‘ನೋವು, ಆಘಾತಗಳೇ ನನ್ನನ್ನು ರಾಜಕೀಯಕ್ಕೆ ನೂಕಿದವು’: ನವೆಂಬರ್‌ನಲ್ಲಿ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ

Date:

“ರಾಜಕೀಯದಿಂದ ನಿಧಾನವಾಗಿ ಹಿಂದೆ ಸರಿದು ನನ್ನ ಬದುಕನ್ನು ಹಿಂತಿರುಗಿ ನೋಡಿದಾಗ, ಇಟಲಿಯ ಪುಟ್ಟ ಪಟ್ಟಣದ ಸರಳ ಬಾಲ್ಯದಿಂದ ಹಿಡಿದು ರಾಜೀವ್ ಗಾಂಧಿ ಪತ್ನಿಯಾಗಿ, ಇಂದಿರಾ ಗಾಂಧಿ ಸೊಸೆಯಾಗಿ ಭಾರತದಲ್ಲಿ ಕಳೆದ ಸಂಕೀರ್ಣ ವರ್ಷಗಳವರೆಗೆ ಪ್ರೀತಿ ಮತ್ತು ನಿಷ್ಠೆಯ ಎಳೆಯೊಂದು ನನ್ನ ಕಥೆಯನ್ನು ವ್ಯಾಖ್ಯಾನಿಸುತ್ತಾ ಹೋಯಿತು”

- Advertisement -

‘ಹೃದಯವಿದ್ರಾವಕ ನೋವು ಮತ್ತು ಆಘಾತಗಳೇ ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಅನಿವಾರ್ಯವಾಗಿ ನೂಕಿದವು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ತಮ್ಮ ಮುಂಬರುವ ಆತ್ಮಕಥೆಯಲ್ಲಿ ಬಿಚ್ಚಿಟ್ಟಿದ್ದಾರೆ. ನೆಹರು-ಗಾಂಧಿ ಮನೆತನದ ಸೊಸೆಯಾಗಿ ಅವರು ಅನುಭವಿಸಿದ ಸಂತೋಷ, ದುರಂತಗಳು ಹಾಗೂ ಹಲವು ಕುತೂಹಲಕಾರಿ ಸಂಗತಿಗಳನ್ನು ಒಳಗೊಂಡ ಅವರ ಬಹುನಿರೀಕ್ಷಿತ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಇದೇ ನವೆಂಬರ್ 10ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಟೋನಿ ಮಾರಿಸನ್ ಮತ್ತು ಕಜುವೊ ಇಶಿಗುರೊ ಅವರಂತಹ ಖ್ಯಾತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿರುವ ‘ಪೆಂಗ್ವಿನ್ ರಾಂಡಮ್ ಹೌಸ್’ನ ಪ್ರತಿಷ್ಠಿತ ಅಂಗಸಂಸ್ಥೆಯಾದ ‘ಆಲ್ಫ್ರೆಡ್ ಎ. ಕ್ನಾಫ್’ (Alfred A. Knopf) ಈ ಪುಸ್ತಕವನ್ನು ಜಾಗತಿಕವಾಗಿ ಹೊರತರುತ್ತಿದೆ. ಅತಿ ದೀರ್ಘಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿರುವ 79 ವರ್ಷದ ಸೋನಿಯಾ ಗಾಂಧಿ ಅವರ ಬದುಕಿನ ಮಹತ್ವದ ಘಟ್ಟಗಳನ್ನು ಈ ಪುಸ್ತಕವು ಅತ್ಯಂತ ಸುದೀರ್ಘವಾಗಿ ಹಾಗೂ ನೈಜವಾಗಿ ಕಟ್ಟಿಕೊಡಲಿದೆ.

ಇಟಲಿಯ ಪುಟ್ಟ ಪಟ್ಟಣವೊಂದರಲ್ಲಿ ಜನಿಸಿದ ಅವರು, ಉನ್ನತ ವ್ಯಾಸಂಗಕ್ಕಾಗಿ ಕೇಂಬ್ರಿಡ್ಜ್‌ಗೆ ತೆರಳಿದ್ದರು. ಅಲ್ಲಿ ಓದುತ್ತಿದ್ದಾಗ ಜವಾಹರಲಾಲ್ ನೆಹರು ಅವರ ಮೊಮ್ಮಗ ಹಾಗೂ ಇಂದಿರಾಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರ ಪರಿಚಯವಾಗಿ, ಅದು ಪ್ರೇಮಾಂಕುರಕ್ಕೆ ತಿರುಗಿತ್ತು. ಆನಂತರ ನೆಹರು-ಗಾಂಧಿ ಕುಟುಂಬದ ಸೊಸೆಯಾಗಿ ಸಾರ್ವಜನಿಕ ಬದುಕಿಗೆ ಬರುವವರೆಗೂ ತಾವು ತಮ್ಮ ಖಾಸಗಿತನವನ್ನು ಅತ್ಯಂತ ಕಟ್ಟುನಿಟ್ಟಾಗಿ ಕಾಯ್ದುಕೊಂಡಿದ್ದಾಗಿ ಅವರು ಈ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.

1984ರಲ್ಲಿ ಅತ್ತೆ ಇಂದಿರಾಗಾಂಧಿ ಹತ್ಯೆಯಾದಾಗ ಅವರ ಬದುಕು ಸಂಪೂರ್ಣ ಅನಿರೀಕ್ಷಿತ ತಿರುವು ಪಡೆಯಿತು. ಆ ಆಘಾತಕಾರಿ ಘಟನೆಯ ಬಳಿಕ ಪ್ರಧಾನಿಯಾದ ಪತಿ ರಾಜೀವ್ ಗಾಂಧಿ ಕೂಡ ಕೇವಲ ಏಳು ವರ್ಷಗಳ ನಂತರ ಭೀಕರವಾಗಿ ಹತ್ಯೆಗೀಡಾದರು. ಇಂತಹ ಘೋರ ದುರಂತಗಳು, ಅರಗಿಸಿಕೊಳ್ಳಲಾಗದ ನೋವುಗಳು ತಮ್ಮನ್ನು ಖಾಸಗಿ ಬದುಕಿನಿಂದ ಸಾರ್ವಜನಿಕ ಮತ್ತು ರಾಜಕೀಯ ಜೀವನದತ್ತ ಹೇಗೆ ದೂಡಿದವು ಎಂಬುದನ್ನು ಕೃತಿಯಲ್ಲಿ ವಿವರಿಸಿದ್ದಾರೆ.

ರಾಜಕೀಯ ಪ್ರವೇಶದ ನಂತರ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ, ಪಕ್ಷವು ಅತ್ಯುನ್ನತ ಪ್ರಧಾನಿ ಹುದ್ದೆಗೇರುವಂತೆ ತೀವ್ರ ಒತ್ತಾಯ ಮಾಡಿತ್ತು. ಆದರೆ, ಆ ಆಫರ್ ಅನ್ನು ನಿರಾಕರಿಸಲು ನೈಜ ಕಾರಣವೇನು ಮತ್ತು ಅಂದಿನ ರಾಜಕೀಯ ಸನ್ನಿವೇಶ ಹೇಗಿತ್ತು ಎಂಬುದನ್ನು ಸೋನಿಯಾ ಅವರು ಈ ಪುಸ್ತಕದಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಧೈರ್ಯದಿಂದ ಓದುಗರ ಮುಂದೆ ತೆರೆದಿಟ್ಟಿದ್ದಾರೆ.

“ನನ್ನ ಜೀವನದ ಬಗ್ಗೆ ಬರೆಯುವುದು ಸುಲಭದ ಮಾತಾಗಿರಲಿಲ್ಲ. ಇದುವರೆಗೆ ನನ್ನೊಳಗೆ ಮಾತ್ರ ಭದ್ರವಾಗಿ ಬಚ್ಚಿಟ್ಟುಕೊಂಡಿದ್ದ ಖಾಸಗಿ ಕ್ಷಣಗಳು ಹಾಗೂ ಅನುಭವಗಳನ್ನು ಹಂಚಿಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು” ಎಂದು ಅವರು ಹೇಳಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಸಾಕಷ್ಟು ಬರೆಯಲಾಗಿದ್ದರೂ, ಅವರ ನೈಜ ಉದ್ದೇಶಗಳು ಹಾಗೂ ಮಾನವ ಸಹಜ ದೌರ್ಬಲ್ಯಗಳನ್ನು ಸರಿಯಾಗಿ ಅರ್ಥೈಸಲಾಗಿಲ್ಲ. ಈ ಕೃತಿಯು ಅವರ ಮಾನವೀಯತೆಗೆ ಸಲ್ಲಿಸುವ ನಮನವಾಗಿದ್ದು, ಆರು ದಶಕಗಳ ಭಾರತದ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಳ ವಿಶಿಷ್ಟ ನೋಟವನ್ನು ನೀಡಲಿದೆ ಎಂದಿದ್ದಾರೆ.

“ರಾಜಕೀಯದಿಂದ ನಿಧಾನವಾಗಿ ಹಿಂದೆ ಸರಿದು ನನ್ನ ಬದುಕನ್ನು ಹಿಂತಿರುಗಿ ನೋಡಿದಾಗ, ಇಟಲಿಯ ಪುಟ್ಟ ಪಟ್ಟಣದ ಸರಳ ಬಾಲ್ಯದಿಂದ ಹಿಡಿದು ರಾಜೀವ್ ಗಾಂಧಿ ಪತ್ನಿಯಾಗಿ, ಇಂದಿರಾ ಗಾಂಧಿ ಸೊಸೆಯಾಗಿ ಭಾರತದಲ್ಲಿ ಕಳೆದ ಸಂಕೀರ್ಣ ವರ್ಷಗಳವರೆಗೆ ಪ್ರೀತಿ ಮತ್ತು ನಿಷ್ಠೆಯ ಎಳೆಯೊಂದು ನನ್ನ ಕಥೆಯನ್ನು ವ್ಯಾಖ್ಯಾನಿಸುತ್ತಾ ಹೋಯಿತು” ಎಂದು ಸೋನಿಯಾ ಗಾಂಧಿ ತಮ್ಮ ಬರವಣಿಗೆಯ ಸುಂದರ ಹಾಗೂ ಭಾವುಕ ಅನುಭವವನ್ನು ಹಂಚಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...