HDK ಅವಧಿಯ ‘ಡಿನೋಟಿಫಿಕೇಶನ್’ ಪ್ರಕರಣ: ವಿಶೇಷ ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿದ ನಿವೃತ್ತ ACS

Date:

ಸುಮಾರು ಎರಡು ದಶಕಗಳಷ್ಟು ಹಳೆಯದಾದ ಭೂ ಡಿನೋಟಿಫಿಕೇಶನ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕರ್ನಾಟಕದ ಇಬ್ಬರು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು (ACS) ನಿವೃತ್ತಿಯಾದ 14 ವರ್ಷಗಳ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ.

- Advertisement -

ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಹಿರಿಯ ಐಎಎಸ್ ಅಧಿಕಾರಿಗಳ ಆಕ್ಷೇಪದ ನಡುವೆಯೂ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಅನುಕೂಲವಾಗುವಂತೆ ಡಿನೋಟಿಫೈ ಮಾಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ...

ಭಾರತದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಶಿಕ್ಷಣ, ಯುವಜನರ ಚಳವಳಿಗಳು, ಪ್ರಜಾಪ್ರಭುತ್ವ ಮತ್ತು ಜಾಗತಿಕ ರಾಜಕೀಯದ ಕುರಿತು ಮಹತ್ವದ ವಿಚಾರ ವಿನಿಮಯ ಭಾರತದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವೆಂಬರ್ 17,...

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಅಧಿಕಾರಿಗಳಾದ ಜ್ಯೋತಿ ರಾಮಲಿಂಗಂ (74) ಮತ್ತು ಶಮೀಮ್ ಬಾನು (75) ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿಗಳಾಗಿ ಪರಿಗಣಿಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಅದರಂತೆ ನವೆಂಬರ್ 16, ಸೋಮವಾರದಂದು ಇಬ್ಬರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.

2002ರ ಡಿಸೆಂಬರ್‌ನಿಂದ 2006ರ ಮೇ ವರೆಗೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಮೀಮ್ ಬಾನು, ಈ ಹಿಂದೆ ತಾವು ಡಿನೋಟಿಫಿಕೇಶನ್ ಪ್ರಸ್ತಾವನೆಯನ್ನು ವಿರೋಧಿಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದರು. 2005ರ ಡಿಸೆಂಬರ್ 13ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (BDA) ಬಂದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಕಡತದಲ್ಲಿ ತಾವು ಬರೆದಿದ್ದ ಆಕ್ಷೇಪಣಾ ಟಿಪ್ಪಣಿ ಮತ್ತು ಸಹಿಯನ್ನು ಅವರು ಗುರುತಿಸಿದರು. “ಬಿಡಿಎ ಮಹಜರ್ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸಿರುವುದರಿಂದ, ಅಂತಹ ಭೂಮಿಯನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ನಾನು ಅಭಿಪ್ರಾಯ ನೀಡಿದ್ದೆ” ಎಂದು ಅವರು ವಿವರಿಸಿದರು. ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಈ ಕಡತವನ್ನು ಕಳುಹಿಸಲಾಗಿತ್ತು, ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಕಡತವನ್ನು ವಾಪಸ್ ಕಳುಹಿಸಿ ಮುಚ್ಚಲಾಗಿತ್ತು ಎಂದರು.

ಇನ್ನು 2007ರಿಂದ 2009ರವರೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಜ್ಯೋತಿ ರಾಮಲಿಂಗಂ ಅವರು, 2007ರ ಜುಲೈ 20ರಂದು ಅಂದಿನ ಸಿಎಂ ಕುಮಾರಸ್ವಾಮಿ ಅವರ ಕಚೇರಿಯಿಂದ ಡಿನೋಟಿಫಿಕೇಶನ್ ಪ್ರಸ್ತಾವನೆಯ ಕಡತ ತಮಗೆ ಬಂದಿತ್ತು ಎಂದು ತಿಳಿಸಿದರು. ಸಿಎಂ ಕಚೇರಿಯ ನಿರ್ದೇಶನದ ಮೇರೆಗೆ ಕರಡು ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದ್ದಾಗಿ ಹೇಳಿದ ಅವರು, ಈ ಹಿಂದಿನ ಪರಿಚಯದ ಆಧಾರದ ಮೇಲೆ ಕಡತದಲ್ಲಿದ್ದ ಕುಮಾರಸ್ವಾಮಿ ಅವರ ಸಹಿಯನ್ನು ಗುರುತಿಸಿದರು. ಆದರೆ, ಕುಮಾರಸ್ವಾಮಿ ಸಹಿ ಮಾಡುವುದನ್ನು ರಾಮಲಿಂಗಂ ಅವರು ಖುದ್ದಾಗಿ ನೋಡಿಲ್ಲ ಎಂದು ಕುಮಾರಸ್ವಾಮಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಹಿಯ ಗುರುತಿಸುವಿಕೆ ಕುರಿತು ವಿಚಾರಣೆ ನಡೆಸಲು ನ್ಯಾಯಾಲಯವು ರಾಮಲಿಂಗಂ ವಿಚಾರಣೆಯನ್ನ ಮುಂದೂಡಿದೆ.

ಏನಿದು 2007ರ ಭೂ ಡಿನೋಟಿಫಿಕೇಶನ್ ಪ್ರಕರಣ? 

ಪಶ್ಚಿಮ ಬೆಂಗಳೂರಿನ ಕೆಂಗೇರಿ ಹೋಬಳಿಯ ವಡೇರಹಳ್ಳಿ ಗ್ರಾಮದ 2.24 ಎಕರೆ ಭೂಮಿಯನ್ನು 1997ರಲ್ಲಿ ಬನಶಂಕರಿ 5ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. 2007ರ ಅಕ್ಟೋಬರ್ 1ರಂದು (ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಒಂದು ವಾರದ ಮುನ್ನ) ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಭೂಮಿಯನ್ನು ಮೂಲ ಮಾಲೀಕರಾದ ಎಂ.ಸಿ. ಪದ್ಮಾ ಮತ್ತು ಕುಟುಂಬದವರಿಗೆ ಡಿನೋಟಿಫೈ ಮಾಡಿತು ಎಂದು ಆರೋಪಿಸಲಾಗಿದೆ.

ನಂತರ ಜಿಪಿಎ (GPA) ಹಕ್ಕುದಾರರಾದ ಕೆ.ಬಿ. ಶಾಂತಮ್ಮ ಮತ್ತು ರೇಖಾ ಚಂದ್ರು ಅವರು ಈ ಜಮೀನನ್ನು ಬಾಲಾಜಿ ಇನ್ಫ್ರಾ, ಸನ್‌ರೈಸ್ ಬಿಲ್ಡರ್ಸ್ ಮತ್ತು ಆರತಿ ಬಿಲ್ಡರ್ಸ್ ಎಂಬ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದ್ದರು. ಈ ಸಂಸ್ಥೆಗಳು ಅಲ್ಲಿ 186 ನಿವೇಶನಗಳನ್ನು ನಿರ್ಮಿಸಿ, ಪ್ರತಿ ನಿವೇಶನವನ್ನು ತಲಾ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದವು.

ಈ ಅವ್ಯವಹಾರದಿಂದ ಸರ್ಕಾರದ ಬೊಕ್ಕಸಕ್ಕೆ 60 ರಿಂದ 80 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ 2012ರಲ್ಲಿ ಎಂ. ಮಹದೇವಸ್ವಾಮಿ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಮೂಲ ಭೂಮಾಲೀಕರು, ಜಿಪಿಎ ಹಕ್ಕುದಾರರು ಹಾಗೂ ಬಿಲ್ಡರ್‌ಗಳು ಸೇರಿದಂತೆ ಒಟ್ಟು 18 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಅಕ್ವಾನ್’ ತೀವ್ರ ಚಂಡಮಾರುತ: ಒಡಿಶಾದಲ್ಲಿ 46 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ಪಶ್ಚಿಮ–ಮಧ್ಯ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ‘ಅಕ್ವಾನ್’ ತೀವ್ರ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ರಾಜ್ಯದಲ್ಲಿ...

ಬೆಳಗಾವಿ |ನಂದಿನಿ ಹಾಲು ಉತ್ಪಾದಕರಿಗೆ ₹2.40 ಕೋಟಿ ಮೌಲ್ಯದ ಉಪಕರಣ ವಿತರಣೆ

ನಂದಿನಿ ಹಾಲಿನ ಗುಣಮಟ್ಟ ಮತ್ತು ಒಕ್ಕೂಟದ ಮೇಲಿನ ರೈತರ ವಿಶ್ವಾಸದಿಂದಾಗಿ ಬೆಳಗಾವಿ...

ಹುಬ್ಬಳ್ಳಿ |ಮೊಬೈಲ್ ಹ್ಯಾಕ್ ಮಾಡಿ ₹3.34 ಲಕ್ಷ ಗುಳುಂ, ಮನೆ ಮುರಿದು ಚಿನ್ನಾಭರಣ ದೋಚಿದ ಕಳ್ಳರು!

ಹುಬ್ಬಳ್ಳಿ ನಗರದಲ್ಲಿ ಸೈಬರ್ ವಂಚನೆ ಹಾಗೂ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿವೆ....

ಧಾರವಾಡ |ಸಾರಿಗೆ ಸಂಸ್ಥೆ ಚಾಲಕನ ಮನೆ ಸೇರಿ ಮೂರು ಕಡೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ...