ಉಡುಪಿ | UAPA, NSA ಕಾಯ್ದೆಗಳು ಸಂವಿಧಾನಿಕ ಹಕ್ಕುಗಳ ದಮನಕ್ಕೆ ಅಸ್ತ್ರವಾಗುತ್ತಿವೆ : ಪ್ರೊ. ಫಣಿರಾಜ್

Date:

ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವಾಗಿ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಯುಎಪಿಎ ಹಾಗೂ ಎನ್‌ಎಸ್‌ಎ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಉಡುಪಿಯಲ್ಲಿ ಧರಣಿ ನಡೆಯಿತು.

- Advertisement -

ಸಹಬಾಳ್ವೆ ಉಡುಪಿ ಜಿಲ್ಲೆ, ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ, ಸಾಲಿಡ್ಯಾರಿಟಿ ಯೂಥ್ ಮೂವ್ಮೆಂಟ್ ಹಾಗೂ ಎಸ್‌ಐಓ ನೇತೃತ್ವದಲ್ಲಿ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಧರಣಿ ಆಯೋಜಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೊ. ಫಣಿರಾಜ್, ಪ್ರಭುತ್ವ ಹಾಗೂ ಅಧಿಕಾರಸ್ಥ ಸಮುದಾಯಗಳ ಅನ್ಯಾಯ ಮತ್ತು ದಬ್ಬಾಳಿಕೆಗಳ ವಿರುದ್ಧ ದನಿ ಎತ್ತಿ ಹೋರಾಟಕ್ಕೆ ಇಳಿಯುವವರನ್ನು ದಮನಿಸಲು UAPA ಹಾಗೂ NSA ಕಾಯ್ದೆಗಳನ್ನು ರಾಜಕೀಯವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

WhatsApp Image 2026 09 15 at 7.44.58 PM

ಈ ಕಾಯ್ದೆಗಳ ಬಳಕೆ, ಬಂಧನ ಹಾಗೂ ವಿಚಾರಣೆಯ ವಿಳಂಬದ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು UAPA ಕಾಯ್ದೆಯಡಿ ಬಂಧಿಸಿ ಸೆಪ್ಟೆಂಬರ್ 13ಕ್ಕೆ ಆರು ವರ್ಷಗಳು ಕಳೆದಿವೆ. ಆದರೆ ಇಷ್ಟು ವರ್ಷಗಳಾದರೂ ಅವರ ವಿರುದ್ಧದ ವಿಚಾರಣೆ ಪ್ರಾರಂಭವಾಗಿಲ್ಲ. ಅವರ ಜಾಮೀನು ಅರ್ಜಿಗಳೂ ಮೂರು ಬಾರಿ ತಿರಸ್ಕೃತವಾಗಿವೆ ಎಂದು ಹೇಳಿದರು.

2020ರಲ್ಲಿ CAA-NRC ಕಾಯ್ದೆಗಳ ವಿರುದ್ಧ ನಡೆದ ಹೋರಾಟದಲ್ಲಿ ಉಮರ್ ಖಾಲಿದ್ ನೇತೃತ್ವ ವಹಿಸಿದ್ದರು. 2020ರ ಫೆಬ್ರವರಿ 23ರಿಂದ 26ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಮೂಲ ಆಯೋಜಕ ಹಾಗೂ ಸಂಘಟಕ ಎಂಬ ಆರೋಪದಡಿ ಅವರನ್ನು UAPA ಕಾಯ್ದೆಯಡಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಉಮರ್ ಖಾಲಿದ್ ವಿರುದ್ಧ ದೆಹಲಿ ಪೊಲೀಸರು ಮುಂದಿಟ್ಟಿರುವ ಆರೋಪಗಳ ಪೈಕಿ ವಾಟ್ಸಪ್ ಗ್ರೂಪ್ ರಚಿಸಿ ಪ್ರತಿಭಟನೆಗಳನ್ನು ಸಂಘಟಿಸಿರುವುದು, ವ್ಯಾಪಕವಾಗಿ ರಸ್ತೆ ತಡೆಗೆ ಕರೆ ನೀಡಿರುವುದು ಹಾಗೂ ಅಮರಾವತಿಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ‘ಇಂಕ್ವಿಲಾಬ್’ ಪದ ಬಳಸಿರುವುದು ಪ್ರಮುಖವಾಗಿವೆ ಎಂದು ಅವರು ಹೇಳಿದರು.

ಪೊಲೀಸರ ಲಾಠಿ ಪ್ರಹಾರಕ್ಕೆ ಪ್ರತಿಯಾಗಿ ತ್ರಿವರ್ಣ ಧ್ವಜವನ್ನು ಎತ್ತಬೇಕು, ಗುಂಡು ಹಾರಿಸಿದರೆ ಸಂವಿಧಾನವನ್ನು ಕೈಯಲ್ಲಿ ಹಿಡಿಯಬೇಕು, ಗಾಂಧಿ ಮಾರ್ಗದ ಅಸಹಕಾರ ಚಳವಳಿ ಮತ್ತು ಸತ್ಯಾಗ್ರಹದ ಮೂಲಕ CAA-NRC ಕಾಯ್ದೆಗಳನ್ನು ಹಿಮ್ಮೆಟ್ಟಿಸಬೇಕು ಹಾಗೂ ಅವುಗಳನ್ನು ಜಾರಿಗೊಳಿಸಿರುವ ಸರ್ಕಾರವನ್ನು ಕೆಳಗಿಳಿಸಬೇಕು ಎಂಬ ರೀತಿಯಲ್ಲಿ ಅವರು ಭಾಷಣ ಮಾಡಿದ್ದರು. ಇಂತಹ ಹೇಳಿಕೆಗಳನ್ನೇ ದೇಶದ್ರೋಹದ ಚಟುವಟಿಕೆಗಳೆಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರೊ. ಫಣಿರಾಜ್ ಆರೋಪಿಸಿದರು.

ಉಮರ್ ಖಾಲಿದ್ ಅವರೊಂದಿಗೆ ಸಾಮಾಜಿಕ ಕಾರ್ಯಕರ್ತ ಶಾರ್ಜಿಲ್ ಇಮಾಮ್ ಅವರನ್ನೂ ದೀರ್ಘಕಾಲದಿಂದ ಜಾಮೀನು ಸಿಗದೆ ಬಂಧನದಲ್ಲಿರಿಸಲಾಗಿದೆ. ಗುಲ್ಫಿಷಾ ಫಾತಿಮಾ, ಮೀರಾನ್ ಹೈದರ್, ಶಫಿ-ಉರ್-ರಹಮಾನ್ ಹಾಗೂ ಖಾಲಿದ್ ಸೈಫಿ ಅವರನ್ನೂ UAPA ಕಾಯ್ದೆಯಡಿ ಬಂಧಿಸಲಾಗಿತ್ತು. ಈ ನಾಲ್ವರಿಗೆ ಇತ್ತೀಚೆಗೆ ಜಾಮೀನು ದೊರೆತಿದ್ದರೂ, ಈ ಪ್ರಕರಣಗಳ ವಿಚಾರಣೆಯೂ ಹಲವು ವರ್ಷಗಳ ನಂತರ ಆರಂಭವಾಗಿಲ್ಲ ಎಂದು ಅವರು ಹೇಳಿದರು.

WhatsApp Image 2026 09 15 at 7.43.51 PM

ಭೀಮಾ ಕೋರೆಗಾಂವ್ ಪ್ರಕರಣದ ಉಲ್ಲೇಖ

2018ರ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಹಾಗೂ ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದಾರೆ ಎಂಬ ಆರೋಪದಡಿ ಪ್ರಾಧ್ಯಾಪಕರು, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 16 ಮಂದಿಯನ್ನು UAPA ಕಾಯ್ದೆಯಡಿ ಬಂಧಿಸಲಾಗಿತ್ತು ಎಂದು ಪ್ರೊ. ಫಣಿರಾಜ್ ಹೇಳಿದರು.

ಬಂಧಿತರಲ್ಲಿ ವಯೋವೃದ್ಧ ಸ್ಟ್ಯಾನ್ ಸ್ವಾಮಿ ಅವರಿಗೆ ವೈದ್ಯಕೀಯ ಸೇವೆ ನಿರಾಕರಿಸಲ್ಪಟ್ಟ ಪರಿಣಾಮ ಅವರು ಜೈಲಿನಲ್ಲೇ ಮೃತಪಟ್ಟರು ಎಂದು ಅವರು ಆರೋಪಿಸಿದರು. ಉಳಿದ 15 ಮಂದಿ ನಾಲ್ಕರಿಂದ ಎಂಟು ವರ್ಷಗಳವರೆಗೆ ವಿಚಾರಣೆ ಇಲ್ಲದೆ ಸೆರೆವಾಸ ಅನುಭವಿಸಿ ನಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರ ವಿರುದ್ಧದ ವಿಚಾರಣೆ ಇನ್ನೂ ಆರಂಭವಾಗಿಲ್ಲ ಎಂದು ತಿಳಿಸಿದರು.

WhatsApp Image 2026 09 15 at 7.44.23 PM

NSA ಕಾಯ್ದೆಯ ಬಳಕೆಯ ಬಗ್ಗೆಯೂ ಆಕ್ಷೇಪ

ಉತ್ತರ ಪ್ರದೇಶದ ಭೀಮ್ ಆರ್ಮಿ ನಾಯಕ ಚಂದ್ರಶೇಖರ ಆಜಾದ್ ಅವರನ್ನು 2017ರ ಜೂನ್‌ನಲ್ಲಿ ಸಹರಾನ್‌ಪುರದಲ್ಲಿ ನಡೆದ ಜಾತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ NSA ಕಾಯ್ದೆಯಡಿ ಸುಮಾರು ಒಂದು ವರ್ಷ ಬಂಧನದಲ್ಲಿರಿಸಲಾಗಿತ್ತು ಎಂದು ಅವರು ಉದಾಹರಿಸಿದರು.

2026ರ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕೈಗಾರಿಕಾ ಕಾರ್ಮಿಕರು ವೇತನ ಹೆಚ್ಚಳ ಹಾಗೂ ಉತ್ತಮ ಸೇವಾ ನಿಯಮಗಳಿಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿಯೂ ಬಂಧನದ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪ್ರೊ. ಫಣಿರಾಜ್ ಹೇಳಿದರು.

ಪ್ರತಿಭಟನೆಯ ಆಯೋಜನೆ ಹಾಗೂ ಸಕ್ರಿಯವಾಗಿ ಪಾಲ್ಗೊಂಡ ಆರೋಪದ ಮೇಲೆ 25 ವರ್ಷದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆಕೃತಿ ಚೌಧರಿಯನ್ನು ಏಪ್ರಿಲ್ 11ರಂದು ಬಂಧಿಸಲಾಗಿತ್ತು. ನಂತರ ನಡೆದ ಹಿಂಸಾತ್ಮಕ ಘಟನೆಗಳ ಆಯೋಜಕಿ ಎಂಬ ಆರೋಪದಡಿ ಅವರ ವಿರುದ್ಧ NSA ಅಡಿಯಲ್ಲಿ ಬಂಧನ ಮುಂದುವರಿಸಲಾಯಿತು ಎಂದು ಅವರು ಹೇಳಿದರು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಅಲಹಾಬಾದ್ ಹೈಕೋರ್ಟ್ ಈ ಪ್ರಕರಣವನ್ನು ಪ್ರಶ್ನಿಸಿ ಆಕೃತಿ ಚೌಧರಿಯನ್ನು NSA ಪ್ರಕರಣದಿಂದ ಮುಕ್ತಗೊಳಿಸುವ ತೀರ್ಪು ನೀಡಿದ್ದರೂ, ಅವರು ಇನ್ನೂ ಜೈಲಿನಿಂದ ಬಿಡುಗಡೆಯಾಗಿಲ್ಲ ಎಂದು ಪ್ರೊ. ಫಣಿರಾಜ್ ಆರೋಪಿಸಿದರು.

WhatsApp Image 2026 09 15 at 7.44.59 PM

ವಿಚಾರಣೆಗೂ ಮುನ್ನವೇ ದೀರ್ಘಕಾಲದ ಸೆರೆ ಆರೋಪ

UAPA ಹಾಗೂ NSA ಕಾಯ್ದೆಗಳ ಅಡಿಯಲ್ಲಿ ಬಂಧನದ ಸ್ವರೂಪದ ಬಗ್ಗೆಯೂ ಪ್ರೊ. ಫಣಿರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಕಾಯ್ದೆಗಳಡಿ ಬಂಧನಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಕ್ರಿಮಿನಲ್ ಪ್ರಕರಣಗಳಿಗಿಂತ ಕಠಿಣ ನಿಯಮಗಳು ಅನ್ವಯಿಸುತ್ತವೆ. UAPA ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯ ನಂತರವೂ ಜಾಮೀನು ಪಡೆಯುವುದು ಕಠಿಣವಾಗಿರುವುದರಿಂದ ವಿಚಾರಣೆ ವಿಳಂಬವಾದರೆ ಆರೋಪಿಗಳು ದೀರ್ಘಕಾಲ ಜೈಲಿನಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.

2019ರಲ್ಲಿ UAPA ಕಾಯ್ದೆಗೆ ಮಾಡಲಾದ ತಿದ್ದುಪಡಿಯ ಬಳಿಕ ನಿಷೇಧಿತ ಸಂಘಟನೆಗಳ ವಿರುದ್ಧದ ಕ್ರಮದ ವ್ಯಾಪ್ತಿಯನ್ನು ಮೀರಿ ವ್ಯಕ್ತಿಗಳ ಮೇಲೂ ಕಾಯ್ದೆಯನ್ನು ಅನ್ವಯಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕಾಯ್ದೆಯ ಬಳಕೆಯ ಸ್ವರೂಪ ಮತ್ತಷ್ಟು ವಿಸ್ತರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

WhatsApp Image 2026 09 15 at 7.44.59 PM 1

ಸಾವಿರಾರು ಪ್ರಕರಣ, ಕಡಿಮೆ ಪ್ರಮಾಣದ ವಿಚಾರಣೆ

2010ರಿಂದ 2022ರವರೆಗೆ UAPA ಕಾಯ್ದೆಯಡಿ 12,787 ಪ್ರಕರಣಗಳು ದಾಖಲಾಗಿದ್ದು, ಶೇ.1ಕ್ಕಿಂತ ಕಡಿಮೆ ಪ್ರಕರಣಗಳು ವಿಚಾರಣೆಗೆ ಬಂದಿವೆ ಎಂದು ಪ್ರೊ. ಫಣಿರಾಜ್ ಹೇಳಿದರು.

ವಿಚಾರಣೆ ಪೂರ್ಣಗೊಂಡ ಪ್ರಕರಣಗಳಲ್ಲಿ ಶೇ.78ರಷ್ಟು ಆರೋಪಿಗಳು ಖುಲಾಸೆಯಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ವರ್ಷಗಳ ಕಾಲ ಸೆರೆವಾಸ ಅನುಭವಿಸಿರುವುದು ಗಂಭೀರ ವಿಚಾರವಾಗಿದೆ ಎಂದು ಅವರು ಹೇಳಿದರು.

UAPA ಕಾಯ್ದೆಯಡಿ ಬಂಧಿತರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಆದಿವಾಸಿ ಹಾಗೂ ದಲಿತ ಸಮುದಾಯದವರೂ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

2017ರಿಂದ 2022ರವರೆಗೆ ಐದು ವರ್ಷಗಳಲ್ಲಿ 3,000ಕ್ಕೂ ಹೆಚ್ಚು ಮಂದಿ NSA ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ. ಇವುಗಳಲ್ಲಿ ಜಾತಿ ಹಿಂಸೆ, ಕೋಮು ಹಿಂಸೆ ಹಾಗೂ ಕಾರ್ಮಿಕ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣಗಳೂ ಸೇರಿದ್ದು, ಹಿಂಸೆಗೆ ತುತ್ತಾದ ಸಮುದಾಯ ಅಥವಾ ವರ್ಗದವರೇ ಬಂಧನಕ್ಕೆ ಗುರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರೊ. ಫಣಿರಾಜ್ ಹೇಳಿದರು.

‘ಸಂವಿಧಾನಿಕ ಹಕ್ಕುಗಳ ದಮನಕ್ಕೆ ಕಾಯ್ದೆ ಬಳಕೆ’

ಪ್ರಭುತ್ವ ಹಾಗೂ ಅಧಿಕಾರಸ್ಥ ಸಮುದಾಯಗಳ ಅನ್ಯಾಯ, ದಬ್ಬಾಳಿಕೆಗಳ ವಿರುದ್ಧ ಧ್ವನಿ ಎತ್ತುವವರು ಮತ್ತು ಹೋರಾಟ ನಡೆಸುವವರನ್ನು ದಮನಿಸಲು UAPA ಹಾಗೂ NSA ಕಾಯ್ದೆಗಳನ್ನು ರಾಜಕೀಯವಾಗಿ ಬಳಸಲಾಗುತ್ತಿದೆ ಎಂಬುದು ತಮ್ಮ ಆಕ್ಷೇಪ ಎಂದು ಪ್ರೊ. ಫಣಿರಾಜ್ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ನಾಗರಿಕರ ಸಂವಿಧಾನಿಕ ಹಕ್ಕುಗಳ ಭಾಗವಾಗಿದೆ. ಇಂತಹ ಹಕ್ಕುಗಳನ್ನು ದಮನಿಸಲು ಕಠಿಣ ಕಾಯ್ದೆಗಳನ್ನು ಬಳಸಿದರೆ ಅದು ಪ್ರಜಾಪ್ರಭುತ್ವದ ಮೂಲ ಆಶಯಗಳ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ UAPA ಮತ್ತು NSA ಕಾಯ್ದೆಗಳ ಬಳಕೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

WhatsApp Image 2026 09 15 at 7.44.57 PM

ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಅಮಾಯಕರನ್ನು ದೇಶದ್ರೋಹದಡಿ ಪ್ರಕರಣ ದಾಖಲಿಸಿ ಬಂಧಿಸುವ ಕೇಂದ್ರ ಬಿಜೆಪಿ ಸರಕಾರ, ಹಲವಾರು ಸರಕಾರಿ ಸಂಘಸಂಸ್ಥೆ ಗಳನ್ನು ಅದಾನಿ ಅಂಬಾನಿಯವರಿಗೆ ಮಾರಾಟ ಮಾಡಿರುವುದು ದೇಶದ್ರೋಹ ಅಲ್ಲವೇ? ಸುಳ್ಳು ಪ್ರಕರಣದಲ್ಲಿಯೂ ಬಂಧಿತರಾಗಿ ರುವವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸುತ್ತಿದ್ದು, ಇದೀಗ ನಮಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಸಂಶಯ ಮೂಡುವಂತಾಗಿದೆ ಎಂದು ದೂರಿದರು.

ಧರಣಿಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಶಿವಾನಂದ ಮೂಡಬೆಟ್ಟು, ಸುಂದರಿ ಪುತ್ತೂರು, ಸಾಲಿಡ್ಯಾರಿಟಿ ಯೂಥ್ ಮೂವ್ಮೆಂಟ್‌ನ ಜಿಲ್ಲಾಧ್ಯಕ್ಷ ಅಫ್ವಾನ್, ನಿಹಾಲ್, ಹಂಝ, ಭಾರತೀಯ ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ, ಅಲ್ಪಸಂಖ್ಯಾತರ ವೇದಿಕೆಯ ಚಾರ್ಲ್ಸ್ ಆ್ಯಂಬ್ಲರ್, ಪ್ರಮುಖರಾದ ಅಝೀಝ್ ಉದ್ಯಾವರ, ಅನ್ವರ್ ಅಲಿ ಕಾಪು, ಇದ್ರೀಸ್ ಹೂಡೆ, ಉದ್ಯಾವರ ನಾಗೇಶ್ ಕುಮಾರ್, ಅಮೃತ್ ಶೆಣೈ, ಹುಮೈರಾ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ರೈತರ ಹೊಲಗಳಿಗೆ ಸರ್ವಿಸ್ ರಸ್ತೆ ನಿರ್ಮಿಸದಿದ್ದರೆ ಹೆದ್ದಾರಿ ಕಾಮಗಾರಿ ಬಂದ್: ಅಮರೇಗೌಡ ಪಾಟೀಲ ಬಯ್ಯಾಪುರ

ರಾಷ್ಟ್ರೀಯ ಹೆದ್ದಾರಿ(748 ಎ) ನಿರ್ಮಾಣದಿಂದ ರೈತರಿಗೆ ತಮ್ಮ ಹೊಲಗಳಿಗೆ ತೆರಳಲು ಸರ್ವಿಸ್...

ಬಳ್ಳಾರಿ | ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬಾಣಂತಿಯರು, ಮಕ್ಕಳು

ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿ ಮತ್ತು...

ಉಡುಪಿ ಜಿಲ್ಲೆಯ ಪಂಚಾಯತ್ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಪುರುಷರಿಗೆ ಅವಕಾಶವಿಲ್ಲವೇ? ಮರುಪರಿಶೀಲನೆಗೆ ಆಗ್ರಹ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆಗಳು...