ಕಷ್ಟ ಹೇಳಿಕೊಂಡು ಬರುವವರಿಗೆ ಮಾನವೀಯತೆಯಿಂದ ಸ್ಪಂದಿಸಿ: ಸರ್ಕಾರಿ ನೌಕರರಿಗೆ ಸಿಎಂ ಡಿಕೆಶಿ ಕಿವಿಮಾತು

Date:

“ಕಷ್ಟ ಹೇಳಿಕೊಂಡು ಬರುವ ಜನರಿಗೆ ಮಾನವೀಯತೆಯಿಂದ ಸ್ಪಂದಿಸಿ, ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಪರಿಹಾರ ಹುಡುಕಿ ಎಂದು ಸಿಎಂ ಡಿ ಕೆ ಶಿವಕುಮಾರ್ (ಡಿಕೆಶಿ) ಅವರು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ನಮ್ಮಭಿಮಾನದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

- Advertisement -

“ಜನರು ದೇವರ ಬಳಿ ತಮಗೆ ಬೇಕಾಗಿರುವುದನ್ನು ಪ್ರಾರ್ಥಿಸಲು ದೇವಾಲಯಗಳಿಗೆ ಹೋಗುತ್ತಾರೆ. ಅದೇ ರೀತಿ ಜನರು ತಮ್ಮ ಕಷ್ಟಗಳಿಗೆ ಪರಿಹಾರ ಪಡೆಯಲು ಸರ್ಕಾರಿ ನೌಕರರು, ಶಾಸಕರು ಹಾಗೂ ಮಂತ್ರಿಗಳ ಬಳಿ ಬರುತ್ತಾರೆ. ನಾವು ಎಷ್ಟು ಶ್ರದ್ಧೆಯಿಂದ ಅವರ ಸೇವೆ ಮಾಡುತ್ತೇವೆ ಎಂಬುದು ಮುಖ್ಯ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ...

ಬಂಡೀಪುರ-ನಾಗರಹೊಳೆ ಅರಣ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡ; ಖಾಸಗಿ ಬಂಡವಾಳ, ಪ್ರವಾಸೋದ್ಯಮ ವಿಸ್ತರಣೆ ಮತ್ತು ಆದಿವಾಸಿಗಳ ಹಕ್ಕುಗಳ ನಡುವೆ ಸಂರಕ್ಷಣೆಯ ಮೂಲ ಆಶಯಕ್ಕೆ ಸವಾಲು. ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರವಿಲ್ಲ; ಅರಣ್ಯಗಳ ಮೇಲಿನ ನಿಯಂತ್ರಣ...

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ...

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ ಪೂರಕವಾದ ವ್ಯವಸ್ಥೆಯಲ್ಲ. ಅದು ಅವರ ವಾರ್ಷಿಕ ಆದಾಯ, ಕುಟುಂಬದ ನಿರ್ವಹಣೆ, ಕೃಷಿ ಸಾಲದ ಮರುಪಾವತಿ ಹಾಗೂ ಮುಂದಿನ ಬದುಕಿನ ಭರವಸೆಯಾಗಿದೆ....

ಯುದ್ಧದ ನೆಪ, ಬೆಲೆ ಏರಿಕೆಯ ತಾಪ: ಅಸಲಿ ಕಾರಣಗಳೇನು?

ದೇಶವು ಚಿನ್ನ-ಬೆಳ್ಳಿಯಂತಹ ಲೋಹಗಳಿಗೆ ಆಮದನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಒಂದೆಡೆ ಕಚ್ಚಾ ತೈಲ, ಇನ್ನೊಂದೆಡೆ ಬೆಲೆಬಾಳುವ ಲೋಹಗಳು- ಹೀಗೆ ಎರಡೂ ಕಡೆಯಿಂದ ಬೆಲೆ ಏರಿಕೆಯ ಒತ್ತಡ ಶುರುವಾಗಿದೆ. ಹಿಂದಿನ ರಷ್ಯಾ-ಉಕ್ರೇನ್ ಯುದ್ಧದ ಕಾಲಕ್ಕಿಂತ ಈಗಿನ...

ಇದನ್ನೂ ಓದಿ: ‘ಬಿಡದಿ ಟೌನ್‌ಶಿಪ್ ವಿರೋಧಿಸಿ ವಿಧಾನಸೌಧ ಮುತ್ತಿಗೆಗೂ ಸಿದ್ಧ’: ಡಿಕೆಶಿಗೆ ರೈತರ ವಾರ್ನಿಂಗ್!

