ಜಿಲ್ಲಾ ಜಾಗೃತಿ ಸಮಿತಿಗೆ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಆಯ್ಕೆ ಮಾಡಿದ್ದು ಕೂಡಲೇ ಜಾಗೃತಿ ಸಮಿತಿಯನ್ನು (ಅಟ್ರಾಸಿಟಿ ಸಮಿತಿ) ವಜಾಗೊಳಿಸಿ ನಿಯಮಾನಸಾರ ನೇಮಕ ಮಾಡುವಂತೆ ಮಾಜಿ ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ಮನವಿ ಮಾಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ದೇಶದಲ್ಲೇ ಕೋಲಾರ ಜಿಲ್ಲೆಯಲ್ಲಿ ಹೆಚ್ಚು ದಲಿತರು ಇರುವ ಎರಡನೇ ಜಿಲ್ಲೆಯಾಗಿದೆ ಇಲ್ಲಿ ದಲಿತರಿಗೆ ಗೊತ್ತಿಲ್ಲದೇ ಜಾಗೃತಿ ಸಮಿತಿ ಆಯ್ಕೆ ಮಾಡಿದ್ದಾರೆ ಯಾವುದೇ ಅರ್ಜಿ ಪಡೆಯದೆ ಪ್ರಚಾರ ಮಾಡಿಲ್ಲ ಅದು ಹೇಗೆ ನೇಮಕ ಮಾಡಿದ್ದಾರೆ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಯಾರೋ ರಾಜಕೀಯ ಪಕ್ಷಗಳ ಏಜೆಂಟರಿಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಸಮಿತಿ ರದ್ದು ಮಾಡಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ದಮನಿತರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಜಿಲ್ಲಾ ಜಾಗೃತಿ ಸಮಿತಿ (ಅಟ್ರಾಸಿಟಿ) ಯನ್ನು ಜಿಲ್ಲಾ ಸಮಾಜ ಕಲ್ಯಾಣ ನೇತೃತ್ವದಲ್ಲಿ ಆಯ್ಕೆ ಮಾಡಲು ಹಲವಾರು ನಿಬಂಧನೆಗಳು ಷರತ್ತುಗಳು ಇದ್ದು ಮೊದಲು ಅರ್ಜಿಗಳನ್ನು ಹಾಕಲು ಎಲ್ಲಾ ದಲಿತ ಸಂಘ ಸಂಸ್ಥೆಗಳು ಮತ್ತು ಸಮುದಾಯದ ಸೇವಕರಿಗೆ ಅವಕಾಶ ನೀಡಬೇಕು. ಮತ್ತು ಅರ್ಜಿ ಹಾಕಲು ಪ್ರಚಾರ ಮಾಡಬೇಕು ನಂತರ ಸಮುದಾಯದ ಪರವಾಗಿ ಯಾರು ಸೇವೆಗಳನ್ನು ಸಲ್ಲಿಸಿದ್ದಾರೆ ಅವರಿಗೆ ಮೊದಲ ಆದ್ಯತೆ ನೀಡಬೇಕು, ಆದರೆ ಇದ್ಯಾವುದನ್ನು ಜಾರಿ ಮಾಡದೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ಅವರಿಗೆ ಬೇಕಾದವರಿಗೆ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಂಯುಕ್ತ ರಂಗದ ಜಿಲ್ಲಾ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ಹಿಂದೆ ಈ ರೀತಿ ಅಟ್ರಾಸಿಟಿ ಸಮಿತಿಗೆ ಅರ್ಜಿಗಳನ್ನು ಕರೆದಾಗ ನೂರಾರು ಅರ್ಜಿಗಳನ್ನು ಸಲ್ಲಿಸಿದ್ದರು ಅದರಲ್ಲಿ ಆಯ್ಕೆ ಮಾಡಿದ ಉದಾಹರಣೆ ಇದೆ ಆದರೆ ಈ ಬಾರಿ ಏಕಾಏಕಿ ಆಯಾ ಶಾಸಕರ ಶಿಫಾರಸ್ಸು ಪತ್ರಗಳನ್ನು ಪಡೆದುಕೊಂಡು ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ರಾಜಕೀಯ ಏಜೆಂಟರಂತೆ ಕಾನೂನು ಬಾಹಿರವಾಗಿ ಜಾಗೃತಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಈ ಸಮಿತಿಯನ್ನು ಈ ಕೂಡಲೇ ವಜಾಗೊಳಿಸಿ ನಿಯಮಗಳ ಪ್ರಕಾರ ಹೊಸದಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರು ಸಮಿತಿ ರಚನೆಯ ಮಾನದಂಡಗಳನ್ನು ಪರಿಶೀಲನೆ ನಡೆಸಿ ಅದರ ಪ್ರಕಾರವೇ ಕಾನೂನು ನಿಯಮಗಳಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ |ರಾಜಕೀಯ ಪಕ್ಷಗಳ ಏಜೆಂಟರಿಗೆ ಅಟ್ರಾಸಿಟಿ ಸಮಿತಿಯಲ್ಲಿ ಸ್ಥಾನ
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ದಲಿತ್ ನಾರಾಯಣಸ್ವಾಮಿ, ಗಾಂಧಿನಗರ ರಾಜಕುಮಾರ್, ಮಂಜುಳಾ, ಮತ್ತಿಕುಂಟೆ ಕೃಷ್ಣಪ್ಪ, ಮೋಚಿಪಾಳ್ಯ ನಾಗೇಶ್, ಹರಳಕುಂಟೆ ರಾಜ್, ವೇಣು, ಮಂಜುನಾಥ್, ರವಿ, ದೇವರಾಜ್ ಮುಂತಾದವರು ಇದ್ದರು.





