ಬೆಂಗಳೂರು | ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

Date:

  • ಹಂತಕರ ಪತ್ತೆಗೆ ಬಲೆ ಬೀಸಿದ ಪೊಲೀಸರು
  • ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದ ರವಿ

ಬೆಂಗಳೂರಿನ ಲಗ್ಗೆರೆ ಬಳಿಯ ಚೌಡೇಶ್ವರಿನಗರದ ಹಳ್ಳಿರುಚಿ ಹೋಟೆಲ್ ಬಳಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆಯಾಗಿದೆ.

ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿರವಿ(42) ಹತ್ಯೆಯಾದ ವ್ಯಕ್ತಿ. ಬುಧವಾರ ಬೈಕ್​ಗಳಲ್ಲಿ ಬಂದ ಐವರು ದುಷ್ಕರ್ಮಿಗಳು ಹೊಂಚು ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಮೇ 24ರಂದು ಕಾಂಗ್ರೆಸ್ ಮುಖಂಡ ಹಾಗೂ ಫೈನಾನ್ಷಿಯರ್ ಕೃಷ್ಣಮೂರ್ತಿ ಹುಟ್ಟುಹಬ್ಬ ಹಿನ್ನೆಲೆ, ಎಲ್ಲ ಕಾರ್ಯಕರ್ತರು ಸಂತಸದಿಂದ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ರವಿ ಕೂಡ ಭಾಗಿಯಾಗಲೂ ಮನೆಯಿಂದ ಹೊರಟಿದ್ದರು.

ರವಿ ಮನೆಯಿಂದ ಹೊರಬರುವುದನ್ನೆ ಕಾಯ್ದುಕೊಂಡು ಕುಳಿತಿದ್ದ ಹಂತಕರು ಕೊಲೆಗೂ ಮುನ್ನ ಆ ನಗರದಲ್ಲಿ ಹಾಕಿದ್ದ ರವಿಕುಮಾರ್ ಅವರ ಫ್ಲೆಕ್ಸ್‌ ಅನ್ನು ಹರಿದು ಹಾಕಿದ್ದರು. ಬಳಿಕ ಅವರ ಮನೆ ಮುಂದೆ ರವಿ ಬರುವುದನ್ನು ಎದುರು ನೋಡುತ್ತಿದ್ದರು.

ರವಿ ಮನೆಯಿಂದ ಹೊರ ಬಂದ ಬಳಿಕ ಸಿಎಚ್‌ಎಮ್‌ ಬಾರ್‌ ಬಳಿಯಿಂದ ರವಿಯನ್ನು ಅಟ್ಟಾಡಿಸಿಕೊಂಡು ಹಳ್ಳಿರುಚಿ ಹೋಟೆಲ್ ಮುಂಭಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಬಳಿಕ ಹಂತಕರು ಪರಾರಿಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜೂನ್‌ನಿಂದ್‌ ಉಬರ್ ಇ ವಿ ಕ್ಯಾಬ್ ಸೇವೆ

ಕುರಿ, ಮೇಕೆ ಸಾಕಾಣಿಕೆ ಮಾಡಿಕೊಂಡಿದ್ದ ರವಿ ಮೇಲೆ ಹಲವು ಕೇಸ್‌ಗಳಿವೆ ಎಂದು ತಿಳಿದುಬಂದಿದೆ.

ಸದ್ಯ ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಶಾಲೆಗಳ ಸಮೀಪ ತಂಬಾಕು ಮಾರಾಟ ಮಾಡುತ್ತಿದ್ದ 186 ಅಂಗಡಿಗಳ ಮೇಲೆ ದಾಳಿ

ಪೊಲೀಸರಿಂದ ಶುಕ್ರವಾರ 81 ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ ಅಂಗಡಿ ಮಾಲೀಕರಿಂದ...

ಕುಸ್ತಿಪಟುಗಳ ಪ್ರತಿಭಟನೆ | ಸರ್ಕಾರದ ನಡೆ ಖಂಡನೀಯ: ರಾಮಚಂದ್ರ ಗುಹಾ

ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಸಮಾನ ಮನಸ್ಕರು ಹಮ್ಮಿಕೊಂಡಿದ್ದ...

ಬೆಂಗಳೂರು | ತಿಂಗಳೊಳಗೆ ಉಳಿದ 19 ‘ನಮ್ಮ ಕ್ಲಿನಿಕ್’ ಆರಂಭ

ಬೆಂಗಳೂರಿನಲ್ಲಿ ವಾರ್ಡ್‌ಗೊಂದರಂತೆ 243 'ನಮ್ಮ ಕ್ಲಿನಿಕ್' ಕೆಲವೊಂದು ಕ್ಲಿನಿಕ್‌ಗಳಲ್ಲಿ ಶುಶ್ರೂಷಕರಿಂದ ರೋಗಿಗಳ ಆರೈಕೆ...

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

ಬೀದರ್‌ ಮೂಲಕ ಅಭಿಷೇಕ್ (19) ಮೃತ ದುರ್ದೈವಿ ಎರಡು ದಿನಗಳಿಂದ ಅಭಿಷೇಕ್ ಮೊಬೈಲ್...