ಬೀದರ್ | ‘ಈದಿನ.ಕಾಮ್’ ಫಲಶೃತಿ; ರಾಜ್ಯದ ಅತೀ ಎತ್ತರದ ವ್ಯಕ್ತಿಗೆ ಕೆಎಎಸ್ ಅಧಿಕಾರಿ ನೆರವು

Date:

ಇಂದಿನ ಅಧಿಕಾರಶಾಹಿ, ಅಂತಸ್ತು, ವ್ಯವಹಾರಿಕ ಬದುಕಿನ ಜಂಜಾಟದಲ್ಲಿ ನೊಂದವರ ಬಗ್ಗೆ ಕಾಳಜಿ ತೋರುವ ಅಧಿಕಾರಿಗಳು ಸಿಗುವುದೇ ಬೆರಳೆಣಿಕೆಯಷ್ಟು. ಅಂತಹವರಲ್ಲೊಬ್ಬ ಅಧಿಕಾರಿ ಮರುಭೂಮಿಯ ʼಓಯಸಿಸ್ʼ ನಂತೆ ತಮ್ಮ ವೃತ್ತಿ ಬದುಕಿನೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನವೀಯ ಮೌಲ್ಯಗಳ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಎಎಸ್ ಅಧಿಕಾರಿ ಖಾಜಾ ಖಲೀಲ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ರಾಜ್ಯದ ಅತೀ ಎತ್ತರದ ವ್ಯಕ್ತಿಯ ವೈದ್ಯಕೀಯ ಖರ್ಚಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಬೀದರ್ ಜಿಲ್ಲೆಯ ಔರಾದ ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂತಾಕಿ ಗ್ರಾಮದ ಮಾರುತಿ ಹಣಮಂತ ಕೋಳಿ ಅವರು ರಾಜ್ಯದ ಎತ್ತರದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಅವರ ವಯಸ್ಸು 40ರ ಆಸುಪಾಸು. ಹಣಮಂತ ಅವರು ಬರೋಬ್ಬರಿ 7.5 ಅಡಿ ಎತ್ತರದ ದೇಹ ಹೊಂದಿದ್ದಾರೆ. ಇದೀಗ ಎರಡ್ಮೂರು ವರ್ಷಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ನಿಶ್ಯಕ್ತಿಯಿಂದಾಗಿ ಕೆಲಸ ಮಾಡುವುದಿರಲಿ, ಓಡಾಡಲು ಆಗದ ಪರಿಸ್ಥಿತಿಯಲ್ಲಿರುವ ಮಾರುತಿ ಅವರಿಗೆ ‘ತನ್ನ ದೇಹವೇ ತನಗೆ ಭಾರವಾಗಿ’ ಮುಂದಿನ ಬದುಕು ಹೇಗಪ್ಪಾ ಎಂಬ ಚಿಂತೆ ಕಾಡಲಾರಂಭಿಸಿದೆ.

ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡ ಸಹೋದರರು ತಾಯಿಯ ಪೋಷಣೆಯಲ್ಲಿ ಬೆಳೆದರು. ಮೊದಲೇ ಬಡತನ, ಕೂಲಿ ಮಾಡಿ ಬದುಕು ಸಾಗಿಸುವ ತಾಯಿ, ಕಡು ಬಡತನದಿಂದಾಗಿ ಯಾರಿಗೂ ಶಿಕ್ಷಣ ಕೊಡಿಸಲಿಲ್ಲ. ಇಬ್ಬರು ಸಹೋದರರು ಸಹಜವಾಗಿ ಬೆಳೆದು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಮಾರುತಿ 15 ವರ್ಷ ವಯಸ್ಸಿನವರಿದ್ದಾಗ ಅವರ ದೇಹ ಇದ್ದಕ್ಕಿಂದ್ದಂತೆ ಎತ್ತರಕ್ಕೆ ಬೆಳೆಯಲಾರಂಭಿಸಿತು. ಮೂವತ್ತು ವರ್ಷ ತುಂಬುವ ವೇಳೆಗೆ ಅವರು ತುಂಬಾ ಎತ್ತರಕ್ಕೆ ಬೆಳೆದರು. ಮಾತ್ರವಲ್ಲದೆ, ಮಿತಿ ಮೀರಿ ಬೆಳೆದ ಎತ್ತರ ಬದುಕಿಗೆ ಭಾರವಾಗಿ ಪರಿಣಮಿಸಿ ಚರ್ಮ ರೋಗ ಸೇರಿದಂತೆ ವಿವಿಧ ರೋಗದಿಂದ ಹಾಸಿಗೆ ಹಿಡಿದಿದ್ದಾರೆ. ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕುಟುಂಬಕ್ಕೆ ಮಾರುತಿ ಕೋಳಿ ಅವರ ಚಿಕಿತ್ಸೆ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಇದರಿಂದ ನೊಂದ ಕುಟುಂಬ ದಾನಿಗಳ ನೆರವು ಕೋರಿತ್ತು. ಅವರ ಬದುಕಿನ ಬಗ್ಗೆ ಈದಿನ.ಕಾಮ್ ವರದಿ ಮಾಡಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈದಿನ.ಕಾಮ್‌ ವರದಿಗೆ ಸ್ಪಂದಿಸಿದ ಕೆಎಎಸ್‌ ಅಧಿಕಾರಿ ಖಾಜಾ ಖಲೀಲ್ (ಮೂಲತ ಬೀದರ್ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದವರು. ಪ್ರಸ್ತುತ ಯಾದಗಿರಿ ಜಿಲ್ಲೆಯ ವಾಣಿಜ್ಯ ಮತ್ತು ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ) ಕೋಳಿ ಅವರಿಗೆ ಸಹಾಯಾಸ್ತ ಚಾಚಿಸಿದ್ದಾರೆ. ಮಾರುತಿ ಕೋಳಿ ಅವರಿಗೆ ಮಾಸಿಕ ಎರಡು ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ.

ಆಗಸ್ಟ್ 20ರಂದು ಕೆಎಎಸ್ ಅಧಿಕಾರಿ ಖಲೀಲ್ ಅವರು ಯಾದಗಿರಿಯಿಂದ ಬೀದರ್‌ಗೆ ತೆರಳಿ, ಕೋಳಿ ಅವರ ಮನೆಗೆ ಭೇಟಿ ನೀಡಿದ್ದರು. ಮಾರುತಿ ಹಾಗೂ ಕುಟುಂಬದ ಪರಿಸ್ಥಿತಿಯನ್ನು ಕಂಡು ಮರುಗಿದ ಖಲೀಲ್ ‘ನಿಮ್ಮೊಂದಿಗೆ ನಾನಿದ್ದೇನೆ, ಧೈರ್ಯವಾಗಿರಿ, ನನ್ನ ಉಸಿರಿರುವರೆಗೂ ಪ್ರತಿ ತಿಂಗಳು ನಿಮ್ಮ ಅಕೌಂಟ್‌ಗೆ ಕಳುಹಿಸುವೆ. ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ’ ಎಂದು ಆತ್ಮಸ್ಥೈರ್ಯ ತುಂಬಿದರು.

ಜೀವನಪೂರ್ತಿ 2 ಸಾವಿರ ನೀಡಲು ವಾಗ್ದಾನ:

ಕೆಎಎಸ್ ಅಧಿಕಾರಿ ಹಾಗೂ ಅವರ ಸ್ನೇಹಿತರು ವಿಶೇಷ ವ್ಯಕ್ತಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಮಾರುತಿ ಕೋಳಿ ಅವರಿಗೆ ಮೊದಲ ತಿಂಗಳ ಎರಡು ಸಾವಿರ ನೀಡಿದರು. ಕೆಎಎಸ್ ಅಧಿಕಾರಿ ಖಾಜಾ ಖಲೀಲ್ ಅವರು ಮಾತನಾಡಿ, “ಮಾರುತಿ ಕೋಳಿ ಅವರ ಆರೋಗ್ಯ ಪರಿಸ್ಥಿತಿ ಕುರಿತು ಈದಿನ.ಕಾಮ್ ವರದಿ ಪ್ರಕಟಿಸಿತ್ತು. ಅಂದು ನಾನು ಕಚೇರಿಯಲ್ಲಿದ್ದೆ, ತಕ್ಷಣ ಬಾಲಾಜಿ ಕುಂಬಾರ ಅವರಿಗೆ ಕರೆ ಮಾಡಿ ಸಹಾಧನ ನೀಡುವ ಬಗ್ಗೆ ವಾಗ್ದಾನ ಮಾಡಿದ್ದೆ, ನನ್ನ ಕಡೆಯಿಂದ ಇದೊಂದು ಅಳಿಲು ಸೇವೆ ಎಂದು ಪರಿಗಣಿಸುವೆ, ಪ್ರತಿತಿಂಗಳು ಹಣ ಮುಟ್ಟಿಸುವೆ, ಈದಿನ.ಕಾಮ್ ಇಂಥ ಸಾಮಾಜಿಕ ಕಳಕಳಿಯ ಬಗ್ಗೆ ಸುದ್ದಿ ಹೆಚ್ಚೆಚ್ಚು ಪ್ರಕಟಿಸಲಿ” ಎಂದು ಆಶಿಸಿದರು.

“ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಬಗ್ಗೆ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಚಿಸಿದರೆ ಸಮಾಜ ಬದಲಾವಣೆಯಾಗಲು ಸಾಧ್ಯ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಬೀದರ್‌ |ಬ್ರಿಮ್ಸ್ ಹೊರಗುತ್ತಿಗೆಯಲ್ಲಿ ಲೂಟಿ; ಸಚಿವ ಖೂಬಾರನ್ನು ಸಂಪುಟದಿಂದ ವಜಾಕ್ಕೆ ಒತ್ತಾಯ

ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ಮಾತನಾಡಿ, “ಮಾರುತಿ ಕೋಳಿ ಎಂಬ ಎತ್ತರದ ವಿಶೇಷ ವ್ಯಕ್ತಿಯ ಬಗ್ಗೆ ಈದಿನ.ಕಾಮ್ ವರದಿ ಪ್ರಕಟಿಸಿತು. ಈ ಬಗ್ಗೆ ಸ್ನೇಹಿತರೂ ಆದ ಕೆಎಎಸ್ ಅಧಿಕಾರಿ ಖಲೀಲ್ ಅವರು ಗಮನಕ್ಕೆ ಬಂದ ಕೂಡಲೇ ಸ್ಪಂದಿಸಿ ನೆರವಿಗೆ ಧಾವಿಸಿದ್ದಾರೆ. ಇಂಥ ಅಪರೂಪದ ಅಧಿಕಾರಿಗಳು ಸಿಗುವುದು ಇಂದಿನ ಕಾಲದಲ್ಲಿ ಅಪರೂಪ, ವರದಿ ಪ್ರಕಟಿಸಿದ ಈದಿನ.ಕಾಮ್ ತಂಡ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿರುವ ಖಲೀಲ್ ಅವರ ಕಾರ್ಯಕ್ಕೆ ಸಮಾಜಕ್ಕೆ ಆದರ್ಶ” ಎಂದು ಹೇಳಿದರು.

ಸಮಾಜದಲ್ಲಿ ʼಸತ್ಯ-ನ್ಯಾಯ-ಪ್ರೀತಿʼ ಯೊಂದಿಗೆ ನೈಜ ಪತ್ರಿಕೋದ್ಯಮ ಉಳಿವಿಗಾಗಿ ಸದಾ ವಸ್ತುನಿಷ್ಠ, ಜನಪರ ಲೇಖನ, ಬರಹ, ಸುದ್ದಿಗಳನ್ನು ಪ್ರಕಟಿಸಲು ಈದಿನ.ಕಾಮ್ ಶ್ರಮಿಸುತ್ತಲೇ ಇದೆ. ನಿರ್ಗತಿಕರ, ಶೋಷಿತರ, ತಳ ಸಮುದಾಯಗಳ ನೋವಿಗೆ ದನಿಯಾಗುವ ಈದಿನ.ಕಾಮ್ ಗೆ ಇದೊಂದು ‘ಬಿಗ್ ಇಂಪ್ಯಾಕ್ಟ್’ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕ ರತಿಕಾಂತ ನೇಳಗೆ ಅಶೋಕ ಅಡಕೆ, ರಾಜಕುಮಾರ ಹೇಡೆ, ಸಂಜು ಚವ್ಹಾಣ, ಸಿದ್ದಪ್ಪ ನೇಳಗೆ, ರಾಹುಲ್, ಪ್ರಕಾಶ ಕೋಳಿ ಸೇರಿದಂತೆ ಗ್ರಾಮಸ್ಥರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ವಿದ್ಯಾರ್ಥಿ ಯುವಜನರ ಪ್ರಣಾಳಿಕೆ ಬಿಡುಗಡೆ 

ರಾಜ್ಯದಲ್ಲಿ ಒಟ್ಟು ಎಂಟು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ 2024ರ ಈ ಬಾರಿಯ...

ವಿಜಯಪುರ | ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಭೆ

ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್,...

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ: ಸದಾಶಿವ ಉಳ್ಳಾಲ್ ವಿಶ್ವಾಸ

ಉಳುವವನೇ ಭೂಮಿಯೊಡೆಯ, ಲೋನ್ ಮೇಳ, ಬ್ಯಾಂಕ್ ರಾಷ್ಟ್ರೀಕರಣ, ಮಂಗಳೂರಿಗೆ ಎನ್‌ಎಂಪಿಟಿ, ವಿಮಾನ...

ವಿಜಯಪುರ ಲೋಕಸಭಾ ಕ್ಷೇತ್ರ; 21 ಅಭ್ಯರ್ಥಿಗಳಿಂದ 35 ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್‌...