ಬೆಂಗಳೂರು | ದುಂಬಿ-ಕೀಟಗಳ ಸಂರಕ್ಷಣೆಗಾಗಿ ‘ಕೀಟ ಕೆಫೆ’

Date:

ರಾಜ್ಯ ರಾಜಧಾನಿ ಬೆಂಗಳೂರು ನಗರೀಕರಣದ ಹಿಂದೆ ಬಿದ್ದು, ನಗರದಲ್ಲಿರುವ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಕಡಿದ ಮರಗಳ ಜಾಗದಲ್ಲಿ ಹೊಸ ಗಿಡ ನೆಡುವಲ್ಲಿಯೂ ಹಿಂದೆ ಬಿದ್ದಿದೆ. ಮಾನವ ತಾನು ಜೀವಿಸಲು ಎಲ್ಲ ರೀತಿಯ ಅನುಕೂಲ ಮಾಡಿಕೊಳ್ಳುವ ಧಾವಂತದಲ್ಲಿ ಕೀಟ, ಪ್ರಾಣಿ, ಪಕ್ಷಿ ಹಾಗೂ ಜಲಚರ ಜೀವಿ ಸೇರಿದಂತೆ ಕೋಟ್ಯಂತರ ಜೀವಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾನೆ. ಮಹಾನಗರಿ ತನ್ನ ಹಸಿರು ಸೌಂದರ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಈ ವೇಳೆ, ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ದುಂಬಿ-ಕೀಟಗಳ ಸಂರಕ್ಷಣೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ವಿಶಿಷ್ಟ ವಿಷಯದೊಂದಿಗೆ ‘ಕೀಟ ಕೆಫೆ’ ಆರಂಭವಾಗಿದೆ.

- Advertisement -

ಕೀಟಗಳ ಸಂರಕ್ಷಣೆಗಾಗಿ ತೋಟಗಾರಿಕೆ ಇಲಾಖೆ ಹೊಸ ವಿಷಯದೊಂದಿಗೆ ಮುಂದೆ ಬಂದಿದ್ದು, ಇದಕ್ಕೆ ‌ವಿಭಿನ್ನ ಇಂಡಿಯಾ ಫೌಂಡೇಷನ್‌ನ ‘ಸಾಮಾಜಿಕ ಹೊಣೆಗಾರಿಕೆ ನಿಧಿ’(ಸಿಎಸ್‌ಆರ್‌) ಸಾಥ್ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ತೋಟಗಾರಿಕೆ ಇಲಾಖೆ ಹೊಸ ಪರಿಕಲ್ಪನೆಯೊಂದಿಗೆ ಸಸ್ಯಕಾಶಿಯ ಬ್ಯಾಂಡ್‌ ಸ್ಟ್ಯಾಂಡ್‌ ಬಳಿ ಕೀಟಗಳಿಗೆ ಮರದ ಮನೆ ತಯಾರು ಮಾಡಲಾಗಿದೆ. ಇದಕ್ಕೆ ‘ಇನ್‌ಸೆಕ್ಟ್‌ ಕೆಫೆ’ ಎಂದು ಹೆಸರಿಡಲಾಗಿದೆ. ಈ  ಕೆಫೆಯನ್ನು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್‌ ಅವರು ಶುಕ್ರವಾರ ಉದ್ಘಾಟಿಸಿದರು.

ನಗರೀಕರಣದಿಂದ ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೀಟ ಕೆಫೆ ತಲೆ ಎತ್ತಿದೆ.

WhatsApp Image 2023 10 14 at 10.32.37 AM1

ಏನಿದು ಕೀಟ ಕೆಫೆ?

ನೈಸರ್ಗಿಕ ಆಹಾರ ಸರಪಳಿಯ ಪ್ರಥಮ ಹಂತದಲ್ಲಿ ಕ್ರಿಮಿ, ಕೀಟ, ದುಂಬಿಗಳು ಪ್ರಮುಖ ಪಾತ್ರ ವಹಿಸುತ್ತವೆ. ನಗರೀಕರಣದ ದೆಸೆಯಲ್ಲಿ ಪ್ರಕೃತಿ ದತ್ತವಾಗಿದ್ದಂತಹ ಹಸಿರು ತಾಣಗಳು, ಹುಲ್ಲುಗಾವಲುಗಳೂ ಮರೆಯಾಗಿವೆ. ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ.

ಈ ಹಿನ್ನೆಲೆಯಲ್ಲಿ ಸರ್ವ ರೀತಿಯಲ್ಲಿಯೂ ಕೀಟಗಳಿಗೆ ಪೂರಕವಾಗಿರಬಲ್ಲ ಹೊಸ ಪರಿಕಲ್ಪನೆಯೇ ಕೀಟ ಕೆಫೆ, ಹುಲ್ಲು, ಕೀಟಗಳ ನಡುವೆ, ಎಲೆಗಳ ಮರೆಯಲ್ಲಿ, ಮರಗಳ ರಂದ್ರ/ಪೊಟರೆಯಲ್ಲಿ ದುಂಬಿ, ಕೀಟ ಇತ್ಯಾದಿಗಳಿಗಾಗಿ ಕೀಟ ಕೆಫೆ ಮೂಲ ಆಶ್ರಯ ತಾಣವಾಗಲಿದೆ.

ಮರದ ಫ್ರೇಮ್‌ಗಳಿಂದ ಸಣ್ಣ ಮನೆಯಾಕಾರದಲ್ಲಿ ಕೀಟ ಕೆಫೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ ಮತ್ತು ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ನಾನಾ ರೀತಿಯ ಸಸ್ಯಗಳ ಕಟ್ಟಿಗೆಗಳನ್ನು ಒಂದಕ್ಕೊಂದು ಅಂಡಿಕೊಂಡಿರುವಂತೆ ಜೋಡಿಸಲಾಗಿದೆ. ಈ ನೂತನ ರಚನೆಯು ಎಲ್ಲ ಬಗೆಯ ಕೀಟ, ದುಂಬಿಗಳು ನೆಲೆಸಲು ಪೂರಕ ತಾಣವಾಗಿದೆ. ಕೀಟಗಳು ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಲಿದೆ.

ಕೀಟ-ದುಂಬಿಗಳಿಗೆ ಸರ್ವ ರೀತಿಯಲ್ಲಿಯೂ ಸಹಕಾರಿಯಾಗುವಂತೆ ಒಣ ಮರವನ್ನು ಕೊರೆಯುವ ದುಂಬಿ ಪ್ರಭೇದಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಪೌರಕಾರ್ಮಿಕರ ಅನುದಾನ ರದ್ದುಗೊಳಿಸಿದ ಸರ್ಕಾರ: ಖಂಡನೆ

ಲಾಲ್‌ಬಾಗ್‌ನಲ್ಲಿ ಪ್ರಸ್ತುತ ದೇಶ-ವಿದೇಶದ 3,000ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿವೆ. ಜತೆಗೆ ಅಸಂಖ್ಯಾತ ಜೀವರಾಶಿಯ ಕೇಂದ್ರವಾಗಿರುವ ಸಸ್ಯಕಾಶಿಯಲ್ಲಿ ಕಾರ್ಪೆಂಟರ್‌ ಬೀ, ಬಿಂಬಲ್‌ ಬೀ ಇತ್ಯಾದಿ ಪ್ರಭೇದದ ಕೀಟಗಳಿವೆ. ಜತೆಗೆ ಗೂಡು ಕಟ್ಟಿ ಜೇನು ಸಂಗ್ರಹಿಸುವ ದುಂಬಿಗಳಿವೆ. ಇವೆಲ್ಲ ಕಡಿಮೆ ಸಂಖ್ಯೆಯಲ್ಲಿವೆ. ಆದರೆ, ಗೂಡು ಕಟ್ಟುವುದರ ಬದಲು ಒಂಟಿಯಾಗಿ ಒಣ ಮರವನ್ನು ಕೊರೆದು ತೂತು ಮಾಡಿ ಅಲ್ಲೇ ಬದುಕುವ ಒಂಟಿ-ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಇಂಥವುಗಳಿಗೆ ಇನ್‌ಸೆಕ್ಟ್‌ ಕೆಫೆ ಉತ್ತಮ ಆಶ್ರಯ ತಾಣವಾಗಿದೆ.

ಲಾಲ್‌ಬಾಗ್‌ ಒಳಗೊಂಡಂತೆ ಕಬ್ಬನ್‌ ಉದ್ಯಾನವನ, ನಂದಿ ಗಿರಿಧಾಮ, ಕೃಷ್ಣರಾಜೇಂದ್ರ ಗಿರಿಧಾಮ, ರಾಜ್ಯವ್ಯಾಪ್ತಿಯ ಎಲ್ಲ ಹೊಸ ಸಸ್ಯಶಾಸ್ತ್ರೀಯ ತೋಟಗಳಲ್ಲಿಯೂ ಸಹ ಈ ಹೊಸ ಪರಿಕಲ್ಪನೆಯಡಿ 50 ಕ್ಕೂ ಹೆಚ್ಚು ಇನ್‌ ಸೆಕ್ಟ್ ಕೆಫೆಗಳನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಚಿಂತಿಸಿದೆ.

WhatsApp Image 2023 10 14 at 10.32.38 AM

ರಾಜ್ಯ ವ್ಯಾಪಿ ಸರ್ವರೂ ಸಹಸ್ರಾರು ಕೀಟ ಕೆಫೆಗಳನ್ನು ಸ್ಥಾಪಿಸುವ ಮುಖೇನ ಕೀಟ ಸಂರಕ್ಷಣೆಗೆ ಮುಂದಾಗಬೇಕು.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ತೊಟಗಾರಿಕೆ ಜಂಟಿ ಇಲಾಖೆ ನಿರ್ದೇಶಕ ಜಗದೀಶ್, “ಕೀಟಗಳಿಗೆ ಜೀವಿಸಲು ಹುಲ್ಲುಗಾವಲು, ಮರಗಳು, ಪೊಟರೆಗಳು ಬೇಕು. ಆದರೆ ನಗರೀಕರಣದಿಂದ ನಾವು ಇವುಗಳನ್ನೆಲ್ಲ ಕಳೆದುಕ್ಕೊಳ್ಳುತ್ತಿದ್ದೇವೆ. ಕೀಟಗಳು ವೃದ್ಧಿ ಹೊಂದಲು ಅವುಗಳಿಗೆ ಒಂದು ತಾಣಬೇಕು. ಇನ್‌ಸೆಕ್ಟ್‌ ಕೆಫೆ ಸಂಪೂರ್ಣ ಮರಗಳಿಂದ ಮಾಡಲಾಗಿದೆ. ನಾನಾ ಬಗೆಯ ಕಟ್ಟಿಗೆಗಳನ್ನು ಇಡಲಾಗುತ್ತಿದೆ. ಕೆಲವು ಮೃದುವಾದ ಕಟ್ಟಿಗೆಗಳಲ್ಲಿ ಕೀಟಗಳು ತಮಗೆ ಬೇಕಾದಂತೆ ಮನೆಯನ್ನು ನಿರ್ಮಿಸಿಕ್ಕೊಳ್ಳುತ್ತೇವೆ” ಎಂದರು.

“ಪರಿಸರದಲ್ಲಿ ಚಿಕ್ಕ ಕೀಟಗಳನ್ನು ತಿಂದು ಪಕ್ಷಿಗಳು ಬದುಕುತ್ತವೆ. ಇದರಿಂದ ಪರಿಸರ ವೃದ್ಧಿಹೊಂದಿತ್ತವೆ. ಲಾಲ್‌ಬಾಗ್‌ನಲ್ಲಿ ಒಟ್ಟು 10 ಕೀಟ ಕೆಫೆ ನಿರ್ಮಿಸಲಾಗುವುದು. ಸದ್ಯ ಸಾಂಕೇತಿಕವಾಗಿ ಒಂದು ಕೆಫೆಯನ್ನು ಮಾಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಉಳಿದ ಕೆಫೆಗಳನ್ನು ನಿರ್ಮಾಣ ಮಾಡಲಾಗುವುದು. ಕಬ್ಬನ್‌ಪಾರ್ಕ್‌ನಲ್ಲೂ 10 ಕೀಟ ಕೆಫೆ ನಿರ್ಮಾಣ ಮಾಡಲಾಗುವುದು. ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಾರ್ಕ್‌ಗಳಲ್ಲಿಯೂ ಈ ಯೋಜನೆ ಜಾರಿಗೆ ತರಲಾಗುವುದು. ಒಂದು ಚಿಕ್ಕ ಸೈಜ್‌ನ ಕೆಫೆ ನಿರ್ಮಾಣ ಮಾಡಲು ₹20 ಸಾವಿರ ಖರ್ಚಾಗಿದೆ” ಎಂದು ವಿವರಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...