ಬಂಗಾರಪೇಟೆ | ಸಂಸದ ಮುನಿಸ್ವಾಮಿ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ ಇಲ್ಲ: ಶಾಸಕ ನಾರಾಯಣಸ್ವಾಮಿ

Date:

  • ʼಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ನನ್ನ ಪಕ್ಕಾ ಶಿಷ್ಯʼ
  • ʼನಾಲ್ಕು ವರ್ಷಗಳಲ್ಲಿ ಮುನಿಸ್ವಾಮಿ ಅಭಿವೃದ್ಧಿ ಶೂನ್ಯವೇ ಹೊರತು ಬೇರೇನಿಲ್ಲʼ

ಡಿಕೆ ರವಿಗೂ ನನಗೂ ಏನ್ರೀ ಸಂಬಂಧ. ಸಂಸದ ಮುನಿಸ್ವಾಮಿ ಅವರ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ ಇಲ್ಲ ಎಂದು ಸಂಸದ ಮುನಿಸ್ವಾಮಿ ವಿರುದ್ಧ ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಡಿ.ಕೆ ರವಿಯನ್ನು ಕೊಲೆ ಮಾಡಿದ್ದು ಶಾಸಕ ಎಸ್.ಎನ್ ನಾರಾಯಣಸ್ವಾಮಿ’ ಎಂದು ಸಂಸದ ಮುನಿಸ್ವಾಮಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಾಯರಾಯಣಸ್ವಾಮಿ, “ಬಿಜೆಪಿ ಸಂಸದ ಮುನಿಸ್ವಾಮಿ ಅವರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್‌ ಇಲ್ಲ” ಎಂದು ಕಿಡಿಕಾರಿದ್ದಾರೆ.

“ಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ನನ್ನ ಪಕ್ಕಾ ಶಿಷ್ಯ. ನಾನು ಪ್ರೀತಿಯಿಂದ ಇಲ್ಲಿಗೆ ಹಾಕಿಸ್ಕೊಂಡು ಬಂದೋನು. ಅವನನ್ನು ಯಾರು ಹತ್ಯೆ ಮಾಡಿದ್ರು ಅಂತಾ ನಿನಗೆ ಗೊತ್ತು. ಅವನು ಜೈಲಿಗೆ ಹೋಗಿದ್ದೂ ನಿನಗೆ ಗೊತ್ತುʼʼ  ಎಂದು ಮುನಿಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

“ಮುನಿಸ್ವಾಮಿ ನೀನು ನಿಮ್ಮಪ್ಪನಿಗೆ ಹುಟ್ಟಿದ್ದರೆ ನಾನೇ ಕೊಲೆ ಮಾಡಿದೀನಿ ಅಂತ ಸಾಬೀತು ಮಾಡು. ಆಗ ಸಾರ್ವಜನಿಕವಾಗಿ ಬಜಾರಿನಲ್ಲಿ ನೇಣು ಬಿಗಿದುಕೊಳ್ಳುತ್ತೇನೆ. ನೀನು ಸಂಸದನಾಗಿದ್ದೀಯ, ಇಂಥ ಮಾತೆಲ್ಲ ಆಡಬಾರದು. ಏನು ಮಾತಾಡಬೇಕು ಅಂತ ಅರಿತುಕೊಂಡು ಮಾತಾಡು. ನೀನು ಗಾಳಿಯಲ್ಲಿ ತೂರಿಕೊಂಡು ಬಂದವನು. ನೀನೊಬ್ಬ ರೌಡಿಶೀಟರ್‌, ಬ್ಲಾಕ್ ಮೇಲರ್‌, ನಾಲ್ಕು ವರ್ಷಗಳಲ್ಲಿ ನಿನ್ನ ಅಭಿವೃದ್ಧಿ ಶೂನ್ಯವೇ ಹೊರತು ಬೇರೇನಿಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಾಲೂರು | ಬಿಜೆಪಿ ಅಭ್ಯರ್ಥಿ ಪರ ಮುನಿಸ್ವಾಮಿ ಮತಯಾಚನೆ; ‌ಸ್ಥಳೀಯರಿಂದ ತರಾಟೆ

ಎಸ್.ಎನ್.ಲೇಔಟ್‌ ಬಗೆಗಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್.ಎನ್.‌ ನಾರಾಯಣಸ್ವಾಮಿ, “ನಾನೇನಾದ್ರು ಕೆರೆಗಳು ಮುಚ್ಚಿ ಲೇಔಟ್ ಮಾಡಿದ್ದೀನಾ? ಒಂದು ವೇಳೆ ನೀವು ಹೇಳಿದ ಪ್ರಕಾರ ನಾನು ಕೆರೆಗಳ ಒಂದಿಂಚು ಜಾಗ ತೆಗೆದುಕೊಂಡು ಲೇಔಟ್‌ ಮಾಡಿದ್ದನ್ನು ಎಮ್. ನಾರಾಯಣಸ್ವಾಮಿ ಆಗಲಿ ಮುನಿಸ್ವಾಮಿಯಾಗಲಿ ಯಾರಾದರೂ ರುಜುವಾತು ಮಾಡಿದ್ರೆ ಎಂಎಲ್ಎ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಾನು ಈ ಕ್ಷಣದಿಂದಲೇ ರಾಜಕೀಯ ನಿವೃತ್ತಿ ಪಡೆದು ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇನೆ. ನಾನು ಸಾಯುವ ತನಕ ಅವರ ಮನೆಯಲ್ಲಿ ಜೀತದಾಳಾಗಿ ಇರುತ್ತೇನೆ” ಎಂದು ನೇರ ಸವಾಲು ಹಾಕಿದರು.

“ಎಮ್ ನಾರಾಯಣಸ್ವಾಮಿ  ಮತ್ತು ಮುನಿಸ್ವಾಮಿ ತರ ಕಾಂಗ್ರೆಸ್‌ ಪಕ್ಷದಿಂದ ಗೆದ್ದು 35 ಕೋಟಿ ತೆಗೆದುಕೊಂಡು ಪಕ್ಷಾಂತರ ಮಾಡಿಲ್ಲ. ಪಕ್ಷಾಂತರ ಹಣದಿಂದ ದಾವಣಗೆರೆಯಲ್ಲಿ, ಯಲ್ಲಹಂಕದಲ್ಲಿ ಆಸ್ತಿಗಳನ್ನು ಮಾಡಿ ಕೋಳಿಫಾರ್ಮ್ ಮಾಡಿ ಹಣ ಮಾಡಿರೋನು ನೀನು. ಆದರೆ ನಾರಾಯಣಸ್ವಾಮಿಗೆ ರಾಜಕೀಯಕ್ಕೆ ಬರೋದಕ್ಕಿಂತ ಮುಂಚೆಯೇ ರೆಸಾರ್ಟ್‌ ಇತ್ತು. ಬೆಂಗಳೂರು, ಹೊಸಕೋಟೆ, ಮಾಲೂರುಗಳಲ್ಲಿ ಆಸ್ತಿ ಇತ್ತು. ಗಾಲ್ಫ್, ಕ್ರೂಜರ್‌, ಆಸ್ಪತ್ರೆ ಎಲ್ಲವೂ ಇದ್ದವು. ಇವೆಲ್ಲವನ್ನೂ ಮಾರಿಕೊಂಡು ರಾಜಕೀಯಕ್ಕೆ ಬಂದವನು ನಾನು. ಈ ನಾರಾಯಣಸ್ವಾಮಿ ನಿನ್ನಂತೆ ರೌಡಿಸಂ ಮಾಡಿಕೊಂಡು ರಾಜಕೀಯಕ್ಕೆ ಬಂದವನಲ್ಲ” ಎಂದು ತಿರುಗೇಟು ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕರ್ನಾಟಕ ಬಂದ್ | ದಾವಣಗೆರೆ: ತಮಿಳುನಾಡಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ...

ಹಾವೇರಿ | ಕಾವೇರಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಲಿ

ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ ವಿವಿಧ ಸಂಘಟನೆಗಳ...