‘2 ಲಕ್ಷ ಮರಗಳಿಗೆ ಆಪತ್ತು’; ರಾಹುಲ್ ಅಂಗಳಕ್ಕೆ ಬಿಡದಿ ಟೌನ್‌ಶಿಪ್‌ ಹೋರಾಟ!

Date:

ಹಳೇಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕತ್ವ ಮುಡಿಗೇರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವೆ ಪೈಪೋಟಿ ಇದೆ. ಈ ಕಾರಣಕ್ಕೆ ಬಿಡದಿ ಟೌನ್‌ಶಿಪ್ ವಿಚಾರ ರಾಜಕೀಯವಾಗಿಯೂ ಸದ್ದು ಮಾಡುತ್ತಿದೆ.

ರೈತರ ಭಾರೀ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್‌ಗಾಗಿ ಮೊದಲ ಹಂತದಲ್ಲಿ 499 ಎಕರೆ ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ರೈತರ ಹೋರಾಟ ತೀವ್ರವಾಗಿದೆ. ಮತ್ತೊಂದೆಡೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವೆ ವಾಗ್ವಾದ ತಾರಕ್ಕೇರಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆಯುವ ಮುಖೇನ ಗಮನ ಸೆಳೆದಿದ್ದಾರೆ.

- Advertisement -

ಮೋದಿ ಸರ್ಕಾರವು ಕಾರ್ಪೊರೇಟ್‌ ಶಕ್ತಿಗಳಿಗೆ ಗ್ರೇಟ್ ನಿಕೋಬಾರ್ ದ್ವೀಪವನ್ನು ಬಲಿಕೊಡಲು ಹೊರಟಿರುವುದರ ವಿರುದ್ಧ ರಾಹುಲ್ ಗಾಂಧಿಯವರು ಹೋರಾಟ ನಡೆಸುತ್ತಿದ್ದಾರೆ. ಪರಿಸರ ನಾಶ ಸಂಬಂಧ ಕರ್ನಾಟಕ ಸರ್ಕಾರವನ್ನೂ ಪ್ರಶ್ನಿಸಿ ಎಂದು ರಾಹುಲ್‌ಗೆ ವಿಜಯೇಂದ್ರ ಮತ್ತು ನಿಖಿಲ್ ಸವಾಲು ಎಸೆದಿದ್ದಾರೆ. ರೈತ ಮುಖಂಡರು ಕೂಡ ಇದೇ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

“ಕರ್ನಾಟಕ ಬಿಜೆಪಿ ಘಟಕದ ರಾಜ್ಯಧ್ಯಕ್ಷನಾಗಿ, ಇಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ರಾಜ್ಯದ ರೈತರ ಅಳಲನ್ನು ಕೇಳಿಸಿಕೊಳ್ಳದೆ ಇರುವುದರಿಂದ, ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಕರ್ನಾಟಕದ ಬೆಂಗಳೂರು ದಕ್ಷಿಣ ಜಿಲ್ಲೆಯ (ಹಿಂದಿನ ರಾಮನಗರ ಜಿಲ್ಲೆ) ಬಿಡದಿಯಲ್ಲಿ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಾವಿರಾರು ಶೋಷಿತ, ಅನ್ನದಾತ ರೈತ ಕುಟುಂಬಗಳ ದನಿಯಾಗಿ ನಿಮ್ಮ ಗಮನಕ್ಕೆ ಕೆಲವು ವಿಷಯಗಳನ್ನು ತರಲು ಬಯಸುತ್ತಿದ್ದೇನೆ ಮತ್ತು ತಾವು ನ್ಯಾಯಯುತ ಪ್ರಕ್ರಿಯೆಯನ್ನು ನೀಡಬೇಕು ಎಂದು ಈ ಮೂಲಕ ಕೋರುತ್ತೇನೆ. ನೀವು ದೇಶದಾದ್ಯಂತ ರೈತರ ಭೂಮಿ ಉಳಿಸುವ ಹಾಗೂ ಕಾರ್ಪೊರೇಟ್ ಕಪಿಮುಷ್ಠಿಯಿಂದ ದೇಶವನ್ನು ರಕ್ಷಿಸುವ ಹೆಸರಿನಲ್ಲಿ ಘೋಷಣೆ ಕೂಗುತ್ತೀರಿ, ಯಾತ್ರೆ ನಡೆಸುತ್ತೀರಿ. ಆದರೆ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ನಿಮ್ಮ ಮುಖ್ಯಮಂತ್ರಿಗಳು ನಾಡಿನ ಅನ್ನದಾತ ರೈತರ ಹಿತ ನಿರ್ಲಕ್ಷಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ ವಿಜಯೇಂದ್ರ.

