ಹಿರಿಯ ಭಾಷಾಶಾಸ್ತ್ರಜ್ಞ, ವಿಮರ್ಶಕ ಡಾ. ಕೆ.ವಿ. ನಾರಾಯಣ ನಿಧನ

Date:

ಕನ್ನಡ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯ ಲೋಕಕ್ಕೆ ತಮ್ಮ ಅಪೂರ್ವ ಕೊಡುಗೆ ನೀಡಿದ ಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ, ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವಿ. ನಾರಾಯಣ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದ ಅವರು, ತಮ್ಮ ಆಳವಾದ ಅಧ್ಯಯನ ಮತ್ತು ವಿಶಿಷ್ಟ ಚಿಂತನೆಗಳ ಮೂಲಕ ಕನ್ನಡದ ಜ್ಞಾನ ಪರಂಪರೆಯನ್ನು ಶ್ರೀಮಂತಗೊಳಿಸಿದ್ದರು.

- Advertisement -

​ಡಾ. ಕೆ.ವಿ. ನಾರಾಯಣ ಅವರು 1948ರ ಅಕ್ಟೋಬರ್ 20ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಜನಿಸಿದರು. ಅವರ ತಾಯಿ ಕೆಂಚಮ್ಮ ಮತ್ತು ತಂದೆ ವೀರಣ್ಣ. ಪಿರಿಯಾಪಟ್ಟಣದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ. ಓದಿದರು ಹಾಗೂ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು. ಬಿ.ಎಡ್. ಮುಗಿಸಿದ ನಂತರ ಹೈಸ್ಕೂಲಿನಲ್ಲಿ ಅಧ್ಯಾಪನ ಆರಂಭಿಸಿದ ಅವರು, ಮುಂದೆ ಸ್ನಾತಕೋತ್ತರ ಸಾಹಿತ್ಯ ಓದಿಗಾಗಿ ಬೆಂಗಳೂರು ಸೇರಿದರು ಹಾಗೂ ಓದಿನ ಜೊತೆಯಲ್ಲೇ ಅವರ ಬರವಣಿಗೆಯ ಪಯಣವೂ ಸಾಗಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

​ಮೊದಲು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನವನ್ನು ಆರಂಭಿಸಿದ ಅವರು, ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆಗೊಂಡರು. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ – ಒಂದು ಅಧ್ಯಯನ’ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದರು. 1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು, ಆರಂಭದಲ್ಲೇ ರಿಜಿಸ್ಟ್ರಾರ್ ಆಗಿ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು ಮತ್ತು ಅಲ್ಲಿ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಅವಧಿಯಲ್ಲಿ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

​ವಿಜ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ವಿಮರ್ಶಕರಾಗಿ ಹಾಗೂ ಭಾಷಾಶಾಸ್ತ್ರಜ್ಞರಾಗಿ ಬೆಳೆದ ಇವರ ಕೃತಿಗಳು ಕನ್ನಡ ಜಗತ್ತಿಗೆ ಅಮೂಲ್ಯ ಕಾಣಿಕೆ. ಅವರ ಪ್ರಮುಖ ಕೃತಿಗಳಲ್ಲಿ ‘ಕನ್ನಡ ಜಗತ್ತು: ಅರ್ಧ ಶತಮಾನ’, ‘ನಮ್ಮೊಡನೆ ನಮ್ಮ ನುಡಿ’, ‘ಕನ್ನಡ ಶೈಲಿ ಕೈಪಿಡಿ’, ‘ನುಡಿಗಳ ಅಳಿವು’, ‘ದ್ವಿಭಾಷಿಕತೆ’, ಮತ್ತು ‘ಸ್ಥಳ ನಾಮಗಳು’ ಸೇರಿವೆ. ಸಾಹಿತ್ಯ ತತ್ವ ಹಾಗೂ ಅನುವಾದ ಕ್ಷೇತ್ರಗಳಿಗೂ ಅವರ ಕೊಡುಗೆ ಅಪಾರ; ವಿಶೇಷವಾಗಿ ಜೀನ್-ಪಾಲ್ ಸಾರ್ತ್ರೆ ಹಾಗೂ ಎರಿಕ್ ಫ್ರಾಮ್ ಅವರ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.

​ಡಾ. ಕೆ.ವಿ. ನಾರಾಯಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಲ್. ಬಸವರಾಜು ಪ್ರಶಸ್ತಿ, ಹಾಗೂ ಡಾ. ಜಿ.ಎಸ್.ಎಸ್. ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. ವಿಶೇಷವಾಗಿ ಅವರ ‘ನುಡಿಗಳ ಅಳಿವು’ ಕೃತಿಗೆ 2024ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಶ್ರೀಮತಿ ಡಾ. ಎಚ್.ಎಸ್. ಶ್ರೀಮತಿ ಅವರು ಸಹ ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಧಕಿ ಎನಿಸಿದ್ದಾರೆ.

​ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯಷ್ಟೇ ಅವರೊಂದಿಗೆ ಮಾತನಾಡಿದ್ದೆವು ಹಾಗೂ ಮುಂದಿನ ವಾರ ಕುಪ್ಪಳ್ಳಿಯಲ್ಲಿ ಸಮಯ ಕಳೆಯಲು ಸಿದ್ಧವಾಗಿದ್ದೆವು ಎಂದು ಸಾಹಿತ್ಯ ಬಳಗದ ಗಣ್ಯರು ತಮ್ಮ ದುಃಖವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮೃತರ ಸಾಹಿತ್ಯಕ ಚಿಂತನೆ, ಭಾಷಾ ಸೇವೆ ಮತ್ತು ವಿಚಾರಧಾರೆ ಸದಾ ನಮ್ಮೆಲ್ಲರಿಗೂ ದಾರಿದೀಪವಾಗಿರಲಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಕ್ರಿಸ್ಟಿಯಾನೊ ರೊನಾಲ್ಡೊ ವಿದಾಯ: 23 ವರ್ಷಗಳ ಸುದೀರ್ಘ ಪಯಣ ಅಂತ್ಯ

ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರು...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ ಭಾರತಕ್ಕೂ ಅನ್ವಯ!

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ...

ಫಾರಂ-7 ದುರುಪಯೋಗ, ಮತಗಳ್ಳತನದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ...

ಶ್ವೇತಭವನ ಗೆಲ್ಲಲು 2028ರ ತನಕ ಕಾಯಬೇಕು ಡೆಮಾಕ್ರಟ್ಸ್!

ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಭರ್ಜರಿ ಗೆಲುವು ಸಾಧಿಸಿದ್ದಾರೆ....