ಬೀದರ್‌ | ನೈತಿಕ ಮೌಲ್ಯ, ಸಂಸ್ಕಾರ ಕಲಿಸುವ ಶಿಕ್ಷಕ

Date:

ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನು ನೀಡುವವರಲ್ಲ, ನೈತಿಕ ಮೌಲ್ಯಗಳು, ಜೀವನದ ಪಾಠ ಹಾಗೂ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವವರಾಗಿದ್ದಾರೆ ಎಂದು ಪ್ರಾಧ್ಯಾಪಕ ಡಾ.ಈಶ್ವರಯ್ಯ ಕೋಡಂಬಲ್ ಹೇಳಿದರು.

- Advertisement -

ಬೀದರ್ ನಗರದಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಮಾತೆ ಮಹಾದೇವಿ ಬಸವ ಬಳಗದಿಂದ ಆಯೋಜಿಸಿದ್ದ ಮಾಸಿಕ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, “ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮುಖಾಂತರ ಉತ್ತಮ ಸಮಾಜ ನಿರ್ಮಾತೃರಾಗಿದ್ದಾರೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಜ್ಞಾನದತ್ತ ಕರೆದೊಯ್ಯುವ ದಾರಿದೀಪ ಶಿಕ್ಷಕನಾಗಿದ್ದಾನೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಸಾನಿಧ್ಯ ವಹಿಸಿದ ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಮಾತನಾಡಿ, “ನಾವು ಕೇವಲ ಶಿಕ್ಷಕರ ದಿನ ಆಚರಿಸುತ್ತಿಲ್ಲ; ಬಸವಾದಿ ಶರಣರು ಸಾರಿದ ʼಅರಿವಿನ ದಿನʼ ಸ್ಮರಿಸುತ್ತಿದ್ದೇವೆ. ಗುರು ಕೇವಲ ಜ್ಞಾನ ನೀಡುವುದಲ್ಲದೆ, ಶಿಷ್ಯನೊಳಗಿನ ಮನುಷ್ಯತ್ವವನ್ನು ಎಚ್ಚರಿಸುವ ಕೆಲಸ ಮಾಡುತ್ತಾನೆ. ಶಿಷ್ಯನ ಸಾಧನೆಯ ಹಿಂದೆ ನಿಂತಿರುವ ಗುರುಗಳ ಪಾತ್ರವನ್ನು ಸಮಾಜ ಎಂದಿಗೂ ಮರೆಯಬಾರದು” ಎಂದರು.

WhatsApp Image 2026 09 22 at 1.02.31 PM 1

ಜೆಸ್ಕಾಂ ಅಧಿಕಾರಿ ಮಲ್ಲಿಕಾರ್ಜುನ ಶೆಟಕಾರ ಪ್ರಾಸ್ತಾವಿಕ ಮಾತನಾಡಿ, “ಗುರುವು ಶಿಷ್ಯನ ಜೀವನದ ಅಡಿಪಾಯ. ಗುರುವಿನ ಹಿಂದೆ ನಿಂತು ದಾರಿ ತೋರಿಸಿದರೆ, ಶಿಷ್ಯ ಮುಂದೆ ಸಾಗಲು ಗುರಿ ಹೊಂದುತ್ತಾನೆ. ಪ್ರತಿಯೊಬ್ಬ ಯಶಸ್ವಿ ಸಾಧಕನ ಹಿಂದೆ ಗುರು ಇದ್ದೇ ಇರುತ್ತಾನೆ. ಬದುಕಿನಲ್ಲಿ ಜ್ಞಾನ ಧಾರೆಯೆರೆದ ಗುರುವಿನ ಋಣ ಯಾವತ್ತೂ ಮರೆಯಬಾರದು” ಎಂದರು.

ಇದನ್ನೂ ಓದಿ : ಬೀದರ್ | ವಿದ್ಯುತ್ ಸ್ಪರ್ಶಿಸಿ ವಿಬಿ-ಜಿ ರಾಮ್ ಜಿ ಕಾರ್ಮಿಕ ಮಹಿಳೆ ಸಾವು

ಕಾರ್ಯಕ್ರಮದಲ್ಲಿ ಶಿವಶಂಕರ ಟೋಕರೆ, ಜೆ.ಕೆ.ಸ್ವಾಮಿ, ರಾಜಕುಮಾರ ಸೇರಿದಂತೆ ಬಳಗದ ಸದಸ್ಯರು, ಬಸವಾನುಯಾಯಿಗಳು ಪಾಲ್ಗೊಂಡಿದ್ದರು.

ಸುಮಿತಾ ಸಂಗಶೆಟ್ಟಿ ಶಟಕಾರ ದಂಪತಿ ಬಸವಗುರು ಪೂಜೆ ನೆರವೇರಿಸಿದರು. ಸರ್ವ ಶಿಕ್ಷಕರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಡಾ.ಸಂಗಶೆಟ್ಟಿ ಶಟಕಾರ, ಸುಲೋಚನಾ ಪಟ್ನೆ ವಚನ ಗಾಯನ ನಡೆಸಿಕೊಟ್ಟರು. ಪ್ರವೀಣ ಎಕಲಾರೆ ನಿರೂಪಿಸಿದರು. ಪ್ರಣವ ಶಟಕಾರ ವಂದಿಸಿದರು.

1006285185 3
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಉರ್ದುವಿಗೆ ಅಧಿಕೃತ ಸ್ಥಾನಮಾನ ಯಾವಾಗ? ತುಳುವಿನ ಬಳಿಕ ಮತ್ತೊಂದು ಭಾಷಾ ಪ್ರಶ್ನೆ

2011ರ ಜನಗಣತಿಯ ಮಾತೃಭಾಷಾ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಉರ್ದುವನ್ನು ಮಾತೃಭಾಷೆ ಎಂದು...

ಚಾಮರಾಜನಗರ: ಅನ್ನಸಂತರ್ಪಣೆಯಲ್ಲಿ ದಲಿತ ಮಕ್ಕಳನ್ನು ಪಂಕ್ತಿಯಿಂದ ಹೊರಹಾಕಿ ಅಮಾನವೀಯತೆ

ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಎಷ್ಟೇ ಕಠಿಣ ಕಾನೂನುಗಳಿದ್ದರೂ, ಗ್ರಾಮೀಣ ಭಾಗದಲ್ಲಿ ಇನ್ನೂ...

ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ: ಶಾಸಕರ ಪುತ್ರಿಗೆ ಕ್ಷಮೆಯಾಚಿಸಲು ಹೈಕೋರ್ಟ್ ಸೂಚನೆ

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ...

ಬೀದರ್ | ವಿದ್ಯುತ್ ಸ್ಪರ್ಶಿಸಿ ವಿಬಿ-ಜಿ ರಾಮ್ ಜಿ ಕಾರ್ಮಿಕ ಮಹಿಳೆ ಸಾವು

ಮನೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ...