ತುಮಕೂರು ವಿವಿ | ಬಾಗಲಕೋಟೆಯ ರೈತನ ಮಗನಿಗೆ ಒಲಿದ ಸ್ವರ್ಣ ಪದಕದ ಗರಿ

Date:

ಸಮೂಹ ಸಂವಹನ ವಿಭಾಗದಲ್ಲಿ ತುಮಕೂರು ವಿವಿಗೆ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ, ಕಲ್ಪತರು ನಾಡಲ್ಲಿ ಬಾಗಲಕೋಟೆ ರೈತನ ಮಗ ಸಂಗಮೇಶ ಸ್ವರ್ಣ ಪದಕದ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

- Advertisement -

ಸಾಧನೆ ಮಾಡಲೇಬೇಕು ಅಂದುಕೊಂಡು ಛಲ, ಸ್ಪಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನ ಪಡೆದು ಶ್ರದ್ಧೆಯಿಂದ ಅಧ್ಯಯನದಲ್ಲಿ ನಿರತರಾಗಿ ಓದಿದರೆ ಸಾಧನೆ ಅನ್ನೋದು ಕಬ್ಬಿಣದ ಕಡಲೆ ಅಲ್ಲವೇ ಅಲ್ಲ. ಜತೆಗೆ ಯಾವುದೇ ಹಳ್ಳಿ-ಬಡತನ ಅಡ್ಡಿಯಾಗದು ಎನ್ನುವುದಕ್ಕೆ ಅಪ್ಪಟ ಹಳ್ಳಿಗಾಡಿನ ರೈತ ಕುಟುಂಬದ ವಿದ್ಯಾರ್ಥಿ ಸಂಗಮೇಶ(ಸಂಗಪ್ಪ) ‘ಚಿನ್ನದ ಪದಕ’ ಪಡೆಯುವ ಮೂಲಕ ಸಾಕ್ಷಿಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಎಂಬ ಚಿಕ್ಕ ಗ್ರಾಮದ ರೈತ ಹಣಮಂತ ಜೀರಗಾಳ ಅವರ ಪುತ್ರ ಸಂಗಮೇಶ. ತನ್ನೂರಿಂದ 500 ಕಿ.ಮೀ ದೂರದ ಕಲ್ಪತರು ನಾಡಿನತ್ತ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಪಯಣ ಬೆಳೆಸಿ, ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ ಓದಿದ ಸಂಗಮೇಶ ಅವರು ಎಂ.ಎಸ್ಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ‘ಪ್ರಥಮ ರ‍್ಯಾಂಕ್’ ಪಡೆದುಕೊಂಡು ‘ಚಿನ್ನದ ಪದಕʼಕ್ಕೆ ಮುತ್ತಿಟ್ಟಿದ್ದಾರೆ.

ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಸಮಾರಂಭದಲ್ಲಿ ‘ಸಂಗಮೇಶ ಜೀರಗಾಳ’ರವರು ರಾಜ್ಯಪಾಲರಾದ ಡಾ.ಥಾವರ್ ಚಂದ್ ಗೆಹ್ಲೋಟ್ ಅವರಿಂದ ‘ಚಿನ್ನದ ಪದಕ’ ಹಾಗೂ ‘ಪ್ರಥಮ ರ‍್ಯಾಂಕ್’ ಪ್ರಮಾಣ ಪತ್ರವನ್ನು ಪಡೆದು ಬಾಗಲಕೋಟೆ ಜಿಲ್ಲೆಯ ಕೀರ್ತಿ ಇಮ್ಮಡಿಗೊಳಿಸಿದ್ದಾರೆ.

ಗೋಲ್ಡ್ ಮೆಡಲಿಸ್ಟ್ ಸಂಗಮೇಶ ಪ್ರಥಮ ರ‍್ಯಾಂಕ್ ಗಳಿಸಿರುವ ವಿಷಯವನ್ನ ತನ್ನ ತಂದೆಗೆ ಸರ್‌ಪ್ರೈಸ್ ಆಗಿ ವಿವಿ ಘಟಿಕೋತ್ಸವದಲ್ಲಿ ತಿಳಿಸಿ ಸಂಭ್ರಮಿಸಬೇಕು ಅಂದುಕೊಂಡಿದ್ದ, ಆದರೆ ಕಳೆದ ಏಳು ತಿಂಗಳ ಹಿಂದೆ ಅಕಾಲಿಕ ಮರಣದಲ್ಲಿ ತಂದೆಯನ್ನ ಕಳೆದುಕೊಂಡು ತನ್ನ ಸಾಧನೆ ಹೆತ್ತಪ್ಪನಿಗೆ ತಿಳಿಸಲು ಆಗಲಿಲ್ಲ ಎನ್ನುವ ನೋವಿನ ಜತೆಯಲ್ಲೇ ತಂದೆ ಹೇಳಿದಂತೆ ಹೆಮ್ಮೆ ಹಾಗೂ ಹೆಸರು ತರುವಂತಹ ಸಾಧನೆ ಮಾಡಿರುವ ಖುಷಿ ಮನಸಿನಲ್ಲಿಟ್ಟುಕೊಂಡು ರಾಜ್ಯಪಾಲರಿಂದ ‘ಸ್ವರ್ಣ ಪದಕ’ವನ್ನು ಸ್ವೀಕರಿಸಿದರು.

ಸಂಗಮೇಶ ಅವರು ಬಾಗಲಕೋಟೆ ಜಿಲ್ಲೆಯಲ್ಲೇ ಪದವಿವರೆಗೂ ವ್ಯಾಸಂಗ ಮುಗಿಸಿದರು. ಸದ್ಯ ತಂದೆಯ ಅಗಲಿಕೆಯಿಂದ ತಾಯಿ, ಸಹೋದರಿಯರು ಸೇರಿ ಕುಟುಂಬದ ಜವಬ್ದಾರಿಯನ್ನು ಹೊತ್ತು, ಬೆಂಗಳೂರು ನಗರದ ಪ್ರತಿಷ್ಠಿತ ಕನ್ನಡ ದಿನಪತ್ರಿಕೆ ಕಛೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

“ನನ್ನ ಓದಿನ ವಿಷಯದಲ್ಲಿ ಕುಟುಂಬದವರು ಬಹಳಷ್ಟು ಕಾಳಜಿ, ಸಹಾಯ ಮಾಡುತ್ತಿದ್ದರು. ಸಾಧನೆ ಸಂಭ್ರಮಿಸಲು ನನ್ನೊಂದಿಗೆ ಅಪ್ಪನಿಲ್ಲ. ಕಳೆದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ ಅಪ್ಪನನ್ನು ಕಳೆದುಕೊಂಡೆ. ನಾನು ‘ಪ್ರಥಮ ರ‍್ಯಾಂಕ್’ ಬಂದ ಸುದ್ದಿ ಘಟಿಕೋತ್ಸವ ವೇಳೆ ಹೇಳಿ ಸರ್‌ಪ್ರೈಸ್ ಆಗಿ ಖುಷಿ ಪಡಿಸಬೇಕು ಅಂದುಕೊಂಡಿದ್ದೆ. ಆದರೆ ಆಸೆ ನನಸಾಗಲೇ ಇಲ್ಲ. ಗುರುಗಳ ಮಾರ್ಗದರ್ಶನ ಹಾಗೂ ಸ್ನೇಹಿತರ ಸಹಕಾರದಿಂದ ‘ಗೋಲ್ಡ್ ಮೆಡಲ್’ ಸಾಧಿಸಿದೆ.” ಎನ್ನುತ್ತಾರೆ ಸಂಗಮೇಶ ಜೀರಗಾಳ.

ತಂಡ
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರೊಂದಿಗೆ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು

“ಸ್ಪಷ್ಟ ಮತ್ತು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಸಂಗಮೇಶ ಅಧ್ಯಯನ ಮಾಡಿದ್ದಾರೆ. ಹಾಗಾಗಿ ರ‍್ಯಾಂಕ್ ಗಳಿಸಲು ಸಾಧ್ಯವಾಗಿದೆ. ಇದು ಅವರ ನಿರಂತರ ಪರಿಶ್ರಮದ ಯಶಸ್ಸು. ರಾತ್ರಿ 9ರ ತನಕ ನಮ್ಮಲ್ಲಿರುವ ರೇಡಿಯೋ & ಟಿವಿ ಸ್ಟುಡಿಯೋಗಳಲ್ಲಿ ಕೆಲಸ ಮಾಡುತ್ತಿದ್ದರು. ಸಂಗಮೇಶ ಅವರು ಇನ್ನಷ್ಟು ಉನ್ನತ ಸಾಧನೆಯ ದಾರಿಯಲ್ಲಿ ಸಾಗಲಿ” ಎನ್ನುತ್ತಾರೆ‌ ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಟಿ.ಮುದ್ದೇಶ್. ‌

ಬಿ.ಟಿ.ಮುದ್ದೇಶ್‌
ಬಿ.ಟಿ.ಮುದ್ದೇಶ್‌, ನಿದೇರ್ಶಕರು, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೇಕೆದಾಟು ಮಧ್ಯಸ್ಥಿಕೆ ವಹಿಸದ ಕೇಂದ್ರ, ದಕ್ಷಿಣದ ರಾಜ್ಯಗಳಿಗಿದು ಸಕಾಲ

ಒಟ್ಟಾರೆಯಾಗಿ, ಬಡತನ, ಕಷ್ಟ-ಸುಖ, ನೋವು-ನಲಿವುಗಳ ನಡುವೆಯೂ ನಿರ್ಧಿಷ್ಟ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದರೆ ಸುಲಭವಾಗಿ ಸಾಧನೆಯ ಶಿಖರವನ್ನೇರಬಹುದು ಎಂಬುದಕ್ಕೆ ಸಂಗಮೇಶ ಜೀರಗಾಳ ಮಾದರಿಯಾಗಿದ್ದು, ಯುವ ಪೀಳಿಗೆ ಇದೇ ಹಾದಿಯಲ್ಲಿ ಸಾಗಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...

ಬಾಗೇಪಲ್ಲಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ ಕಾಲೇಜು ವಿದ್ಯಾರ್ಥಿಗಳ ಗುಡ್ಡಗಾಡು ಓಟ ಸ್ಪರ್ಧೆ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ...

ರಾಯಚೂರು | ಮಾನ್ವಿ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ, ಕ್ಲೀನರ್‌ಗೆ ಗಾಯ

ಮಾನ್ವಿ ತಾಲೂಕಿನ ಗ್ರಾಮದ ಸಮೀಪದ ಹೊರವಲಯದಲ್ಲಿ ಮಾನ್ವಿ ರಸ್ತೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ...