ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ ಮನೆಗಳ ಕೀಲಿ ಮುರಿದು ಕಳ್ಳರು ₹3.65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಹೀರಾಪುರ ಹೊಸ ಬಡಾವಣೆಯ ನಿವಾಸಿ ಹಾಗೂ ಛಾಯಾಗ್ರಾಹಕ ಮೊಹಮ್ಮದ್ ಇಮ್ರಾನ್ ಅವರು ಸೆ.28ರಂದು ರಾತ್ರಿ ಪತ್ನಿಯೊಂದಿಗೆ ತರಕಾರಿ ತರಲು ತೆರಳಿದ್ದ ವೇಳೆ ಕಳ್ಳರು ಮನೆಯ ಕೀಲಿ ಮುರಿದು ಒಳನುಗ್ಗಿದ್ದಾರೆ. 10 ಗ್ರಾಂ ಚಿನ್ನದ ನೆಕ್ಸಸ್, 5 ಗ್ರಾಂ ಚಿನ್ನದ ನೆಕ್ಸಸ್, 5 ಗ್ರಾಂ ಮತ್ತು 2 ಗ್ರಾಂ ಮಂಗಳಸೂತ್ರ, 2 ಗ್ರಾಂ ಚಿನ್ನದ ಉಂಗುರ ಹಾಗೂ ₹40 ಸಾವಿರ ನಗದು ಸೇರಿ ₹2.20 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಚಿಂಚೋಳಿ ಲೇಔಟ್‌ನ ಶರಣಬಸಪ್ಪ ಜಮಾದಾರ ಅವರು ಕಾರ್ಯನಿಮಿತ್ತ ಮುಂಬೈಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಕೀಲಿ ಮುರಿದು 10 ಗ್ರಾಂ ಚಿನ್ನದ ಬೋರಮಾಳ, 3 ಗ್ರಾಂ ಚಿನ್ನದ ಸುತ್ತುಂಗುರ ಹಾಗೂ ₹15 ಸಾವಿರ ನಗದು ಕಳವು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು
This video cannot be played in your browser. Open the video directly

ಸೆಪ್ಟೆಂಬರ್ 26ರಂದು ನೆರೆಮನೆಯ ಅಂಗನವಾಡಿ ಶಿಕ್ಷಕಿ ನಾಗಮ್ಮ ಅವರು ಮನೆಯ ಕೀಲಿ ಮುರಿದಿರುವುದನ್ನು ಗಮನಿಸಿ ಶರಣಬಸಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಮುಂಬೈನಿಂದ ಮರಳಿದ ಬಳಿಕ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಈ ಕುರಿತು ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





