SIR ವಿವಾದ: ಆಯೋಗದ ಅಂಕಿ-ಅಂಶಕ್ಕೂ, ಬೆಂಗಳೂರಿನ ಮತದಾರರ ವಾಸ್ತವಕ್ಕೂ ತಾಳೆಯಿಲ್ಲ; ನಾಗರಿಕ ಮತ ಕಾವಲು ಸಮಿತಿ ಆಕ್ರೋಶ

Date:

ರಾಜ್ಯದಲ್ಲಿ ಪ್ರಗತಿಯಲ್ಲಿರುವ ‘ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯುವ ಆತಂಕ ಎದುರಾಗಿದೆ. ಕೇವಲ ಬೆಂಗಳೂರು ನಗರದಲ್ಲೇ ಶೇಕಡ 48.41ರಷ್ಟು, ಅಂದರೆ ಇಬ್ಬರಲ್ಲಿ ಒಬ್ಬ ಮತದಾರರನ್ನು ಆಗಸ್ಟ್ 17ರ ಒಳಗಾಗಿ ಪಟ್ಟಿಯಿಂದ ತೆಗೆದುಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ‘ನಾಗರಿಕ ಮತ ಕಾವಲು ಸಮಿತಿ’ ಗಂಭೀರ ಆರೋಪ ಮಾಡಿದೆ.

- Advertisement -

​ಈ ಅವ್ಯವಸ್ಥೆಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯೇ ನೇರ ಹೊಣೆ ಎಂದು ಆರೋಪಿಸಿರುವ ಸಮಿತಿಯು, ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದೈನಂದಿನ ವರದಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿ, ಈ ಪ್ರಕ್ರಿಯೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ದೂರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್‌; ಸ್ವಾಗತಕ್ಕೆ ಖುದ್ದು...

ಬರೋಬ್ಬರಿ 11 ವರ್ಷಗಳ ಬಳಿಕ ಅಮೆರಿಕಕ್ಕೆ ಕಾಲಿಟ್ಟಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಖುದ್ದು ತೆರಳಿ ಸ್ವಾಗತಿಸಿದ ಟ್ರಂಪ್‌, ಶ್ವೇತಭವನದಲ್ಲಿ ಅದ್ದೂರಿ ಸರ್ಕಾರಿ ಔತಣ ಆಯೋಜಿಸಿದ್ದಾರೆ. AI, ಅತ್ಯಾಧುನಿಕ ಚಿಪ್‌ಗಳು, ರೇರ್‌...

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

​ಮತದಾರರ ಮೇಲೆ ‘ಅನುಮಾನ’ದ ನೆರಳು
ಸಾಮಾನ್ಯವಾಗಿ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪಟ್ಟಿ ಸ್ಥಿರವಾಗಿರುತ್ತದೆ. ಪಟ್ಟಿಯಿಂದ ಒಂದು ಹೆಸರನ್ನು ಕೈಬಿಡಬೇಕಾದರೂ ಸೂಕ್ತ ಕಾರಣ ನೀಡಬೇಕು. ಆದರೆ, ಪ್ರಸ್ತುತ ಸಿಇಒ ವಿ. ಅನ್ಬುಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿಷ್ಕರಣೆಯಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಅನುಮಾನದಿಂದ ನೋಡಲಾಗುತ್ತಿದ್ದು, ಪಟ್ಟಿಯಲ್ಲಿ ಉಳಿಯಲು ಬಿಗಿಯಾದ 4 ಕಠಿಣ ಹಂತಗಳನ್ನು ದಾಟುವಂತೆ ಒತ್ತಾಯಿಸಲಾಗುತ್ತಿದೆ ಎಂದು ಸಮಿತಿ ಹೇಳಿದೆ. ಆ ಹಂತಗಳು ಹೀಗಿವೆ:

​ಬಿಎಲ್‌ಒಗಳು ನೋಂದಾಯಿತ ವಿಳಾಸದಲ್ಲಿ ಮತದಾರರನ್ನು ಖುದ್ದಾಗಿ ಪತ್ತೆಹಚ್ಚಿ, ಎನ್ಯುಮರೇಷನ್ ಫಾರಂ ಡಿಜಿಟಲೀಕರಿಸಬೇಕು.

​ಮತದಾರರ ಅಥವಾ ಪೋಷಕರ ಹೆಸರು 2002ರ ಕೊನೆಯ ‘ಇಂಟೆನ್ಸಿವ್ ರಿವಿಷನ್’ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಬೇಕು.
​
ಪೂರಕ ದಾಖಲೆಗಳು ಮತದಾರರ ಸ್ವಂತ ಹೆಸರಿನಲ್ಲೇ ಇರಬೇಕು ಮತ್ತು ಅದು ಅಧಿಕಾರಿಯ ಪರಿಶೀಲನಾ ಮಾನದಂಡ ಪೂರೈಸಬೇಕು.

​ನಿಜವಾದ ದಾಖಲೆಗಳಿದ್ದರೂ, ಕಾಗುಣಿತ ಅಥವಾ ಲಿಪ್ಯಂತರದ (Spelling/Transliteration) ಸಣ್ಣ ವ್ಯತ್ಯಾಸವಿದ್ದರೂ ದೆಹಲಿ ನಿಯಂತ್ರಣದಲ್ಲಿರುವ ಸಾಫ್ಟ್‌ವೇರ್ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (Logical Discrepancy) ನೆಪವೊಡ್ಡಿ ಹೆಸರುಗಳನ್ನು ತಿರಸ್ಕರಿಸುತ್ತಿದೆ.

​ಗಣಿತಕ್ಕೇ ಸವಾಲು ಹಾಕಿದ ಆಯೋಗದ ಲೆಕ್ಕ!
ಆಗಸ್ಟ್ 3, 2026ರಂದು ಸಿಇಒ ಕಚೇರಿ ಹೊರಡಿಸಿದ ದೈನಂದಿನ ಪ್ರಕಟಣೆಯಂತೆ (ಸಂಖ್ಯೆ: DPAR 172 ChuMaPa 2026), ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (ಶೇ 19.95) ಹೆಸರುಗಳನ್ನು ‘ಎಎಸ್‌ಡಿಡಿಒ’ (ಗೈರು, ಸ್ಥಳಾಂತರ, ಮೃತ, ನಕಲಿ ಹಾಗೂ ಇತರೆ) ಪಟ್ಟಿಗೆ ಸೇರಿಸಲಾಗಿದೆ. ಇದು ಆಯೋಗದ ದೋಷಪೂರಿತ ಲೆಕ್ಕಾಚಾರಕ್ಕೆ ಸಾಕ್ಷಿ ಎಂದು ಸಮಿತಿ ವಿಶ್ಲೇಷಿಸಿದೆ.

​2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳಲ್ಲಿ 98.43 ಲಕ್ಷ ಮತದಾರರಿದ್ದರು. ಈ ಪೈಕಿ 52.47 ಲಕ್ಷಕ್ಕೂ ಹೆಚ್ಚು (ಶೇ 53.3) ಜನರು ಹಕ್ಕು ಚಲಾಯಿಸಿದ್ದರು. ಈಗಿನ ಪರಿಷ್ಕರಣಾ ಅಂಕಿ-ಅಂಶಗಳ ಅನ್ವಯ ನೋಡಿದರೆ (ಶೇ 48ರಷ್ಟು ಕಡಿತ), ಬೆಂಗಳೂರಿನಲ್ಲಿ ಕೇವಲ 50 ಲಕ್ಷ ಮತದಾರರು ಮಾತ್ರ ಉಳಿಯಲಿದ್ದಾರೆ. ಅಂದರೆ, ಕಳೆದ ಚುನಾವಣೆಯಲ್ಲಿ ಮತ ಹಾಕಿದವರಿಗಿಂತಲೂ ಕಡಿಮೆ ಜನ ಈಗ ಬೆಂಗಳೂರಿನಲ್ಲಿದ್ದಾರೆ ಎಂದಾಗುತ್ತದೆ. ಈ ಲೆಕ್ಕಾಚಾರ ನಿಜವಾದರೆ, 2024ರಲ್ಲಿ ನಡೆದದ್ದು ಶೇ 54ರಷ್ಟು ಮತದಾನವಲ್ಲ, ಬದಲಿಗೆ ಶೇ 105ರಷ್ಟು ಮತದಾನವೇ ಎಂದು ಸಮಿತಿ ಆಯೋಗವನ್ನು ಪ್ರಶ್ನಿಸಿದೆ.

​ಆಯೋಗದ ಅಂಕಿ-ಅಂಶ (ASDDO ಪಟ್ಟಿಯ ವರ್ಗೀಕರಣ):
ರಾಜ್ಯದಲ್ಲಿ ಗುರುತಿಸಲಾಗಿರುವ 1.10 ಕೋಟಿ ಅನುಮಾನಾಸ್ಪದ/ಸ್ಥಳಾಂತರಗೊಂಡವರ ವಿವರ ಇಲ್ಲಿದೆ:

​ಶಾಶ್ವತವಾಗಿ ಸ್ಥಳಾಂತರಗೊಂಡವರು (Shifted): 66,23,832 (ಒಟ್ಟು ಮತದಾರರ ಶೇ 11.95 | ASDDO ಪಟ್ಟಿಯಲ್ಲಿ ಶೇ 59.9)
​
ಮೃತರು (Dead): 16,21,446 (ಶೇ 2.93 | ASDDO ಪಟ್ಟಿಯಲ್ಲಿ ಶೇ 14.7)
​
ಗೈರು / ಪತ್ತೆಯಾಗದವರು (Absent): 16,18,630 (ಶೇ 2.92 | ASDDO ಪಟ್ಟಿಯಲ್ಲಿ ಶೇ 14.6)
​

ನಕಲಿ / ಈಗಾಗಲೇ ನೋಂದಾಯಿತರು (Duplicate): 6,78,213 (ಶೇ 1.22 | ASDDO ಪಟ್ಟಿಯಲ್ಲಿ ಶೇ 6.1)
​
ಇತರೆ (Other): 5,17,167 (ಶೇ 0.93 | ASDDO ಪಟ್ಟಿಯಲ್ಲಿ ಶೇ 4.7)
​
ವಲಸೆ ಲೆಕ್ಕಾಚಾರದಲ್ಲಿ ಭಾರಿ ವ್ಯತ್ಯಾಸ
ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಪ್ರತಿವರ್ಷ 3 ರಿಂದ 4 ಲಕ್ಷ ಜನರು ನಗರ ಸೇರುತ್ತಿದ್ದಾರೆ. 2022ರಿಂದ ಬಾಡಿಗೆ ದರಗಳು ಶೇ 40ರಷ್ಟು ಏರಿಕೆಯಾಗಿವೆ. ಅನೌಪಚಾರಿಕ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಕಾರಣಕ್ಕಾಗಿಯೇ ಸರ್ಕಾರ ‘ಗಿಗ್ ವರ್ಕರ್ಸ್ ಕಲ್ಯಾಣ ಕಾಯ್ದೆ-2025’ ಜಾರಿಗೆ ತಂದಿದೆ.

​ಆದರೆ, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರವಲಸೆ ಹೋಗುವ ಕಲ್ಯಾಣ ಕರ್ನಾಟಕದ ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕಡಿತದ ಪ್ರಮಾಣ ಶೇ 16.5 ರಿಂದ 18.4ರಷ್ಟಿದೆ (ರಾಜ್ಯದ ಸರಾಸರಿ ಶೇ 19.95ಕ್ಕಿಂತ ಕಡಿಮೆ). ಅದೇ ಒಳವಲಸೆ ಹೆಚ್ಚಿರುವ ಬೆಂಗಳೂರಿನಲ್ಲಿ ಕಡಿತದ ದರ ಬರೋಬ್ಬರಿ ಶೇ 48.41 (ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚು) ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ವಾಸಸ್ಥಳದಲ್ಲಿ ಮತದಾರರನ್ನು ಪತ್ತೆಹಚ್ಚಲು ವಿಫಲವಾಗಿ, ಸುಲಭವಾಗಿ ‘ಸ್ಥಳಾಂತರಗೊಂಡವರು’ ಎಂದು ತಪ್ಪಾಗಿ ನಮೂದಿಸುತ್ತಿದ್ದಾರೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಸಮಿತಿ ಎತ್ತಿದೆ.

​ನಾಗರಿಕ ಸಮಿತಿಯ ಪ್ರಮುಖ ಒತ್ತಾಯಗಳು:
​ಭಾನುವಾರ ವಿಶೇಷ ಬೂತ್ ಅಭಿಯಾನ: ಬೆಂಗಳೂರಿನ ಉದ್ಯೋಗಿಗಳು ಬೆಳಿಗ್ಗೆಯೇ ಕೆಲಸಕ್ಕೆ ತೆರಳಿ ತಡವಾಗಿ ಹಿಂದಿರುಗುವುದರಿಂದ, ಬಿಎಲ್‌ಒಗಳು ಭಾನುವಾರಗಳಂದು ಪೂರ್ವಯೋಜಿತ ಬೂತ್ ಸಭೆಗಳನ್ನು ನಡೆಸಿ ಎನ್ಯುಮರೇಷನ್ ಫಾರಂ ವಿತರಿಸಿ, ಸ್ವೀಕರಿಸಬೇಕು.

​ಸ್ಥಳದಲ್ಲೇ ಫಾರಂ-8 ವಿತರಣೆ: ರಾಜ್ಯದೊಳಗೆ ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ ಮನೆ ಬದಲಾಯಿಸಿದವರ ಹೆಸರನ್ನು ಕೈಬಿಡಬಾರದು. ವಾಸಿಸುತ್ತಿರುವ ಸ್ಥಳದಲ್ಲೇ ಅವರಿಗೆ ಎನ್ಯುಮರೇಷನ್ ಫಾರಂ ಹಾಗೂ ‘ಫಾರಂ ನಂಬರ್ 8’ ನೀಡಿ ಹೊಸ ವಿಳಾಸಕ್ಕೆ ಮತ ಸ್ಥಳಾಂತರಿಸಲು ಅವಕಾಶ ನೀಡಬೇಕು.

​ಗಡುವು ವಿಸ್ತರಣೆ: ಕೇವಲ 10 ದಿನಗಳ ಕಣ್ಣೊರೆಸುವ ಗಡುವು ವಿಸ್ತರಣೆಯಿಂದ ಪ್ರಯೋಜನವಿಲ್ಲ. ಹೊಸ ತಂತ್ರಜ್ಞಾನ ಹಾಗೂ ಪಾರದರ್ಶಕತೆಯೊಂದಿಗೆ ಈ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಕೊನೆಯ ವಾರದವರೆಗೆ ವಿಸ್ತರಿಸಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸಮಾನತೆ ಮಾತು, ಘೋಷಣೆಗೆ ಸೀಮಿತವಾಗದಿರಲಿ: ಪ್ರೊ. ವಿಜಯಾ ಬಿ. ಕೋರಿಶೆಟ್ಟಿ

ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಿದಾಗ ಅದನ್ನು ಸಮಾಜದ ಗಮನಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ....

ಪೋಕ್ಸೊ ಪ್ರಕರಣದಲ್ಲಿ ರಾಜಿಗೆ ಅವಕಾಶವಿಲ್ಲ: ದೆಹಲಿ ಹೈಕೋರ್ಟ್

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೊ)ಕ್ಕೆ ಸಂಬಂಧಿಸಿದ, ಪೋಕ್ಸೊ ಕಾಯ್ದೆಯಡಿ ದಾಖಲಾದ...

ಸೌಜನ್ಯ ಪ್ರಕರಣದ ಮರುತನಿಖೆ: ಎಸ್‌ಐಟಿ ಅಧಿಕಾರಿಗಳ ನೇಮಕದ ಸುತ್ತ ಭುಗಿಲೆದ್ದ ಅಸಮಾಧಾನ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ (ಡಿ-ನೋವೊ) ಸುಪ್ರೀಂ ಕೋರ್ಟ್...

ವಿಜಯಪುರ | ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ: ರಾಜ್ಯ, ರಾಷ್ಟ್ರಮಟ್ಟದ ಸಾಧನೆಗೆ ಕರೆ

ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ...