ಬಾಗಲಕೋಟೆ | ಕಬ್ಬು ಬೆಲೆಗಾಗಿ ರೈತರ ಹೋರಾಟ; ಕಟಾವಿಗೆ ಹೊರರಾಜ್ಯದ 70 ಸಾವಿರ ಕಾರ್ಮಿಕರ ಆಗಮನ!

Date:

ಒಂದೆಡೆ ಕಬ್ಬಿಗೆ ನ್ಯಾಯಯುತ ಬೆಲೆ ದೊರಕಬೇಕೆಂದು ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕಬ್ಬು ಕಟಾವು ಹಾಗೂ ಸಕ್ಕರೆ ಉತ್ಪಾದನೆಯ ಹಂಗಾಮಿಗೆ ಸಕ್ಕರೆ ಕಾರ್ಖಾನೆಗಳು ಸಜ್ಜಾಗುತ್ತಿವೆ. ಕಬ್ಬಿನ ಬೆಲೆ ನಿಗದಿಯ ಗೊಂದಲದ ನಡುವೆಯೇ ಕಟಾವು ಕಾರ್ಮಿಕರ ಆಗಮನ ಆರಂಭವಾಗಿದ್ದು, ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆ ಪ್ರದೇಶದಲ್ಲಿ ಹಂಗಾಮಿನ ಚಟುವಟಿಕೆಗಳು ಗರಿಗೆದರಿವೆ.

ಕಬ್ಬು ಕಟಾವಿಗೆ ಸ್ಥಳೀಯ ಕಾರ್ಮಿಕರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಂದ ಕಟಾವು ಗ್ಯಾಂಗ್‌ಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಗೆ 10 ಸಾವಿರಕ್ಕೂ ಅಧಿಕ ಕಬ್ಬು ಕಟಾವು ಗ್ಯಾಂಗ್‌ಗಳು ಆಗಮಿಸಿವೆ. ಈ ಬಾರಿ ಹಂಗಾಮಿಗಾಗಿ 70 ಸಾವಿರಕ್ಕೂ ಅಧಿಕ ಕೃಷಿ ಕಾರ್ಮಿಕರು ಜಿಲ್ಲೆಗೆ ಬರುವ ನಿರೀಕ್ಷೆಯಿದೆ.

- Advertisement -

ಮುಂಗಡ ಹಣ ನೀಡಿ ಗ್ಯಾಂಗ್‌ಗಳ ಖಚಿತಪಡಿಸಿಕೊಂಡ ಕಾರ್ಖಾನೆಗಳು

ಕಬ್ಬು ಹಂಗಾಮು ಆರಂಭವಾಗುವ ಮೊದಲೇ ಸಕ್ಕರೆ ಕಾರ್ಖಾನೆಗಳು ಹಾಗೂ ದೊಡ್ಡ ಇಳುವಳಿದಾರರು ಕಟಾವು ಗ್ಯಾಂಗ್‌ಗಳಿಗೆ ಮುಂಗಡ ಹಣ ನೀಡಿ ಅವುಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಇದೀಗ ವಿವಿಧ ರಾಜ್ಯಗಳಿಂದ ಕಾರ್ಮಿಕರ ತಂಡಗಳು ಜಿಲ್ಲೆಗೆ ಆಗಮಿಸುತ್ತಿದ್ದು, ಇನ್ನೂ ಹಲವು ರೈತರು ಮಧ್ಯಪ್ರದೇಶ, ಮಹಾರಾಷ್ಟ್ರ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಿಂದ ಕಟಾವು ಗ್ಯಾಂಗ್‌ಗಳನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಕಬ್ಬು ಬೆಳೆದು ನಿಂತಿದ್ದರೂ ಅದನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುವುದು ರೈತರಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಕಟಾವು ಗ್ಯಾಂಗ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ನಾಲ್ಕು ತಿಂಗಳು ಕಬ್ಬಿನ ಗದ್ದೆಗಳೇ ಕಾರ್ಮಿಕರ ವಾಸಸ್ಥಾನ

ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಹಂಗಾಮು ಆರಂಭವಾದರೆ ಸಾವಿರಾರು ಕುಟುಂಬಗಳ ಬದುಕು ಕಬ್ಬಿನ ಗದ್ದೆಗಳ ಸುತ್ತ ಸುತ್ತುತ್ತದೆ. ಹೊರರಾಜ್ಯಗಳಿಂದ ಆಗಮಿಸುವ ಕಟಾವು ಕಾರ್ಮಿಕರು ನಾಲ್ಕು ತಿಂಗಳ ಕಾಲ ಕಬ್ಬಿನ ಹೊಲಗಳಲ್ಲಿಯೇ ತಾತ್ಕಾಲಿಕ ವಾಸ್ತವ್ಯ ಹೂಡುತ್ತಾರೆ.

ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಪ್ರತಿದಿನ ಕಬ್ಬು ಕಟಾವು ಮಾಡಿ, ಟ್ರ್ಯಾಕ್ಟರ್‌ಗಳ ಟ್ರೈಲರ್‌ಗಳ ಮೂಲಕ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಹೀಗೆ ಕಬ್ಬು ಕಟಾವು ಮತ್ತು ಸಾಗಣೆ ಕಾರ್ಯ ನಿರಂತರವಾಗಿ ನಡೆಯುತ್ತದೆ.

ಕಬ್ಬು ಉತ್ಪಾದನೆಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಬಾಗಲಕೋಟೆಗೆ ಹಂಗಾಮಿನ ಸಂದರ್ಭದಲ್ಲಿ ಸಾವಿರಾರು ಕೃಷಿ ಕಾರ್ಮಿಕರನ್ನು ಹೊರರಾಜ್ಯಗಳಿಂದ ಕರೆಸಿಕೊಳ್ಳುವುದು ದಶಕಗಳಿಂದ ನಡೆದುಕೊಂಡು ಬಂದಿದೆ.

ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಹಂಗಾಮು ಆರಂಭಿಸುವ ಸಿದ್ಧತೆಗಳು ಭರದಿಂದ ಸಾಗಿವೆ. ಕೆಲವು ಕಾರ್ಖಾನೆಗಳಲ್ಲಿ ಈಗಾಗಲೇ ಬಾಯ್ಲರ್ ಪ್ರದೀಪನ ಕಾರ್ಯ ಪೂರ್ಣಗೊಂಡಿದ್ದು, ಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಆಡಳಿತ ಮಂಡಳಿಗಳು ತೊಡಗಿವೆ.

ಕಬ್ಬು ಕಟಾವು ಆರಂಭವಾದ ಬಳಿಕ ಕಾರ್ಖಾನೆಗಳಿಗೆ ನಿರಂತರವಾಗಿ ಕಬ್ಬು ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕಟಾವು ಗ್ಯಾಂಗ್‌ಗಳ ವ್ಯವಸ್ಥೆ, ಕಬ್ಬು ಸಾಗಣೆ ಹಾಗೂ ಕಾರ್ಖಾನೆಗಳ ಕಾರ್ಯಾಚರಣೆಗೆ ಅಗತ್ಯವಿರುವ ಸಿದ್ಧತೆಗಳು ನಡೆಯುತ್ತಿವೆ.

1.54 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ

ಜಿಲ್ಲೆಯಲ್ಲಿ ಈ ಬಾರಿ ಸುಮಾರು 1.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ 30 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ.

ಅಂದಾಜು 1.20 ಲಕ್ಷ ಹೆಕ್ಟೇರ್ ಪ್ರದೇಶದ ಕಬ್ಬು ಕಟಾವಿಗೆ ಸಿದ್ಧವಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಕಬ್ಬನ್ನು ನಿಗದಿತ ಅವಧಿಯಲ್ಲಿ ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುವುದು ರೈತರು ಹಾಗೂ ಕಾರ್ಖಾನೆಗಳ ಮುಂದಿರುವ ಪ್ರಮುಖ ಸವಾಲಾಗಿದೆ.

ಕಾರ್ಮಿಕರ ಕೊರತೆ; ರೈತರ ಮೇಲೆ ಹೆಚ್ಚುತ್ತಿರುವ ಹೊರೆ

ಕಬ್ಬು ಹಂಗಾಮು ಆರಂಭವಾಗುತ್ತಿದ್ದಂತೆ ರೈತರಿಗೆ ಕಟಾವು ಮತ್ತು ಸಾಗಣೆಯದ್ದೇ ದೊಡ್ಡ ಚಿಂತೆಯಾಗಿದೆ. ಕಬ್ಬಿಗೆ ಯೋಗ್ಯ ಬೆಲೆ ಸಿಗಬೇಕೆಂದು ಹೋರಾಟ ನಡೆಸುತ್ತಿರುವ ರೈತರು, ಮತ್ತೊಂದೆಡೆ ಕಟಾವು ಕಾರ್ಮಿಕರ ಕೊರತೆಯಿಂದಾಗಿ ಹೆಚ್ಚುವರಿ ಸಂಕಷ್ಟ ಎದುರಿಸುತ್ತಿದ್ದಾರೆ.

ಈದಿನ.ಕಾಮ್‌ ಜೊತೆಗೆ ರೈತ ಸಂಘಟನೆ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, “ಕಬ್ಬು ಹಂಗಾಮು ಆರಂಭವಾಗುತ್ತಿದ್ದಂತೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದೇ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ಕಬ್ಬು ಕಟಾವು ಮತ್ತು ಸಾಗಣೆಗೆ ಅಗತ್ಯವಿರುವ ಕಾರ್ಮಿಕರನ್ನು ಮಧ್ಯಪ್ರದೇಶದಿಂದ ಕರೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯವಾಗಿ ಕೃಷಿ ಕೆಲಸಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ರೈತರು ತಮ್ಮ ಕಬ್ಬನ್ನು ಕಾರ್ಖಾನೆಗಳಿಗೆ ತಲುಪಿಸಲು ಹರಸಾಹಸ ಪಡಬೇಕಾಗಿದೆ. ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ ತೀವ್ರ ಸಂಕಷ್ಟ ತಂದೊಡ್ಡಿದೆ” ಎಂದು ಅಳಲು ತೋಡಿಕೊಂಡರು.

ಕಬ್ಬು ಬೆಳೆದು ನಿಂತಿದೆ, ಕಾರ್ಖಾನೆಗಳು ಹಂಗಾಮಿಗೆ ಸಿದ್ಧವಾಗಿವೆ, ಕಟಾವು ಗ್ಯಾಂಗ್‌ಗಳೂ ಜಿಲ್ಲೆಗೆ ಆಗಮಿಸುತ್ತಿವೆ. ಆದರೆ ಕಬ್ಬಿಗೆ ಯೋಗ್ಯ ಬೆಲೆ ಸಿಗುವ ಭರವಸೆ ಹಾಗೂ ಕಟಾವು-ಸಾಗಣೆ ವೆಚ್ಚದ ಹೊರೆ ರೈತರನ್ನು ಕಾಡುತ್ತಿದೆ. ಹೀಗಾಗಿ ಈ ಬಾರಿಯ ಕಬ್ಬು ಹಂಗಾಮು ರೈತರಿಗೆ ಕೇವಲ ಬೆಳೆ ಕಟಾವಿನ ಪ್ರಕ್ರಿಯೆಯಾಗದೆ, ಬೆಲೆ ಮತ್ತು ಬದುಕಿನ ಹೋರಾಟವೂ ಆಗಿದೆ.

WhatsApp Image 2025 02 05 at 18.09.20 1
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಮಾನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ವೈಮಾನಿಕ ದಾಳಿ: ನಾವಿಕ ಬಲಿ, 13 ಮಂದಿ ರಕ್ಷಣೆ!

ಒಮಾನ್ ಕರಾವಳಿಯ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಾರತದ ಸರಕು ದೋಣಿಯ ಮೇಲೆ...

ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ: ಸಿಎಂ ಡಿ ಕೆ ಶಿವಕುಮಾರ್

"ಕೆಎಂಎಫ್ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ...

ದೆಹಲಿ ಪೊಲೀಸ್ ಪಡೆಯಲ್ಲಿ ತಾರಕಕ್ಕೇರಿದ ಅಸಮಾಧಾನ; ಪ್ರತಿಭಟಿಸಿದ್ದಕ್ಕೆ ಅಧಿಕಾರಿ ಅಮಾನತು!

ದೆಹಲಿ ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ನಡೆದ ಘಟನಾವಳಿಗಳು ಈಗ ಭಾರೀ ಸಂಚಲನ...