- ಏಳು ನಗರಗಳಲ್ಲಿ ಒಟ್ಟು 25 ಸಾವಿರ ಇ ವಿಗಳ ಸೇವೆ
- ಇ ವಿ ಸೇವೆ ಮುಂದಿನ ದಿನಗಳಲ್ಲಿ ನಾನಾ ನಗರಗಳಿಗೆ ವಿಸ್ತರಣೆ
ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರ. ಇದೀಗ ನಗರದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಉಬರ್ ಇ ವಿ (ಎಲೆಕ್ಟ್ರಿಕ್ ವೆಹಿಕಲ್) ಕ್ಯಾಬ್ ಸೇವೆ ಆರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಅಧ್ಯಕ್ಷ ಪ್ರಭಜೀತ್ ಸಿಂಗ್, “ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಇ ವಿ ಕ್ಯಾಬ್ ಸೇವೆ ಆರಂಭವಾಗಲಿದೆ. ಈ ಸೇವೆ ಅಧಿಕೃತವಾಗಿ ಆರಂಭವಾದ ಬಳಿಕ ಉಬರ್ ಗ್ರಾಹಕರು, ಕ್ಯಾಬ್ ಸೇವೆ ಪಡೆಯುವ ಸಮಯದಲ್ಲಿ ಇ ವಿ ಕ್ಯಾಬ್ ಸೇವೆ ಬೇಕೆಂದು ಬೇಡಿಕೆ ಸಲ್ಲಿಸಬಹುದು” ಎಂದರು.
“ಇ ವಿ ಕ್ಯಾಬ್ ಸೇವೆಯೂ ಬೆಂಗಳೂರು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಾನಾ ನಗರಗಳಿಗೆ ವಿಸ್ತರಿಸಲಾಗುವುದು. ಬೆಂಗಳೂರು ನಂತರ ಮುಂಬೈ ಹಾಗೂ ದೆಹಲಿಯಲ್ಲಿಯೂ ಆರಂಭವಾಗಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೊದಲ ಬಾರಿಗೆ ₹8000 ಕೋಟಿ ಆದಾಯ ದಾಟಿದ ನೈರುತ್ಯ ರೈಲ್ವೆ ಇಲಾಖೆ
“ಉಬರ್‌ಗೆ ಪ್ರಮುಖವಾಗಿರುವ ಏಳು ನಗರಗಳಲ್ಲಿ ಒಟ್ಟು 25 ಸಾವಿರ ಇ ವಿಗಳ ಸೇವೆ ನೀಡಲಾಗುವುದು. ಜಿಯೊ–ಬಿಪಿ ಹಾಗೂ ಜಿಎಂಆರ್ ಗ್ರೀನ್ ಜೊತೆಗೆ ಇ ವಿ ಕ್ಯಾಬ್‌ಗಳಿಗೆ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲು ಒಪ್ಪಂದ ಮಾಡಲಾಗಿದೆ” ಎಂದು ಹೇಳಿದರು.