ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ದೀಪಾ ಅಂಗಡಿ ಬಿ ಅವರಿಗೆ ಪಿ.ಎಚ್.ಡಿ ಪದವಿ ಘೋಷಣೆ.
ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರು (ನಿವೃತ್ತ) ಡಾ. ಧನವಂತ ಹಾಜವಗೋಳ ಅವರ ಮಾರ್ಗದರ್ಶನದಲ್ಲಿ “ಕನ್ನಡ ಸಾಹಿತ್ಯಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ”(ಕ್ರಿ.ಶ.800 ರಿಂದ ಕ್ರಿ.ಶ.1500ರ ವರೆಗೆ) ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ಮಂಡಿಸಿರುವ ದೀಪಾ ಅಂಗಡಿ ಬಿ. ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಬೆಳಗಾವಿ ಜಿಲ್ಲೆಯ ಕಣಬರ್ಗಿ ಗ್ರಾಮದ ತಂದೆ ಬಸವರಾಜ ಗಿ ಅಂಗಡಿ, ತಾಯಿ ಸುನಂದ ಬ ಅಂಗಡಿ ದಂಪತಿಗಳ ಮಗಳು ದೀಪಾ ಅಂಗಡಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದ್ದಕ್ಕೆ ಅಕ್ಕ ಮಹಾದೇವಿ, ತಮ್ಮ ಸದಾಶಿವ, ಗಂಡ ವಿಶ್ವನಾಥ್ ಎಚ್.ಪಿ, ಅತ್ತೆ ಗಿರಿಜಮ್ಮ, ಅಮ್ಮ ಆಶಾ ಎಚ್.ಪಿ, ಸಹ ಕುಟುಂಬದವರು, ಸ್ನೇಹಿತರು ಹಾಗೂ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.
ಪದವಿ ಘೋಷಣೆ ವೇಳೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಾಧ್ಯಾಪಕರು ಡಾ.ವೆಂಕಟಗಿರಿ ದಳವಾಯಿ, ವಿಭಾಗದ ಅಧ್ಯಕ್ಷರು ಡಾ.ಕೃಷ್ಣ ನಾಯಕ, ಡಾ. ನಿಂಗಪ್ಪ ಹಳ್ಳಿ, ಡಾ.ಎನ್.ವೈ.ಮಟ್ಟಿಹಾಳ, ಡಾ. ಅನಿತಾ ಕೆ. ಗುಡಿ, ಡಾ.ಪಿ.ಕೆ.ರಾಠೋಡ, ಡಾ. ಅನಸೂಯ ಕಾಂಬಳೆ, ಡಾ. ಮಲ್ಲಪ್ಪ ಬಂಡಿ ಹಾಗೂ ವಿಭಾಗದ ಎಲ್ಲ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




