‘ಭೂಹೋರಾಟ ನಿಲ್ಲಿಸಬೇಡ, ಆರ್‌ಎಸ್‌ಎಸ್‌ ವಿರುದ್ಧದ ಸಂಘರ್ಷ ಕೈಬಿಡಬೇಡ’ ಎನ್ನುತ್ತಿದ್ದರು ಎಚ್‌ಎಸ್‌ಡಿ: ಜಿಗ್ನೇಶ್‌ ಮೆವಾನಿ

Date:

“ದೊರೆಸ್ವಾಮಿ ಅವರ ಮುಖ ನೆನಪಿಗೆ ಬಂದಾಗೆಲ್ಲ ಗುಜರಾತಿನ ಒಬ್ಬ ಗಾಂಧಿವಾದಿಯ ನೆನಪಾಗುತ್ತದೆ. ಅವರ ಹೆಸರು ಚುನಿಗಾಯ. ಅವರಿಗೂ 99 ವರ್ಷ ವಯಸ್ಸು. ಅವರು ಭೂಹೀನರ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರು.  ಕಾರ್ಪೋರೇಟ್‌ ಶಕ್ತಿಗಳ ವಿರುದ್ಧವೂ ಹೋರಾಡುತ್ತಿದ್ದರು. ದೊರೆಸ್ವಾಮಿ ಮತ್ತು ಚುನಿ ದಾದ ಅವರ ನಡುವೆ ಬಹಳ ಸಾಮ್ಯತೆ ಇದೆ. ಈ ಇಬ್ಬರನ್ನೂ ನೆನೆಯುವುದು ಎಂದರೆ ಭೂಹೀನರ ಹಕ್ಕಿಗಾಗಿ, ಕಂಪನಿಗಳ ದುರಾಕ್ರಮಣ ನೀತಿಗಳ ವಿರುದ್ಧ ಹೋರಾಡುವುದೇ ಆಗಿದೆ” ಎಂದು ಗುಜರಾತ್‌ನ ಕಾಂಗ್ರೆಸ್‌ ಶಾಸಕ, ಊನಾ ಚಳುವಳಿ ನೇತಾರ ಜಿಗ್ನೇಶ್‌ ಮೆವಾನಿ ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ದಿ. ಸ್ವಾತಂತ್ರ್ಯ ಸೇನಾನಿ ಎಚ್‌.ಎಸ್‌ ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಾವು ಅನೇಕ ಸೈದಾಂತಿಕ ಧಾರೆಯ ಕಾರ್ಯಕರ್ತರನ್ನು ಕಂಡಿದ್ದೇವೆ. ಆದರೆ, ದೊರೆಸ್ವಾಮಿ ಅವರನ್ನು ಕಂಡಾಗೆಲ್ಲ ಒಳಗಿಂದ ಒಂದು ಪರಿತಪಿಕೆ ಮೂಡುತ್ತಿತ್ತು. ಇಂತಹ ಬದ್ಧತೆ ನನ್ನೊಳಗೂ ಬರಲು ಸಾಧ್ಯವಾಗಬೇಕು ಎನ್ನಿಸುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

“ನಾನು ದೊರೆಸ್ವಾಮಿ ಅವರನ್ನು ಭೇಟಿ ಮಾಡಿದಾಗೆಲ್ಲ, ಅವರು, ‘ಭೂಮಿಗಾಗಿ ಹೋರಾಟ ನಿಲ್ಲಿಸಬೇಡ. ಆರ್‌ಎಸ್‌ಎಸ್‌ ವಿರುದ್ಧದ ಹೋರಾಟ ಕೈಬಿಡಬೇಡ’ ಎನ್ನುತ್ತಿದ್ದರು. ಅವರ ಈ ಮಾತುಗಳು ನನ್ನ ಎದೆಯಲ್ಲಿ ಅಚ್ಚೊತ್ತಿ ಕೂತಿವೆ” ಎಂದಿದ್ದಾರೆ.

“ದೊರೆಸ್ವಾಮಿ ಅವರ ಕೆಲಸಗಳನ್ನು ಮತ್ತು ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಸಾಮಾಜಿಕ ಕಾರ್ಯಕರ್ತರಿಗೆ ನಾವು ‘ದೊರೆಸ್ವಾಮಿ ಪ್ರಶಸ್ತಿ’ ನೀಡಬೇಕು ಎಂಬ ಪ್ರಸ್ತಾಪ ನನ್ನದು. ದೊರೆಸ್ವಾಮಿ ಯಾರಾಗಿದ್ದರು ಎಂಬುದು ಹೊಸ ಪೀಳಿಗೆಯ ಕಾರ್ಯಕರ್ತರಿಗೂ ಅರ್ಥವಾಗಬೇಕು. ಅವರ ಚಿಂತನೆಗಳು ಏನಾಗಿದ್ದವು, ಅವರ ಕೊಡುಗೆ ಏನಾಗಿತ್ತು ಎಂಬುದು ಎಲ್ಲರಿಗೂ ತಿಳಿಯಬೇಕು” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

“ದೊರೆಸ್ವಾಮಿ ಅವರ ಕನಸಿನ ಸಾಕಾರಕ್ಕಾಗಿ, ಭೂಮಿ ವಸತಿ ಹಕ್ಕಿಕ್ಕಾಗಿ ಜನಶಕ್ತಿ, ಎದ್ದೇಳು ಕರ್ನಾಟಕ ಮುಂತಾದ ಸಂಘಟನೆಗಳು ಬಹಳ ಮಹತ್ವದ ಕೆಲಸ ಮಾಡುತ್ತಿವೆ. ಊನಾ ಚಳವಳಿಯಿಂದ ಸ್ಪೂರ್ತಿ ಪಡೆದು ಇಲ್ಲಿ ಉಡುಪಿ ಚಲೋ ನಡೆದಿತ್ತು. ಅದಕ್ಕೆ ನನಗೆ ಆಹ್ವಾನಿಸಲಾಗಿತ್ತು. ಅದಾಗಿ ಈಗ 10 ವರ್ಷಗಳಾಗಿವೆ. ಈ ಹೋರಾಟವನ್ನು ನಾವು ಮುಂದುವರಿಸೋಣ. ಹೋರಾಡೋಣ. ಗೆಲುವು ಸಾಧಿಸೋಣ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಮುಂಬೈನಲ್ಲಿ ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಬಂಧನ

ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮುಂಬೈನ...

ಶಿವಮೊಗ್ಗ | ಜಿಪಂ, ತಾಪಂ ಮೀಸಲಾತಿ ಕರಡು ಪಟ್ಟಿ ಬಿಡುಗಡೆ; ಆಕ್ಷೇಪಣೆ ಸಲ್ಲಿಸಲು ಅ. 19 ಕೊನೆಯ ದಿನಾಂಕ

ಶಿವಮೊಗ್ಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಮೀಸಲಾಟ ಕರಡು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಜಂತರ್‌ ಮಂತರ್‌ನಲ್ಲಿ ವರದಿಗಾರರಿಗೂ ಪೊಲೀಸರ ನಿರ್ಬಂಧ

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಮೊಳೆಗಳು, ಬ್ಯಾರಿಕೇಡ್‌ಗಳು ಹಾಗೂ...