ಬಾಗೇಪಲ್ಲಿ |ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ

Date:

ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ತಾಲ್ಲೂಕಿನಲ್ಲಿ ಬಿಸಿಲ ಧಗೆ ಮಿತಿ ಮೀರಿತ್ತು. ಉಷ್ಣಾಂಶವು 38 ಡಿಗ್ರಿ ತಲುಪಿತ್ತು. ಹಗಲಲ್ಲಿ ಹೊರಗಡೆ ಓಡಾಡಲಾಗದಷ್ಟು ಬಿಸಿ ಇತ್ತು. ಬೆಳಿಗ್ಗೆಯಿಂದಲೂ ಗಾಳಿ ಜೊತೆಗೆ ಬಿಸಿ ಗಾಳಿ ಬೀಸುವ ಜೊತೆಗೆ ಮಳೆ ಮುನ್ಸೂಚನೆ ನೀಡಿತ್ತು. ಅದರಂತೆ ಸಂಜೆ ಮಳೆರಾಯ ಕೃಪೆ ತೋರಿದ.

- Advertisement -

ವರುಣನ ಕೃಪೆಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಏಕಾಏಕಾಕಿ ಸುರಿದ ಮಳೆಯಲ್ಲಿ ನೆನೆಯದಂತೆ ತಪ್ಪಿಸಿಕೊಳ್ಳಲು ಜನ ಪರದಾಡಿದರು. ದ್ವಿಚಕ್ರ ವಾಹನಗಳ ಸವಾರರು ಮಳೆಯಲ್ಲಿ ಸಂಚರಿಸಿದರು. ರಸ್ತೆಯ ತಗ್ಗು ಮತ್ತು ಗುಂಡಿಗಳಲ್ಲಿ ಕೆಲ ಹೊತ್ತು ನೀರು ನಿಂತಿತು. ಬಿಸಿಲಿಗೆ ಕಾದಿದ್ದ ಧರೆಯು ಮಳೆ ಸಿಂಚನದಿಂದ ತಣ್ಣಗಾಯಿತು.

ಪಟ್ಟಣ ಮತ್ತು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ರಾತ್ರಿ ಗುಡುಗು, ಮಿಂಚಿನ ಗಾಳಿ ಮಳೆಯಾಗಿದೆ.
ಪಟ್ಟಣ ಮತ್ತು ಗ್ರಾಮಗಳ ರಸ್ತೆಗಳಲ್ಲಿ ಮಳೆಯ‌ ನೀರು ಹರಿಯಿತು. ಜನರು ದ್ಚಿಚಕ್ರ ವಾಹನಗಳಲ್ಲಿ ಮಳೆಯಲ್ಲಿ ನೆನೆದುಕೊಂಡು ಮನೆಗಳತ್ತ ಸಂಚರಿಸಿದರು. ಪಟ್ಟಣದ ಡಾ.ಎಚ್.ಎನ್ ಸೇರಿದಂತೆ ತಗ್ಗಿನ ಪ್ರದೇಶಗಳು ಜಲಾವೃತ ಆದವು. 15 ನೇ ವಾರ್ಡನಲ್ಲಿ ಚರಂಡಿ ಮಣ್ಣು ತುಂಬಿದ ಕಾರಣ ಹಾಗೂ ಪುರಸಭೆ ಪೌರ ಕಾರ್ಮಿಕರು ಚರಂಡಿ ಸ್ವಚ್ಛ ಮಾಡದ ಕಾರಣ ನೀರು ರಸ್ತೆಗೆ ಅಡ್ಡಲಾಗಿ ಹರಿದು ವಾರ್ಡಿನ ಜನರಿಗೆ ತೊಂದರೆ ಆಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದನ್ನು ಓದಿದ್ದೀರಾ..? ಕೋಲಾರ | ಜಿಲ್ಲಾ ಜಾಗೃತಿ ಸಮಿತಿ ರದ್ದು ಮಾಡಿ ಹೊಸದಾಗಿ ಸಮಿತಿ ನೇಮಕಕ್ಕೆ ಒತ್ತಾಯ

ಸಂಜೆ 6 ಗಂಟೆಗೆ ಆರಂಭವಾದ ಮಳೆಯು ರಾತ್ರಿ 9 ಗಂಟೆಯಾದರೂ ಮಳೆ ಮುಂದುವರಿಯಿತು. ಹೀಗಾಗಿ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಸೇರಿದಂತೆ ಇನ್ನಿತರ ಸಮಸ್ಯೆಗಳಾದವು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | UAPA, NSA ಕಾಯ್ದೆಗಳು ಸಂವಿಧಾನಿಕ ಹಕ್ಕುಗಳ ದಮನಕ್ಕೆ ಅಸ್ತ್ರವಾಗುತ್ತಿವೆ : ಪ್ರೊ. ಫಣಿರಾಜ್

ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವಾಗಿ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ,...

ಉಡುಪಿ | ಕಟ್‌ಬೇಲ್ತೂರು ರೈಲ್ವೆ ಸೇತುವೆ ಅಪಾಯಕಾರಿ ತಿರುವು ಸರಿಪಡಿಸಲು ಆಗ್ರಹಿಸಿ ಸಿಪಿಎಂ ಪ್ರತಿಭಟನೆ

ಕಟ್‌ಬೇಲ್ತೂರು ಗ್ರಾಮದ ರೈಲ್ವೆ ಸೇತುವೆಯಲ್ಲಿರುವ ಅಪಾಯಕಾರಿ ತಿರುವನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರ...

ಉಡುಪಿ | ಮಲ್ಪೆ–ತೀರ್ಥಹಳ್ಳಿ ಹೆದ್ದಾರಿ ಕಾಮಗಾರಿ ಅಂತಿಮ ಹಂತ; ಬಾಕಿ ಭೂಸ್ವಾಧೀನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ರಾಷ್ಟ್ರೀಯ ಹೆದ್ದಾರಿ 169ಎರ ಮಲ್ಪೆ–ಕರಾವಳಿ ಬೈಪಾಸ್‌ವರೆಗಿನ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು...