ದೆಹಲಿ ಪೊಲೀಸ್ ಪಡೆಯಲ್ಲಿ ತಾರಕ್ಕೇರಿದ ಅಸಮಾಧಾನ; ಪ್ರತಿಭಟಿಸಿದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಅಮಾನತು!

Date:

ದೆಹಲಿ ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ನಡೆದ ಘಟನಾವಳಿಗಳು ಈಗ ಭಾರೀ ಸಂಚಲನ ಮೂಡಿಸಿವೆ. ಕಾರ್ಯಕ್ಷೇತ್ರದ ಭದ್ರತೆ, ಕಿರುಕುಳ ಹಾಗೂ ಏಕಪಕ್ಷೀಯ ವರ್ಗಾವಣೆಯನ್ನು ಖಂಡಿಸಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆಯೂ ನಡೆದಿದೆ. ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಹಾಯಕ ಪೊಲೀಸ್ ಆಯುಕ್ತ (ACP) ಮಾನಸ್ವಿ ವಸಿಷ್ಠ ಅವರನ್ನು ಪ್ರತಿಭಟನೆ ನಡೆದ ಕೇವಲ 24 ಗಂಟೆಗಳಲ್ಲಿ ಅಮಾನತುಗೊಳಿಸಲಾಗಿದೆ.

- Advertisement -

ನವೆಂಬರ್ 2 (ಸೋಮವಾರ) ರಂದು ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕೇಂದ್ರ ಕಚೇರಿಯ ಗೇಟ್ ಸಂಖ್ಯೆ 1 ರ ಮುಂದೆ ಜಮಾಯಿಸಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸಿ, ಸಿಬ್ಬಂದಿಯ ಪರವಾಗಿ ಧ್ವನಿ ಎತ್ತಿದ್ದ ಎಸಿಪಿ ವಸಿಷ್ಠ ಅವರ ಮೇಲೆಯೇ ಈಗ ಶಿಸ್ತುಕ್ರಮದ ಗದಾಪ್ರಹಾರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಈ ಇಡೀ ಕದನಕ್ಕೆ ಮೂಲ ಕಾರಣ ಅಕ್ಟೋಬರ್ 23 ರಂದು ದೆಹಲಿಯ ಶಹದರಾ ಪೊಲೀಸ್ ಠಾಣೆಯಲ್ಲಿ ನಡೆದ ಸಣ್ಣ ಘರ್ಷಣೆ. ಈ ಘಟನೆ ಈಗ ದೆಹಲಿ ಪೊಲೀಸ್ ಇಲಾಖೆ ಹಾಗೂ ವಕೀಲರ ನಡುವೆ ತೀವ್ರ ಸ್ವರೂಪದ ಸಮರಕ್ಕೆ ನಾಂದಿ ಹಾಡಿದೆ. ವಕೀಲರ ಒತ್ತಡಕ್ಕೆ ಮಣಿದು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ, ನವೆಂಬರ್ 2 (ಸೋಮವಾರ) ರಂದು ದೆಹಲಿ ಪೊಲೀಸ್ ಪ್ರಧಾನ ಕಚೇರಿಯ (PHQ) ಗೇಟ್ ಸಂಖ್ಯೆ 1 ರ ಹೊರಗೆ ಸುಮಾರು 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬೀದಿಗಿಳಿದು ಧರಣಿ ನಡೆಸಿದರು.

ಈ ಇಡೀ ವಿವಾದಕ್ಕೆ ಮುನ್ನುಡಿ ಬರೆದದ್ದು ಅಕ್ಟೋಬರ್ 23 ರಂದು ದೆಹಲಿಯ ಶಹದರಾ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ. ವಕೀಲರೊಬ್ಬರ ಮೇಲಿನ ಹಲ್ಲೆಗೆ ಸಂಬಂಧಿಸಿ ದೂರು ದಾಖಲಿಸಲು ಬಂದ ವಕೀಲರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಘರ್ಷಣೆಯಲ್ಲಿ ವಕೀಲರೊಬ್ಬರ ತಲೆಗೆ ಪೆಟ್ಟು ಬಿದ್ದಿತ್ತು.

ಇದಾದ ಬಳಿಕ ವಕೀಲರು ಸಾಲು ಸಾಲು ಆರೋಪಗಳನ್ನು ಮಾಡಿದರು. ಆರಂಭದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ ಪೊಲೀಸರು, ಆಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು. ಅಷ್ಟೇ ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಭೆಯ ಮಧ್ಯೆ ಲೋಡ್ ಮಾಡಿದ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದರು. ಆದರೆ, ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದರು.

ಠಾಣೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ ದೆಹಲಿಯ ಜಿಲ್ಲಾ ನ್ಯಾಯಾಲಯಗಳ ವಕೀಲರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಪಟ್ಟು ಹಿಡಿದರು. ಕೊನೆಗೆ ವಕೀಲರ ಪ್ರತಿಭಟನೆ ಶಮನಗೊಳಿಸಲು ಅಕ್ಟೋಬರ್ 28 ರಂದು ಇಲಾಖೆ ಇಬ್ಬರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿತು. 

ಎಸಿಪಿ ಮಾನಸ್ವಿ ವಸಿಷ್ಠ: ಗಾಂಧಿ ನಗರ ಉಪವಿಭಾಗದ ಎಸ್‌ಡಿಪಿಒ ಹುದ್ದೆಯಿಂದ ಮಹಿಳೆಯರು ಮತ್ತು ಮಕ್ಕಳ ಸಶಸ್ತ್ರ ಪೊಲೀಸ್ ಘಟಕಕ್ಕೆ (SPUWAC) ವರ್ಗಾವಣೆ.

ಇನ್ಸ್‌ಪೆಕ್ಟರ್ ಅರುಣ್ ಕುಮಾರ್: ಶಹದರಾ ಠಾಣಾಧಿಕಾರಿ (SHO) ಹುದ್ದೆಯಿಂದ ದೆಹಲಿ ಪೊಲೀಸ್ ಭದ್ರತಾ ವಿಭಾಗಕ್ಕೆ ವರ್ಗಾವಣೆ.

ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆಯೇ ವಕೀಲರು ತಮ್ಮ ಮುಷ್ಕರವನ್ನು ವಾಪಸ್ ಪಡೆದರು.

ವಕೀಲರ ಏಕಪಕ್ಷೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳ ಬಲಿ ಪಡೆದಿರುವುದನ್ನು ಖಂಡಿಸಿ ಪೊಲೀಸ್ ಸಿಬ್ಬಂದಿ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸಂಘಟಿತರಾದರು. ನವೆಂಬರ್ 2 ರ ಬೆಳಿಗ್ಗೆ 8 ಗಂಟೆಗೆ ಮಹಿಳಾ ಸಿಬ್ಬಂದಿ ಸೇರಿದಂತೆ ನೂರಾರು ಪೊಲೀಸರು ಪ್ಲೇಕಾರ್ಡ್ ಹಿಡಿದು ಪೊಲೀಸ್ ಪ್ರಧಾನ ಕಚೇರಿಯ ಮುಂದೆ ಜಮಾಯಿಸಿದರು.

ವರ್ಗಾವಣೆಯಾದ ಇಬ್ಬರೂ ಅಧಿಕಾರಿಗಳನ್ನು ತಕ್ಷಣವೇ ಹಳೆಯ ಹುದ್ದೆಗಳಿಗೆ ಮರುಸ್ಥಾಪಿಸಬೇಕು ಮತ್ತು ಪೊಲೀಸ್ ಆಯುಕ್ತರು ನೇರವಾಗಿ ತಮ್ಮೊಂದಿಗೆ ‘ಸಂಪರ್ಕ ಸಭೆ’ ನಡೆಸಿ ಭದ್ರತೆಯ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸಿದ ಎಸಿಪಿ ಮಾನಸ್ವಿ ವಸಿಷ್ಠ, “ಪೊಲೀಸ್ ಠಾಣೆಗಳೇ ನಮ್ಮ ಸಿಬ್ಬಂದಿಗೆ ಸುರಕ್ಷಿತವಾಗಿರದಿದ್ದರೆ, ಇನ್ಯಾವ ಜಾಗ ಸುರಕ್ಷಿತವಾಗಿರಲು ಸಾಧ್ಯ? ಪೊಲೀಸ್ ಠಾಣೆಗಳ ಒಳಗಡೆ ನಡೆಯುವ ಗೂಂಡಾಗಿರಿ ಮತ್ತು ಭದ್ರತಾ ಲೋಪಗಳ ವಿರುದ್ಧ ನಾವು ಧ್ವನಿ ಎತ್ತುವುದು ಅನಿವಾರ್ಯವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ನವದೆಹಲಿ ಡಿಸಿಪಿ ಸಚಿನ್ ಶರ್ಮಾ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ, ಸಿಬ್ಬಂದಿ ರಸ್ತೆಯಲ್ಲೇ ಕುಳಿತು ಆಯುಕ್ತರ ಭೇಟಿಗೆ ಪಟ್ಟು ಹಿಡಿದರು. ಅಂತಿಮವಾಗಿ ಜಂಟಿ ಪೊಲೀಸ್ ಆಯುಕ್ತರಾದ ನೂಪುರ್ ಪ್ರಸಾದ್ ಸಿಬ್ಬಂದಿಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ವರ್ಗಾವಣೆ ಪರಿಶೀಲನೆ ಸೇರಿದಂತೆ ಎಲ್ಲಾ ಕುಂದುಕೊರತೆಗಳನ್ನು ಸೂಕ್ತ ಆಡಳಿತಾತ್ಮಕ ವೇದಿಕೆಯಲ್ಲಿ ಪ್ರಸ್ತಾಪಿಸಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪೋಲಿಸರ ಈ ಪ್ರತಿಭಟನೆ ಇಲಾಖೆಯ ಒಳಗಿನ ಅಸಮಾಧಾನವನ್ನು ಹೊರಹಾಕಿದರೂ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಪ್ರಧಾನ ಕಚೇರಿ ಇರುವ ಪ್ರದೇಶದಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 163 (ನಿಷೇಧಾಜ್ಞೆ) ಜಾರಿಯಲ್ಲಿದ್ದಾಗ ಪೊಲೀಸರೇ ನಿಯಮ ಮೀರಿ ಪ್ರತಿಭಟನೆ ನಡೆಸಿದ್ದನ್ನು ಐಸಾ (AISA) ಅಧ್ಯಕ್ಷೆ ನೇಹಾ ಬೋರಾ ಖಂಡಿಸಿದರು. “ನಿಯಮ ಉಲ್ಲಂಘಿಸಿದ ಪೊಲೀಸರ ವಿರುದ್ಧವೇ ದೆಹಲಿ ಪೊಲೀಸರು ಎಫ್‌ಐಆರ್ ಹಾಕ್ತಾರಾ?” ಎಂದು ನೇಹಾ ಪ್ರಶ್ನಿಸಿದರು.

ಇನ್ನೊಂದೆಡೆ, ಅಕ್ಟೋಬರ್ 30 ರಂದೇ ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಬಾರ್ ಕೌನ್ಸಿಲ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಭವಿಷ್ಯದಲ್ಲಿ ಇಂತಹ ಘರ್ಷಣೆಗಳನ್ನು ತಡೆಯಲು ಜಂಟಿ ಕುಂದುಕೊರತೆ ನಿವಾರಣಾ ಸಮಿತಿ ರಚಿಸಲು ಒಪ್ಪಿಕೊಂಡಿದ್ದರು. ಈ ಇಡೀ ಘಟನಾವಳಿಗಳು 2019 ರಲ್ಲಿ ದಿಸ್ ಹಜಾರಿ ಕೋರ್ಟ್‌ನಲ್ಲಿ ಪಾರ್ಕಿಂಗ್ ವಿಚಾರವಾಗಿ ವಕೀಲರು ಮತ್ತು ಪೊಲೀಸರ ನಡುವೆ ನಡೆದಿದ್ದ ಭೀಕರ ಗಲಾಟೆ ಹಾಗೂ ತದನಂತರ 2,000 ಕ್ಕೂ ಹೆಚ್ಚು ಪೊಲೀಸರು ನಡೆಸಿದ್ದ ಬೃಹತ್ ಪ್ರತಿಭಟನೆಯನ್ನು ಮತ್ತೆ ನೆನಪಿಸುವಂತೆ ಮಾಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಪ್ರತಿ ಟನ್‌ ಕಬ್ಬಿಗೆ ₹5,500 ದರ ನಿಗದಿಗೆ ಆಗ್ರಹ: ನಾಳೆ ಡಿಸಿ ಕಚೇರಿ ಮುತ್ತಿಗೆ

ಪ್ರತಿ ಟನ್‌ ಕಬ್ಬಿಗೆ ₹5,500 ದರ ನಿಗದಿಪಡಿಸುವುದು, ಸಕ್ಕರೆ ಕಾರ್ಖಾನೆಗಳಲ್ಲಿ ತಕ್ಷಣ...

ಬಾಗಲಕೋಟೆ | ಜನಗಣತಿ-2027ಕ್ಕೆ ಸಿದ್ಧತೆ: ಜಿಲ್ಲೆಯ 120 ಅಧಿಕಾರಿಗಳಿಗೆ ತರಬೇತಿ

ಜಿಲ್ಲೆಯಾದ್ಯಂತ ಜನಗಣತಿ-2027ರ ಕಾರ್ಯವನ್ನು ಯಶಸ್ವಿಯಾಗಿ ಹಾಗೂ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲೆಯ...

ಬೀದರ್‌ | ಎಸ್‌ಐಆರ್‌ ರದ್ದತಿಗೆ ಆಗ್ರಹ: ನ.5ರ ಪ್ರತಿಭಟನೆಗೆ ಬೆಂಬಲ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ...

ನಟಿ ನೋರಾ ಫತೇಹಿಗೆ ದೆಹಲಿ ಕೋರ್ಟ್ ತರಾಟೆ; ₹200 ಕೋಟಿ ಸುಲಿಗೆ ಕೇಸ್‌ನಲ್ಲಿ ಮರು ಸಮನ್ಸ್

ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ...