ಬೆಂಗಳೂರು | ಗುಂಡು ಹಾರಿಸಿ ಕೆಜಿ ಚಿನ್ನ ಕಳ್ಳತನ; ಹೈದರಾಬಾದ್‌ನತ್ತ ಪರಾರಿಯಾಗುತ್ತಿದ್ದ ಓರ್ವನ ಬಂಧನ

Date:

ಸೆ.12 ರಂದು ಹಾಡಹಗಲೇ ಜ್ಯೂವೆಲ್ಲರಿ ಶಾಪ್‌ ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಹೈದರಾಬಾದ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್​ಲೈನ್ ರಸ್ತೆ ಬಳಿಯಿರುವ ವಿನಾಯಕ ಜ್ಯೂವೆಲ್ಲರಿ ಶಾಪ್‌ಗೆ ಹುಸೇನ್, ಸಿಕಂದರ್, ಶಿವ ಹಾಗೂ ವಿಕಾಸ್ ಎಂಬ ನಾಲ್ವರು ದರೋಡೆಕೋರರು ನುಗ್ಗಿ ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣವನ್ನು ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ಸದ್ಯ ಪೊಲೀಸರು ಹೈದರಾಬಾದ್​ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಆರೋಪಿ ಹುಸೇನ್​ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಬಳಿಯಿಂದ ಪೊಲೀಸರು ಸ್ವಲ್ಪ ಪ್ರಮಾಣದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳಾದ ಸಿಕಂದರ್, ಶಿವ ಹಾಗೂ ವಿಕಾಸ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ‌.

ಈ ನಾಲ್ವರು ಆರೋಪಿಗಳಿಗೆ ಜೈಲಿನಲ್ಲಿ ಪರಿಚಯವಾಗಿತ್ತು. ಸಣ್ಣಪುಟ್ಟ ಕಳ್ಳತನ ಹಾಗೂ ಕೃತ್ಯಗಳಲ್ಲಿ ತೊಡಗಿದ್ದ ಈ ಆರೋಪಿಗಳು ಒಟ್ಟಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದರು. ಪ್ಲ್ಯಾನ್ ಮಾಡಿದಂತೆಯೇ ಅ.12ರಂದು ಎರಡು ದ್ವಿಚಕ್ರ ವಾಹನಗಳಲ್ಲಿ ವಿನಾಯಕ ಜ್ಯೂವೆಲ್ಲರಿ ಶಾಪ್‌ಗೆ ಬಂದಿದ್ದರು. ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚಿನ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ಗುಂಡು ಹಾರಿಸಿ ಜ್ಯೂವೆಲ್ಲರಿ ಶಾಪ್ ಕಳ್ಳತನ

ಆರೋಪಿಗಳ ಪತ್ತೆಗೆ ಪೊಲೀಸ್‌ ಇಲಾಖೆ ನಾಲ್ವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಸೇನ್​ ಎಂಬಾತ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳ ಹುಡುಕಾಟಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ರೈತರ ನೀರಿನ ಹೋರಾಟಕ್ಕೆ ಮುಕ್ತಿ ಇಲ್ಲ: ವೀರಭದ್ರಸ್ವಾಮಿ

ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆಯುತ್ತಾ ಬಂದರೂ ಬೆಳೆಗಳನ್ನು ಉಳಿಸಿಕೊಳ್ಳಲು...

ಧಾರವಾಡ |ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸಬೇಕು: ಜಕ್ಕಪ್ಪನವರ

ಪ್ರಜಾಪ್ರಭುತ್ವದ ಆಶಯಗಳು ಭಾರತೀಯರ ಜೀವನದ ಅವಿಭಾಜ್ಯ ಭಾಗವಾಗಿದ್ದು, ಸಮಾನತೆ, ಭ್ರಾತೃತ್ವ ಮತ್ತು...

ಉಡುಪಿ | ಪಡುಬಿದ್ರಿಯಲ್ಲಿ ನ.18ರಂದು 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ

73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಾರ್ವಜನಿಕ, ಖಾಸಗಿ ಹಾಗೂ...