ಬಳ್ಳಾರಿ | ಭೂಮಿ, ವಸತಿ ಹಕ್ಕುವಂಚಿತ ಹೋರಾಟ ಸಮಿತಿಯಿಂದ ರಾಜ್ಯವ್ಯಾಪಿ ಭೂಮಿ ಸತ್ಯಾಗ್ರಹ

Date:

ಕಾಯಿಸಿದ್ದು ಸಾಕು, ಕಣ್ಣೊರೆಸಿದ್ದು ಸಾಕು, ಕಾನೂನು ನೆಪ ಮುಂದೊಡ್ಡಿದ್ದು ಸಾಕು, ಈಗ ನಮ್ಮಯ ಹಕ್ಕು ನಮ್ಮದಾಗಲೇಬೇಕು ಎಂಬ ಘೋಷವಾಕ್ಯದಡಿಯಲ್ಲಿ ಭೂಮಿ ಮತ್ತು ವಸತಿಗಾಗಿ ರಾಜ್ಯವ್ಯಾಪಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಭೂಮಿ ಸತ್ಯಾಗ್ರಹ ಹಮ್ಮಿಕೊಂಡಿದೆ.

- Advertisement -

ಈ ಕುರಿತು ಕರಿಯಪ್ಪ ಗುದಿಮನಿ ಮಾತನಾಡಿ, “ಉಳುವವರಿಗೆ ಭೂಮಿ ನಿನಾದದೊಂದಿಗೆ ಸ್ವತಂತ್ರಗೊಂಡ ಭಾರತದಲ್ಲಿ 79 ವರ್ಷಗಳಾದರೂ ಕೋಟ್ಯಂತರ ಬಡ ಕುಟುಂಬಗಳು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರೂ ತುಂಡು ಭೂಮಿ ಇಲ್ಲವಾಗಿದೆ. ಉಳುಮೆಗೆ ಮಾತ್ರವಲ್ಲ ಇರಲಿಕ್ಕೂ ತುಂಡು ಜಾಗ ಇಲ್ಲ. ಸತ್ತ ಮೇಲೂ ಹೂಳಲು ಪರದಾಟ ಶುರುವಾಗಿದೆ. ಭೂಮಿಯೆಲ್ಲಾ ಬಲಾಢ್ಯರ ಕೈಯಲ್ಲಿದೆ. ಕಾಯ್ದೆ ತಿದ್ದುಪಡಿ ಮಾಡಿ ಮನಸೋ ಇಚ್ಛೆ ಭೂಮಿ ಖರೀದಿಸಲು ಅವಕಾಶ ನೀಡಲಾಗುತ್ತಿದೆ. ಕಂಪನಿಗಳು ಮತ್ತು ರಾಜಕಾರಣಿಗಳು ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬಳಿ ಇದ್ದ ಬದ್ದ ಭೂಮಿಗಳ ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ಬಡವರ ಪರ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೇ ಹಾದಿಯನ್ನು ಹಿಡಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಇದನ್ನೂ ಓದಿ: ಬಳ್ಳಾರಿ | ಎರಡನೇ ಬೆಳೆಗೆ ನೀರು ಬಿಡಲು ಒತ್ತಾಯ; ಕಂಪ್ಲಿ ಬಂದ್ ಮಾಡಿ ಪ್ರತಿಭಟನೆ

“ದೇವರಾಜ್ ಅರಸು ಅವರು “ಉಳುವವನೆ ಭೂ ಒಡೆಯ” ನೀತಿಯನ್ನು ಜಾರಿ ಮಾಡಿದಂತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸರ್ಕಾರವಾಗಿ ಕಾಂಗ್ರೆಸ್ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಬೇರೆ ಭೂಮಿ ಅಥವಾ ಮನೆ ಹೊಂದಿಲ್ಲದವರಿಗೆ ನ್ಯಾಯ ದೊರಕಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ “ಒನ್ ಟೈಮ್ ಸೆಟಲ್‌ಮೆಂಟ್” ಮೂಲಕ ಭೂಮಿ ಹಕ್ಕು ಮಾನ್ಯವಾಗಬೇಕು. ವಸತಿ ಹೀನರಿಗಾಗಿ ರಾಜ್ಯವ್ಯಾಪಿ ಸಮಗ್ರ ಮೆಗಾ ವಸತಿ ಯೋಜನೆ ಘೋಷಣೆಯಾಗಬೇಕು. ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ಧ ಹಕ್ಕು ದೊರಕುವತಾಗಬೇಕು. ಸಾಮಾಜಿಕ ನ್ಯಾಯಕ್ಕಿಂತ ಮಿಗಿಲಾದ ನ್ಯಾಯದ ತಕ್ಕಡಿ ಮತ್ತೊಂದಿಲ್ಲ. ಉಳ್ಳವರಿಗೆ ಕೊಟ್ಟಿದ್ದು ಸಾಕು. ಬಡವರಿಗೆ ಅವರ ಪಾಲು ದಕ್ಕಲೇಬೇಕು. ರಾಜ್ಯಾದ್ಯಂತ ನಿರಂತರ ಜನಜಾಗೃತಿ ಜಾಥಾ-ಪ್ರತಿಭಟನೆ-ಜನಾಂದೋಲನಗಳಾಗಿ ನಡೆಯುತ್ತವೆ. ನ್ಯಾಯ ದಕ್ಕುವವರೆಗೆ ಹೋರಾಟ ನಿಲ್ಲಲಾರದು” ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...

ರಾಯಚೂರು | ಭೀಕರ ಬರ: ₹11 ಕೋಟಿ ಬಿಡುಗಡೆ: ಸಚಿವ ಅಜಯ್ ಸಿಂಗ್

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ: ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ

ಉತ್ತರ ಕನ್ನಡ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್...

ರಾಯಚೂರು | ಲಿಂಗಸುಗೂರು ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ವರ್ಗಾವಣೆ

ಲಿಂಗಸುಗೂರ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ಅವರನ್ನು ವರ್ಗಾವಣೆ...