ಕುಮಾರಣ್ಣ, ಪದೇ ಪದೇ ಯಾಕೆ ನನ್ನ ಹಾಸನದ ಶಾಸಕ ಅಂತ ಕರೀತೀರಾ, ನಂಗೆ ಹೆಸರಿಲ್ವಾ?: ಶಿವಲಿಂಗೇಗೌಡ

Date:

  • ‘ಯಾಕಣ್ಣಾ ನಾವು ನಿಮಗೆ ಕುಮಾರಣ್ಣಾ ಅಂತ ಗೌರವ ಕೊಟ್ಟು ಮಾತನಾಡಲ್ವೇ?’
  • ಕೊನೆಗೆ ಕುಮಾರಸ್ವಾಮಿ ಬಾಯಲ್ಲಿ ತಮ್ಮ ಹೆಸರು ಹೇಳಿಸಿಕೊಂಡ ಶಿವಲಿಂಗೇಗೌಡ

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಅವರ ನಡುವಿನ ಆತ್ಮೀಯತೆಯಲ್ಲಿ ಎಷ್ಟು ಬಿರುಕು ಬಿಟ್ಟಿದೆ ಎಂಬುದಕ್ಕೆ ಇಂದಿನ ಸದನ ಸಾಕ್ಷಿಯಾಯಿತು.

- Advertisement -

ಒಂದು ಕಾಲದಲ್ಲಿ ಎಚ್‌ ಡಿ ಕುಮಾರಸ್ವಾಮಿ ಜೊತೆಗೆ ಹೆಚ್ಚು ಆಪ್ತರಾಗಿ ಗುರುತಿಸಿಕೊಂಡಿದ್ದ ಕೆ ಎಂ ಶಿವಲಿಂಗೇಗೌಡರು 2023ರ ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಗೆದ್ದು ಮತ್ತೆ ವಿಧಾನಸಭೆ ಪ್ರವೇಶಿಸಿರುವ ಶಿವಲಿಂಗೇಗೌಡ ಮೇಲೆ ಕುಮಾರಸ್ವಾಮಿ ಅವರಿಗೆ ಮುನಿಸು ಕಡಿಮೆಯಾದಂತೆ ಕಾಣುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ...

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿ. ಒಂದು ಪರಂಪರೆಯ ಮಹತ್ವವನ್ನು ಅದರ ಸ್ಥಾಪಕನ ಜೀವನದಿಂದ ಮಾತ್ರ ಅಳೆಯಲಾಗದು. ಆ ಪರಂಪರೆಯ ವಿಚಾರಗಳನ್ನು...

ಶಿವಲಿಂಗೇಗೌಡರ ಮೇಲಿನ ಮುನಿಸು ಸದನದೊಳಗೆ ಕುಮಾರಸ್ವಾಮಿ ಅವರ ಮಾತಲ್ಲೂ ಅದು ಧ್ವನಿಸಿತು. ಕೊಬ್ಬರಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಜೆಡಿಎಸ್‌ ಮಂಗಳವಾರ ನಿಲುವಳಿ ಸೂಚನೆ ಮಂಡಿಸಿತ್ತು. ಸಭಾಧ್ಯಕ್ಷ ಯು ಟಿ ಖಾದರ್‌ ಆ ನಿಲುವಳಿಯನ್ನು 69ಕ್ಕೆ ಕನ್ವರ್ಟ್‌ ಮಾಡಿ ಇಂದು ಮಧ್ಯಾಹ್ನದ ಕಲಾಪದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಕುಮಾರಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ ತಮ್ಮ ಮಾತಿನ ಮಧ್ಯೆ, “ಪಾಪ, ಹಾಸನದ ಶಾಸಕರೊಬ್ಬರು ನಿನ್ನೆ ಈ ಬಗ್ಗೆ ಹೇಳುತ್ತಿದ್ದರು” ಎನ್ನುತ್ತಿದ್ದಂತೆ ಶಿವಲಿಂಗೇಗೌಡರು ಮಧ್ಯ ಪ್ರವೇಶಿಸಿ, “ಯಾಕಣ್ಣಾ ನಾವು ನಿಮಗೆ ಗೌರವ ಕೊಟ್ಟು ಮಾತನಾಡುವುದಿಲ್ಲವೇ? ನಿನ್ನೆ ಕೂಡ ಮಾಧ್ಯಮಗಳ ಮುಂದೆ ಹಾಸನ ಶಾಸಕರು ಎಂದು ಕರೆದಿದ್ದೀರಿ. ಯಾಕೆ ನಮಗೆ ಹೆಸರು ಇಲ್ಲವಾ? ನಾವು ಬಡವರ ಮಕ್ಕಳು. ಹೇಗೆಗೋ ಬೆಳೆದು ಬಂದಿದ್ದೀವಿ. ರೈತನ ಮಗನಾಗಿ ಬಂದಿರುವೆ ಹೆಸರು ಹಿಡಿದು ಕರೆಯಿರಿ” ಎಂದು ವಿನಂತಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು

ಮುಂದುವರಿದು, “ಭೂಮಿ ಮೇಲೆ ಹೆಸರು ಇಲ್ಲದೇ ಬಂದಿಲ್ಲ. ನನ್ನ ಹೆಸರು ಶಿವಲಿಂಗೇಗೌಡ ಅಂತ. ನಿಮಗೆ 10 ಲಕ್ಷ ಜನ ಫಾಲೋವರ್ಸ್‌ ಇರಬಹುದು. ನನಗೂ ಎರಡು ಲಕ್ಷ ಜನ ಇದ್ದಾರೆ. ನನ್ನ ಹತ್ರ ಸೆಲ್ಫಿ ತೆಗೆಸಿಕೊಂಡವರೇ ಐದು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಯಾಕೆ ನನಗೆ ಹಾಸನ ಶಾಸಕ ಎಂದು ಕರೀತೀರಿ. ವಿಶ್ವಾಸ ಇತ್ತು ಅಷ್ಟು ದಿನ ನಿಮ್ಮ ಜೊತೆ ಇದ್ದೆ. ವಿಶ್ವಾಸ ಇಲ್ಲದ ಮೇಲೆ ನಾನು ಈ ಕಡೆ ಬಂದೆ. ನಿಮ್ಮನ್ನು ಎರಡು ಬಾರಿ ವಿಶಾಲವಾಗಿ ನಾವು ಮುಖ್ಯಮಂತ್ರಿ ಮಾಡಲಿಲ್ಲವೇ? ನಿಮಗೆ ನಾವು ಸಹಾಯ ಮಾಡಿಲ್ಲವೇ? ಪದೇ ಪದೇ ಹಾಸನ ಶಾಸಕ ಎಂದು ಯಾಕೆ ಕರೆಯುತ್ತೀರಿ? ನಾವು ನಿಮಗೆ ಎಂದಾದರೂ ಏಕವಚನದಲ್ಲಿ ಮಾತನಾಡಿಸ್ತೀವಾ?” ಎಂದು ಹಾಸ್ಯವಾಗಿಯೇ ಮಾತನಾಡಿದರು.

ಕೊನೆಗೆ ಕುಮಾರಸ್ವಾಮಿ “ನೋಡ್ರೀ ಶಿವಲಿಂಗೇಗೌಡರೇ..” ಎಂದು ಮಾತು ಆರಂಭಿಸಿದರು. ಆ ಬಳಿಕ ಶಿವಲಿಂಗೇಗೌಡರು ತಮ್ಮ ಆಸನದಲ್ಲಿ ಕುಳಿತುಕೊಂಡರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ; ಜಿಲ್ಲಾಧಿಕಾರಿ

ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಉಂಟಾಗದಂತೆ...

ಚಿಕ್ಕಮಗಳೂರು | ಮಕ್ಕಳ ಬಾಲ್ಯ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರ: ನ್ಯಾ. ಕಿರಣ್ ಕಿಣಿ

'ಇಂದಿನ ಮಕ್ಕಳು ದೇಶದ ಮುಂದಿನ ರೂವಾರಿಗಳು. ಪೋಷಕರ ನಂತರ ಮಕ್ಕಳ ಬದುಕಿನಲ್ಲಿ...

ಕಾರವಾರ | ವಿದೇಶಕ್ಕೆ ಅರಿಶಿಣ ರಫ್ತು ಮಾಡುವ ಆಮಿಷ; ಉದ್ಯಮಿಗೆ ₹4.29 ಲಕ್ಷ ವಂಚನೆ

ಕಾರವಾರ: ವಿದೇಶಕ್ಕೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ಉದ್ದೇಶದಿಂದ ಖರೀದಿದಾರರನ್ನು ಹುಡುಕುತ್ತಿದ್ದ...

ಹಾಸನ | ನಡು ರಸ್ತೆಯಲ್ಲೇ ಮಹಿಳೆಯರ ಹೊಡೆದಾಟ 

ಹಾಸನ ನಗರದ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲಿ ಇಬ್ಬರು ಮಹಿಳೆಯರು ಚಪ್ಪಲಿಯಿಂದ ಪರಸ್ಪರ...