ಶೇಖ್‌ ಹಸೀನಾ ಪಕ್ಷದ 7 ನಾಯಕರಿಗೆ ಮರಣದಂಡನೆ

Date:

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷದ ಏಳು ಹಿರಿಯ ನಾಯಕರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. 2024ರಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ ಪ್ರಕರಣದಲ್ಲಿ ಕೊಲೆ ಹಾಗೂ ಹತ್ಯೆಗೆ ಪ್ರಚೋದನೆ ಸೇರಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಇವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ.

- Advertisement -

ಮಂಗಳವಾರ (ಸೆ. 15) ನಡೆದ ವಿಚಾರಣೆಯಲ್ಲಿ ಇಬ್ಬರು ಮಾಜಿ ಸಚಿವರು ಸೇರಿದಂತೆ ಏಳು ನಾಯಕರಿಗೆ ಶಿಕ್ಷೆ ವಿಧಿಸಲಾಯಿತು. ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಒಬೈದುಲ್‌ ಕ್ವಾದರ್‌ ಹಾಗೂ ಮಾಜಿ ಸಚಿವ ಮೊಹಮ್ಮದ್‌ ಅಲಿ ಅರಾಫತ್‌ ಶಿಕ್ಷೆಗೆ ಗುರಿಯಾದವರಲ್ಲಿ ಸೇರಿದ್ದಾರೆ. ನ್ಯಾಯಮೂರ್ತಿ ನಜ್ರುಲ್‌ ಇಸ್ಲಾಂ ಚೌಧರಿ ನೇತೃತ್ವದ ಮೂವರು ಸದಸ್ಯರ ನ್ಯಾಯಮಂಡಳಿ ತೀರ್ಪು ಪ್ರಕಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ...

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ ‘ಸ್ಥಾವರ’ ಮಾದರಿ. ಹಳ್ಳಿಯ ಹೃದಯಭಾಗದಲ್ಲಿ ಕೇವಲ ಪೂಜೆಯ ತಾಣವಲ್ಲ, ಇಡೀ ನೆಲದ ಮೇಲೆ ಅಧಿಪತ್ಯ ಸಾಧಿಸುವ ಕ್ಷೇತ್ರಾಧಿಪತಿಯ ‘ದೇವಸ್ಥಾನ’ ವಿರಾಜಮಾನವಾಗಿರುತ್ತದೆ....

ಅತಿದೊಡ್ಡ ಕ್ರಿಪ್ಟೋ ದರೋಡೆ; ₹60 ಸಾವಿರ ಕೋಟಿ ಏನಿದು,...

ದೋಚಿದ ಇಷ್ಟೊಂದು ಅಗಾಧ ಪ್ರಮಾಣದ ಹಣವನ್ನು ಮರೆಮಾಚಲು ಹ್ಯಾಕರ್‌ಗಳು ಅತ್ಯಂತ ಸಂಕೀರ್ಣವಾದ ಜಾಲವನ್ನು ಹಾಗೂ ತಂತ್ರಗಾರಿಕೆಯನ್ನು ಬಳಸಿದ್ದಾರೆ. ಬಿಡುಗಡೆಯಾಗಿರುವ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಬೈನಾನ್ಸ್‌ನಿಂದ ಕದ್ದ ಈ ಹಣವನ್ನು ಹ್ಯಾಕರ್‌ಗಳು ಈ ಹಿಂದೆ...

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

2024ರ ಜುಲೈ ಮತ್ತು ಆಗಸ್ಟ್‌ನಲ್ಲಿ ಹಸೀನಾ ನೇತೃತ್ವದ ಸರ್ಕಾರವು ವಿದ್ಯಾರ್ಥಿ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಿದ ಪ್ರಯತ್ನದಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ವಂದೇ ಮಾತರಂ ಚರಣಗಳ ಮೊಟಕು: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ

15 ವರ್ಷಗಳ ಹಸೀನಾ ಅವರ ಆಡಳಿತವು 2024ರ ಆಗಸ್ಟ್‌ನಲ್ಲಿ ಅಂತ್ಯಗೊಂಡಿತ್ತು. ಪ್ರತಿಭಟನೆ ತೀವ್ರಗೊಂಡ ಬಳಿಕ ಅವರು ಹೆಲಿಕಾಪ್ಟರ್‌ ಮೂಲಕ ನೆರೆಯ ಭಾರತಕ್ಕೆ ಪಲಾಯನ ಮಾಡಿದ್ದರು. ಸದ್ಯ ಅವರು ಭಾರತದಲ್ಲೇ ಅಜ್ಞಾತವಾಸದಲ್ಲಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅತಿದೊಡ್ಡ ಕ್ರಿಪ್ಟೋ ದರೋಡೆ; ₹60 ಸಾವಿರ ಕೋಟಿ ಏನಿದು, ಯಾರು ಮಾಡಿದ್ದು?

ದೋಚಿದ ಇಷ್ಟೊಂದು ಅಗಾಧ ಪ್ರಮಾಣದ ಹಣವನ್ನು ಮರೆಮಾಚಲು ಹ್ಯಾಕರ್‌ಗಳು ಅತ್ಯಂತ ಸಂಕೀರ್ಣವಾದ...

ತೀರ್ಥಹಳ್ಳಿ | ತುಂಗಾ ನದಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆ

ತೀರ್ಥಹಳ್ಳಿ, ತಾಲೂಕಿನ ಹೊರಬೈಲು ಸಮೀಪ ತುಂಗಾ ನದಿಯಲ್ಲಿ ನವಜಾತ ಹೆಣ್ಣು ಮಗುವಿನ...

ಬೀದರ್‌ | SBI ಎಟಿಎಂ ಕಳವು ಪ್ರಕರಣ: ನಾಲ್ವರು ಅಂತರರಾಜ್ಯ ಆರೋಪಿಗಳ ಬಂಧನ

ಭಾಲ್ಕಿ ನಗರದ ಹಿರೇಮಠ ಸಂಸ್ಥಾನ ಕ್ಯಾಂಪ್ಲೆಕ್ಸ್‌ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI)...

ಬೆಂಗಳೂರು | ಶಂಕಿತ ವಸ್ತು ಪತ್ತೆ; ತನಿಖೆ ಬೆನ್ನಲ್ಲೇ ಅದು ಖಾಲಿ ಟ್ಯೂಬ್ ಎಂದ ಅಧಿಕಾರಿಗಳು!

ಬೆಂಗಳೂರು ನಗರದ ಸೋನೆಹಳ್ಳಿಕೆರೆ ವೃತ್ತದ ಸಮೀಪದ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತಿರುವ ಖಾಲಿ...