ಒಳಮೀಸಲಾತಿ | ಸಮೀಕ್ಷೆಗೆ ಸರ್ವರ್ ದೋಷ ಅಡ್ಡಿ; ಗಣತಿದಾರರು ಹೈರಾಣು

Date:

ಒಳಮೀಸಲಾತಿ ಜಾರಿಗಾಗಿ ಹತ್ತು ದಿನಗಳ ಹಿಂದೆ ಆರಂಭವಾದ ಬಹು ನಿರೀಕ್ಷಿತ ‘ಪರಿಶಿಷ್ಟ ಜಾತಿ’ ಸಮೀಕ್ಷೆಗೆ ತಾಂತ್ರಿಕ ದೋಷಗಳು ಅಡ್ಡಿಯುಂಟುಮಾಡುತ್ತಿವೆ. ಸರ್ವರ್ ಸಮಸ್ಯೆ ಮತ್ತು ಅಗತ್ಯ ಮಾನವಶಕ್ತಿಯ ಕೊರತೆಯನ್ನು ಸಮೀಕ್ಷೆ ಪ್ರಕ್ರಿಯೆಯು ಎದುರಿಸುತ್ತಿದೆ. ಇದು ನಾಗರಿಕರು ಕೋಪಗೊಳ್ಳುವಂತೆ ಮಾಡಿದೆ. ಗಣತಿದಾರರನ್ನು ಚಿಂತೆಗೀಡು ಮಾಡಿದೆ.

- Advertisement -

ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಈ ಸಮೀಕ್ಷೆಯು ನಿರ್ಣಾಯಕವಾಗಿದೆ. ಆದರೆ, ಸಮೀಕ್ಷೆ ಈಗ ಸರ್ವರ್ ಕ್ರ್ಯಾಶ್‌ಗಳು ಮತ್ತು ಸಾಫ್ಟ್‌ವೇರ್ ನಿಧಾನಗತಿಯಂತಹ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಡೇಟಾ ಸಂಗ್ರಹಣೆಯಲ್ಲಿ ಭಾರೀ ವಿಳಂಬವಾಗಲಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ರಾಜ್ಯದ ನಾನಾ ಭಾಗಗಳಲ್ಲಿ ಸಮೀಕ್ಷೆಗೆ ಒಳಪಡುತ್ತಿರುವ ಜನರು ಸರ್ವರ್ ನಿಧಾನವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಗೆ ಹೆಚ್ಚು ಸಮಯ ವ್ಯಯವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣತಿದಾರರು ಅಸಹಾಯಕರಾಗಿದ್ದಾರೆ. ದೋಷವುಳ್ಳ ಅಪ್ಲಿಕೇಶನ್‌ಗಳು ಮತ್ತು ಓವರ್‌ಲೋಡ್ ಸರ್ವರ್‌ಗಳಿಂದಾಗಿ ಸಮೀಕ್ಷೆಗೆ ಒಳಪಡಿಸುವ ನಿವಾಸಿಗಳನ್ನು ಕೋಪಗೊಳ್ಳುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

“ಸರ್ಕಾರವು ಇಷ್ಟು ಮುಖ್ಯವಾದ ಸಮೀಕ್ಷೆಯನ್ನು ಈ ರೀತಿ ನಡೆಸಿದರೆ, ಸಮೀಕ್ಷೆಯ ಫಲಿತಾಂಶವನ್ನು ನಾವು ಹೇಗೆ ನಂಬಲು ಸಾಧ್ಯ” ಎಂದು ಸಮೀಕ್ಷೆಗೆ ಒಳಪಟ್ಟ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

“ಸಮೀಕ್ಷೆಯ ಅಪ್ಲಿಕೇಷನ್‌ನಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ಈ ಬಗ್ಗೆ ಸರ್ವೇಯರ್‌ಗಳಿಂದ ಅನೇಕ ಕರೆಗಳು ಬಂದಿವೆ. ಆ ಸಮಸ್ಯೆಯನ್ನು ಈಗ ಪರಿಹರಿಸಲಾಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಶುಕ್ರವಾರ ಮತ್ತು ಶನಿವಾರ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಆಗ ಗಣತಿದಾರರಿಂದ ನಮಗೆ ಅನೇಕ ದೂರುಗಳು ಬಂದಿದ್ದವು. ಈ ಸಮಸ್ಯೆ ಬಗೆಹರಿದಿದೆ. ದೂರುಗಳ ಸಂಖ್ಯೆ ಕಡಿಮೆಯಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ” ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೂ, ಸಮೀಕ್ಷೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಅನೇಕರು ಇನ್ನೂ ಸಂಶಯ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರೋಧಿ ಹೋರಾಟ: ಯುವ ಪೀಳಿಗೆಗೆ ಕರ್ನಾಟಕ ನಾಗರಿಕ ಸಮಾಜ ಬೆಂಬಲ, ಕೇಂದ್ರ ಸರ್ಕಾರಕ್ಕೆ ನೂರ್ ಶ್ರೀಧರ್ ಎಚ್ಚರಿಕೆ

ದೆಹಲಿಯಲ್ಲಿ ನಡೆಯಲಿರುವ ಎಸ್‌ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಯುವ ಹೋರಾಟಗಾರರ ಮೇಲೆ...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...

ಎಸ್‌ಐಆರ್ ವಿರುದ್ಧದ ಹೋರಾಟ ಜನರ ಹಕ್ಕಿನ ಹೋರಾಟ: ಪ್ರಕಾಶ್ ರಾಜ್

“ಕಳೆದ ಒಂದು ವರ್ಷದಿಂದ ಕರ್ನಾಟಕದ ನಾಗರಿಕ ಸಂಘಟನೆಗಳು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...