ರಾಜಕೀಯ ಅಧಿಕಾರ ಮತ್ತು ಸಂರಕ್ಷಣಾ ಗುಂಪು ನಮಗೆ ಅತ್ಯಗತ್ಯ. ಕಾಂಗ್ರೆಸ್ ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಭರವಸೆಯನ್ನು ಈವರೆಗೆ ಈಡೇಸಿಸಲಿಲ್ಲ. ಮುಸ್ಲಿಂ ಸಮುದಾಯದ ನಾಯಕರ ಮೇಲೆ ಕ್ರಮ ಕೈಗೊಂಡು ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಇದರಿಂದಾಗಿ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಪೆಟ್ಟು ಬೀಳಲಿದೆ.
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತವಾಗಿ ನಡೆಯುತ್ತಿರುವ ಸನ್ನಿವೇಶವನ್ನು ಹೇಳಬೇಕೆಂದು ಬಯಸುತ್ತಿದ್ದು, ನಾವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕ್ ಅಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕು. ಇದನ್ನು ಸಾಬೀತುಮಾಡಲು ನಮಗೆ ರಾಜಕೀಯದಲ್ಲಿ ಕೇವಲ ಅಧಿಕಾರ ಅಲ್ಲ ಪೂರ್ಣಾಧಿಕಾರ ಇರಬೇಕು. ನಮ್ಮ ವಿದ್ವಾಂಸರು ಹೇಳುವ ರೀತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಮಗೆ ನೀಡಬೇಕಾದ ಹಕ್ಕುಗಳನ್ನು ನೀಡದಿದ್ದರೆ ಪಕ್ಷವು ಎಲ್ಲ ಸ್ಪರ್ಧೆಗಳಲ್ಲಿ ಹೋಲಿಸಬಹುದು ಮತ್ತು ಪಕ್ಷವು ಉಂಟುಮಾಡುವ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಪಕ್ಷಕ್ಕೆ ಮನವರಿಕೆ ಮಾಡಿಕೊಡಬೇಕು. ಪಕ್ಷಕ್ಕೆ ಮನವರಿಕೆಯಾಗದೇ ಇದೇ ರೀತಿಯ ಮನಸ್ಥಿತಿಯಲ್ಲಿ ಉಳಿಯದಿದ್ದರೆ ಹೊಸ ನಾಯಕತ್ವ ಹೊರಹೊಮ್ಮುವುದಿಲ್ಲ.
ಉದಾಹರಣೆಗೆ ತಮಿಳುನಾಡಿನಲ್ಲಿ ಚಲನಚಿತ್ರ ನಟ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಭಾರೀ ಜಯ ಹಾಗೂ ಯಶಸ್ಸನ್ನು ಸಾಧಿಸುವ ಮೂಲಕ ಯಾರಾದರೂ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
2023 ದಾವಣಗೆರೆಯ ಚುಣಾವಣೆಯಲ್ಲಿ ಕೇವಲ 1000 ಮತಗಳನ್ನು ಪಡೆದ SDPI ನಂತಹ ಪಕ್ಷವು ಕೆಲವು ದಿನಗಳ ಹಿಂದೆ ನಡೆದ ದಾವಣಗೆರೆ ಉಪ ಚುನಾವಣೆಯಲ್ಲಿ 18 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ರಾಜ್ಯದಲ್ಲಿ ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಹಲವಾರು ಜಾತ್ಯತೀತ ಪಕ್ಷಗಳು ಹಾಗೂ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತರ ಸಂಘಟನೆಗಳು ಇನ್ನೂ ಹಲವಾರು ಸಂಘಟನೆಗಳು ಸೇರಿ ರಾಜ್ಯದಲ್ಲಿ ಮೂರನೇ ಪಕ್ಷ ರಚಿಸುವ ಸಾಧ್ಯತೆ ಇದೆ. ಈ ಎಲ್ಲ ವಿಷಯಗಳು ಪ್ರತಿಯೊಂದು ಬಿಕ್ಕಟ್ಟು ಹೊಸ ನಾಯಕತ್ವ ಉದಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಅಲ್ಪಸಂಖ್ಯಾತರಿಗೆ ಪರ್ಯಾಯ ಪಕ್ಷವಿಲ್ಲ ಎನ್ನುವ ಚಿಂತನೆಯನ್ನು ಕಾಂಗ್ರೆಸ್ ಬದಲಾಯಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದ ಕೇವಲ ಇಬ್ಬರು ಸಚಿವರು ಮಾತ್ರ ಇದ್ದಾರೆ. ಚುಣಾವಣ ಆಯೋಗದ ವರದಿ ಪ್ರಕಾರ 2023ರ ಚುನಾವಣೆಯಲ್ಲಿ ಒಟ್ಟು 3,91,55,182 ಕೋಟಿ ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ 1,67,89,305 ಮತಗಳನ್ನು ಪಡೆದಿದ್ದು, ಅದರಲ್ಲಿ ಮುಸ್ಲಿಂ ಸಮುದಾಯದ ಮತಗಳು 60 ಲಕ್ಷಕ್ಕೂ ಅಧಿಕವಾಗಿ ಬಂದಿವೆ. ಕಾಂಗ್ರೆಸ್ ಪಕ್ಷದ ಒಟ್ಟಾರೆ ಮತ ಪ್ರಮಾಣದಲ್ಲಿ ಶೇಕಡಾ 20ಕ್ಕೂ ಅಧಿಕ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಶೇಕಡಾ 85ಕ್ಕೂ ಅಧಿಕ ಮತದಾನ ಮಾಡಿದರೂ ಕೂಡ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡುತ್ತಲೇ ಇದೆ. ಪಕ್ಷವು ಮುಸ್ಲಿಮರಿಗೆ ಅನ್ಯಾಯ ಮಾಡುವ ಸ್ಥಳಗಳ ಪಟ್ಟಿ ದೊಡ್ಡದಾಗಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಅನೇಕ ಭರವಸೆಗಳನ್ನು ನೀಡಿತ್ತು, ಆದರೆ ಅವುಗಳನ್ನು ಇದುವರೆಗೂ ಈಡೇರಿಲ್ಲಾ. 2023ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ನವರು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಮುಸ್ಲಿಂಮರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು ಆದರೆ ಮೂರು ವರ್ಷ ಕಳೆಯುತ್ತಾ ಬಂದರು ಸಹ ಇನ್ನೂ ಒಂದೇ ಒಂದು ಸಭೆ ಸಹ ಮಾಡಲಿಲ್ಲ. ಮೈನಾರಿಟಿ ಸಮುದಾಯಕ್ಕೆ ಬಜೆಟ್ ಅನ್ನು ಹತ್ತು ಸಾವಿರ ಕೋಟಿಗೆ ಹೆಚ್ಚಿಸುವ ಭರವಸೆ ನೀಡಿದ್ರು ಅದನ್ನು ಮಾಡಲಿಲ್ಲ, ಹಿಜಾಬ್ ಹಾಗೂ ಅಜಾನ್ ಬಗ್ಗೆಯೂ ಸಹ ಸರಿಯಾದ ರೀತಿಯಲ್ಲಿ ಗಮನ ನೀಡಲಿಲ್ಲಾ, ಶೃಂಗೇರಿಯ ಬಾಬಾ ಬುಡನ್ ಗಿರಿ ಸಮಸ್ಯೆಯನ್ನು ಸಹ ಬಗೆಹರಿಸಲಿಲ್ಲಾ, ಇದರ ಜೊತೆಗೆ ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಿಷಯ ದೂರದ ವಿಷಯವಾಗಿದ್ದು ಇಲ್ಲಿಯವರೆಗೆ ಅದನ್ನು ಒಂದು ಬಾರಿಯೂ ಸಹ ಚರ್ಚಿಸಲಾಗಿಲ್ಲಾ. ಸಮುದಾಯದ ಉಲೇಮಾಗಳು ಹಾಗೂ ಸಾರ್ವಜನಿಕರು ಸೇರಿ ಸಮುದಾಯಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದು ಅದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತನ್ನ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 21,855 ಮತಗಳ ಭಾರಿ ಅಂತರದಿಂದ ಸೋಲಿಸಿದರೆ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 5,700 ಮತಗಳಿಂದ ಗೆದ್ದಿದ್ದು, 2023 ರಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು , ಆಗ ದಾವಣಗೆರೆ ಚುನಾವಣೆಯಲ್ಲಿ ಬೇರೆ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ರು ಸಹ ಮುಂದಿನ ಬಾರಿ ಕಾಂಗ್ರೆಸ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುತ್ತಾರೆ ಎಂದು ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಗೆ ಬೆಂಬಲಸಿದರು.
ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ದಾವಣಗೆರೆ ಮುಸ್ಲಿಂ ಸಮುದಾಯದ ಜನರ ಬೇಡಿಕೆ ಇತ್ತು ಈ ಕಾರಣದಿಂದ ಮುಸ್ಲಿಂ ಸಮುದಾಯದ ಉಲಮಾಗಳು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಭೇಟಿಯಾಗಿ ಮುಸ್ಲಿಂಮರಿಗೆ ಟಿಕೆಟ್ ನೀಡಬೇಕು ಎಂದು ವಿನಂತಿಸಿದರು. ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ರವರ ಜೊತೆ ಸಭೆ ಮಾಡಿ ಅವರಿಗೂ ಸಹ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಉಲಮಾಗಳು ತಿಳಿಸಿದ್ದಾರೆ. ಆದರೆ ಕೊನೆ ಗಳಿಗೆಯಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದರು. ಈ ಕಾರಣದಿಂದ ದಾವಣಗೆರೆ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ವಿರುದ್ಧವೇ ಬಂಡಾಯ ಸ್ಪರ್ಧೆ ಗೆ ನಾಮಪತ್ರ ಸಲ್ಲಿಕೆ ಮಾಡಿದರು. ಇದನ್ನು ಗಮನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮುಸ್ಲಿಂ ಅಭ್ಯರ್ಥಿಗಳಿಗೆ ಮನವೊಲಿಸಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ರವರಿಗೆ ತಿಳಿಸಿದರು. ಆದರೆ ಅಲ್ಲಿನ ನಿರೀಕ್ಷಿತ ಮುಸ್ಲಿಂ ಅಭ್ಯರ್ಥಿ ಅದನ್ನು ಅನುಮತಿಸಲಿಲ್ಲಾ ಎಂದು ನಸೀರ್ ಅಹ್ಮದ್ ರವರು ದಾವಣಗೆರೆ ಹೋಗದೆ ಬಾಗಲಕೋಟೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಇಷ್ಟಕ್ಕೆ ಮುಸ್ಲಿಂ ಸಮುದಾಯದ ನಾಯಕರನ್ನು ಹುದ್ದೆಗಳಿಂದ ಕಾಂಗ್ರೆಸ್ ಪಕ್ಷ ವಜಾ ಮಾಡಿದ್ದು ಸರಿಯಾದ ಕ್ರಮವಲ್ಲ.
ಇದನ್ನೂ ಓದಿದ್ದೀರಾ? ಗ್ರಾಮ ಸ್ವರಾಜ್ಯದ ಸಾಕಾರ: ಜನರ ಕೈಗೆ ಅಧಿಕಾರ, ಸಮಸ್ಯೆಗೆ ಪರಿಹಾರ
ಕೇವಲ ಒಂದು ಸಣ್ಣ ತಪ್ಪಿಗೆ ಮುಸ್ಲಿಂ ಸಮುದಾಯದ ನಾಯಕರನ್ನು ನೋಟಿಸ್ ನೀಡಿದೆಯೇ ವಜಾ ಮಾಡುವ ಕಾಂಗ್ರೆಸ್ ಹೈಕಮಾಂಡ್ ಬೇರೆ ಸಮುದಾಯದ ನಾಯಕರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಸಹಾಯ ಮಾಡಿರುವ ಸಾಕಷ್ಟು ಉದಾಹರಣೆಗಳು ಇದ್ದರೂ ಕೂಡ ನೋಡದ ರೀತಿಯಲ್ಲಿ ಬಿಂಬಿಸಿದ್ದು, ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಎಲ್ಲಿ ಹೋಯಿತು. ಕೇವಲ ಮುಸ್ಲಿಂ ನಾಯಕರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಸಮುದಾಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ರಾಜಕೀಯ ಅಧಿಕಾರ ಮತ್ತು ಸಂರಕ್ಷಣಾ ಗುಂಪು ನಮಗೆ ಅತ್ಯಗತ್ಯ. ಕಾಂಗ್ರೆಸ್ ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಭರವಸೆಯನ್ನು ಈವರೆಗೆ ಈಡೇಸಿಸಲಿಲ್ಲ. ಮುಸ್ಲಿಂ ಸಮುದಾಯದ ನಾಯಕರ ಮೇಲೆ ಕ್ರಮ ಕೈಗೊಂಡು ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಇದರಿಂದಾಗಿ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಪೆಟ್ಟು ಬೀಳಲಿದೆ.