“ನೊಂದು ಬಂದ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ಮಾಡುವುದು ನಮ್ಮ ನಿಮ್ಮ ಕರ್ತವ್ಯ. ನೀವೆಲ್ಲರೂ ಕರ್ನಾಟಕದ ರಾಯಭಾರಿಗಳು. ನೀವು ಸಾರ್ವಜನಿಕರ ಬದುಕಿನಲ್ಲಿ ಸೇವೆ ಮಾಡುತ್ತಿದ್ದೀರಿ. ಈ ಅಧಿಕಾರ ಕೇವಲ ನನ್ನದಲ್ಲ, ನಿಮ್ಮೆಲ್ಲರದ್ದು. ಹುದ್ದೆಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಆ ಹುದ್ದೆಗೆ ಯಾವ ರೀತಿ ಗೌರವ ಕಾಪಾಡುತ್ತೇವೆ ಎಂಬುದು ಮುಖ್ಯ. ಪದವಿ ಮನುಷ್ಯನ ಹಿಂದೆ ಇರುತ್ತದೆ. ಆದರೆ ಮನುಷ್ಯತ್ವದ ಗುಣ ನಮ್ಮ ಮುಂದೆ ಕಾಣಲು ಅವಕಾಶವಿದೆ” ಎಂದು ತಿಳಿಸಿದರು.

“ನಾನು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಹೊಸ ಇಲಾಖೆ ರಚನೆ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅನೇಕ ಹೋರಾಟಗಳು ನಡೆಯುತ್ತವೆ. ನೀವು ನಮ್ಮ ಬೇಡಿಕೆ ನಮ್ಮ ಮುಂದೆ ಇಟ್ಟಾಗ, ಇದನ್ನು ಕಾನೂನು ಚೌಕಟ್ಟಿನಲ್ಲಿ ಹೇಗೆ ಬಗೆಹರಿಸಬಹುದು, ಆರ್ಥಿಕ ಪರಿಸ್ಥಿತಿ ಏನು ಎಂದು ಪರಿಶೀಲನೆ ಮಾಡಲಾಗುವುದು. ಹೀಗೆ ಜನಸಾಮಾನ್ಯರ ನೋವು ಬಗೆಹರಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

“ಎಲ್ಲಾ ಮಂತ್ರಿಗಳು ಮೊದಲನೇ ಹಾಗೂ ಮೂರನೇ ಶನಿವಾರ ಒಂದೊಂದು ತಾಲ್ಲೂಕು ಕಚೇರಿಗೆ ಹೋಗಿ ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯಲು ಈ ತೀರ್ಮಾನ ಮಾಡಲಾಗಿದೆ. ನೀವುಗಳು ಯಾವಾಗ ಜನರ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೀರಾ ಆಗ ಯಶಸ್ಸು ಸಾಧಿಸಲು ಸಾಧ್ಯ” ಎಂದು ತಿಳಿಸಿದರು.

“ದೀಪದ ಬೆಳಕು ನಮ್ಮೆಲ್ಲರಿಗೂ ಕಾಣುತ್ತದೆ. ಆದರೆ ದೀಪದ ಹಿಂದೆ ಇರುವ ಬತ್ತಿ ಹಾಗೂ ಎಣ್ಣೆ ಯಾರಿಗೂ ಕಾಣುವುದಿಲ್ಲ. ನಾವು ನಿಸ್ವಾರ್ಥ ಸೇವೆ ಮಾಡಿದಾಗ, ನಮ್ಮ ಕರ್ತವ್ಯಕ್ಕೆ ಗೌರವವಿರುತ್ತದೆ. ರಾಜ, ಮಂತ್ರಿ, ನೌಕರರು ಜನಸೇವೆಯನ್ನು ದೇಶಸೇವೆ ಎಂದು ಭಾವಿಸಿ ಮಾಡಿದಾಗ ಮಾತ್ರ ಗೌರವ ಸಿಕ್ಕಂತಾಗುತ್ತದೆ. ಜನರ ಸಮಸ್ಯೆ ಬಗೆಹರಿಸಲು ಮಾರ್ಗ ಹುಡುಕಬೇಕೇ ಹೊರತು, ಕೊಂಕು ಹುಡುಕಿ ಅವರನ್ನು ತಿರುಗಿಸಬಾರದು. ಕಾನೂನು ಚೌಕಟ್ಟಿನಲ್ಲಿ ಬಡ ಜನರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವುಗಳು ಆಧಾರಸ್ತಂಭ. ನೀವು ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಇದನ್ನೂ ಓದಿ: ‘2 ಲಕ್ಷ ಮರಗಳಿಗೆ ಆಪತ್ತು’; ರಾಹುಲ್ ಅಂಗಳಕ್ಕೆ ಬಿಡದಿ ಟೌನ್‌ಶಿಪ್‌ ಹೋರಾಟ!

“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅದಕ್ಕೆ ನಮ್ಮ ಸರ್ಕಾರ ಜನರ ಬದುಕಿನಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಇದರ ಮೂಲಕ ಇತಿಹಾಸ ನಿರ್ಮಾಣ ಮಾಡಲಾಗುತ್ತಿದೆ. ಐದು ಗ್ಯಾರಂಟಿಗಳನ್ನು ನೀಡಿ ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಅನೇಕ ರಾಜ್ಯಗಳು ಹೆಸರು ಬದಲಾವಣೆ ಮಾಡಿ ಕರ್ನಾಟಕ ಮಾದರಿಯನ್ನು ಅನುಸರಿಸಿವೆ. ನಮ್ಮ ಕೆಲಸಗಳ ಬಗ್ಗೆ ಮಾಡಿದ ಟೀಕೆಗಳು ಸತ್ತಿವೆ. ನಮ್ಮ ಕೆಲಸಗಳು ಮಾತ್ರ ಉಳಿದಿವೆ” ಎಂದರು.

ನಮ್ಮ ಜೊತೆ ನೀವಿರಿ, ನಿಮ್ಮ ಜೊತೆ ನಾವಿರುತ್ತೇವೆ: ಡಿಕೆಶಿ

“ನನ್ನ ಹಾಗೂ ಪರಮೇಶ್ವರ್ ಅವರ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಇಟ್ಟಿದ್ದೀರಿ ಅದರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಸಮಿತಿಯ ವರದಿ ಬಂದ ಮೇಲೆ ಕ್ಯಾಬಿನೆಟ್ ಅಲ್ಲಿ ಚರ್ಚೆ ನಡೆಸಿ ನಂತರ ನಿಮ್ಮ ಜೊತೆಯೂ ಚರ್ಚೆ ನಡೆಸಲಾಗುವುದು. ನಮ್ಮ ಕೈಯಲ್ಲಿ ಏನು ಸಹಾಯ ಆಗುವುದೋ ಅದನ್ನು ಮಾಡುತ್ತೇವೆ. ಎಲ್ಲದಕ್ಕೂ ಶುಭ ಕಾಲ ಶುಭ ಗಳಿಗೆ ಬರಬೇಕು ಎಂದು ಹೇಳಿದ್ದೇನೆ. ನೀವು ತಾಳ್ಮೆಯಿಂದ ಇರಿ. ಬಸವಣ್ಣನ ನಾಡಿನಲ್ಲಿ ಹುಟ್ಟಿರುವವರು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರು. ನುಡಿದಂತೆ ನಡೆವ ಸರ್ಕಾರ ಕಾಂಗ್ರೆಸ್ ಸರ್ಕಾರ ಮಾತ್ರ. ಇದು ನಿಮ್ಮ ಸರ್ಕಾರ” ಎಂದರು.

“ಓಪಿಎಸ್, ಎನ್‌ಪಿಎಸ್ ಬಗ್ಗೆ ನಮಗೆ ಗಮನವಿದೆ. ನೀವು ಆಡಳಿತ ಯಂತ್ರದ ರಥ. ನೀವು ಚೆನ್ನಾಗಿದ್ದರೆ ಇಡೀ ಆಡಳಿತ ಯಂತ್ರ ಚೆನ್ನಾಗಿ ನಡೆಯುತ್ತದೆ. ಕುಟುಂಬದ ರೀತಿಯಲ್ಲಿ ನಾವುಗಳು ಕೆಲಸ ಮಾಡಬೇಕು. ಮಾತು ಕೊಡುವುದೂ ಮುಖ್ಯವಲ್ಲ. ಮಾತು ಉಳಿಸಿಕೊಳ್ಳುವುದು ಮುಖ್ಯ. ನೀವು ನಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಹೇಳಿದ್ದೀರಿ” ಎಂದರು.

“ನಮ್ಮ, ನಿಮ್ಮ ಒಪ್ಪಂದಕ್ಕೆ ಇಬ್ಬರು ಸ್ವಾಮೀಜಿಗಳೇ ಸಾಕ್ಷಿ”

“ನಾನು ಹಾಗೂ ಪರಮೇಶ್ವರ್ ಅವರು ನಿಮ್ಮ ಜೊತೆ ಇರುತ್ತೇವೆ ಎಂದು ಮಾತು ಕೊಡುತ್ತೇನೆ. ನಮ್ಮ ನಡುವಿನ‌ ಈ ಒಪ್ಪಂದಕ್ಕೆ ನಿರ್ಮಲಾನಂದನಾಥ ಹಾಗೂ ಸಿದ್ದಲಿಂಗ ಸ್ವಾಮಿಜಿಗಳಿಬ್ಬರು ಸಾಕ್ಷಿ. ಪರಮೇಶ್ವರ್ ಅವರ ಬಳಿ ಬಾಂಡ್ ಪೇಪರ್ ಇದೆ. ಎಲ್ಲರೂ ಸೇರಿ ಇದಕ್ಕೆ ಸಹಿ ಹಾಕಬೇಕು. ಅದರಲ್ಲಿ ಮುಂದಿನ ಬಾರಿಗೆ ನಿಮ್ಮ- ನಮ್ಮ ಸರ್ಕಾರ ಒಟ್ಟಿಗೆ ಕೆಲಸ ಮಾಡಬೇಕು. ಯಾವುದೇ ಹೆಚ್ಚು ಕಡಿಮೆ ಆಗುವುದಿಲ್ಲ ತಾನೇ?” ಎಂದು ಪ್ರಶ್ನಿಸಿದರು.

“ಉಳಿ ಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆಯಾಗುವುದಿಲ್ಲ. ಉಳುಮೆ ಮಾಡದೇ ಯಾವ ಭೂಮಿಯೂ ಮಟ್ಟ ಆಗುವುದಿಲ್ಲ. ನಿಮ್ಮ ಬದುಕಿನ ಬಗ್ಗೆ ನಮಗೆ ಅರಿವಿದೆ. ಈ ನಿಟ್ಟಿನಲ್ಲಿ ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ಪರಮೇಶ್ವರ್ ಅವರ ಬಾಂಡ್ ಪೇಪರ್ ಅನ್ನು ಭದ್ರವಾಗಿ ಇಟ್ಟುಕೊಳ್ಳಿ. ಈ ವರ್ಷ ನಮ್ಮ ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ ಬರಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜನರ ರಾಜಕೀಯ ಶಕ್ತಿ ಕಸಿಯುವ ‘ಬಿಜೆಪಿ ಪಿತೂರಿ’: ಸಂಜಯ್ ರಾವುತ್ ವಾಗ್ದಾಳಿ

ಉದ್ದೇಶಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯು ದೇಶದ ಜನರ ರಾಜಕೀಯ ಮತ್ತು...

ಬಿಹಾರ ಜೆಡಿಯು ಶಾಸಕ ಅನಂತ್ ಸಿಂಗ್ ಮಗಳ ಮದುವೆಯ ಅವಾಂತರ

ಜೆಡಿಯುನಿಂದ ಉಚ್ಚಾಟಿತ ಮೊಕಾಮಾ ಶಾಸಕ ಅನಂತ್ ಸಿಂಗ್ ಅವರ ಮಗಳು ಶಿವಾಂಗಿ...

ಜಾತಿ ಭೇದ ಬಿಟ್ಟು ಮಾನವೀಯತೆ, ಸಮಾನತೆ ಹಾದಿಯಲ್ಲಿ ಸಾಗಬೇಕೆಂಬ ಕನಕದಾಸರ ಸಂದೇಶ ಪ್ರಸ್ತುತ: ಸಿಎಂ ಡಿಕೆಶಿ

ಜಾತಿ, ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಮತ್ತು ಸಮಾನತೆಯ...