“ಸ್ವಾಧೀನಕ್ಕೆ ಗುರುತಿಸಲಾಗಿರುವ ಈ ಭೂಮಿ ಬಂಜರಲ್ಲ. ಬೆಂಗಳೂರು ನಗರಕ್ಕೆ ಪ್ರತಿದಿನ ಹಾಲು, ತರಕಾರಿ ಮತ್ತು ಹಣ್ಣು ಪೂರೈಸುವ, ತೆಂಗು, ಅಡಿಕೆ ಮತ್ತು ಬಾಳೆ ಬೆಳೆಯುವ ಅತ್ಯಂತ ಫಲವತ್ತಾದ ಭೂಮಿ. ಸಾವಿರಾರು ಗ್ರಾಮೀಣ… ಮಹಿಳೆಯರು ಈ ಕೃಷಿ ಮತ್ತು ಸ್ಥಳೀಯ ಅಡಿಕೆ ತಟ್ಟೆ ತಯಾರಿಕಾ ಘಟಕಗಳನ್ನು ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆ ವ್ಯಾಪ್ತಿಯಲ್ಲಿಯೇ 1,000 ಎಕರೆಯಷ್ಟು ವಿಸ್ತಾರವಾದ ಬೈರಮಂಗಲ ಕೆರೆ ಇದೆ. ಇಂತಹ ಫಲವತ್ತಾದ ಪ್ರದೇಶವನ್ನು ಕಾಂಕ್ರೀಟ್ ಕಾಡಾಗಿಸುವ ಅಗತ್ಯವೇನಿದೆ” ಎಂದು ಪ್ರಶ್ನಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿಯವರು ತಾವು ಬರೆದ ಪತ್ರದಲ್ಲಿರುವ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, “ಕೇಂದ್ರ ಸರ್ಕಾರದ ಗ್ರೇಟ್‌ ನಿಕೋಬಾರ್‌ ಅಭಿವೃದ್ಧಿ ಯೋಜನೆ ವಿರುದ್ದ ‘ಗ್ರೀನ್ ಓವರ್ ಗ್ರೀಡ್’ (ಹಸಿರಿನ ಮೇಲೆ ದುರಾಸೆ) ಎಂದು ದನಿ ಎತ್ತಿರುವ ರಾಹುಲ್ ಅವರು, ಅರಣ್ಯ ಮತ್ತು ಪರಿಸರ ರಕ್ಷಣೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಉಪನಗರಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿದೆ. ಆ ಬಗ್ಗೆಯೂ ತಮ್ಮ ಸರ್ಕಾರದ ಕಿವಿ ಹಿಂಡಿ ಯೋಜನೆ ಕೈ ಬಿಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ರಾಹುಲ್ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಹಾಗೂ ಪರಿಸರದ ಬಗ್ಗೆ ಕಾಳಜಿ ಇದ್ದರೆ, ಬಿಡದಿ ಉಪನಗರ ಯೋಜನೆ ಕೈ ಬಿಡುವಂತೆ ತಮ್ಮ ಖಾಸಾ ವ್ಯಕ್ತಿಯಾಗಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕಿವಿಮಾತು ಹೇಳಬೇಕು. ಸಾಧ್ಯವಾದರೆ ಒಮ್ಮೆ ಬಿಡದಿಗೆ ಭೇಟಿ ನೀಡಿ, ಇಲ್ಲಿರುವುದು ಬರಡು ಭೂಮಿಯೊ ಅಥವಾ ಫಲವತ್ತಾದ ಭೂಮಿಯೊ ಎಂದು ಪರಿಶೀಲಿಸಬೇಕು” ಎಂದು ಕೋರಿದ್ದಾರೆ.

ಹಳೇಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕತ್ವ ಮುಡಿಗೇರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವೆ ಪೈಪೋಟಿ ಇದೆ. ಈ ಕಾರಣಕ್ಕೆ ಬಿಡದಿ ಟೌನ್‌ಶಿಪ್ ವಿಚಾರ ರಾಜಕೀಯವಾಗಿಯೂ ಸದ್ದು ಮಾಡುತ್ತಿದೆ.

“ಯಾವುದೇ ಪಕ್ಷದ ಬೆಂಬಲ ಸಿಕ್ಕರೂ ನಾವು ಪಡೆಯುತ್ತೇವೆ, ನಮಗೆ ಎಲ್ಲರ ಬಲವೂ ಬೇಕು” ಎನ್ನುವ ಇಲ್ಲಿನ ರೈತರಿಗೆ ಹಲವು ಸಂಘಟನೆಗಳ ಬೆಂಬಲವೂ ಇದೆ. ರೈತ, ಕಾರ್ಮಿಕ, ಮಹಿಳಾ ಕನ್ನಡಪರ, ದಲಿತ ಪರ, ಕನ್ನಡಪರ ಸಂಘಟನೆಗಳೂ ಹೋರಾಟಕ್ಕೆ ಕೈ ಜೋಡಿಸಿವೆ.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೌನ್‌ಶಿಪ್‌ ಯೋಜನೆಯನ್ನು ವಿರೋಧಿಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರೇ ಇಂತಹ ಟೌನ್‌ಶಿಪ್‌ ಬೆನ್ನುತಟ್ಟಿದ್ದಾರೆಂದು ಡಿ.ಕೆ. ಶಿವಕುಮಾರ್ ಹೇಳಿಕೊಂಡಿದ್ದಾರೆ. “ಮೋದಿಯವರನ್ನು ಭೇಟಿ ಮಾಡಿದ್ದೆ. ಬೆಂಗಳೂರು ಬೆಳೆಯುತ್ತಿದ್ದು, ಇಂತಹ ಟೌನ್‌ಶಿಪ್‌ಗಳು ಅಗತ್ಯವಿವೆ ಎಂದು ಮೋದಿಯವರು ತಿಳಿಸಿದ್ದಾರೆ” ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಎಚ್‌ಡಿಕೆ ಮತ್ತು ಡಿಕೆಶಿ ಟೀಮ್‌ಗಳ ನಡುವೆಯಂತೂ ವೈಯಕ್ತಿಕ ಮಟ್ಟದ ಟೀಕಾಪ್ರಹಾರಗಳು ನಡೆಯುತ್ತಿವೆ. ಎರಡು ಕುಟುಂಬಗಳು ಗಳಿಸಿರುವ ಆಸ್ತಿಯ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ನಿಜವಾಗಿ ಚರ್ಚೆಯಾಗಬೇಕಿರುವುದು ಇವರ ವೈಯಕ್ತಿಕ ವಿಚಾರವಲ್ಲ. ಇಲ್ಲಿ ನೊಂದು ಬೆಂದಿರುವ ರೈತರ ಆಕ್ರೋಶ ಎಂದು ಹೋರಾಟಗಾರರು ಹೇಳುತ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಪ್ರಶ್ನೆ ಮಾಡುವುದರಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕುವುದಂತೂ ಖಚಿತ. ಬೆಂಗಳೂರಿನ ಸುತ್ತ ಹಸಿರು ಕವಚವಾಗಿರುವ ಪ್ರದೇಶವನ್ನು ನಾಶ ಮಾಡುತ್ತಿರುವುದಕ್ಕೆ ರಾಹುಲ್ ಅವರ ಪ್ರತಿಕ್ರಿಯೆ ಏನು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಎರಡು ಲಕ್ಷ ಮರಗಳ ನಾಶಕ್ಕೆ ಮುಂದಾಗಿರುವ ಸರ್ಕಾರ!

ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ಬಿಡದಿಯ ಒಂಬತ್ತು ಹಳ್ಳಿಗಳಲ್ಲಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದರೆ, ಸುಮಾರು ಎರಡು ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ತೋಟಗಾರಿಕಾ ಇಲಾಖೆಗೆ ರೈತರೊಬ್ಬರು ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ದೊರೆತ ಮಾಹಿತಿಯ ಪ್ರಕಾರ, “83,536 ಅಡಿಕೆ ಮರಗಳು, 87,903 ತೆಂಗಿನ ಮರಗಳು, 12,550 ಮಾವಿನ ಮರಗಳು ಮತ್ತು 3,06,506 ಬಾಳೆ ಗಿಡಗಳು ಟೌನ್‌ಶಿಪ್‌ಗೆ ಬಲಿಯಾಗಲಿವೆ. ಇದರ ಜೊತೆಗೆ 2,344 ಚಿಕ್ಕೂ (ಸಪೋಟ) ಮರಗಳು, ಸುಮಾರು 2,500 ಗುಲಾಬಿ ಗಿಡಗಳು, ಹಲವಾರು ಸೀತಾಫಲ ಮರಗಳು ಮತ್ತು ರೇಷ್ಮೆ ತೋಟಗಳು ಇಲ್ಲವಾಗುತ್ತವೆ” ಎಂದು ಮಾಹಿತಿ ಬಹಿರಂಗಪಡಿಸಿದೆ.

ಹಲಸು, ರಾಗಿ, ಭತ್ತ, ತೊಗರಿ, ಅಲಸಂದೆ, ಅವರೇಕಾಯಿ, ಜೋಳ, ಕಡಲೇಕಾಯಿ ಮತ್ತು ಹುರುಳಿ ಬೆಳೆಗಳ ನಾಶವೂ ಈ ಭಾಗದಲ್ಲಿ ಆಗಲಿದೆ. ಇದರ ಅತ್ಯಂತ ದೊಡ್ಡ ಪರಿಣಾಮವು 231 ಎಕರೆಗಳಲ್ಲಿ ಹರಡಿರುವ ರಾಗಿ ಬೇಸಾಯದ ಮೇಲೆ ಬೀರಲಿದೆ. ಕೇವಲ ಬೃಹತ್ ಪ್ರಮಾಣದಲ್ಲಿ ಹಸಿರು ಹೊದಿಕೆ ನಾಶವಾಗುವುದು ಮಾತ್ರವಲ್ಲದೆ, ಕೃಷಿಯು ತಮಗೆ ಒದಗಿಸಿದ್ದ ಜೀವನದ ಗುಣಮಟ್ಟವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ರೈತರು ಆತಂಕಿತರಾಗಿದ್ದಾರೆ.

ಈ ಲೇಖನ ಓದಿದ್ದೀರಾ?: ಭಾರತದ ಕೃಷಿಗೆ ಕಂಟಕ: ಬರಗಾಲಕ್ಕೆ ಕಾರಣವಾಗುವುದೇ ಎಲ್‌ ನಿನೊ?

‘ರೈತರು ತಮ್ಮ ಭೂಮಿಯಲ್ಲಿ ಬೆಳೆದ ಪ್ರತಿಯೊಂದು ಮರಕ್ಕೂ ಪರಿಹಾರವನ್ನು ಸರ್ಕಾರ ನೀಡುತ್ತಿದ್ದು, ಪ್ರತಿ ತಳಿಗೆ ಕನಿಷ್ಠ ಮತ್ತು ಗರಿಷ್ಠ ದರಗಳನ್ನು ನಿಗದಿಪಡಿಸಿದೆ’ ಎಂದು ಜಿಬಿಡಿಎ ದಾಖಲೆಗಳು ಹೇಳುತ್ತಿವೆ. ಅದರ ಪ್ರಕಾರ- ತೆಂಗು: ಕನಿಷ್ಠ ಬೆಲೆ ₹25,000 – ಗರಿಷ್ಠ ಬೆಲೆ ₹40,000, ಮಾವು: ಕನಿಷ್ಠ ಬೆಲೆ ₹45,000 – ಗರಿಷ್ಠ ಬೆಲೆ ₹64,000, ಅಡಿಕೆ: ಕನಿಷ್ಠ ಬೆಲೆ ₹6,000 – ಗರಿಷ್ಠ ಬೆಲೆ ₹9,000, ಚಿಕ್ಕೂ (ಸಪೋಟ): ಕನಿಷ್ಠ ಬೆಲೆ ₹25,000 – ಗರಿಷ್ಠ ಬೆಲೆ ₹40,000, ಹಲಸು: ಕನಿಷ್ಠ ಬೆಲೆ ₹25,000 – ಗರಿಷ್ಠ ಬೆಲೆ ₹40,000.

ಮರದ ವಯಸ್ಸು, ಅದರ ಜೀವಿತಾವಧಿ, ಇಳುವರಿ ಸಾಮರ್ಥ್ಯ, ಮಣ್ಣಿನ ಫಲವತ್ತತೆ, ಹಿಂದಿನ ಇಳುವರಿಯ ಅಂಕಿ-ಅಂಶಗಳು, ಯೋಜಿತ ಇಳುವರಿ ಸಾಮರ್ಥ್ಯ ಮತ್ತು ಆ ಮರವು ರೈತರಿಗೆ ತಂದುಕೊಡಬಲ್ಲ ಲಾಭಗಳ ಆಧಾರದಲ್ಲಿ ಅದರ ಬೆಲೆಯನ್ನು ನಿಗದಿ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿದು ಸರ್ಕಾರ ಯಾವ ಸಂದೇಶ ಕೊಡಲಿದೆ ಎಂಬುದು ಚರ್ಚೆಯಾಗಬೇಕಿದೆ. ಹೀಗಾಗಿಯೇ ರಾಹುಲ್ ಗಾಂಧಿಯವರ ಹೆಸರು ಹೋರಾಟದ ಅಂಗಳದಲ್ಲಿ ಕೇಳಿಬರುತ್ತಿದೆ.

“ಬಿಡದಿಯಲ್ಲಿನ ಹಸಿರು ಹೊದಿಕೆಯು ಬೆಂಗಳೂರಿನ ಹವಾಮಾನದ ಮೇಲೆ ಗಮನಾರ್ಹ ಸಕಾರಾತ್ಮಕ ಪ್ರಭಾವವನ್ನು ಹೊಂದಿದೆ. ಇದು ಅತ್ಯಗತ್ಯ ಹಸಿರು ವಲಯವಾಗಿದ್ದು, ಈಗ ಅಪಾಯದಲ್ಲಿದೆ. ದೇಶದ ಇತರ ಭಾಗಗಳಲ್ಲಿ ಪರಿಸರ ನಾಶಕ ಯೋಜನೆಗಳ ವಿರುದ್ಧ ಅಭಿಯಾನದ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲ ನೀಡಿದ್ದಾರೆ. ಆದರೆ, ತಾವೇ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಮಾತ್ರ ಇಂತಹದ್ದೇ ಪರಿಸರ ನಾಶಕ ಯೋಜನೆಗಳನ್ನು ಮುಂದುವರಿಸುತ್ತಿದ್ದಾರೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ್ ಕುಟುಕಿದ್ದಾರೆ.

ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ರೈತರು 470 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. “ಜೀವ ಕೊಟ್ಟರೂ ಭೂಮಿ ಬಿಡೆವು” ಎಂಬುದು ಇಲ್ಲಿನ ರೈತರ ಸ್ಪಷ್ಟ ಸಂದೇಶ. ಕೆಲವು ರೈತರು ಭೂಮಿಯನ್ನು ಕೊಡಲು ಸಿದ್ಧವಿದ್ದರೂ ಶೇ. 80ರಷ್ಟು ರೈತರ ವಿರೋಧವಿದೆ. ಆದರೆ ಹೋರಾಟ ಮಾಡುತ್ತಿರುವವರು ರೈತರೇ ಅಲ್ಲ ಎಂಬ ಧೋರಣೆಯಲ್ಲಿರುವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆಕ್ರೋಶ ಮುಡುಗಟ್ಟಿದೆ. ಈ ಯೋಜನೆಯ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇದೆ ಎಂಬುದು ದೊಡ್ಡ ಮಟ್ಟದಲ್ಲಿ ಕಾಣುತ್ತಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಶಂಕಿತ ವಸ್ತು ಪತ್ತೆ; ತನಿಖೆ ಬೆನ್ನಲ್ಲೇ ಅದು ಖಾಲಿ ಟ್ಯೂಬ್ ಎಂದ ಅಧಿಕಾರಿಗಳು!

ಬೆಂಗಳೂರು ನಗರದ ಸೋನೆಹಳ್ಳಿಕೆರೆ ವೃತ್ತದ ಸಮೀಪದ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತಿರುವ ಖಾಲಿ...

ಕಮಲನಗರ | ಗುಳೆ ಹೋಗಬೇಡಿ, ಊರಲ್ಲಿಯೇ ವಿಬಿ-ಜಿ ರಾಮ್‌ ಜಿ ಕೆಲಸ ಮಾಡಿ

ಕೂಲಿ ಕಾರ್ಮಿಕರು ಗುಳೆ ಹೋಗದೆ ತಮ್ಮ ಗ್ರಾಮದಲ್ಲಿಯೇ ವಿಬಿ-ಜಿ ರಾಮ್‌ ಜಿ...

ಶಿವಮೊಗ್ಗ | ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ; ಮನೆಗೆ ತೆರಳಿ ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ

ಸರಳತೆ, ಜನಪರ ಕಾಳಜಿ ಮತ್ತು ಹೋರಾಟದ ಬದುಕಿನ ಪ್ರತೀಕವಾಗಿರುವ ಕಾಂಗ್ರೆಸ್‌ನ ಹಿರಿಯ...

ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ನ ‘ಕಾಯಿಸುವ ಧೋರಣೆ’ಗೆ ಆಕಾಶ್ ಚೋಪ್ರಾ ಕಿಡಿ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು...