ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

Date:

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಧ್ವನಿಗಳು ಸೊಲ್ಲಡಗಿದ್ದೇಕೆ?

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಮ್ಮೇಳನಗಳು ಮತ್ತು ಕ್ಯಾಂಪಸ್ ಅಂಗಳಗಳು ವಹಿಸಿದ ಪಾತ್ರ ಅತ್ಯಂತ ಮಹತ್ವದ್ದು. ಹೊಸ ರಾಜಕೀಯ ನಾಯಕತ್ವವನ್ನು, ಸೈದ್ಧಾಂತಿಕ ಸ್ಪಷ್ಟತೆಯನ್ನು ಮತ್ತು ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದ ಕಿಚ್ಚನ್ನು ಹಚ್ಚಿದ ಪ್ರಮುಖ ಕ್ಯಾಂಪಸ್‌ಗಳ ಪೈಕಿ ಉತ್ತರ ಪ್ರದೇಶದ ಅಲೀಗಢ ಮುಸ್ಲಿಮ್ ವಿಶ್ವವಿದ್ಯಾಲಯ (ಎಎಂಯು) ಮತ್ತು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಮುಂಚೂಣಿಯಲ್ಲಿದ್ದವು.

- Advertisement -

ಮಹಾತ್ಮ ಗಾಂಧೀಜಿ, ಮೌಲಾನಾ ಅಬುಲ್ ಕಲಾಮ್ ಆಜಾದ್, ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಡಾ. ಜಾಕೀರ್ ಹುಸೇನ್ ಅವರಂತಹ ರಾಷ್ಟ್ರನಾಯಕರ ವಿಚಾರಧಾರೆಯ ಗರಡಿಯಾಗಿ ರೂಪುಗೊಂಡ ಈ ಕ್ಯಾಂಪಸ್‌ಗಳು, ಸ್ವಾತಂತ್ರ್ಯೋತ್ತರ ಭಾರತದಲ್ಲೂ ಸಾಮಾಜಿಕ ಮತ್ತು ರಾಜಕೀಯ ಚರ್ಚೆಗಳ ವೇದಿಕೆಯಾಗಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇತ್ತ ಬೆಲೆ ಏರಿಕೆಯ ‘ಬರೆ’, ಅತ್ತ 1 ಟ್ರಿಲಿಯನ್‌...

ಒಂದೆಡೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ಸರ್ಕಾರ "ಟ್ರಿಲಿಯನ್ ಡಾಲರ್ ಆರ್ಥಿಕತೆ"ಯ ಭವ್ಯ ಚಿತ್ರಣವನ್ನು ಸಾರ್ವಜನಿಕರ ಮುಂದಿಡುತ್ತಿವೆ. ಸದ್ಯ ಕರ್ನಾಟಕದಲ್ಲಿ ಕಂಡುಬರುತ್ತಿರುವ...

ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗರ್ವಭಂಗ: ಸೊಕ್ಕು ಮುರಿದ...

ಈ ಚುನಾವಣಾ ಫಲಿತಾಂಶದಿಂದ ಟ್ರಂಪ್ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ. ಆದರೆ, ಮುಂದಿನ ಜನವರಿ 3ರಂದು ಹೊಸ ಕಾಂಗ್ರೆಸ್ (ಸಂಸತ್ತು) ಅಸ್ತಿತ್ವಕ್ಕೆ ಬಂದ ಬಳಿಕ ಅವರ ಆಡಳಿತದ ಹಾದಿ ಅತ್ಯಂತ ದುರ್ಗಮವಾಗಲಿದೆ....

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ನಾಮ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಹಿನ್ನೆಲೆಗೆ ಸರಿಸಿ, ಲಿಂಗಾಯತ ಪ್ರಾಬಲ್ಯವನ್ನು...

ಆದರೆ ಕಳೆದೆರಡು ದಶಕಗಳಲ್ಲಿ, ಅದರಲ್ಲೂ ವಿಶೇಷವಾಗಿ ಕಳೆದ ಒಂದು ದಶಕದ ಅವಧಿಯಲ್ಲಿ, ಈ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ಯಾಂಪಸ್ ರಾಜಕಾರಣದ ಹರಣಗೊಳ್ಳುತ್ತಿದೆ. ದಶಕಗಳ ಹಿಂದೆ ಪ್ರಸಕ್ತ ವಿಚಾರಗಳ ಬಗ್ಗೆ ಬಿಸಿಬಿಸಿ ಚರ್ಚೆಗಳು, ಕರಪತ್ರಗಳು ಮತ್ತು ಭಾಷಣದ ಗರ್ಜನೆಗಳಿಂದ ಗಿಜಿಗುಡುತ್ತಿದ್ದ ಈ ಕ್ಯಾಂಪಸ್‌ಗಳು, ಇಂದು ಮೌನಕ್ಕೆ ಶರಣಾದಂತಿವೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ವಿವಿ ಕ್ಯಾಂಪಸ್‌ಗಳಿಗೆ ಕೇಸರಿ ಗರ ಬಡಿದಿದೆ; ದೊಡ್ಡರೋಗದ ಅಪಾಯವಿದು!

ಅಷ್ಟಕ್ಕೂ ಸ್ವಾತಂತ್ರ್ಯದ ಆಶಯಗಳನ್ನು ಎತ್ತಿ ಹಿಡಿದು ಬೆಳೆದ ಈ ಐತಿಹಾಸಿಕ ವಿವಿಗಳ ವಿದ್ಯಾರ್ಥಿ ರಾಜಕಾರಣ ತರುವಾಯ ಸೊಲ್ಲಡಗಿದ್ದೇಕೆ? ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂದ ಬಳಿಕ ವಿದ್ಯಾರ್ಥಿ ರಾಜಕಾರಣವನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಗುತ್ತಿದೆಯೇ? – ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಡುತ್ತಾ ಸಾಗಿದಾಗ ಸ್ಫುಟವಾಗಿ ಕಾಣುವುದು ವಿದ್ಯಾರ್ಥಿ ಯೂನಿಯನ್ (ಸಂಘ) ಚುನಾವಣೆಗಳ ನಿಷೇಧ. ಇದೊಂದೇ ಅಲ್ಲ ವಿದ್ಯಾರ್ಥಿಗಳ ಮೇಲೆ ಪೊಲೀಸ್ ತನಿಖೆಗಳ ಅಸ್ತ್ರ, ಕ್ಯಾಂಪಸ್ ಆಡಳಿತ ಮಂಡಳಿಗಳ ಕಟ್ಟುನಿಟ್ಟಿನ ನಿಯಮಾವಳಿಗಳೂ ಇಂದಿನ ಕ್ಯಾಂಪಸ್‌ಗಳಲ್ಲಿ ಪ್ರಜಾಸತ್ತಾತ್ಮಕ ಧ್ವನಿಗಳನ್ನು ಹತ್ತಿಕ್ಕಿವೆ.

ಸ್ವಾತಂತ್ರ್ಯ ಚಳವಳಿ: ಮುಸ್ಲಿಂ ವಿಶ್ವವಿದ್ಯಾಲಯ

ಬ್ರಿಟಿಷ್ ವಿರೋಧಿ ಅಸಹಕಾರ ಚಳವಳಿಯ ಸಂದರ್ಭದಲ್ಲೇ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಆರಂಭವಾಗಿದ್ದು. 1920ರಲ್ಲಿ ಅಲೀಗಢದ ಸಿದ್ದನ್ಸ್ ಹಾಲ್‌ನಿಂದ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಹೊರಬಂದ ಜಾಕೀರ್ ಹುಸೇನ್ ನೇತೃತ್ವದ 22 ವಿದ್ಯಾರ್ಥಿಗಳ ಬಳಗ, ಸ್ವದೇಶಿ ಶಿಕ್ಷಣ ಸಂಸ್ಥೆಯಾಗಿ ಜಾಮಿಯಾವನ್ನು ಸ್ಥಾಪಿಸಿತು. ಅತ್ತ ಅಲೀಗಢ ಮುಸ್ಲಿಮ್ ವಿಶ್ವವಿದ್ಯಾಲಯವು ಆಧುನಿಕ ಮುಸ್ಲಿಂ ಸಮುದಾಯದ ಬೌದ್ಧಿಕ ಬೆಳವಣಿಗೆಗೆ ಮತ್ತು ಭಾರತದ ರಾಜಕೀಯ ಭವಿಷ್ಯದ ರೂಪುರೇಷೆಗೆ ಪ್ರಮುಖ ತಾಣವಾಯಿತು.

ಸ್ವಾತಂತ್ರ್ಯಾ ನಂತರವೂ ಈ ಎರಡೂ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘ ಅತ್ಯಂತ ಶಕ್ತಿಶಾಲಿಯಾಗಿ ಕಾರ್ಯಾಚರಿಸುತ್ತಿತ್ತು. ವಿದ್ಯಾರ್ಥಿ ಚುನಾವಣೆಯ ಅಭ್ಯರ್ಥಿಗಳಿಗೆ ವೇದಿಕೆಯಲ್ಲೇ ವಿಷಯ ನೀಡಿ ತಕ್ಷಣ ಭಾಷಣ ಮಾಡಿಸುವ ಸಂಪ್ರದಾಯ ಇಲ್ಲಿತ್ತು. ಇದು ಕೇವಲ ಮತಬ್ಯಾಂಕ್ ರಾಜಕೀಯವಾಗಿರದೆ, ಪ್ರಜಾಪ್ರಭುತ್ವದ ಪ್ರಬುದ್ಧ ನಾಯಕರನ್ನು ರೂಪಿಸುವ ಗರಡಿಯಾಗಿತ್ತು. 1970 ಮತ್ತು 1980ರ ದಶಕಗಳಲ್ಲಿ ದೇಶದ ವಿವಿಧ ರಾಷ್ಟ್ರೀಯ ಮತ್ತು ಸಾಮಾಜಿಕ ವಿದ್ಯಮಾನಗಳ ವಿರುದ್ಧ ಧ್ವನಿ ಎತ್ತುವಲ್ಲಿ ಈ ಕ್ಯಾಂಪಸ್‌ಗಳ ವಿದ್ಯಾರ್ಥಿ ಸಂಘಟನೆಗಳು ಮುಂಚೂಣಿಯಲ್ಲಿದ್ದವು.

ಆದರೆ, 2000ರ ದಶಕದ ಆರಂಭದಿಂದಲೇ ಈ ಎರಡು ಕ್ಯಾಂಪಸ್‌ಗಳ ರಾಜಕೀಯ ರಂಗದಲ್ಲಿ ಬದಲಾವಣೆಗಳು ಶುರುವಾದವು. ಕ್ಯಾಂಪಸ್‌ನಲ್ಲಿ ಅಶಾಂತಿ, ಶಿಸ್ತು ಉಲ್ಲಂಘನೆ ಮತ್ತು ವಿದ್ಯಾರ್ಥಿ ಬಣಗಳ ನಡುವಿನ ಗಲಾಟೆಯನ್ನು ನೆಪವಾಗಿಟ್ಟುಕೊಂಡು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ 2006ರಲ್ಲಿ ವಿದ್ಯಾರ್ಥಿ ಸಂಘವನ್ನು (JMISU) ವಿಸರ್ಜಿಸಲಾಯಿತು. ಇದೇ ಕಾರಣ ನೀಡಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಚುನಾವಣೆಗಳನ್ನು ಅಮಾನತಿನಲ್ಲಿಟ್ಟಿತು. ಅದಾದ ಬಳಿಕ ಲಿಂಗ್ಡೋ ಸಮಿತಿಯ ಶಿಫಾರಸುಗಳು (ವಯೋಮಿತಿ, ಚುನಾವಣಾ ವೆಚ್ಚ, ಅಂಕಗಳ ಮಾನದಂಡ) ಕ್ಯಾಂಪಸ್ ರಾಜಕಾರಣದ ಸ್ವರೂಪವನ್ನು ಬಿಗಿಗೊಳಿಸಿದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಂಘಟಿತರಾಗುವ ಹಕ್ಕನ್ನೇ ಮೊಟಕುಗೊಳಿಸಲು ಪ್ರಾರಂಭಿಸಲಾಯಿತು.

ಇದನ್ನೂ ಓದಿ: ಈ ದಿನ ಸಂಪಾದಕೀಯ |ಮುಂಬಯಿ TISS ವಿದ್ಯಾರ್ಥಿಗಳ ‘ಕ್ಯಾಂಪಸ್‌ ರಾಜಕೀಯ’ ದಮನ ಸಲ್ಲದು!

ಮೋದಿ ಆಡಳಿತದಲ್ಲಿ ಕ್ಯಾಂಪಸ್ ರಾಜಕಾರಣದ ಹರಣ

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚಳವಳಿಗಳ ಮೇಲಿನ ನಿಗಾ ಮತ್ತು ತನಿಖೆ ತೀವ್ರಗೊಂಡಿತು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಐತಿಹಾಸಿಕ ಚಳವಳಿಯ ಕೇಂದ್ರಬಿಂದು ಎಎಂಯು ಮತ್ತು ಜಾಮಿಯಾ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಾಗಿದ್ದವು. 2019ರ ಡಿಸೆಂಬರ್‌ನಲ್ಲಿ ಜಾಮಿಯಾ ಕ್ಯಾಂಪಸ್‌ಗೆ ದೆಹಲಿ ಪೊಲೀಸರು ಅತಿಕ್ರಮಿಸಿ ವಿದ್ಯಾರ್ಥಿಗಳ ಮೇಲೆ ನಡೆಸಿದ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗವು ಇಂದಿಗೂ ಮರೆಯಲಾಗದ್ದು.

ಸಿಎಎ ಪ್ರತಿಭಟನೆಯ ನಂತರ, ಸಾಫೂರ ಝರ್ಗರ್, ಉಮರ್ ಖಾಲಿದ್ ಅವರಂತಹ ವಿದ್ಯಾರ್ಥಿ ನಾಯಕರ ಮೇಲೆ ಯುಎಪಿಎನಂತಹ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ಬಂಧಿಸಲಾಯಿತು. ಉಮರ್ ಇಂದಿಗೂ ಅತ್ತ ವಿಚಾರಣೆ ಇಲ್ಲದೆ, ಇತ್ತ ಜಾಮೀನೂ ಸಿಗದೆ ಜೈಲಿನಲ್ಲಿದ್ದಾರೆ. ಇದು ಸಾಮಾನ್ಯ ವಿದ್ಯಾರ್ಥಿಗಳಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಲು ಭೀತಿಯ ವಾತಾವರಣವನ್ನು ಹುಟ್ಟುಹಾಕಿತು. ಕೇಂದ್ರ ಸರ್ಕಾರದ ಉದ್ದೇಶವೂ ಅದೇ ಆಗಿತ್ತು.

ಇವೆರಡು ಮಾತ್ರವಲ್ಲದೆ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು (ವಿಸಿ) ಮತ್ತು ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರದ ಆಶಯಗಳಿಗೆ ಪೂರಕವಾಗಿ ಸ್ಪಂದಿಸುವ ಅಧಿಕಾರಿಗಳನ್ನು ನೇಮಿಸಲಾಯಿತು. ಅವರು ವಿದ್ಯಾರ್ಥಿ ಪ್ರತಿಭಟನೆಗಳಿಗೆ ಅವಕಾಶ ನೀಡದೆ, ಪ್ರದರ್ಶನ ನಡೆಸಿದರೆ ಅಮಾನತು ಅಥವಾ ನೋಟಿಸ್ ನೀಡುವ ಬಿಗಿ ಕ್ರಮ ಕೈಗೊಂಡರು. ಅಷ್ಟು ಮಾತ್ರವಲ್ಲದೆ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಮುಸ್ಲಿಂ ವಿವಿಗಳನ್ನು “ದೇಶವಿರೋಧಿ ಚಟುವಟಿಕೆಗಳ ತಾಣ” ಎಂದು ಬಿಂಬಿಸಲು ಯತ್ನಿಸಿದರು.

ಹೀಗೆ ಕಳೆದ ಎರಡು ದಶಕಗಳಿಂದ ಸೊಲ್ಲಡಗಿದ್ದ ಈ ಕ್ಯಾಂಪಸ್‌ಗಳಲ್ಲಿ ಪ್ರಜಾಪ್ರಭುತ್ವದ ಧ್ವನಿಗಳು ಮತ್ತೆ ಜಾಗೃತಗೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾಮಿಯಾ ಮತ್ತು AMU ವಿದ್ಯಾರ್ಥಿಗಳು ನಡೆಸಿದ ಸತತ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆಗಳ ಫಲವಾಗಿ, ದೀರ್ಘಾವಧಿಯ ನಂತರ ವಿದ್ಯಾರ್ಥಿ ಯೂನಿಯನ್ ಚುನಾವಣೆಗಳನ್ನು ನಡೆಸಲು ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿವೆ. ಇದು ಕ್ಯಾಂಪಸ್ ನಾಯಕತ್ವದ ಪುನರುತ್ಥಾನಕ್ಕೆ ಹೊಸ ಭರವಸೆ ಮೂಡಿಸಿದೆ.

ಸುದೀರ್ಘ ಮೌನದ ನಂತರವೂ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಮತ್ತೆ ಧ್ವನಿ ಎತ್ತುತ್ತಿರುವುದು, ದೇಶದ ಪ್ರಜಾಪ್ರಭುತ್ವದ ಬೇರುಗಳು ಕ್ಯಾಂಪಸ್‌ಗಳಲ್ಲಿ ಇಂದಿಗೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬರುವ ದಿನಗಳಲ್ಲಿ ಈ ಸಂಸ್ಥೆಗಳು ತಮ್ಮ ಗತವೈಭವದ ಬೌದ್ಧಿಕ ಚರ್ಚೆಗಳನ್ನು ಮರಳಿ ಪಡೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್ ಹಿಂಸಾಚಾರ: ವರದಿ ಸಲ್ಲಿಕೆಗೆ ಸಮಿತಿಗೆ 1 ತಿಂಗಳ ಗಡುವು ನೀಡಿದ ಸುಪ್ರೀಂ ಕೋರ್ಟ್

ಜುಲೈನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಸಂಭವಿಸಿದ...

ದಕ್ಷಿಣ ಭಾರತದತ್ತ ಈಶಾನ್ಯ ರಾಜ್ಯಗಳ ಕಾರ್ಮಿಕರು: ಪ್ರತ್ಯೇಕ ‘ವಲಸೆ ಕಾರಿಡಾರ್‌’ಗಳ ಕುರಿತು ಅಧ್ಯಯನ ವರದಿ ಬಹಿರಂಗ

ಈಶಾನ್ಯ ಭಾರತದ ವಿವಿಧ ಜಿಲ್ಲೆಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಕೆಲಸದ ಹುಡುಕಾಟದಲ್ಲಿ...

ಮತ ಕಳವು ಸಹಿಸಲಾಗದು; SIR ರದ್ದಾಗಬೇಕು, ಗ್ಯಾನೇಶ್ ರಾಜೀನಾಮೆ ಕೊಡಬೇಕು: ಸಿದ್ದರಾಮಯ್ಯ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಕಾನೂನು ಮತ್ತು...

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು...