ಬಸವಕಲ್ಯಾಣ | ತಂತ್ರಜ್ಞಾನ ಬಳಕೆಯಲ್ಲಿ ವಿವೇಕ ಅಗತ್ಯ: ಡಾ.ರಮೇಶ ಕೆ.ಬಿ.

Date:

ಆಧುನಿಕ ತಂತ್ರಜ್ಞಾನ ಮಾನವ ಜಗತ್ತನ್ನು ಪಲ್ಲಟಗೊಳಿಸಿದ್ದು, ಅದರ ಶಕ್ತಿ ಮತ್ತು ಮಿತಿಗಳ ಕುರಿತು ವಿಮರ್ಶೆ ನಡೆಯಬೇಕು ಎಂದು ಎಸ್ ಎಸ್ ಕೆ ಬಿ ಕಾಲೇಜು ಪ್ರಾಚಾರ್ಯ ಡಾ.ರಮೇಶ ಕೆ.ಬಿ. ಹೇಳಿದರು.

- Advertisement -

ಬಸವಕಲ್ಯಾಣದ ಬಿಕೆಡಿಬಿ ಸಭಾಂಗಣದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ‘ಅರಿವಿನ ಪಯಣ’ 2026 ಶೈಕ್ಷಣಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಯಾವುದಕ್ಕಾಗಿ ಬಳಸಲಾಗುತ್ತಿದೆ ಎಂಬ ಯೋಚನೆ ಮತ್ತು ವಿವೇಕ ಇಂದು ಹೆಚ್ಚು ಅಗತ್ಯವಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಸಮಯಪ್ರಜ್ಞೆ, ಶಿಸ್ತು, ಕ್ರಿಯಾಶೀಲತೆ ವಿದ್ಯಾರ್ಥಿಗಳ ಜಾಯಮಾನವಾಗಬೇಕು. ಬದ್ಧತೆ, ಸತತ ಶ್ರಮ ಮತ್ತು ಅಧ್ಯಯನ ಸರ್ವತೋಮುಖ ಅಭಿವೃದ್ಧಿಯ ಮಾರ್ಗ. ಮೌಲ್ಯಗಳು, ಹಿರಿಯರ ಬಗೆಗಿನ ಗೌರವ ಹಾಗೂ ಸಕಾರಾತ್ಮಕ ಆಲೋಚನೆಗಳು ವಿದ್ಯಾರ್ಥಿಗಳ ಇಡೀ ವ್ಯಕ್ತಿತ್ವವನ್ನು ರೂಪಿಸುವ ಅಂಶಗಳಾಗಿವೆ ಎಂದರು.

ತಂತ್ರಜ್ಞಾನದ ಬಳಕೆ ಜ್ಞಾನ, ಅಭಿವೃದ್ಧಿ ಮತ್ತು ಕೌಶಲ್ಯದ ಬೆಳವಣಿಗೆಗೆ ಸಹಾಯಕವಾಗಿದೆ. ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್, ಚಾಟ್ ಜಿಪಿಟಿ ಮೊದಲಾದವುಗಳನ್ನು ಮಾಹಿತಿ ಮತ್ತು ಜ್ಞಾನಕ್ಕಾಗಿ ಬಳಸಬೇಕೇ ಹೊರತು ಮನರಂಜನೆಗಾಗಿ ಅಲ್ಲ ಎಂದು ಹೇಳಿದರು.

WhatsApp Image 2026 10 10 at 6.59.09 PM 13

ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ.ಎಸ್. ಭುರಾಳೆ ಮಾತನಾಡಿ, “ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಒಬ್ಬರನ್ನೊಬ್ಬರು ಗೌರವಿಸುವ ಗುಣ ಇಂದಿನ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಶಿಕ್ಷಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ಕಾಳಜಿ ಯುವಕರಲ್ಲಿ ಮೂಡಬೇಕು” ಎಂದರು.

ಬಿಡಿಪಿಸಿ ನಿರ್ದೇಶಕಿ ಪುಷ್ಪಾವತಿ ಮಾಮಾ ಮಾತನಾಡಿ, “ಹೊಸ ಯೋಚನೆ, ಹೊಸ ಚಿಂತನೆಗಳ ಮೂಲಕ ಕಾಲೇಜು ಕ್ಯಾಂಪಸ್ ರೂಪಿಸಿ ವಿದ್ಯಾರ್ಥಿಗಳಲ್ಲಿ ಹೊಸ ಅರಿವು ಮೂಡಿಸಬೇಕು. ಅಧ್ಯಾಪಕರು ನಿರಂತರ ಅಧ್ಯಯನ ಮಾಡಿ ವಿನೂತನ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು” ಎಂದರು.

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಜ್ಞಾನದ ಭಾಷೆ ಮತ್ತು ಬದುಕಿನ ಭಾಷೆಯನ್ನು ಒಂದುಗೂಡಿಸುವ ಕೆಲಸ ಶಿಕ್ಷಣದಿಂದ ಸಾಧ್ಯವಾಗಬೇಕು. ಬದುಕಿನ ಸಹಜತೆಗಿಂತ ಧಾವಂತ, ಹಪಾಹಪಿತನಗಳನ್ನು ಹೆಚ್ಚಿಸಿ, ವ್ಯವಧಾನ ಮತ್ತು ಆಲೋಚನಾ ಕ್ರಮವನ್ನು ಮಾಯವಾಗಿಸುವ ಶಿಕ್ಷಣ ಪದ್ಧತಿ ಅಪಾಯಕಾರಿ. ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ, ವಿವೇಕ, ಅಂತಃಕರಣ ಬೆಳೆಸುವ ಅರಿವಿನ ದಾರಿಯನ್ನು ಕಂಡುಕೊಳ್ಳಬೇಕು” ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಅಶೋಕ ರೆಡ್ಡಿ ಗದಲೇಗಾಂವ, ಗಾಯಕರಾದ ವೀರೇಶ ವಸ್ತ್ರದ, ಆಕಾಶ ಬಾಲಕಿಲೆ, ಕೃಷ್ಣಾ ಗೌಳಿ ಮತ್ತು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆಕಾಶ ಬಾಲಕಿಲೆ ಮತ್ತು ವೀರೇಶ ಸ್ವಾಮಿ ವಸ್ತ್ರದ ಅವರಿಂದ ಹಾಡುಗಾರಿಕೆ ನೆರವೇರಿತು.

WhatsApp Image 2026 10 10 at 7.46.08 PM 34

ಬಿಡಿಪಿಸಿ ನಿರ್ದೇಶಕ ಬಸವರಾಜ ತೊಂಡಾರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಅಶೋಕ ರೆಡ್ಡಿ ಗದಲೇಗಾಂವ, ಬಿಡಿಪಿಸಿ ಸಹಕಾರ್ಯದರ್ಶಿ ಸುನಿಲ ರಾಯವಾಡೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಶ್ರೀ ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ, ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಉಪನ್ಯಾಸಕರಾದ ಶ್ರೀನಿವಾಸ ಉಮಾಪುರೆ, ಪವನ ಪಾಟೀಲ, ವಿವೇಕಾನಂದ ಶಿಂಧೆ, ಪ್ರಿಯಾ ಚೌಹಾನ್, ನಾಗವೇಣಿ ಬಿರಾದಾರ, ಶೀತಲ್ ರೆಡ್ಡಿ, ಡಾ. ಬಸವರಾಜ ಖಂಡಾಳೆ, ಸನತ್ ರೆಡ್ಡಿ, ಸೌಮ್ಯಾ ಜೋಶಿ, ಸಚಿನ್ ಬಿಡುವೆ, ಐಶ್ವರ್ಯಾ ಖರೊಣೆ, ನಾಗರಾಜ ನಾಸೆ, ಸುಮಾ, ಎಂಡಿ ಜಬಿ, ಸಂಗೀತಾ ಮಹಾಗಾವೆ, ರೋಷನ್ ಬಿ, ಮಯೂರಿ ಪಾಟೀಲ, ಗಂಗಾಧರ ಸಾಲಿಮಠ ಮೊದಲಾದವರು ಇದ್ದರು. ಜ್ಯೋತಿ ತೂಗಾವೆ ನಿರೂಪಿಸಿ ವಂದಿಸಿದರು.

ಇದನ್ನೂ ಓದಿ : ಬೀದರ್ | 436 ಅಂಗನವಾಡಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಾರಂ-7 ದುರುಪಯೋಗ, ಮತಗಳ್ಳತನದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ...

ಶ್ವೇತಭವನ ಗೆಲ್ಲಲು 2028ರ ತನಕ ಕಾಯಬೇಕು ಡೆಮಾಕ್ರಟ್ಸ್!

ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಭರ್ಜರಿ ಗೆಲುವು ಸಾಧಿಸಿದ್ದಾರೆ....

3 ತಿಂಗಳ ಬಳಿಕ ಐಟಿ ವಿಭಾಗದ ಮೇಲುಸ್ತುವಾರಿ ಹಿಂಪಡೆದ ಚು. ಆಯೋಗ!

ಕೇಂದ್ರ ಚುನಾವಣಾ ಆಯೋಗದಲ್ಲಿ (ECI) ಕಾರ್ಯ ಹಂಚಿಕೆ ಆದೇಶಕ್ಕೆ ಸಂಬಂಧಿಸಿದಂತೆ ಮುಖ್ಯ...

‘ಚಾಯ್ ಪೇ ಚರ್ಚಾ’ – ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಆಹ್ವಾನ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಪ್ರಮುಖ ಹಿರಿಯ...