23 ವರ್ಷ ಕಾಡು-ಮೇಡು ಅಲೆದು ಆದಿವಾಸಿ ಮಕ್ಕಳಿಗೆ ಪಾಠ ಮಾಡಿದ ಶಿಕ್ಷಕಿ; ಕೊನೆಗೆ ಸಿಕ್ಕಿದ್ದು ಕಸ ಗುಡಿಸುವ ಕೆಲಸ!

Date:

23 ವರ್ಷಗಳ ಕಾಲ ನದಿ ದಾಟಿ, ಕಾಡು-ಮೇಡು ಅಲೆದು ಆದಿವಾಸಿ ಮಕ್ಕಳಿಗೆ ಅಕ್ಷರ ಕಲಿಸಿದ ಶಿಕ್ಷಕಿ ಕೆ.ಆರ್. ಉಷಾ ಕುಮಾರಿ. ಹತ್ತಾರು ಪ್ರಶಸ್ತಿಗಳು ಸಂದರೂ ಉದ್ಯೋಗ ಭದ್ರತೆ ಸಿಗಲಿಲ್ಲ. ಕೊನೆಗೆ ಸೀಮೆಸುಣ್ಣ ಹಿಡಿದ ಕೈಗಳಿಗೆ ಪೊರಕೆ ಹಿಡಿಯುವ ಪರಿಸ್ಥಿತಿ ಎದುರಾಗಿದೆ

ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಪ್ರತಿದಿನ ನದಿ ದಾಟಿ, ದಟ್ಟ ಅರಣ್ಯದಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದು ಶಾಲೆಗೆ ತೆರಳುತ್ತಿದ್ದ ಕೇರಳದ ಶಿಕ್ಷಕಿ ಕೆ.ಆರ್ ಉಷಾ ಕುಮಾರಿ. ಸುಮಾರು 23 ವರ್ಷಗಳ ಕಾಲ ದುರ್ಗಮ ಪ್ರದೇಶದಲ್ಲ ಸಾಗಿ ಮಕ್ಕಳಿಗೆ ಪಾಠ ಮಾಡಿದ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹತ್ತಾರು ಪ್ರಶಸ್ತಿಗಳು ಸಂದಿವೆ. ಆದರೆ, ಸರ್ಕಾರ ಶಾಲೆಯನ್ನು ಮುಚ್ಚಿದ ಬಳಿಕ, ಈ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ಸರ್ಕಾರಿ ಶಾಲೆಯೊಂದರಲ್ಲಿ ಸಿಕ್ಕಿರುವುದು ಸ್ವಚ್ಛತಾ ಸಿಬ್ಬಂದಿಯ ಕೆಲಸ.

- Advertisement -

1968ರಲ್ಲಿ ಕೇರಳದಲ್ಲಿ ಜನಿಸಿದ ಕೆ.ಆರ್. ಉಷಾ ಕುಮಾರಿ ಅವರು ತಿರುವನಂತಪುರಂ ಜಿಲ್ಲೆಯ ಅಂಬೂರಿ ಪ್ರದೇಶದ ನಿವಾಸಿ. 1999ರಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದ ಅವರು, ಆರಂಭದಲ್ಲಿ ಕೊಟ್ಟೂರಿನ ಏಕೋಪಾಧ್ಯಾಯ ಶಾಲೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ, 2002ರಲ್ಲಿ ಅಗಸ್ತ್ಯಮಲೈ ಜೀವಗೋಳ ಮೀಸಲು ಪ್ರದೇಶದ ಕುನ್ನತ್ತುಮಲದಲ್ಲಿರುವ ‘ಅಗಸ್ತ್ಯ ಬಹುತರಗತಿ ಕಲಿಕಾ ಕೇಂದ್ರ’ಕ್ಕೆ ಸೇರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ, ಸಾರ್ವಜನಿಕ ಬದುಕು ಹಾಗೂ ಜನಪರ ಚಟುವಟಿಕೆಗಳ ಮೂಲಕ ವಿಶೇಷ ಛಾಪು ಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೆಸ್...

ಈ ದಿನ ಕವಿತೆ | ಎರಡು ದೀಪಗಳು- ಅಲಿ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ . ಕತ್ತಲ ಗವಿಯೊಳಗಿಂದರೆಕ್ಕೆಗಳು ಫಡಫಡಿಸುವ ಸದ್ದು ಕೇಳುವುದು.ನಿರ್ದಯಿ ಗಾಳಿಯುಮಂಜಿನ ಮೇಲೆ...

ದಟ್ಟ ಅರಣ್ಯ ಪ್ರದೇಶದ ಆದಿವಾಸಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ಕಲಿಕಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗಿನ ಮಕ್ಕಳಿಗೆ ಪಾಠ ಮಾಡುವ ಸಂಪೂರ್ಣ ಜವಾಬ್ದಾರಿ ಉಷಾ ಕುಮಾರಿ ಅವರ ಮೇಲಿತ್ತು.

ಉಷಾ ಕುಮಾರಿ ಅವರ ದಿನಚರಿ ಸಾಮಾನ್ಯ ಶಿಕ್ಷಕರಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಪ್ರತಿದಿನ ಬೆಳಗ್ಗೆ ಸುಮಾರು 7.30ಕ್ಕೆ ಮನೆಯಿಂದ ಹೊರಡುತ್ತಿದ್ದ ಅವರು, ಮೊದಲು ದ್ವಿಚಕ್ರ ವಾಹನದಲ್ಲಿ ಕುಂಬಿಕ್ಕಲ್ ಕಡವು ಎಂಬ ನದಿ ತೀರಕ್ಕೆ ತೆರಳುತ್ತಿದ್ದರು. ಅಲ್ಲಿಂದ ಮರದ ದೋಣಿಯಲ್ಲಿ ನದಿ ದಾಟಬೇಕಾಗಿತ್ತು. ಕೆಲವು ಸಂದರ್ಭಗಳಲ್ಲಿ ದೋಣಿ ನಡೆಸಲು ಬೇರೆಯವರು ಇಲ್ಲದಿದ್ದಾಗ ಅವರೇ ಹುಟ್ಟು ಹಾಕಿ ದೋಣಿ ನಡೆಸಿ, ಮತ್ತೊಂದು ದಡ ತಲುಪುತ್ತಿದ್ದರು.

ನದಿ ದಾಟಿದ ನಂತರ ಕಡಿದಾದ ಬೆಟ್ಟಗಳು, ಕಲ್ಲುಬಂಡೆಗಳು ಹಾಗೂ ದಟ್ಟ ಅರಣ್ಯದ ನಡುವಿನ ಹಾದಿಯಲ್ಲಿ ಸುಮಾರು ಎಂಟು ಕಿಲೋಮೀಟರ್ ನಡೆಯಬೇಕಾಗಿತ್ತು. ಮಳೆಗಾಲದಲ್ಲಿ ಜಾರುವ ದಾರಿಗಳು, ಕಾಡುಪ್ರಾಣಿಗಳ ಭಯ ಹಾಗೂ ಹವಾಮಾನ ವೈಪರೀತ್ಯಗಳು ಅವರ ಪ್ರಯಾಣವನ್ನು ಮತ್ತಷ್ಟು ಕಷ್ಟಕರವಾಗಿಸುತ್ತಿದ್ದವು. ಬೆಟ್ಟದ ಹಾದಿಯಲ್ಲಿ ನಡೆಯಲು ಕೆಲವೊಮ್ಮೆ ಕೋಲಿನ ಆಸರೆ ಪಡೆಯಬೇಕಾಗುತ್ತಿತ್ತು.

ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿ ಶಾಲೆಗೆ ತಲುಪುತ್ತಿದ್ದ ಅವರು, ದಿನವಿಡೀ ಮಕ್ಕಳಿಗೆ ಪಾಠ ಮಾಡಿ ಸಂಜೆ ಅದೇ ಮಾರ್ಗದಲ್ಲಿ ಮನೆಗೆ ಮರಳುತ್ತಿದ್ದರು. ಈ ಪ್ರಯಾಣ ಅವರ ವೃತ್ತಿಜೀವನದ ಬಹುಪಾಲು ಅವಧಿಯ ದಿನಚರಿಯಾಗಿತ್ತು.

ಅಗಸ್ತ್ಯ ಕಲಿಕಾ ಕೇಂದ್ರದಲ್ಲಿ ಉಷಾ ಕುಮಾರಿ ಒಬ್ಬರೇ ಶಿಕ್ಷಕಿಯಾಗಿದ್ದರು. ಗಣಿತ, ಇಂಗ್ಲಿಷ್, ಪ್ರಾದೇಶಿಕ ಭಾಷೆ ಹಾಗೂ ಪರಿಸರ ಅಧ್ಯಯನ ಸೇರಿದಂತೆ ಎಲ್ಲ ವಿಷಯಗಳನ್ನೂ ಅವರೇ ಬೋಧಿಸುತ್ತಿದ್ದರು. ವಿವಿಧ ತರಗತಿಗಳ ಮಕ್ಕಳಿಗೆ ಅವರ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಪಾಠ ಹೇಳಬೇಕಾಗಿತ್ತು.

ಬೋಧನೆಯ ಜೊತೆಗೆ ಶಾಲೆಯ ಆಡಳಿತಾತ್ಮಕ ಕೆಲಸಗಳು, ಪಠ್ಯೇತರ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಆಹಾರ ಒದಗಿಸುವ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಆದರೆ, ಶಾಲೆಗೆ ದೊರೆಯುತ್ತಿದ್ದ ಅನುದಾನ ಸೀಮಿತವಾಗಿದ್ದರಿಂದ ಮಕ್ಕಳಿಗೆ ಹಾಲು, ಮೊಟ್ಟೆ ಹಾಘೂ ಇತರ ಪೌಷ್ಟಿಕ ಆಹಾರ ಒದಗಿಸುವುದಕ್ಕೂ ಹಣಕಾಸಿನ ಸಮಸ್ಯೆ ಎದುರಾಗುತ್ತಿತ್ತು.

ಹಲವು ಮೂಲಸೌಕರ್ಯಗಳ ಕೊರತೆಯ ನಡುವೆಯೂ ಆದಿವಾಸಿ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಅವರ ಪ್ರಮುಖ ಆದ್ಯತೆಯಾಗಿತ್ತು.

ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ಉಷಾ ಕುಮಾರಿ ಸಲ್ಲಿಸಿದ ಸೇವೆ ಕ್ರಮೇಣ ಸಾರ್ವಜನಿಕ ಗಮನ ಸೆಳೆಯಿತು. ಅವರ ಅಸಾಧಾರಣ ಪರಿಶ್ರಮವನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹನ್ನೆರಡಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ದುರ್ಗಮ ಪ್ರದೇಶದಲ್ಲಿ ಶಿಕ್ಷಣ ನೀಡಲು ಅವರು ನಡೆಸುತ್ತಿದ್ದ ದೈನಂದಿನ ಪ್ರಯಾಣದ ಕುರಿತು ವಿವಿಧ ಮಾಧ್ಯಮಗಳೂ ವರದಿ ಮಾಡಿವೆ.

ಆದರೆ, ಎರಡು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕಿಯಾಗಿ ದುಡಿದಿದ್ದರೂ ಅವರ ಉದ್ಯೋಗ ಕಾಯಂ ಆಗಿರಲಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ನಿಯಮಿತವಾಗಿ ವೇತನವೂ ದೊರೆಯುತ್ತಿರಲಿಲ್ಲ. ಹಲವು ತಿಂಗಳುಗಳ ವೇತನ ಬಾಕಿ ಉಳಿಯುತ್ತಿದ್ದ ಪರಿಸ್ಥಿತಿ ಎದುರಾಗಿತ್ತು.

ಇದರಿಂದ ಬೇಸತ್ತ ಉಷಾ ಕುಮಾರಿ 2020ರ ಮಾರ್ಚ್‌ನಲ್ಲಿ ತಮ್ಮ ಶಾಲೆಯ ಹೊರಗೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಬೇಕು ಮತ್ತು ಬಾಕಿ ವೇತನ ಪಾವತಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

‘ದಿ ನ್ಯೂಸ್ ಮಿನಿಟ್’ಗೆ ನೀಡಿದ್ದ ಸಂದರ್ಶನದಲ್ಲಿಯೂ ಅವರು ಏಕೋಪಾಧ್ಯಾಯ ಶಾಲೆಗಳ ಶಿಕ್ಷಕರು ಎದುರಿಸುತ್ತಿದ್ದ ಸಂಕಷ್ಟಗಳನ್ನು ವಿವರಿಸಿದ್ದರು. ವರ್ಷಗಟ್ಟಲೆ ದುರ್ಗಮ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರೂ ಉದ್ಯೋಗ ಭದ್ರತೆ ಇಲ್ಲದಿರುವುದು ಮತ್ತು ತಿಂಗಳುಗಟ್ಟಲೆ ವೇತನ ದೊರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಲೇಖನ ಓದಿದ್ದೀರಾ?: ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ ನಡುವೆ ಕಾಯಕ ಜೀವಿಯ ಘನತೆ

ಇದೆಲ್ಲದರ ನಡುವೆ, 2022ರ ಮಾರ್ಚ್‌ನಲ್ಲಿ ಕೇರಳ ಸರ್ಕಾರ ರಾಜ್ಯದ 271 ಬಹುತರಗತಿ ಕಲಿಕಾ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಿತು. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

ಈ ಕ್ರಮದಿಂದ ಕಲಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 344 ಶಿಕ್ಷಕರು ತಮ್ಮ ಹುದ್ದೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇವರಲ್ಲಿ ಉಷಾ ಕುಮಾರಿ ಕೂಡ ಒಬ್ಬರಾಗಿದ್ದರು.

ಬಾಧಿತ ಶಿಕ್ಷಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ಭಾಗವಾಗಿ ಸರ್ಕಾರಿ ಶಾಲೆಗಳಲ್ಲಿ ಅರೆಕಾಲಿಕ ಅಥವಾ ಪೂರ್ಣಕಾಲಿಕ ಸ್ವಚ್ಛತಾ ಸಿಬ್ಬಂದಿಯ ಹುದ್ದೆಗಳನ್ನು ನೀಡಲು ಸರ್ಕಾರ ಮುಂದಾಯಿತು.

ಅದರಂತೆ, 2022ರ ಜೂನ್ 1ರಂದು ಉಷಾ ಕುಮಾರಿ ಅವರನ್ನು ತಿರುವನಂತಪುರಂನ ಪೆರೂರ್ಕಡದಲ್ಲಿರುವ ಪಿಎಸ್‌ಎನ್‌ಎಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ನಿಯೋಜಿಸಿತು.

ಹೀಗೆ, ವರ್ಷಗಟ್ಟಲೆ ಮಕ್ಕಳಿಗೆ ಪಾಠ ಮಾಡಿದ ಮತ್ತು ಹಲವು ಪ್ರಶಸ್ತಿಗಳನ್ನು ಪಡೆದ ಉಷಾ ಅವರ ವೃತ್ತಿಜೀವನ ಹೊಸ ತಿರುವು ಪಡೆಯಿತು.

ತಮ್ಮ ಹೊಸ ಉದ್ಯೋಗದ ಕುರಿತು 2022ರ ಜೂನ್‌ನಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಉಷಾ ಕುಮಾರಿ, ‘ಸ್ವಚ್ಛತಾ ಕೆಲಸ ಮಾಡುವುದರಲ್ಲಿ ಯಾವುದೇ ಅವಮಾನವಿಲ್ಲ’ ಎಂದಿದ್ದರು.

ಹಲವು ವರ್ಷಗಳಿಂದ ಕಾಲಾನುಸಾರ ಪಾವತಿಯಾಗದ ವೇತನ ಮತ್ತು ಉದ್ಯೋಗದ ಅನಿಶ್ಚಿತತೆಯನ್ನು ಎದುರಿಸಿದ್ದ ತಮಗೆ ಹೊಸ ಹುದ್ದೆ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ. ಆದರೆ, ತಾವು ಪಾಠ ಮಾಡುತ್ತಿದ್ದ ಆದಿವಾಸಿ ಮಕ್ಕಳನ್ನು ಬಹಳವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದರು.

ಇದೇ ಸಂದರ್ಭದಲ್ಲಿ, ಶಿಕ್ಷಕಿಯಾಗಿ ಸಲ್ಲಿಸಿದ 23 ವರ್ಷಗಳ ಸೇವೆಯನ್ನು ಪಿಂಚಣಿ ಮತ್ತು ಸೇವಾ ಹಿರಿತನದ ಲೆಕ್ಕಾಚಾರದಲ್ಲಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.

ಉಷಾ ಕುಮಾರಿ ಅವರಿಗೆ ಪರ್ಯಾಯ ಉದ್ಯೋಗ ದೊರೆತಿರುವುದು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾದರೂ, 23 ವರ್ಷಗಳ ಬೋಧನಾ ಅನುಭವ ಹೊಂದಿದ್ದ ಶಿಕ್ಷಕಿಯೊಬ್ಬರು ತಮ್ಮ ವೃತ್ತಿಯನ್ನು ತೊರೆಯಬೇಕಾದ ಪರಿಸ್ಥಿತಿ ಶಿಕ್ಷಣ ವ್ಯವಸ್ಥೆಯ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ.

ದುರ್ಗಮ ಪ್ರದೇಶಗಳಲ್ಲಿ ಶಿಕ್ಷಕರು ಸಲ್ಲಿಸುವ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ, ಅವರ ಉದ್ಯೋಗವನ್ನು ಕಾಯಂಗೊಳಿಸುವುದು, ನಿಯಮಿತ ವೇತನ ಪಾವತಿಸುವುದು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಖಚಿತಪಡಿಸುವುದು ಕೂಡ ಅಗತ್ಯವಾಗಿದೆ.

ಮೂಲ: ಟೈಮ್ಸ್ ಆಫ್ ಇಂಡಿಯಾ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ,...

ನಾಲ್ಕು ಹೊಸ ಫೀಚರ್’ಗಳನ್ನು ಪರಿಚಯಿಸಿದ WHATSAPP

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WhatsApp ತನ್ನ ಬಳಕೆದಾರರ...

ಮತದಾರರ ಮರುಸೇರ್ಪಡೆಗೆ ಚುನಾವಣಾ ಆಯೋಗದಿಂದಲೇ ತಡೆ; 16.10 ಲಕ್ಷ ಜನರ ಸೇರ್ಪಡೆ ವಿರೋಧಿಸಿ ಮೇಲ್ಮನವಿ!

ಪಶ್ಚಿಮ ಬಂಗಾಳದ SIR ಪ್ರಕ್ರಿಯೆ ಮುಗಿದರೂ, ಅಲ್ಲಿನ ಮತದಾರರ ಪಟ್ಟಿಯ ಸುತ್ತ...

‘ಸಂಗೀತಾ’ ಮತ್ತು ‘ಸಂಗೇತಾ’ ನಡುವಿನ ವ್ಯತ್ಯಾಸ ಹಸಿದ ಗ್ರಾಹಕರಿಗೆ ತಿಳಿಯದು: ಮದ್ರಾಸ್ ಹೈಕೋರ್ಟ್

ತಂಜಾವೂರಿನ ಐತಿಹಾಸಿಕ ಬೃಹದೀಶ್ವರ ದೇವಾಲಯದ ಎದುರು ಇರುವ ಉಪಾಹಾರ ಗೃಹವೊಂದು ‘ಹೋಟೆಲ್...