೊಸ ಇ-ಖಾತಾಗಳ ವಿತರಣೆ ಹಾಗೂ 3 ಲಕ್ಷ ಬಿ-ಖಾತಾಗಳನ್ನು ಅಧಿಕೃತ ಎ-ಖಾತಾಗಳಾಗಿ ಪರಿವರ್ತಿಸಿ ಹಸ್ತಾಂತರಿಸುವ ಬೃಹತ್ ಗುರಿ ಹೊಂದಲಾಗಿದೆ. ಕೃಷಿ ಕ್ಷೇತ್ರಕ್ಕೆ ಡ್ರೋನ್ ಮತ್ತು ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ, ಕೃಷಿ ಹೊಂಡಗಳ ನಿರ್ಮಾಣ, ಹನಿ ನೀರಾವರಿ ಯೋಜನೆಗಳು ಹಾಗೂ ಬೆಳೆ ವಿಮೆ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ” ಎಂದು ಡಿ.ಕೆ ಶಿವಕುಮಾರ್ ಹೇಳಿದರು.

“ನವೆಂಬರ್ ತಿಂಗಳಲ್ಲಿ ಸಾರ್ವಜನಿಕರಿಗೆ ಸಿಹಿ ಸುದ್ದಿಯೆಂಬಂತೆ ರಾಜ್ಯಾದ್ಯಂತ ಒಟ್ಟು 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇದರೊಂದಿಗೆ ಆರೋಗ್ಯ ಸೇವೆಯನ್ನು ಸುಧಾರಿಸಲು 100 ಹೊಸ ಆಂಬ್ಯುಲೆನ್ಸ್‌ಗಳ ಲೋಕಾರ್ಪಣೆ ಹಾಗೂ ವೈದ್ಯಕೀಯ ಕಾಲೇಜುಗಳಿಂದ ಸರ್ಕಾರಿ ಆಸ್ಪತ್ರೆಗಳನ್ನು ದತ್ತು ಪಡೆಯುವ ವಿನೂತನ ಯೋಜನೆಗೆ ಚಾಲನೆ ನೀಡಲಾಗಿದೆ” ಎಂದು ತಿಳಿಸಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ...

ಬೀದರ್‌ | ಟನ್ ಕಬ್ಬಿಗೆ ₹5,500 ದರ ನಿಗದಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ

ಪ್ರತಿ ಟನ್ ಕಬ್ಬಿಗೆ ₹5,500 ದರನಿಗದಿಪಡಿಸುವುದು ಸೇರಿದಂತೆ ರೈತರ ವಿವಿಧ ಹಕ್ಕೊತ್ತಾಯಗಳನ್ನು...

​’ಕ್ಷಮಿಸುವುದಿಲ್ಲ, ಮರೆಯುವುದಿಲ್ಲ’: ಗ್ಯಾನೇಶ್ ವಿರುದ್ಧದ ‘ಸಾರ್ವಜನಿಕ ಮಹಾಭಿಯೋಗ’ದಲ್ಲಿ ಗುಡುಗಿದ ರಾಹುಲ್ ಗಾಂಧಿ

ಸಿಇಸಿ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವುದು ಮಾತ್ರವಲ್ಲ, ದೇಶದ್ರೋಹದ ಆರೋಪದಡಿ...

ಬೀದರ್‌ | ನ.26ರಂದು ಸಂವಿಧಾನ ರಕ್ಷಣೆಗಾಗಿ ಬೃಹತ್ ಜನಾಂದೋಲನ ಸಮಾವೇಶ

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಹಾಗೂ ಯುವಜನರಲ್ಲಿ ಸಂವಿಧಾನದ ಮಹತ್ವದ...